ಕಾಂಗ್ರೆಸ್ ಮತ್ತು ಬೀಜೇಪಿ ಯಾಕೆ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?

ಕಾಂಗ್ರೆಸ್ ಮತ್ತು ಬೀಜೇಪಿ ಯಾಕೆ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?

Comments

ಬರಹ

ಪ್ರಿಯ ಸಂಪದಿಗರೇ,

ಯಾಕಾಗಬಾರದು? ದಯವಿಟ್ಟು ಕೆಳಗಿನ ಸಂಗತಿಗಳನ್ನು ಗಮನಿಸಿ

  • ೧.ಇವೆರಡೂ ನಿಜಕ್ಕೂ ಅಖಿಲ ಭಾರತ ವ್ಯಾಪ್ತಿಯ ಪಕ್ಷಗಳು
  • ೨.ಇವೆರಡೂ ತಮ್ಮದೇ ಶಕ್ತಿಯ ಆಧಾರದ ಮೇಲೆ ಕೇಂದ್ರದಲ್ಲಿ ಬಹುಮತ ಗಳಿಸುವ ಸಂಭವ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.
  • ೩.ಹದಿಮೂರು ಪಕ್ಷಗಳ ಹೊಂದಾಣಿಕೆಯ ಸರಕಾರಕ್ಕಿಂತ ಎರಡೇ ಪಕ್ಷದ ಬಹುಮತದ ಸರಕಾರ ನಿಭಾಯಿಸಲು ಕಡಿಮೆ ಕಷ್ಟ

  • ೪.ಸದ್ಯ ಇವೆರಡೂ ಪಕ್ಷಗಳು ರಾಜ್ಯ ಮಟ್ಟದ ಪಕ್ಷಗಳೊಂದಿಗೆ ಹೊಂದಾಣಿಕೆಗಾಗಿ ಹೆಣಗಾಡುತ್ತಿವೆ.(ಕಾಂಗ್ರೆಸ್ - ಎಸ್ಪಿ ಹನಿಮೂನು , ಕಾಂಗ್ರೆಸ್ - ಡಿ ಎಂ ಕೆ\ ಏ ಈ ಡಿ ಎಂ ಕೆ ಸಂಬಂಧ, ಬಾಳ ಠಾಕರೆ ಶರದ್ ಪವಾರರೊಂದಿಗೆ ಮೀಟಿಂಗ್ ಮಾಡಿದ್ದಕ್ಕೆ ಬೀಜೇಪಿಗೆ ತಲೆ ಬಿಸಿ-ಕಾಂಗ್ರೆಸ್ಸಿಗೆ ಕಸಿವಿಸಿ, ಬೀಜೇಪಿ -ಬೀಜೇಡಿ ಹೊಂದಾಣಿಕೆ ತುಂಡು ಇತ್ಯಾದಿ ಇತ್ಯಾದಿ)

  • ೫.ಇದರಿಂದ ರಾಜ್ಯ ಮಟ್ಟದ ಪಕ್ಷಗಳು ಕೇಂದ್ರ ಸರ್ಕಾರವನ್ನು ತಮ್ಮ ಬೇಡಿಕೆಗಳಿಗಾಗಿ ಬ್ಲಾಕ್ ಮೇಲ್ ಮಾಡುವುದು ತಪ್ಪುತ್ತದೆ ( ಡಿ ಎಂ ಕೆ ಗುಟುರು ಹಾಕಿದ್ದಕ್ಕೆ ಪ್ರಣಬ್ ಮುಖರ್ಜಿ ಶ್ರೀಲಂಕಾಕ್ಕೆ ಓಡಬೇಕಾಯಿತು, ಲಾಲೂಗೆ ಯು ಪಿ ಏ ಸರಕಾರದಲ್ಲಿರುವ ಪ್ರಾಶಸ್ತ್ಯ ಗಮನಿಸಿ)

  • ೬.ಸಣ್ಣ ಪುಟ್ಟ ಪಕ್ಷಗಳು ಚುನಾವಣೆಯಲ್ಲಿ kingmaker ಪಾತ್ರ ವಹಿಸಿ ಸರಕಾರವನ್ನು ಬುಗುರಿಯಾಡಿಸುವುದು ತಪ್ಪುತ್ತದೆ.

