ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ಮುತ್ಸದ್ದಿತನವೆನ್ನುತ್ತೇವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೧
(೧೬೧) ಎಲ್ಲೆಡೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿ, ವಿಸ್ತಾರಗೊಳಿಸುವುದನ್ನು ’ಆಧರಿತ’ ಎನ್ನುತ್ತೇವೆ.
(೧೬೨) ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವುದಾದರೆ ಹೊರಗಿನ ಅಸ್ತಿತ್ವಗಳಾದ ಕ್ಲಿಯೋಪಾತ್ರ ಮತ್ತು ಕಲಾಕೃತಿಗಳು ಏಕಿರಬೇಕು?
(೧೬೩) ಆತ್ಯಂತಿಕ ಸತ್ಯವೆಂಬುದು ಅನಿಶ್ಚಿತ. ಸತ್ಯದ ಅನಿಶ್ಚಿತತೆಯೇ ಸತ್ಯ!
(೧೬೪) ಪರಿಪೂರ್ಣ ಅಂಗಸೌಷ್ಠವ ಇರುವವರು ಅದಕ್ಕೆ ವಸ್ತ್ರವನ್ನು ತೊಡಿಸುತ್ತಾರೆ. ಇಲ್ಲದವರು ಬಟ್ಟೆಗಳ ಒಳಗೆ ಅದನ್ನು ಬಚ್ಚಿಡುತ್ತಾರೆ. ಇದನ್ನು ಪರಿಣಾಮಕಾರಿಯಾಗಿ ಮಾಡುವವರನ್ನು ಒಳ್ಳೆಯ ವಸ್ತ್ರವಿನ್ಯಾಸ ಪ್ರಜ್ಞೆ ಇರುವವರು ಎನ್ನುತ್ತೇವೆ. ವಸ್ತ್ರದೊಂದಿಗಿನ ದೇಹದ ಸಂಬಂಧದ ಮೊಲಕವೇ ದೇಹಕ್ಕೊಂದು ವ್ಯಾಖ್ಯೆ ಸಾಧ್ಯ!
(೧೬೫) "ಕೊಲೆಯಾದವನ ಬದುಕೆಂಬ ನಿರಂತರ ನೋವನ್ನು ಶಾಶ್ವತವಾಗಿ ಕೊನೆಗಾಣಿಸಿದೆ" ಎಂದು ಕೊಲೆಗಾರನೆದಿರು ಮೆಚ್ಚುಗೆ ಸೂಸುವುದನ್ನು ಮುತ್ಸದ್ದಿತನವೆನ್ನುತ್ತೇವೆ!
Rating
Comments
ಉ: ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ...
In reply to ಉ: ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ... by kavinagaraj
ಉ: ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ...