ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
ಮುಂಬೈನಲ್ಲಿ ಅವತ್ತೂ ಬಸ್ಸಿನಲ್ಲಿ ಇದ್ದೆ. ಒಂದು ಸಿಗ್ನಲ್ಲಿನಲ್ಲಿ ಬಸ್ಸು ನಿಂತಿತು . ಪಕ್ಕದಲ್ಲಿ ಒಂದು ಸ್ಕೂಟರ್ . ಅದರಲ್ಲಿ ಇಬ್ಬರು ಸವಾರರು . ಸಿಗ್ನಲ್ಲಿನಲ್ಲಿ ಭಿಕ್ಷೆ ಬೇಡುವ ಮಕ್ಕಳು ಮತ್ತು ಅವುಗಳ ತಾಯಿ. ಅವರಿಗೆ ಏನಾದರೂ ಕೊಡಬೇಕೆಂದು ಸ್ಕೂಟರಿನ ಹಿಂಬದಿಯ ಸವಾರನು -ಅವನು ವೇಶಭೂಷಣದಿಂದ ಒಬ್ಬ ಮುಸ್ಲಿಮನು - ಕಿಸೆಗೆ ಕೈ ಹಾಕಿದ. ಮಕ್ಕಳು ಅವನತ್ತ ಓಡಿದವು. ಅರರೆ ! ಸಿಗ್ನಲ್ ಬದಲಾಯಿತು! ಸ್ಕೂಟರ್ ನ ಚಾಲಕನು ಸ್ಕೂಟರನ್ನು ಮುಂದಕ್ಕೆ ಚಲಾಯಿಸಿದ. ಮಕ್ಕಳ ಮತ್ತು ತಾಯಿಯ ಮುಖದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಬಗ್ಗೆ ನಿರಾಸೆ. ಬಸ್ಸೂ ಸ್ಕೂಟರ್ರೂ ಬಲಕ್ಕೆ ಹೊರಳಿದವು. ಅರೆ , ಇದೇನಿದು? ಸ್ಕೂಟರ್ರಿನ ಹಿಂದೆ ಕೂತವನು ತನ್ನ ಕೈಲಿದ್ದ ಹಣವನ್ನು ರಸ್ತೆಯ ಡಿವೈಡರ್ ಕಟ್ಟೆಯ ಮೇಲಿಟ್ಟು ಅವರ ಕಡೆ ನೋಡಿದ. ಸ್ಕೂಟರ್ ಮುಂದೆ ಓಡಿತು. ಅವರ ಮುಖಗಳು ಬೆಳಗಿದವು! ಅವರು ಓಡಿ ಆ ಹಣವನ್ನು ತೆಗೆದುಕೊಂಡರು! ಬಡ ಮಧ್ಯಮ ವರ್ಗದ ಅವನು ಇಟ್ಟದ್ದು ಐವತ್ತು ರೂಪಾಯಿಯ ನೋಟು. ಇದೆಲ್ಲ ನಡೆದದ್ದು ಕೆಲವೇ ಕ್ಷಣಗಳಲ್ಲಿ.
Comments
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
In reply to ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ by asuhegde
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
In reply to ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ by asuhegde
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
In reply to ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ by malathi shimoga
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
In reply to ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ by asuhegde
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
In reply to ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ by Dr madhusudhan joshi
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ
ಉ: ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