  • ೭.ಕಮ್ಯೂನಿಸ್ಟರ ಹೊರಗಿನಿಂದ ಬೆಂಬಲ ಕೊಡುವ "ಅಧಿಕಾರ ಬೇಕು ಜವಾಬ್ದಾರಿ ಬೇಡ" ಧೋರಣೆಯಿಂದ ಕಾಂಗ್ರೆಸ್ ಪಾರಾಗುತ್ತದೆ.

  • ೮.ಬೀಜೇಪಿ ಸರಕಾರಕ್ಕೆ ಬಂದರೆ ಭಜರಂಗ ದಳ ಮೊದಲಾದ fringe elements ಗಳ ಹಾವಳಿ ಬಹುಷಃ ಕಮ್ಮಿಯಾಗಬಹುದು (?)

  • ೯.ಸದ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ಹಾವಳಿಯಿಂದ ಭಾರತಕ್ಕೂ ತೀವ್ರ ಗಂಡಾಂತರದ ಸಂಭವ ಇರುವಾಗಿ ನಮ್ಮ ಎರಡೂ ಪ್ರಧಾನ ಪಕ್ಷಗಳು ಒಟ್ಟುಗೂಡಿ ಭಾರತದ ಭದ್ರತೆಗೆ ಗಮನ ಕೊಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

    ೧೦.ಅನೇಕ ವಿಷಯಗಳಲ್ಲಿ ಇವೆರಡೂ ಪಕ್ಷಗಳು ಒಂದೇ ರೀತಿಯವು :

    • a.ಇವೆರಡೂ ಪಕ್ಷಗಳಲ್ಲಿ ಕೆಲವರಾದರೂ ರಾಷ್ಟ್ರ ಮಟ್ಟದ ಯೋಚನೆ ಮಾಡಬಲ್ಲ, ಸಮರ್ಥ ಧುರೀಣರು ಇಂದಿಗೂ ಉಳಿದುಕೊಂಡಿದ್ದಾರೆ.

    • b.ಇವೆರಡರ ಆರ್ಥಿಕ ಧೋರಣೆ ಬಹುತೇಕ ಒಂದೇ. NDA ಸರಕಾರದ ಧೋರಣೆಗಳನ್ನು UPA ಬಹುಮಟ್ಟಿಗೆ ಮುಂದುವರಿಸಿದೆ.

    • c.ವಿದೇಶಾಂಗ ಧೋರಣೆಯಲ್ಲಿಯೂ ಇವೆರಡರಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಎರಡಕ್ಕೂ ಅಮೇರಿಕದೊಂದಿಗೆ ಮೈತ್ರಿ ಬೇಕು. ಅಣು ಕರಾರು ಬೇಕು. ಪಾಕಿಸ್ತಾನದ ವಿಷಯದಲ್ಲಿ ಬೀಜೇಪಿ , ಕಾಂಗ್ರೆಸ್ ನಿಲುವು ಹೆಚ್ಚು ಕಮ್ಮಿ ಒಂದೇ , ಬೀಜೇಪಿ ಸ್ವಲ್ಪ ಬಿರುಸಿನ posture ತೋರಿಸಿದರೂ ಸಹ.

    • d.ಇವೆರಡಕ್ಕೂ ರಾಷ್ಟ್ರಮಟ್ಟದ ಚಿಂತನೆ , ಯೋಜನೆ ಮಾಡುವುದರಲ್ಲಿ  ಸಾಕಷ್ಟು ಅನುಭವವಿದೆ.

