ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩
(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್ಟ್ರಕ್ಷನ್)ಎನ್ನುತ್ತೇವೆ.
(೧೭೦) ಅತಿ ಹೆಚ್ಚು ದ್ವೇಷಿಸಲ್ಪಡುವ ಪದವು ’ದೇವರು’ ಎಂಬುದೇ ಇರಬೇಕು. ಏಕೆಂದರೆ ಯಾವ ವ್ಯಕ್ತಿಯೊ ತನ್ನನ್ನು ತಾನು ಆ ಹೆಸರಿನಿಂದ ಕರೆದುಕೊಳ್ಳುವುದಿಲ್ಲ. ಹಾಗೆ ಕರೆದುಕೊಳ್ಳುವವನನ್ನು ಜನ ’ಹುಚ್ಚ’ ಅಥವ ’ಗುರೂಜಿ’ ಎಂದು ಪುನರ್-ನಾಮಕರಣ ಮಾಡಿಬಿಡುತ್ತಾರೆ!
(೧೭೧) ಚಕ್ರವರ್ತಿಗಿಂತಲೂ ದೇವರು ಬಲಹೀನ ಏಕೆಂದರೆ ಆತ ಯಾರನ್ನೂ ತನ್ನ ರಾಜ್ಯದಿಂದ ಗಡೀಪಾರು ಮಾಡಲಾರ. ಅದೇ ಚಕ್ರವರ್ತಿಗಿಂತಲೂ ಭಿಕ್ಷುಕ ಶಕ್ತಿವಂತ ಏಕೆಂದರೆ ಆತ ಏನನ್ನೂ ಕಳೆದುಕೊಳ್ಳಲಾರ!
(೧೭೨) ಎರಡು ವಿಷಯಗಳನ್ನು ನಿಮ್ಮ ಮೇಲೆ ಆರೋಪಿಸಲ್ಪಟ್ಟಿವೆಃ ನಿಮ್ಮ ’ಜನನ’ ಮತ್ತು ನಿಮ್ಮ ’ರಾಷ್ಟ್ರೀಯತೆ’. ಮೊರು ವಿಷಯಗಳ ಬಗ್ಗೆ ನಿಮ್ಮನ್ನು ನೀವು ತೊಡಗಿಸಿಕೊಂಡಿರುತ್ತೀರಿಃ ಮೇಲಿನೆರೆಡು ವಿಷಯಗಳ ಪರವಾಗಿ ಮತ್ತು ’ಸಾವಿನ’ ವಿರುದ್ಧ ಹೋರಾಟದಲ್ಲಿ!
(೧೭೩) ನನ್ನ ಇಲ್ಲಿಯವರೆಗಿನ ಬದುಕಿನಲ್ಲಿ ಯಾವುದಾದರೂ ಒಂದು ವಿಷಯವನ್ನು ಬದಲಿಸುವ ಅವಕಾಶ ದೊರಕಿದಲ್ಲಿ ಬದಲಿಸುವುದು ಈ ಅವಕಾಶವನ್ನೇ!
(೧೭೪) ಒಂದು ಒಳ್ಳೆಯ ಹೇಳಿಕೆಯು ಅದನ್ನು ಸೃಷ್ಟಿಸಿದಾತನನ್ನು ತನ್ನದೇ ಪ್ರತಿಭೆಯ ಬಗ್ಗೆ ಬೆಚ್ಚಿಬೀಳುವಂತ ಮಾಡಿಬಿಡುತ್ತದೆಃ ಇಂತಹ ಪ್ರತಿಭಾನ್ವಿತ ವಾಕ್ಯವನ್ನು ತಾನು ಹೇಗೆ ಸೃಷ್ಟಿಸಲು ಸಾಧ್ಯವೆಂಬ ನಿಯತ್ತಿನ ಅನುಮಾನ ಹಾಗೂ ಅದರ ಮೊಲವೆಲ್ಲಿಯದೆಂಬ ಕೃತಿಚೌರ್ಯಪ್ರಣೀತ ಅಪರಾಧೀ ಭಾವವೆರೆಡೂ ಒಮ್ಮೆಲೆ ಆತನಲ್ಲಿ ಹುಟ್ಟಿಬಿಡುತ್ತದೆ. ಕೃತಿಚೌರ್ಯದ ಅನುಪಸ್ಥಿತ ಮೊಲಾಧಾರವೇ ಹೇಳಿಕೆಯ-ಮಾತು!
(೧೭೫) ಕಾಯುವುದೆಂದರೆ "ನಾನು ಇಲ್ಲಿ ಇರಬಾರದಿತ್ತು" ಎಂದುಕೊಳ್ಳುವುದು. ಅವಸರದಲ್ಲಿ ಹೊರಡುವುದೆಂದರೆ ಈ ಕಾಯುವಿಕೆಯು ಮುಗಿದು ಮತ್ತೆಲ್ಲಿಯೋ ತಲುಪಲು ತಡವಾಗಿದೆ ಎಂದರ್ಥ. ಏಕೆಂದರೆ ಅಲ್ಲಿ ಮತ್ಯಾವುದೋ, ಮತ್ಯಾರೋ ನೀವು ಈಗಷ್ಟೇ ಮಾಡಿಮುಗಿಸಿದ್ದನ್ನು ಮಾಡುತ್ತಿದ್ದಾರೆಃ ನಿಮಗಾಗಿ ಕಾಯುತ್ತಿದ್ದಾರೆ!
Comments
ಉ: ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ...
In reply to ಉ: ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ... by Harish Athreya
ಉ: ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ...
ಉ: ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ...