ವಿಶ್ವ ಚಕ್ಷು (ಚತುರೋಕ್ತಿ ೪)

ವಿಶ್ವ ಚಕ್ಷು (ಚತುರೋಕ್ತಿ ೪)

 




ಹೊರಗಿನೊಳಗನ್ನು ಹೊರಗೆಳೆಯಬೇಕು

ಆ ದಾರದಾಧಾರದ ಸಾಧಾರ ಸಾಧಾರಣವಲ್ಲ
ದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ

ಕಣ್ಹಾಯಿಸು ಅಗಲ, ಊರಗಲ, ಜಗದಗಲ
ಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷು
ಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್ಟೇ, ಬಿಕ್ಷೆ

ಇದಿರುಗೊ೦ಡವನುದರದೊಳಗೇನಿದೆಯೋ ಕಾಣು
'ಚಕ್ಷುರ್ಯಜ್ಞೇನ ಕಲ್ಪತಾ೦'. ಕಿಡಿ ಹತ್ತಿಸು, ಉರಿಸು
ಗವಿಯೊಳಗವಿತು ಕುಳಿತದ್ದು ಸಾಕು. ಇನ್ನು ಏಳಬೇಕು
ಭೂಮಿಯಾಗಸವ ಸೇರಿಸುವ ದಾರ ನಾವಾಗಬೇಕು


--


 


 

Rating
No votes yet

Comments