ಲೈಫು ಇಷ್ಟೇನೆ, ಲೈಫು ಹೀಗೇನೆ

ಲೈಫು ಇಷ್ಟೇನೆ, ಲೈಫು ಹೀಗೇನೆ

ಅಮ್ಮನ ಮಡಿಲಲ್ಲಿ ಊಟ ಮಾಡಿ

ತಾತನ ಹೆಗಲೇರಿ ಆಟ ಆಡಿ

ಅಪ್ಪನ ಜೇಬಲ್ಲಿ ಪಾಠ ಕೇಳು

ಲೈಫು ಇಷ್ಟೇನೆ, ಲೈಫು ಹೀಗೇನೆ

 

ಸೂರ್ಯೋದಯ ನೋಡಿ ಆಕಳಿಸಿ

ಹುಣ್ಣಿಮೆ ಬೆಳಕಲ್ಲಿ ತುಕಡಿಸಿ

ತಂಗಾಳಿಗೆ ತಲೆಯಾಡಿಸು

ಲೈಫು ಇಷ್ಟೇನೆ, ಲೈಫು ಹೀಗೇನೆ

 

ನಕ್ಷತ್ರ ಏಣಿಸಿ ನಕ್ಕುಬಿಡು

ನಿನ್ನೆಗೆ ನೆನಪೊಂದನ್ನು ಕಳಿಸಿ

ಕನಸ್ಸಲ್ಲಿ ತೇಲಿಬಿಡು

ಲೈಫು ಇಷ್ಟೇನೆ, ಲೈಫು ಹೀಗೇನೆ

 

ಕಾಗದದ ದೋಣಿ ಮಾಡಿ ಮುಂಗಾರಲ್ಲಿ ನೆನಸಿಬಿಡು

ಗೆಳೆಯರೊಡಗೂಡಿ ಗಾಳಿಪಟ ಹರಿಬಿಟ್ಟು

ಮನಸಾರೆ ಪ್ರೀತಿ ಮಾಡಿ ಮರೆತು ಬಿಡು

ಲೈಫು ಇಷ್ಟೇನೆ, ಲೈಫು ಹೀಗೇನೆ

Rating
No votes yet

Comments