ಮಧುಚಂದ್ರ ಮುಗಿದಮೇಲೆ...!
ಕೆಲವು
ಬಾಂಧವ್ಯಗಳೇ
ಹೀಗೆ,
ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ;
ಮೊದಲ
ಭೇಟಿಯ
ಆ ಮೊದಲ
ಮಾತಿನಿಂದಲೇ
ಮೋಡಿಗೊಳಗಾಗುವರು,
ತನ್ನ ಯಾವುದೋ
ಸದಭಿಪ್ರಾಯದ
ಮಾತುಗಳಿಗೆ
ಸಹಮತ
ವ್ಯಕ್ತಪಡಿಸಿದ್ದಕ್ಕೇ
ಮೆಚ್ಚಿ ಕೊಂಡಾಡುವರು;
ಬರಸೆಳೆದು
ಆಲಿಂಗನ ನೀಡಿ
ಬೆನ್ನು ತಟ್ಟಿ
ನೀವೆನಗೆ
ಹತ್ತಿರದವರೆಂದು
ಮುಖಸ್ತುತಿ ಮಾಡುವರು,
ದಾರಿಯಲಿ
ಹೋಗುವವನ
ಮನೆಗೆ ಕರೆದು
ಯಾವುದೋ ಜನ್ಮದ
ಬಂಧುವೆಂದು
ಸತ್ಕರಿಸಿ
ಸಂತಸಪಡುವರು;
ನಾಲ್ಕಾರು ದಿನ
ವಾರಗಳಾದಾಗ,
ವಸ್ತುನಿಷ್ಟ ಅಭಿಪ್ರಾಯಗಳು
ಬರಲು ಆರಂಭಿಸಿದಾಗ,
ಆ ಮೊದಲ ಮಾತನೇ
ಮರೆಸುವ ಮಾತುಗಳು
ನೂರಾರು ಬಂದಾಗ,
ಬಂಧು ಎಂದವನನೇ
ಅಳೆಯುವುದಕೆ
ಆರಂಭಿಸುವರು,
ತಿಂಗಳು
ಕಳೆಯುವಷ್ಟರಲ್ಲಿ
ಅಸಡ್ದೆ
ತೋರಿಸತೊಡಗಿ
ಸಂಪೂರ್ಣವಾಗಿ
ನಿರ್ಲಕ್ಷಿಸಲು
ಪ್ರಾರಂಭಿಸುವರು;
ತಮ್ಮದೇ
ತಪ್ಪುಗ್ರಹಿಕೆಗೆ
ತಾವೇ
ಬಲಿಯಾಗುವರು,
ಅನ್ಯರ
ಪಾಲಿಗೆ ಬರಿ ಒಂದು
ದುಃಸ್ವಪ್ನವಾಗಿ
ಕಾಡಿ ಹೋಗುವರು;
ಇವರು ತಮ್ಮೆಲ್ಲಾ
ಮಾತುಗಳಿಗೆ
ಹೂಂಗುಟ್ಟುವವರ
ಅರಸುತಿರುವವರು,
ತಮ್ಮ ಸಂಗಡ
ಗುರುತಿಸಿಕೊಳ್ಳಲು
ಮಂದಿ ಬೇಕೆಂದು
ಹಾತೊರೆಯುವವರು;
ಇಂಥವರು
ನಮ್ಮ ಬಾಳಲ್ಲಿ
ಇದ್ದರೆಷ್ಟು?
ಇಲ್ಲದಿದ್ದರೆಷ್ಟು?
ಬಲು ನಿಧಾನದಿ
ಮನವ ಬಾಗಿಲ
ತೆರೆದು ಹೃದಯವನೇ
ಸೇರಿಕೊಂಬವರು
ಈಗ ಇದ್ದಾರೆಷ್ಟು?
ಕೆಲವು
ಬಾಂಧವ್ಯಗಳೇ
ಹೀಗೆ,
ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ!
****
ಆತ್ರಾಡಿ ಸುರೇಶ ಹೆಗ್ಡೆ
Comments
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by santhosh_87
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by malathi shimoga
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by manju787
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by asuhegde
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by manju787
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by asuhegde
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by gopinatha
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by asuhegde
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by gopinatha
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!
In reply to ಉ: ಮಧುಚಂದ್ರ ಮುಗಿದಮೇಲೆ...! by Tejaswi_ac
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!
ಉ: ಮಧುಚಂದ್ರ ಮುಗಿದಮೇಲೆ...!