ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ನಮ್ಮ ಹಳ್ಳೀಲಿ ವರಮಹಾಲಕ್ಷ್ಮೀ ಅಂದರೆ ಬಹಳ ಜೋರು. ಅವತ್ತು ಗದ್ದೆಗೆಲ್ಲಾ ಪೂಜೆ ಮಾಡಿ, ರಾತ್ರಿ ಲಕ್ಸ್ಮೀಗೆ ಪೂಜೆ ಮಾಡಿದ ಮ್ಯಾಕೆ ನಮ್ಮ ಮುಂದಿನ ಕೆಲಸ. ನಾಳೆ ವರಮಹಾಲಕ್ಸ್ಮಿ ಹಬ್ಬ, ಎಂದಿನಂತೆ ನಮ್ಮ ಗೆಳೆಯರ ಬಳಗ ನಿಂಗನ ಚಾ ಅಂಗಡಿ ಹತ್ತಿರ ಸೇರಿದ್ವಿ. ನೋಡ್ರಲಾ ನಾಳೆ ನಮ್ಮನೇಗೆ ಎಲ್ಲಾರೂ ಪೂಜೆಗೆ ಬರಬೇಕು ಹಂಗೇ ಬಂದು ಸಹಾಯ ಮಾಡರಲಾ ಅಂದಾ ಗೌಡಪ್ಪ. ಸುಬ್ಬ ಏನಲಾ ಇದು ವರಮಹಾಲಕ್ಸ್ಮಿ ಅಂದರೆ ಅಂದ. ಅದೂ ಮಹಾಲಕ್ಸ್ಮಿ ವರವಾಗಿ ಬರೋದೆ ವರಮಹಾಲಕ್ಸ್ಮಿ ಅಂದಾ ಗೌಡಪ್ಪ. ಯಾರಲಾ ಪಿಚ್ಚರ್ ಆಕ್ಟರ್ ಮಹಾಲಕ್ಸ್ಮಿನಾ ಅಂದಾ ಸುಬ್ಬ. ಅಲ್ಲ ಅವರವ್ವ ಅಂದಾ ತಂಬೂರಿ.
ಯಾರಿಗೂ ಅರ್ಥ ಆಗ್ಲಿಲ್ಲ ಆದ್ರೂ ಎಲ್ರೂ ತಲೆಯಾಡಿಸಿ ಎದ್ವಿ.
ಬೆಳಗ್ಗೆನೇ ಮಾವಿನ ಸೊಪ್ಪು ತರಾನಾ ಅಂತಾ ಹೊದ್ರೆ ಬರೀ ಮರ ಐತೆ, ಎಲೆನೇ ಇಲ್ಲ. ಏನ್ಲಾ ಸುಬ್ಬ ಇದು ವಿಚಿತ್ರ ಮರ ಮಾತ್ರ ಐತೆ ಎಲೆನೇ ಇಲ್ಲಾ ಅಂದೆ. ಅಲ್ಲಿ ನೋಡಲಾ ಅಂದ ಸುಬ್ಬ. ನೋಡಿದ್ರೆ ಕಿಸ್ನ ಗೌಡಪ್ಪನ ಮನೇಗೆ ಇರೋ ಬರೋ ಎಲೆ ಎಲ್ಲಾ ಕಿತ್ಕಂಡು ಗಾಡೀಲಿ ಹೋಯ್ತಾ ಇದ್ದ. ಏನಲಾ ಕಿಸ್ನ ಇಟ್ಟೊಂದು ಎಲೆ ಏನಲಾ ಮಾತ್ತೀಯಾ ಅಂದ್ರೆ, ಮಗಾ ಬೆಂಗಳೂರಿಗೆ ಹೋಗಿ ಮಾರ್ತೀನ್ಲಾ. ಅಲ್ಲಿ ಸಗಣಿಗೂ ದುಡ್ಡೇಯಾ ಅಂದೋನು. ಗೌಡಪ್ಪನ ಮನೆತಾವ ಹೊಂಟ. ಆಗಲೇ ಗೌಡಪ್ಪ ಬಿರ್ರನೆ ಓಡಾಡ್ತಾ ಇದ್ದ. ಐದೈದು ನಿಮಿಸಕ್ಕೂ ಅಂಗಡಿಗೆ ಹೋಗೋನು ಬರೋನು. ಯಾಕ್ರೀ ಗೌಡ್ರೆ. ಲೇ ನನ್ನ ಹೆಂಡರು ಒಂದ್ ಕಿತಾ ಸಾಮಾನು ಹೇಳಕ್ಕಿಲಾ ಕನ್ಲಾ ಅಂದ. ಅಟ್ಟೊತ್ತಿಗೆ ತಂತಿ ಪಕಡು ಸೀತು ಬಂದು ಲೇ ಗೌಡ ಪೂಜೆಗೆಲ್ಲಾ ರೆಡಿ ಏನಲಾ ಅಂದ. ನೋಡಲಾ ಮಗಾ ಮರ್ವಾದೆ ಇಲ್ದೆ ಮಾತ್ತಾಡ್ತಾನೆ ಅಂದ ಗೌಡಪ್ಪ. ಸರಿ ಪೂಜೆಗೆ ರೆಡಿ ಮಾಡಿದ್ವಿ. ನನ್ನ ಹೆಂಡರು, ಸುಬ್ಬನ ಅವ್ವ, ತಂಬೂರಿ ತಮ್ಮಯ್ಯನ ತಂಗಿ ಎಲ್ಲಾ ಬಂದಿದ್ರು.
ಗೌಡಪ್ಪ ಹೊಸಾ ಪಂಚೆ, ಸಲ್ಯ. ಹಂಗೇ ಗೌಡಪ್ಪನ ಹೆಂಡರು ಹೊಸಾ ರೇಸ್ಮೆ ಸೀರೆ ಬಂದು ಕೂರಿತಿದ್ದಾಗೆನೇ ದಪ್ಪ್ ಅಂತಾ ಬಿದ್ವು. ಮುಂಡೇವು ಮಣೆ ತುದೀಲಿ ಕಾಲು ಇಟ್ಟಿದ್ವು. ಗೌಡಪ್ಪನ ಚಿಕ್ಕಪ್ಪ ಒಬ್ಬ ಬಂದಿದ್ದ. ಮರೀ ನಂಜೇಗೌಡ ಅಂತಾ. ಸಾನೇ ದಪ್ಪಾ ಇದ್ದ. ಮಗಾ ಬಗ್ಗಿ ನಮಸ್ಕಾರ ಮಾಡಿದ್ರೆ, ಕಾಲು ಎರಡು ಮೇಲಕ್ಕೆ ಹೋಗೋವು. ಸೀತುಗೆ ನಮಸ್ಕಾರ ಮಾಡಿದ್ರೆ. ಕಾಲು ಸೀತು ಎದೆ ಮ್ಯಾಕೆ. ಶಿರಸಾಸನ. ಲೇ ಪಟಾಕಿ ಹೊಡೀರಲಾ, ಹಬ್ಬ ಸಂದಾಗಿ ಆಚರಿಸಬೇಕು ಅಂದಾ ಗೌಡಪ್ಪ. ಮಗಾ ನಿಂಗ ರಾಕೆಟ್ ಹಚ್ಚಿದ್ರೆ, ಗೌಡಪ್ಪನ ಅಡುಗೆ ಮನ್ಯಾಗೆ ಹೋಗಿ ಢಂ ಅಂತು, ಗೌಡಪ್ಪ ಗ್ಯಾಸ್ ಸಿಡಿದೈತೆ ಅಂತಾ ಒಳಗೆ ಹೋಗಿ ನೋಡ್ಕಂಡ್ ಬಂದಾ. ಲಕ್ಸ್ಮೀ ಪಟಾಕಿ ಸಿಡಿದು ಗೌಡಪ್ಪನ ಪಂಚೆ ಹಂಗೇ ಅವನ ಹೆಂಡರು ಸೀರೆ ತೂತಾಗಿತ್ತು. ಸೊಳ್ಳೆ ಪರದೆ ಹಾಕ್ಕೊಂಡಂಗೆ ಕಾಣ್ತಾ ಇತ್ತು. ಸೀತು ಮಂತ್ರ ಹೇಳಕ್ಕಿಂತ ಮುಂಚೆ ಪಟಾಕಿ ಹಚ್ರಲಾ ಅನ್ನೋನು. ಯಾಕೇ ಅಂದ್ರೆ ಅವನಿಗೆ ಬರೋದು ಬರೀ ಸಂಧ್ಯಾವಂದನೆ ಮಂತ್ರ. ಹಲ್ಲು ಬೇರೆ ಇಲ್ಲಾ, ಅದೇನು ಹೇಳುತ್ತೋ ಆ ದೇವರಿಗೆ ಗೊತ್ತು. ಸರಿ ಗೌಡ್ರೆ ಈಗ ಸುರು ಹಚ್ಕೊಳಿ, ಓಂ ಕೇಶವಾಯ ಸ್ವಾಃ, ನಾರಾಯಣಾಯ ಸ್ವಾಃ, ಗೋವಿಂದಾಯ ನಮಃ ನೀರು ಬಿಡ್ರಿ ಅಂದ ಸೀತು. ನೀರು ಖಾಲಿ ಆಗೈತೆ ಅಂದಾ ಗೌಡಪ್ಪ. ಮಗಾ ಮೂರು ಮಂತ್ರಕ್ಕೆ ಒಂದು ಚೊಂಬು ನೀರು ಕುಡದವ್ನೆ. ಲೇ ಗೌಡ ಸಣ್ಣ ಉದ್ದರಣೇಲಿ (ಚಮಚ) ನೀರು ಕುಡಿಬೇಕಲಾ ಅಂದಾ ಸೀತು, ಮಗಾ ಸಾರು ಬಡಿಸೋ ಸೌಟಲ್ಲಿ ನೀರು ಕುಡಿದಿದ್ದ. ಒಂದು ನಾಲ್ಕು ಕಿತಾ ಹಿಂದಕ್ಕೆ ಹೋಗಿ ಬಂದಿದ್ದ ಗೌಡಪ್ಪ, ಕಾಲು ತೊಳೆದು ತೊಳೆದು ಹಂಗೇ ಜಾರೋನು. ಹೂವು ಹಾಕು ಅಂದ್ರೆ ಮಗಾ ಗೌಡಪ್ಪ ಪೂಜೆ ಜೋರಾಗಿ ಇರಬೇಕು ಅಂತಾ ಒಂದು 10ಕೆಜಿ ಹೂವು ತಂದಿದ್ದ. ಲಕ್ಸ್ಮೀ ಪೋಟೋನೇ ಕಾಣ್ತಾ ಇರಲಿಲ್ಲ. ಊರ್ನಾಗೆ ಇರೋ ತುಳಸಿ ಗಿಡ ಎಲ್ಲಾ ಖಾಲಿಯಾಗಿತ್ತು. ಮಗಾ ಗೌಡಪ್ಪ ಅಂಗೇ ಕಿತ್ಕಂಡು ಹೋಗಿದ್ದ. ಊದಬತ್ತಿ ಹಚ್ರೀ ಅಂದಾ ಸೀತು. ಗೌಡಪ್ಪ, ಅವನ ಹೆಂಡರು ಎರಡು ಎದ್ದು ಬೆಳಗ್ತಾ ಇದ್ರೆ. ಅದರ ಬೂದಿ ಎಲ್ಲಾ ಸೀತು ತಲೆ ಮೇಲೆ. ಇದನ್ನ ನೋಡಿದ ಮಂಗಳಾರತಿ ನಾನೇ ಮಾತ್ತೀನಿ ಬಿಡು ಅಂತು.
ಸರಿ ಎಲ್ಲಾ ಊಟಕ್ಕೆ ಏಳ್ರೀ ಅಂದಾ ಗೌಡಪ್ಪ. ಕಡುಬು ಬಡಸೋ ತನಕ ಎಲ್ಲಾ ಚೆನ್ನಾಗೇ ತಿಂದ್ವು. ಆಮ್ಯಾಕೆ ಎದ್ದಿ ಹೋಗೋರು. ಫುಲ್ ಇದ್ದ ಪಂಗ್ತಿ ಅರ್ಧಕ್ಕೆ ಖಾಲಿಯಾಗಿತ್ತು. ಯಾಕಮ್ಮೀ ಎಲ್ಲಾ ಹೋಯ್ತಾರೇ ಅಂದಾ ಗೌಡಪ್ಪ ಹೆಂಡರಿಗೆ. ಗೌಡಪ್ಪನ ಹೆಂಡರು ರಿಫೈಂಡಾಲ್ನಾಗೆ ಕಡುಬು ಕರೆಯೋ ಬದಲು ಹರಳೆಣ್ಣೆಲಿ ಕರೆದಿದ್ಲು. ಗೌಡಪ್ಪನ ಊಟ ಮುಗಿಸ್ಕಂಡೋರೆಲ್ಲಾ ಕೆರೆ ತಾವ ತಲೆ ಮ್ಯಾಕೆ ಟವಲ್ ಹಾಕ್ಕಂಡ್ ಓಡೋರು. ನೀ ತಿಂದು ನೋಡಲಾ ಅಂದ ಗೌಡಪ್ಪ. ಯಾಕೆ ಕೆರೆತಾವ ಹೋಗಕ್ಕಾ ಅಂದೆ. ಕಿಸ್ನ ಎಲ್ರಲ್ಲಾ, ಬೆಂಗಳೂರಿಗೆ ಮಾವಿನ ಸೊಪ್ಪು ಮಾರಕ್ಕೆ ಹೋಗವ್ನೆ, ಏ, ಥೂ ಸರಿ ಕಡುಬು ಬಿಟ್ಟು ಎಲ್ಲಾ ತಿಂದು ಮನೆಗೆ ಹೋದ್ವಿ. ಸೀತು ದಾರ್ಯಾಗೆ ಫಕ್ಕನೆ ನಗೋನು. ಯಾಕಲಾ. ಮಗಾ ಗೌಡಪ್ಪಂಗೆ ಏಕ ವಸನದಾಗೆ ಬಯದಿದ್ದೇಯಾ ಅಂತು.
ಬೆಳಗ್ಗೆ ಗೌಡಪ್ಪನ ಮನೆಗೆ ಹೋದ್ರೆ ವಿಧವೆ ತರಾ ಕುಂತಿದ್ದ. ಯಾಕ್ರೀ ಗೌಡ್ರೆ. ಲೇ ಮನ್ಯಾಗೆ ಇರೋ ನೋಟೆಲ್ಲಾ ತಟ್ಟೇಲಿ ಇಟ್ಟಿದ್ದೆ. ತೆಗಿತೀನಿ ಅಂದ್ರೆ ಮಗಾ ಸೀತು ಬೆಳಗ್ಗೆ ತೆಗೀರಿ ಅಂದಾ, ರಾತ್ರಿ ಎಣ್ಣೆ ದೀಪ ಬಿದ್ದು ಎಲ್ಲಾ ಸುಟ್ಟು ಹೋಗೈತೆ ಕಲಾ ಅಂದ. ನೋಡ್ಲಾ ಎಲ್ಲಾ ಬೂದಿ ಆಗೈತೆ. ಇನ್ ಮ್ಯಾಕೆ ಪೂಜೆಗೆ ಕೋಟಾ ನೋಟು ಇಡ್ತೀನಿ ಅಂದ ಗೌಡಪ್ಪ. ಅಟ್ಟೊತ್ತಿಗೆ ಅವನ ಹೆಂಡರು ಚಾ ಪುಡಿ ತಗೊಂಡು ಬನ್ರಿ ಅಂದ್ರೆ 3ರೂಪಾಯಿಗೆ ಅಂಗಡೀಲಿ ಸಾಲ ಹೇಳಿ ಬಂದಿದ್ದ.
Comments
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
In reply to ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು by palachandra
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
In reply to ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು by abdul
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
In reply to ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು by kavinagaraj
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
In reply to ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು by ಗಣೇಶ
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು
In reply to ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು by manju787
ಉ: ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು