ಮನಸ್ಸಿನ ಭಾವನೆಗಳೊಂದಿಗೆ ಚೂರು ಜ್ಞಾನ , ಕಲೆ, ಚೂರು ಸಾಹಿತ್ಯ..ಚೂರು ಮನರಂಜನೆ..!!!

ಮನಸ್ಸಿನ ಭಾವನೆಗಳೊಂದಿಗೆ ಚೂರು ಜ್ಞಾನ , ಕಲೆ, ಚೂರು ಸಾಹಿತ್ಯ..ಚೂರು ಮನರಂಜನೆ..!!!

 

ನಮಸ್ಕಾರ ಗೆಳೆಯರೇ,...ಈ ಸಂಪದ ಲೋಕಕ್ಕೆ ನಾನು ಹೊಸಬಳು...ಎಲ್ಲೆಲ್ಲೂ ಕನ್ನಡದ ಕಂಪು ಸೃಷ್ಟಿಸಿರುವ ಸಂಪದದಲ್ಲಿ ನಾನೂ ಈಗ ಒಬ್ಬಳು ಎಂದು ತುಂಬಾ ಖುಷಿಯಾಗುತ್ತಿದೆ...ಮೊದಲಿಗೆ ಏನು ಬರೆಯಲಿ ತಿಳಿಯಲಿಲ್ಲ...ಹೊಸ ಹೊಸ ಚಿತ್ರಗಳನ್ನು ನೋಡುವ ಹವ್ಯಾಸವಿರುವ ನಾನು ಮೊನ್ನೆ ತಾನೇ ಮೀರರ್ಸ್ ಚಿತ್ರ ನೋಡಿದೆ..ಅದಕ್ಕೆ ಅದರ್ ಬಗ್ಗೆ ನಾಲ್ಕು ಸಾಲು ಬರೆಯುತ್ತಿದ್ದೇನೆ...

ನೀವು ಸೂಕ್ಷ ಮನಸ್ಸಿನವರಾಗಿದ್ದರೆ ದಯವಿಟ್ಟು ಸಿನೆಮಾ ನೋಡಬೇಡಿ..

 

 

