ಬ್ರೆಡ್ ಪಕೋಡ !

ಬ್ರೆಡ್ ಪಕೋಡ !

ನನ್ನ ಸೂರ್ಯವಂಶಿ ಗೆಳೆಯ ಅನಿರುದ್ಧ ಇವತ್ತು (ಆದಿತ್ಯವಾರ ಬೆಳ್ಳಂಬೆಳಗ್ಗೆ - ೯ ಗಂಟೆಗೆ) ಕಾಲು ಮಾಡಿ ಬ್ರೇಕ್ ಫಾಶ್ಟಿಗೆ ಕರೆದ. ನಾನು ’ಏನಪ್ಪಾ ವಿಶೇಷ’ ಎಂದು ಕೇಳಿದೆ. ಇವತ್ತು ’ಬ್ರೆಡ್ ಪಕೊಡ’ ಮಾಡುತ್ತಿದ್ದೇನೆ ಎಂದು ಹೇಳಿದ. ನಾನು ಅಂತಹಾ ತಿಂಡಿಯನ್ನು ಇಲ್ಲಿಯವರೆಗೆ ತಿಂದಿಲ್ಲವಾಗಿ, ಆಗಲಪ್ಪಾ ಎಂದು, ನನ್ನ Laptop, power cord ತೆಗೆದುಕೊಂಡು ಅವನ ಮನೆಗೆ ಹೋದೆ.
ಈ ಪಾಸ್ ವರ್ಡಿಲ್ಲದ ಬೀಡಾಡಿ ವಯರ್ಲೆಸ್  ನೆಟ್-ವರ್ಕ್ ಗಳಿಗೆ ಕನೆಕ್ಟ್ ಮಾಡಿ browse ಮಾಡುವುದೇ ಒಂದು ಮಜಾ. ಅವುಗಳು ಕ್ಷಣಕ್ಷಣಕ್ಕೆ ಡಿಸ್ಕನೆಕ್ಟ್ ಆಗುತ್ತಾ, ಮತ್ತೆ ಧುತ್ತೆಂದು ಅವತರಿಸಿ ರೋಮಾಂಚನ ನೀಡುತ್ತಿರುತ್ತವೆ. ಅಂತಹ ಒಂದು ನೆಟ್-ವರ್ಕ್ ಗೆ ಸಂಪರ್ಕ ಕಲ್ಪಿಸಿ ಬೆಳಗ್ಗಿನ ಸುಖವಾದ ಬ್ರೌಸಿಂಗ್ ಮಾಡುತ್ತಿರುತ್ತಿದ್ದರೆ, ಅನಿರುದ್ಧ ಪಕೋಡಕ್ಕೆ ತಯ್ಯಾರಿಗಳನ್ನು ನಡೆಸುತ್ತಿದ್ದ.
ಬ್ರೆಡ್ ಪಕೋಡಕ್ಕಿಂತ ಸಿಂಪಲ್ ಆದ ತಿಂಡಿಯಿಲ್ಲ ಬಹುಶ:. ಬ್ರೆಡ್ಡನ್ನು ಅರ್ಧಕ್ಕೆ ಕತ್ತರಿಸಿಕೊಳ್ಳುವುದು. ಮೈದಾವನ್ನು ಹದವಾಗಿ ನೀರಿನಲ್ಲಿ ಕಲಸಿ ಹಿಟ್ಟನ್ನು ತಯಾರಿಸಿಕೊಳ್ಳುವುದು. ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಹಸಿಮೆಣಸು, ಮೆಣಸಿನ ಪುಡಿ (ಮತ್ತು anything - ಮಾಡುವವನ ಸೃಜನಶೀಲತೆಯನ್ನು ಆಧರಿಸಿ). ಬ್ರೆಡ್ಡಿನ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯುವುದು. ಬಂಗಾರವರ್ಣದ ಪಕೋಡಗಳು ರೆಡಿ!. Sauce ನೊಂದಿಗೆ ತಿನ್ನುವುದು. ಹೊಟ್ಟೆ ತುಂಬಾ ತಿಂದೆ. ऐसा बना है कि इस सॆ बेहेतर नही बन सकता ।  ಎಂದು ಸರ್ಟಿಫಿಕೇಟ್ ಕೊಟ್ಟು ಮತ್ತೆ ಗೂಗಲ್ ರೀಡರ್ ಗೆ ಹೊಸ ಕನ್ನಡ ಬ್ಲಾಗುಗಳನ್ನು ಸೇರಿಸುವುದರಲ್ಲಿ ಉನ್ಮುಖನಾದೆ. ನೀವು ಮಾಡಿಲ್ಲವಾದರೆ, ಒಮ್ಮೆ ಮಾಡಿನೋಡಿ.
ವಸಂತ್ ಕಜೆ
Rating
No votes yet

Comments