    • e.ಬೀಜೇಪಿ ಮೊದಮೊದಲ್ಲಿ ಬಹಳ ಬೇರೆಯೇ ಥರದ ಪಕ್ಷವಾಗಿದ್ದರೂ, ಈಗೀಗ ಅವರೆಡರ ವ್ಯತ್ಯಾಸ ಮಸುಕಾಗುತ್ತಿದೆ (ಕಾಂಗ್ರೆಸ್ soft ಹಿಂದುತ್ವ ಮಾಡುತ್ತದೆ ಅನ್ನುವ ಆಪಾದನೆ ಹೊಸದಲ್ಲ. ಗೋವಿಂದಾಚಾರ್ಯ ಹೇಳಿದಂತೆ ಬೀಜೇಪಿ "ಕೇಸರಿ ಕಾಂಗ್ರೆಸ್" ಆಗುತ್ತಿದೆ)

    • f.ಕಾಂಗ್ರೆಸ್ ಭ್ರಷ್ಟವಾಗಿದ್ದರೆ, ಬೀಜೇಪಿಯೂ ಅದರ ಹಾದಿಯಲ್ಲೇ ಸಾಗಿದೆ.

ಆದರೆ ಇವು ಸಾಧ್ಯವಾಗಲಿಕ್ಕೆ ಕೆಲವು ಗಂಭೀರ ತೊಡಕುಗಳೂ ಇವೆ.

  • ೧.ತಲೆತಲಾಂತರದಿಂದ ಇವೆರಡೂ ಪರಸ್ಪರ ವಿರೋಧಿ ಪಕ್ಷಗಳ ನಿಲುವನ್ನೇ ಹೊತ್ತಿರುವುದರಿಂದ , ಈ ಹಠಾತ್ ಬದಲಾವಣೆ ಬಹಳ ಕಷ್ಟ.
  • ೨.ಇವೆರಡೂ ಪಕ್ಷಗಳಲ್ಲಿಯ ಗುಂಪುಗಳಲ್ಲಿಯ ಒಳ ರಾಜಕೀಯ , sub-agenda ಗಳಿಂದ ಇವೆರಡೂ ಪಕ್ಷ ಒಟ್ಟಿಗೆ ಬಂದರೆ , ಎರಡೂ ಛಿದ್ರವಾಗುವ ಅಪಾಯವೂ ಇದೆ. ಆಗ ಭಾರತದ ರಾಜಕೀಯ ರಂಗದಲ್ಲಿ ಬರಿಯ ಪ್ರಾದೇಶಿಕ ಪಕ್ಷಗಳೇ ವಿಜೃಂಭಿಸಬಹುದು. ಇದು ದೇಶದ ಒಕ್ಕಟ್ಟಿನ ದೃಷ್ಟಿಯಿಂದ ಒಳ್ಳೆಯದಲ್ಲ.

  • ೩.ಬೀಜೇಪಿ "ಹಿಂದೂಗಳ ಪಕ್ಷ" , ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ನೀತಿ ಅನುಸರಿಸುತ್ತದೆ ಎಂಬ ಹಣೆಪಟ್ಟಿಯಿಂದ ಹೊರಬರುವುದು ಇವೆರಡಕ್ಕೂ ಕಷ್ಟ.

  • ೪.ಮುಖ್ಯ ಅಂದರೆ ಈ ವಿಷಯದಲ್ಲಿ ಬಹುಷಃ ಇವೆರಡೂ ಪಕ್ಷಗಳು ಯೋಚಿಸುತ್ತಲೂ ಇಲ್ಲ !

 

ನಿಮ್ಮ ಅಭಿಪ್ರಾಯವೇನು?

 

(ಎರಡು ವಾರದ ಕೆಳಗೆ ಡಿ ಎನ್ ಏಯಲ್ಲಿ ಬಂದ ಲೇಖನದ ಸ್ಪೂರ್ತಿಯಿಂದ)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet