ನಾಯಿಗೆ "ಹಚಾ..." ಎಂದರೆ ಹತ್ತಿರ ಬರುತ್ತೋ ಇಲ್ಲಾ ಓಡಿ ಹೋಗುತ್ತೋ?

ನಾಯಿಗೆ "ಹಚಾ..." ಎಂದರೆ ಹತ್ತಿರ ಬರುತ್ತೋ ಇಲ್ಲಾ ಓಡಿ ಹೋಗುತ್ತೋ?

ನಾಯಿ ಸಾಕುವವರೆಲ್ಲ ಸಾಮಾನ್ಯವಾಗಿ ಅದಕ್ಕೆ ಟೈಗರ್‍ ಎಂದೋ ಟಾಮಿ ಎಂದೋ ಮುದ್ದಿನ ಹೆಸರಿಟ್ಟಿರುತ್ತಾರೆ. ಟಾಮಿ... ಟಾಮಿ... ಎಂದು ಕರೆದರೆ ಸಾಕು ಬಾಲ ಅಲ್ಲಾಡಿಸಿಕೊಂಡು ಯಜಮಾನನ ಬಳಿ ಬರುತ್ತವೆ. ಹಾಗೆಯೇ ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ನಾಯಿಗಳಿಗೆ "ಹಚಾ..." ಎಂದು ಗದರಿದರೆ ಓಡಿ ಹೋಗುತ್ತವೆ. ಇದನ್ನು ಎಲ್ಲರೂ ಒಪ್ಪುತ್ತೀರಾ ತಾನೆ?

 

ಈಗ ನನ್ನ ಪ್ರಶ್ನೆ ಏನೆಂದರೆ, ನಾಯಿಗೆ ಅದೇ "ಹಚಾ.." ಎಂದು ಹೆಸರು ಇಟ್ಟು, "ಹಚಾ... ಹಚಾ..." ಎಂದರೆ ಅದು ಬಾಲ  ಅಲ್ಲಾಡಿಸಿಕೊಂಡು ಬರುತ್ತದೆಯೇ ಅಥವಾ ಹೆದರಿಕೊಂಡು ಓಡುತ್ತದೆಯೇ?

ಇದನ್ನು ಸುಮ್ಮನೆ ಹಾಸ್ಯದ ದೃಷ್ಟಿಯಿಂದ ಬರೆದದ್ದು. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಆ ದೇವರು ನಿಮಗೆಲ್ಲರಿಗೂ ಅಷ್ಟೈಶ್ವರ್ಯಾದಿಗಳನ್ನು ಕರುಣಿಸಲಿ ಎಂದು ಹಾರೈಸುವ,
-ಪ್ರಸನ್ನ.ಎಸ್.ಪಿ

Rating
No votes yet

Comments