ನಾ ನೋಡಿದ ಕನ್ನಡಿ ....ಮೀರರ್ಸ್..
ಅಲೆಕ್ಝಾಂಡ್ರೆ ಅಜಾ ನಿರ್ದೇಶನದ ಮೀರರ್ಸ್ ಸಿನೆಮಾ ನಿಜಕ್ಕೂ ಮೈ ಜುಮ್ಮೆನ್ನಿಸುತ್ತೆ.. ಈ ಸಿನೆಮಾ ನೋಡಿದ್ ಮೇಲೆ ಮನೆಲಿ ಕನ್ನಡಿ ನೋಡೋಕಾಗತಿಲ್ಲ..ಎಲ್ಲಿಲ್ಲದ ಭಯ ಆವರಿಸುತ್ತೆ.. ಆದ್ರೆ ಅಜಾ ನಿರ್ದೇಶನ ನಿಜವಾಗಲೂ ಸಕತ್ತಾಗಿದೆ. 
ಸಿನೆಮಾ ಪ್ರಾರಂಭದಲ್ಲಿ ಸೆಕ್ಯುರಿಟಿ ಗಾರ್ಡ್ ಒಬ್ಬ ಸಬ್ ವೇ ಪ್ಲ್ಯಾಟ್ ಫಾರ್ಮ್ ನಲ್ಲಿ ಓಡಿ , ಕನ್ನಡಿ ಇರುವ ದೊಡ್ಡ ಕೋಣೆಗೆ ಸೇರುವುದು..ತನ್ನದೇ ಪ್ರತಿಬಿಂಬದಿಂದ ಕೊಲೆಯಾಗುವ ಸೀನ್ ನೋಡೊಕೆ ಹಿಂಸೆ ಆಗುತ್ತೆ...ಆದರೆ ಮುಂದೆ ಮುಂದೆ ನಾಯಕ ಕೈಫರ್ ಸದರ್ಲ್ಯಾಂಡ್ ಸೆಕ್ಯುರಿಟಿ ಗಾರ್ಡ್ ಆಗಿ ಬಂದ ಮೇಲೆ ತುಂಬಾ ಇಟ್ರೆಸ್ಟಿಂಗ್ ಆಗುತ್ತೆ.
ತನ್ನ ಮುಖವನೇ ಕನ್ನಡಿಯಲ್ಲಿ ನೋಡುತ್ತಿದ್ದರೆ ಅದರ ಹಿಂದಿನ ಪ್ರಪಂಚದ ಅರಿವಾಗುತ್ತೆ..!!!
ಅಲ್ಲಿ ಸ್ಕ್ರಿಜೋಫೇನಿಯಾ ರೋಗಿಯೊಬ್ಬಳು ನರಳಾಟ ಕಾಣುತ್ತೆ...ಇದು ಇಷ್ಟಕ್ಕೇ ನಿಲ್ಲದೇ ನಾಯಕನ ಮನೆಯಲ್ಲೂ ಪ್ರತಿಬಿಂಬಗಳ ಹಾವಳಿ ಪ್ರಾರಂಭವಾಗುತ್ತೆ..ಮುದ್ದಾದ ಇಬ್ಬರು ಮಕ್ಕಳಿಗೆ, ಹೆಂದತಿಗೆ ಇದರ ಪರಿಚಯವಾಗುತ್ತೆ...ಕೊನೆಗೆ ಸ್ಕ್ರಿಜೋಫೇನಿಯಾ  ರೋಗಿಯನ್ನು ನಾಯಕ ಹುಡುಕಿಕೊಂಡು ಹೋಗುವುದು ಕಥೆಗೆ ಹೊಸ ತಿರುವು ನೀಡುತ್ತದೆ.. 
ಕನ್ನಡಿಗಳು ತುಂಬಿರುವ ಕೋಣೆಯಲ್ಲಿ ಸ್ಕ್ರಿಜೋಫೇನಿಯಾ  ರೋಗಿಯನ್ನು ಕಟ್ಟಿಹಾಕಿದ್ರೆ ರೋಗ ಗುಣವಾಗುತ್ತೆ ಅನ್ನೋ ಸಿದ್ಧಾಂತದ ಮೇಲೆ ವೈದ್ಯನೊಬ್ಬ ಆಕೆಯನ್ನು ತುಂಬಿ ತುಂಬಿರುವ ಕೋನೆಯಲ್ಲಿಕಟ್ಟಿಹಾಕಿ , ಅಕೆಯನ್ನು ಪ್ರೇತಗಳ ಲೋಕಕ್ಕೆ ಕಳಿಸಿರುತ್ತಾನೆ..
ಇನ್ನೊಂದು ಸನ್ನಿವೇಶದಲ್ಲಿ ತನ್ನ ಮಗ ಕನ್ನಡಿ ಮುಂದೆ ಕುಳಿತು ಆಟವಾಡುತ್ತಿರುತ್ತಾನೆ...ತಾಯಿ ಬಂದು, ಶಾಲೆಗೆ ಹೊತ್ತಾಯಿತು, ಹೊರಡು ಎಂದಾಗ ಮಗ ಎದ್ದು ಹೋದರೂ ಮಗನ ಪ್ರತಿಬಿಂಬ ತಾಯಿಯನ್ನೇ ವಿಕೃತವಾಗಿ ನೋಡುತ್ತಿರುವ ದೃಶ್ಯ ಎದೆ ನಡುಗಿಸುತ್ತೆ... 
ಹೀಗೆ ಏನೇನೋ ಊಹಾಪೋಹಗಳಿಂದ ತುಂಬಿ ವೀಕ್ಷಕರ ಬೆವರಿಳಿಸುತ್ತೆ ಈ  ಮೀರರ್ಸ್..ಆದ್ರೂ ಒಮ್ಮೆ ನೋಡಿ..ನಿರ್ದೇಶಕನ ಯೋಚನಾ ಲಹರಿ ಹೊಸದೆಂದು ಅನ್ನಿಸುವುದು..

ನಾ ನೋಡಿದ ಕನ್ನಡಿ ....ಮೀರರ್ಸ್..

ಅಲೆಕ್ಝಾಂಡ್ರೆ ಅಜಾ ನಿರ್ದೇಶನದ ಮೀರರ್ಸ್ ಸಿನೆಮಾ ನಿಜಕ್ಕೂ ಮೈ ಜುಮ್ಮೆನ್ನಿಸುತ್ತೆ.. ಈ ಸಿನೆಮಾ ನೋಡಿದ್ ಮೇಲೆ ಮನೆಲಿ ಕನ್ನಡಿ ನೋಡೋಕಾಗತಿಲ್ಲ..ಎಲ್ಲಿಲ್ಲದ ಭಯ ಆವರಿಸುತ್ತೆ.. ಆದ್ರೆ ಅಜಾ ನಿರ್ದೇಶನ ನಿಜವಾಗಲೂ ಸಕತ್ತಾಗಿದೆ. ಸಿನೆಮಾ ಪ್ರಾರಂಭದಲ್ಲಿ ಸೆಕ್ಯುರಿಟಿ ಗಾರ್ಡ್ ಒಬ್ಬ ಸಬ್ ವೇ ಪ್ಲ್ಯಾಟ್ ಫಾರ್ಮ್ ನಲ್ಲಿ ಓಡಿ , ಕನ್ನಡಿ ಇರುವ ದೊಡ್ಡ ಕೋಣೆಗೆ ಸೇರುವುದು..ತನ್ನದೇ ಪ್ರತಿಬಿಂಬದಿಂದ ಕೊಲೆಯಾಗುವ ಸೀನ್ ನೋಡೊಕೆ ಹಿಂಸೆ ಆಗುತ್ತೆ...ಆದರೆ ಮುಂದೆ ಮುಂದೆ ನಾಯಕ ಕೈಫರ್ ಸದರ್ಲ್ಯಾಂಡ್ ಸೆಕ್ಯುರಿಟಿ ಗಾರ್ಡ್ ಆಗಿ ಬಂದ ಮೇಲೆ ತುಂಬಾ ಇಟ್ರೆಸ್ಟಿಂಗ್ ಆಗುತ್ತೆ.ತನ್ನ ಮುಖವನೇ ಕನ್ನಡಿಯಲ್ಲಿ ನೋಡುತ್ತಿದ್ದರೆ ಅದರ ಹಿಂದಿನ ಪ್ರಪಂಚದ ಅರಿವಾಗುತ್ತೆ..!!!ಅಲ್ಲಿ ಸ್ಕ್ರಿಜೋಫೇನಿಯಾ ರೋಗಿಯೊಬ್ಬಳು ನರಳಾಟ ಕಾಣುತ್ತೆ...ಇದು ಇಷ್ಟಕ್ಕೇ ನಿಲ್ಲದೇ ನಾಯಕನ ಮನೆಯಲ್ಲೂ ಪ್ರತಿಬಿಂಬಗಳ ಹಾವಳಿ ಪ್ರಾರಂಭವಾಗುತ್ತೆ..ಮುದ್ದಾದ ಇಬ್ಬರು ಮಕ್ಕಳಿಗೆ, ಹೆಂದತಿಗೆ ಇದರ ಪರಿಚಯವಾಗುತ್ತೆ...ಕೊನೆಗೆ ಸ್ಕ್ರಿಜೋಫೇನಿಯಾ  ರೋಗಿಯನ್ನು ನಾಯಕ ಹುಡುಕಿಕೊಂಡು ಹೋಗುವುದು ಕಥೆಗೆ ಹೊಸ ತಿರುವು ನೀಡುತ್ತದೆ.. ಕನ್ನಡಿಗಳು ಆವರಿಸಿರುವ ಕೋಣೆಯಲ್ಲಿ  ಸ್ಕ್ರಿಜೋಫೇನಿಯಾ  ರೋಗಿಯನ್ನು ಕಟ್ಟಿಹಾಕಿದ್ರೆ ರೋಗ ಗುಣವಾಗುತ್ತೆ ಅನ್ನೋ ಸಿದ್ಧಾಂತದ ಮೇಲೆ ವೈದ್ಯನೊಬ್ಬ ಆಕೆಯನ್ನು ಕನ್ನಡಿಗಳ ಮಧ್ಯೆಯೇ ಕಟ್ಟಿ ಹಾಕಿ , ಅಕೆಯನ್ನು ಪ್ರೇತಗಳ ಲೋಕಕ್ಕೆ ಕಳಿಸಿರುತ್ತಾನೆ..

ಇನ್ನೊಂದು ಸನ್ನಿವೇಶದಲ್ಲಿ ಮಗ ಕನ್ನಡಿ ಮುಂದೆ ಕುಳಿತು ಆಟವಾಡುತ್ತಿರುತ್ತಾನೆ...ತಾಯಿ ಬಂದು, ಶಾಲೆಗೆ ಹೊತ್ತಾಯಿತು, ಹೊರಡು ಎಂದಾಗ ಮಗ ಎದ್ದು ಹೋದರೂ ಮಗನ ಪ್ರತಿಬಿಂಬ ತಾಯಿಯನ್ನೇ ವಿಕೃತವಾಗಿ ನೋಡುತ್ತಿರುವ ದೃಶ್ಯ ಎದೆ ನಡುಗಿಸುತ್ತೆ... ಹೀಗೆ ಏನೇನೋ ಊಹಾಪೋಹಗಳಿಂದ ತುಂಬಿ ವೀಕ್ಷಕರ ಬೆವರಿಳಿಸುತ್ತೆ ಈ  ಮೀರರ್ಸ್..ಆದ್ರೂ ಒಮ್ಮೆ ನೋಡಿ..ನಿರ್ದೇಶಕನ ಯೋಚನಾ ಲಹರಿ ಹೊಸದೆಂದು ಅನ್ನಿಸುವುದು..

 

Rating
No votes yet

Comments