ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅಂದ್ರೆ ಗುಟ್ಕಾ ಹಾಕಕ್ಕೆ ಸುರು ಮಾಡ್ರಿ. ಅದು ನಿಮಗೆ ಆಗಕ್ಕಿಲ್ಲಾ ಆಮ್ಯಾಕೆ ಆಟೋ ಮ್ಯಾಟಿಕ್ ಆಗಿ ಬಿಡ್ತೀರಾ. ಸರಿ ಕನ್ಲಾ ನಾಳೆಯಿಂದ ಹಂಗೇ ಮಾತ್ತೀನಿ ಕಲಾ ಅಂದ ಗೌಡಪ್ಪ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ.
ಸರಿ ಮಾರನೆ ದಿನಾ ಗೌಡಪ್ಪ ಅಗಿತಾ ಉಕ್ಕಂತ ಬರ್ತಾ ಇದ್ದ. ನೋಡ್ಲಾ ಸುಬ್ಬ, ಹೆಂಗೆ ನಾವು. ಬಿಡಬೇಕು ಅಂದ್ರೆ ಆಟೆಯಾ ಬಿಟ್ಟೇ ಬಿಡ್ತೀವಿ ಅಂದಾ. ಜೋಬ್ನಾಗೆ ನೋಡಿದ್ರೆ ಒಂದು 20 ಪ್ಯಾಕೆಟ್ ಮಣಿಕ್ ಚಂದ್ ಗುಟ್ಕಾ ಇತ್ತು. ಸಲ್ಟು ಮೇಲೆ ಎಲ್ಲಾ ಉಕ್ಕಂಡಿದ್ದ. ಬಾಯಿ ಪಕ್ಕದಾಗೆ ಜೊಲ್ಲು. ಅದನ್ನ ಟವಲ್ ನಾಗೆ ಒರೆಸಿಕೊಳ್ಳೋನು. ಒಂತರಾ ಹುಚ್ಚ ಪಿಚ್ಚರ್ ಸುದೀಪ್ ಆದಂಗೆ ಆಗಿದ್ದ. ಅವರ ಮನೆ ಮುದುಕಿ ಊಟ ಆದ್ ಮ್ಯಾಕೆ ಅಡಿಕೆ ಸಿಗಲಿಲ್ಲಾ ಅಂತಾ ಎಲೆ ಜೊತೆ ಗುಟ್ಕಾ ಹಾಕ್ಕೊಂಡು ವಾಂತಿ ಮಾಡ್ಕಂಡು ವರಂಡಾದಾಗೆ ಬಿದ್ದಿತ್ತಂತೆ. ಅದಕ್ಕೆ ಈಗ ಗೌಡ ಹಂಚಿನ ಸಂದಿ ಗುಟ್ಕಾ ಪ್ಯಾಕೆಟ್ ಮಡಗ್ತಾನೆ. ರಾಮಾಯಣದಾಗೆ ರಾಮ ದಾರಿಗೋಸ್ಕರ ಕಲ್ಲು ಎಸಿದ್ದನ್ನು ಹೇಗೆ ಮಂಗಗಳು ಫಾಲೋ ಮಾಡಿದ್ವೋ ಅಂಗೇ ರಸ್ತೇಲಿ ಕೆಂಪಗೆ ಇನ್ನೂ ಹಸಿ ಐತೆ ಅಂದ್ರೆ ಗೌಡಪ್ಪ ಇಲ್ಲೇ ಎಲ್ಲೋ ಅವನೆ ಅಂತಾ ಮಾತು. ಗಟ್ಟಿ ಪದಾರ್ಥ ಏನೂ ತಿನ್ನಲ್ಲ ಗೌಡಪ್ಪ. ಯಾಕೇಂದ್ರ ದವಡೆ ಸವದೈತೆ ಅಂತಾನೆ. ಸರಿ ನಿಂಗನ ಅಂಗಡಿಗೆ ಬಂದ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ. ಏನ್ರೀ ಗೌಡ್ರೆ ಮತ್ತೆ ಸಿಗರೇಟು. ಚಾ ಕುಡಿಯೋ ಬೇಕಾದ್ರೆ ಮಾತ್ರ ಕಲಾ ಅಂದ. ಲೇ ಸುಬ್ಬ ಗುಟ್ಕಾನು ಸಾನೇ ಜಾಸ್ತಿ ಆಗ್ಬಿಟೈತೆ ಬಿಡಕ್ಕೆ ಏನ್ಲಾ ಮಾಡಬೇಕು. ಗೌಡ್ರೆ ಒಂದು ಕೆಲಸ ಮಾಡ್ರಿ ನಸ್ಯ ಹಾಕಿರಿ ಎಲ್ಲಾ ಬಿಟ್ಟು ಹೋಯ್ತದೆ ಅಂದಾ.
ಗೌಡಪ್ಪ ತಕ್ಷಣನೇ ಒಂದು ನಸ್ಯದ ಡಬ್ಬಿ ತಗೊಂಡು ಅದೂ ಸುರು ಹಚ್ಕಂಡ. ಕಂಡ ಕಂಡೆ ಹಾಕೋನು ಹಂಗೇ ಎದುರೆಗಡೆ ಇದ್ದ ಮುಖದ ಮ್ಯಾಕೆ ಆಕ್ಷಿ ಅನ್ನೋನು. ಮಗಂದು ಬಾಯ್ನಾಗೆ ಇರೋದೆಲ್ಲಾ ಎದುರುಗಿದ್ದೋರು ಮುಖದ ಮ್ಯಾಕೆ. ಇವನು " ಆ " ಅಂತಾ ಬಾಯ್ತಗಿದರೆ ಸಾಕು ಎಲ್ಲಾವೂ ಅಡಕಂತಾವೆ. ಓಡ್ರಲಾ. ಮಗಂದು ಟವಲ್ ಪಂಚೆ ಎಲ್ಲಾ ನಸ್ಯ ವಾಸನೆ. ಭೂಪತಿ ನಸ್ಯ ಅಂತೆ ಇವನ ಪಿಂಡ, ಇವನಿಗೆ ಇದನ್ನ ಹೇಳುಕೊಟ್ಟೋರು ಸಿಗಲಿ ಮಾರಿ ಹಬ್ಬ ಮಾತ್ತೀನಿ ಅಂತಿದ್ಲು ಗೌಡಪ್ಪನ ಹೆಂಡರು. ಮಗಾ ಸುಬ್ಬ ಅವರ ಮನೆಗೆ ಹೋಗೋದನ್ನೇ ಬಿಟ್ಟಿದಾನೆ. ಗೌಡಪ್ಪ ವರಾಂಡಾದಾಗೆ ಮಕ್ಕೊತಾನೆ. ಹೆಂಡರು ಗಬ್ಬು ವಾಸನೆ ಅಂತಾ ಹೊರಗೆ ಹಾಕವ್ಳಂತೆ.
ಸರಿ ಗೌಡಪ್ಪಂಗೆ ಮೂರು ಚಟನೂ ಹತ್ಕೊಂತು. ಸಿಗರೇಟು ಸೇದಿ ಸ್ವಲ್ಪ ಹೊತ್ತಿಗೇನೇ ನಸ್ಯ ಹಾಕೋನು ಅದಾಕಿ ಸ್ವಲ್ಪ ಹೊತ್ತಿಗೆ ಗುಟ್ಕಾ ಹಾಕೋನು. ಒಂದು ಸಾರಿ ವಸೂಲಿಗೇ ಅಂತಾ ಕರೆದುಕೊಂಡು ಹೋಗಿದ್ವಿ. ಬಾಯಿ ತುಂಬಾ ಗುಟ್ಕಾ. ನಸ್ಯ ಹಾಕ್ದ ನೋಡಿ. ಆಕ್ಷಿ ಅಂತಿದ್ದಾಗೆನೇ ಎದುರುಗಡೆ ಇದ್ದ ಬಿಳೀ ಪಂಚೆ ಬನೀನಲ್ಲಿ ಇದ್ದೋರು ರಾವು ಬಡದಂಗೆ ಕೆಂಪಗೆ ಆಗಿದ್ದರು. ನಿಮಗೆ ಕಾಸು ಕೊಡಕ್ಕಿಲ್ಲ ಅಂತಾ ಹೊರ ಹಾಕಿದ್ರು. ಟಾಕೀಸ್ನಾಗೆ ಕೂತ್ರೆ ಬಗ್ಗಿ ಉಗಿಯೋನು. ಪಿಚ್ಚರ್ ಬಿಟ್ ಮ್ಯಾಕೆ ತಂಬೂರಿ ತಮ್ಮಯ್ಯ ಚಪ್ಪಲಿ ಯಾಕೋ ಜಾರ್ತಾ ಐತೆ ಅಂದ. ನೋಡಿದ್ರೆ ಗೌಡಪ್ಪ ಸಾನೇ ಚಪ್ಪಲಿಗೆ ಉಗದವ್ನೆ. ಒಂದು ಸಾರಿ ಇಸ್ಮಾಯಿಲ್ ಬಸ್ನಾಗೆ ಹೋಗೋ ಬೇಕಾ್ದರೆ ಹಿಂಗೆ ಉಗಿದಿದಾನೆ. ಹಿಂದಕಡೆ ಇದ್ದ ಮುಖ ಎಲ್ಲಾ ಒಂದು ತರಾ ಸಣ್ಣ ಕುಂಕುಮ ಇಟ್ಟಂಗೆ ಆಗಿತ್ತು. ಮಗುವಿಗೆ ಸಿಡಿದೈತೆ. ಅಲರ್ಜಿ ಆಗುತ್ತೆ ಅಂತಾ ದಂಡ ಬೇರೆ ಇಸ್ಕಂಡಿದ್ರಂತೆ.
ಗೌಡಪ್ಪನ ಮನೆ ಮುಂದೆ ಒಂದು ಸಣ್ಣ ಬೀಡಾ ಅಂಗಡಿ ಆದಂಗೆ ಆಗಿತ್ತು. ಒಂದು ಕಡೆ ಗುಟ್ಕಾ ಪ್ಯಾಕೇಟ್ , ಮತ್ತೊಂದು ಕಡೆ ಸಿಗರೇಟು ತುಂಡು. ಗೌಡಪ್ಪನ ಮನೆ ಎಮ್ಮೆ ಗುಟ್ಕಾ ಪ್ಯಾಕೇಟ್ ತಿಂದು ಸಾಯೋ ಅಂಗೆ ಆಗಿತ್ತಂತೆ. ಇನ್ನೊಂದು ದಪಾ ಗುಟ್ಕಾ ಪ್ಯಾಕೇಟ್ ಕಂಡರೆ ನಾಯಿ ಹೊಡದಂಗೆ ಹೊಡಿತೀನಿ ಅಂತಾ ಹೆಂಡರು ಹೇಳಿದ ಮ್ಯಾಕೆ ಗೌಡಪ್ಪ ಪ್ಯಾಕೆಟ್ ನ್ನ ಜೋಬ್ನಾಗೆ ಮಡಿಕ್ಕಂಡು ಕೆರೆತಾವ ಹೋದಾಗ ಎಸಿತಾನೆ. ಈಗ ದಿನಕ್ಕೆ ಒಂದು ಹತ್ತು ಪ್ಯಾಕೆಟ್ ಸಿಗರೇಟು, 50 ಗುಟ್ಕಾ ಅಂಗೇ 20 ಗ್ರಾಂ ನಸ್ಯ. ಗೌಡಪ್ಪನ ಚಟ ಆಗೈತೆ.
ಚಟಕ್ಕೆ ಅಂತಾ ತಿಂಗಳಿಗೆ 2ಸಾವಿರ ರೂಪಾಯಿ ಬೇಕಂತೆ. ನಿಂಗನ ಚಾ ಅಂಗಡೀಲಿ ಎಲ್ಲಾ ಕೂತಿದ್ವಿ. ಗೌಡ್ರೆ ಇವೆಲ್ಲವನ್ನೂ ಬಿಡಬೇಕಂದ್ರೆ ಅಂತಿದ್ದಾಗೆನೇ ಗೌಡಪ್ಪ ಸುಬ್ಬಂಗೆ ಕೆರ ತಗೊಂಡು ಜ್ವರಾ ಬರೋ ತರಾ ಹೊಡೆದ. ಯಾಕ್ರೀ ಲೇ ಇವನು ಹೇಳ್ದಾ ಅಂತ ಚಟ ಜಾಸ್ತಿ ಮಾಡಿದ್ದಕ್ಕೆ ಮುಂಚೆ ಬರೀ ದಮ್ಮು, ಸುಗರ್ ಇತ್ತು. ಈಗ ಗ್ಯಾಸ್, ತಲೆ ಸುತ್ತು ಎಲ್ಲಾ ಬಂದೈತೆ ಅಂದಾ. ಒಂದು ತಿಂಗಳು ಆಸ್ಪತ್ರಾಗೆ ಇದ್ದೆ ಕಲಾ. ಇಂಜೆಕ್ಷನ್ ಚುಚ್ಚಿ ಚುಚ್ಚಿ ನನ್ನ ಮೈ ಒಂದು ತರಾ ಟಿಂಕರಿಂಗ್ ಮಾಡಿರೋ ಕಾರ್ ತರಾ ಆಗೈತೆ. ನೋಡ್ಲಾ ಗರುಡ ಇದ್ದಂಗೆ ಇದ್ದೆ. ಖಸಾಯಿ ಕಾನೆ ಹಸು ಆದಂಗೆ ಆಗೀನಿ ನೋಡ್ಲಾ ಅಂದಾ. ಮೊನ್ನೆ ತಾನೆ ಆಸ್ಪತ್ರೆಯಿಂದ ಬಂದವ್ನೆ.ಈಗ ಗೌಡಪ್ಪ ಹೊರಗೆ ಜಾಸ್ತಿ ಬರಕ್ಕೇ ಇಲ್ಲಾ. ಎಲ್ಲಿ ಹೊಸಾ ಚಟ ಸುರುವಾಯ್ತದೋ ಅಂತಾ.
Comments
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by prasannasp
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by modmani
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by gopaljsr
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by gopaljsr
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by kavinagaraj
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by Harish Athreya
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by mayakar
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by komal kumar1231
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
In reply to ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ by sharadamma
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ
ಉ: ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