ರಾಷ್ಟ್ರೀಯ ಸ್ವಯಂಸೇವಕ ಸಂಘ 6
ಓ.ಟಿ.ಸಿ.
೧೯೨೭ರ ಮೇ ತಿಂಗಳಲ್ಲಿ ಕೆಲವು ಆಯ್ದ ತರುಣರಿಗೆ ವಿಶೇಷ ಶಿಕ್ಶ್ಜಣವನ್ನು ನೀಡುವ ವರ್ಗವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರು ಎಲ್ಲಿಬೇಕಾದರೂ ಹೋಗಿ ತಮ್ಮ ತಮ್ಮ ಸ್ವ ಕರ್ತೃತ್ವದಿಂದ ಸಂಘಕಾರ್ಯವನ್ನು ನಡೆಸಲು ಸಮರ್ಥರಾಗಬೇಕು. ಅಲ್ಲದೆ ಅವರು ಶಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯಮಾಡಲೂ ಅರ್ಹರಾಗಬೇಕು ಎಂಬುದೇ ಈ ವರ್ಗದ ಉದ್ದೇಶವಾಗಿತ್ತು. ಇಂತಹ ವರ್ಗಕ್ಕೆ ಅಧಿಕಾರಿ ಶಿಕ್ಷಣ ವರ್ಗ (officers' Training Camp - OTC) ಎಂಬ ಹೆಸರು ಅನೇಕ ವರ್ಷಗಳಕಾಲ ರೂಢಿಯಲ್ಲಿತ್ತು. ೧೯೨೭ರ ಮೊದಲನೇ ವರ್ಗದಲ್ಲಿ ೧೭ ಮಂದು ಆರಿಸಿದ ಸ್ವಯಂಸೇವಕರಿಗೆ ಮಾತ್ರ ಪ್ರವೇಶ ಕೊಡಲಾಗಿತ್ತು.
ವರ್ಗದಲ್ಲಿ ಶ್ರೀ ಅಣ್ಣಾ ಸೋಹನಿ ಮತ್ತು ಶ್ರೀ ಮಾರ್ತಾಂಡರಾವ್ ಜೋಗ್ ಅವರು ಶಿಕ್ಷಕರಾಗಿದ್ದರು. ಪ್ರಾತ:ಕಾಲ ೫ ರಿಂದ ೯ ರ ವರೆಗೆ ಶಾರೀರಿಕ ಶಿಕ್ಷಣ ಮಧ್ಯಾಹ್ನ ೧೨:೩೦ ರಿಂದ ಸಂಜೆ ೫ರ ವರೆಗೆ ಮಾತುಕತೆ, ಚರ್ಚೆ, ಟಿಪ್ಪಣಿ ಇತ್ಯಾಗಿ. ಈ ಕಾರ್ಯಕ್ರಮಗಳಲ್ಲಿ ಸ್ವತ: ಡಾಕ್ಟರ್ ಜೀ ಹಾಜರಿದ್ದು ಅನೇಕ ವಿಷಯಗಳನ್ನು ತಿಳಿಸುತ್ತಿದ್ದರು. ಸಂಜೆ ಪುನ: ಶಾರೀರಿಕ ಕಾರ್ಯಕ್ರಮಗಳು. ವಾರದಲ್ಲಿ ಮೂರುದಿನ ಬೌದ್ಧಿಕ ವರ್ಗಕ್ಕಾಗಿ ಡಾಕ್ಟರ್ ಜೀ ಮನೆಯಲ್ಲಿ ಎಲ್ಲರೂ ಸೇರುತ್ತಿದ್ದರು. ವರ್ಗದಲ್ಲಿ ಈಜುವಿಕೆಯನ್ನು ಸಹ ಕಲಿಸಲಾಗುತ್ತಿತ್ತು.
ಅಂದು ಪ್ರಾರಂಭವಾದ ಈ ವಿಧದ ಶಿಕ್ಷಣವರ್ಗಗಳು ಸಂಘದಲ್ಲಿ ಈಗಲೂ ಪ್ರತಿವರ್ಷ ತಪ್ಪದೇ ನಡೆಯುತ್ತಿವೆ. ಈಗ ಅವುಗಳನ್ನು "ಸಂಘ ಶಿಕ್ಷಾವರ್ಗ" ಎನ್ನಲಾಗುತ್ತಿದೆ.
ಮಂಗಲಕರ ಪ್ರಹಾರಗಳು
ಅಂದು ಮಹಾಲಕ್ಷ್ಮೀ ಪೂಜೆಯ ಹಬ್ಬ. ಇಸವಿ ೧೯೨೭ ಸಪ್ಟೆಂಬರ್ ೪ರಂದು ನಾಗಪುರದಲ್ಲಿ ಹಿಂದುಗಳಿಗೆ ಸಡಗರ. ಮಧ್ಯಾಹ್ನ ದೇವಿಯ ಮೂರ್ತಿಗೆ ಸರ್ವವಿಧ ಆಭರಣಗಳ ಅಲಂಕಾರ, ಪೂಜೆಯ ನಂತರ ವಿವಿಧ ಭಕ್ಷಗಳ ಮೃಷ್ಟಾನ್ನ ಭೋಜನ, ಭೋಜನದ ನಂತರ ಹಿಂದೂಗಳು ಮೈಮರೆತು ಸುಖದ ನಿದ್ದೆಯಲ್ಲಿದ್ದಾಗ, ಅವರ ಮೇಲೆರಗಿ ಎಲ್ಲ ಸಂಪತ್ತು ಆಭರಣಗಳನ್ನು ಕೊಳ್ಳೆಹೊಡೆಯಬಹುದೆಂದು ಮುಸಲ್ಮಾನ ಗುಂಡಾಗಳ ಧೂರ್ತ ಯೋಜನೆ. ಅಂದೇ ಅವರೂ ಸಹ ಸೈಯದ್ ಮೀರ್ ಸಾಹೇಬನ ಪುಣ್ಯತಿಥಿಯ ನಿಮಿತ್ತ ಮಧ್ಯಾಹ್ನ ೨ ಗಂಟೆಗೆ ಮೆರವಣಿಗೆ ಹೊರಡುವುದಾಗಿ ಕರಪತ್ರಗಳ ಮೂಲಕ ಪ್ರಕಟಿಸಿದರು.
ಗೂಂಡಾಗಳ ಸಂಚಿನಪತ್ತೆ ಡಾಕ್ಟರ್ ಜೀ ಅವರಿಗೆ ಹತ್ತಿತ್ತು. ಅವರಿಂದ ಸೂಚನೆ ಪಡೆದು, ಶ್ರೀ ಅಣ್ಣಾ ಸೋಹನಿ ಅವರು ಮೆರವಣಿಗೆ ಬರುವ ರಸ್ತೆಯಲ್ಲಿ ಅಲ್ಲಲ್ಲಿ ೧೬ ಗುಂಪುಗಳಲ್ಲಿ ಆರಿಸಿದ ಸ್ವಯಂಸೇವಕರನ್ನು ದಂಡಸಹಿತ ಗುಟ್ಟಾಗಿ ನಿಲ್ಲಿಸಿದರು. ಒಟ್ಟು ಸುಮಾರು ೧೦೦-೧೨೫ ಜನ ಸ್ವಯಂಸೇವಕರಿದ್ದರು.
ಯೋಜನೆಯಂತೆ ಮುಸಲ್ಮಾನ ಗೂಂಡಾಗಳು ಲಾಠಿ, ಖಡ್ಗ, ಭರ್ಜಿ, ಚೂರಿಗಳಿಂದ ಸಜ್ಜಿತರಾಜಿ "ಅಲ್ಲಾ ಹೋ ಅಕ್ಬರ್", "ದೀನ್ ದೀನ್" ಘೋಷಣೆಗಳೊಂದಿಗೆ ಮೆರವಣಿಗೆ ಹೊರಟರು. ಒಂದುಕಡೆ ಅವರ ಶ್ಲೀಲ ಬೈಗುಳಗಳು ಹಾಗು ಹೊಡೆತಗಳಿಂದ ಸಾಮಾನ್ಯ ಹಿಂದೂ ಕಂಪಿತನಾಗುತ್ತಿದ್ದರೆ, ಇನ್ನೊಂದೆಡೆ ಕಾದು ನಿಂತ ಸ್ವಯಂಸೇವಕರಿಂದಲೇ ಭಾರೀಪ್ರಮಾಣದ ಪ್ರತ್ಯಾಕ್ರಮಣ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಮುಸಲ್ಮಾನ ಗೂಂಡಾಗಳು ಚಿಲ್ಲಾಪಿಲ್ಲಿಯಾದಾಗ ಗಲ್ಲಿ ಗಲ್ಲಿಗಳಿಂದ ಅವರಿಗೆ ಲಾಠಿ ಪ್ರಹಾರಗಳು ಬೀಳಲಾರಂಭಿಸಿದವು. ತಮ್ಮವರ ಕೈ ಮೇಲಾದುದು ಕಂಡಾಗ ಸಾಮಾನ್ಯ ಹಿಂದೂಗಳು ಉಟ್ಟಬಟ್ಟೆಯಲ್ಲೇ ಕೈಗ ಸಿಕ್ಕ ಆಯುಧಗಳಿಂದ ಮುಸಲ್ಮಾನರಿಗೆ ತಕ್ಕ ಪಾಠ ಕಲಿಸಲು ಮುಂದಾದರು. ಹಿಂದೂಗಳಲ್ಲಿ ಆತ್ಮವಿಶ್ವಾಸ ಜಾಗೃತವಾಯಿತು. ದೇವಿಯ ಆಭರಣಗಳನ್ನು ಕೊಳ್ಳೆಹೊಡೆಯಲು ಬಂದ ಮುಸಲ್ಮಾನರಿಗೆ ಆಕೆ ತನ್ನ ರೌದ್ರರೂಪ ತೋರಿ ಸರಿಯಾದ ಪ್ರಸಾದವನ್ನು ಕೊಟ್ಟಿದ್ದಳು.
೩ ದಿನಗಳ ಕಾಲ ದಂಗೆ ನಡೆದು ಕೊನೆಗೆ ಸೈನಿಕರು ಬಂದಮೇಲಷ್ಟೇ ಶಾಂತವಾಯಿತು. ನೂರಾರು ಮುಸಲ್ಮಾನ ಗೂಂಡಾಗಳು ಆಸ್ಪತ್ರೆ ಸೇರಿದರು. ೧೦-೧೫ ಮಂದಿ ಮೃತರಾದರು. ಶ್ರೀ ಧುಂಡೀರಾಜ್ ಲೇಹಗಾಂವಕರ್ ಎಂದ ಒಬ್ಬ ಸ್ವಯಂಸೇವಕನನ್ನು ಒಳಗೊಂಡಂತೆ ೪-೫ ಹಿಂದೂಗಳು ವೀರಗತಿ ಪಡೆದರು. ಶ್ರೀ ದಾದಾ ಪರಮಾರ್ಥ ಹೇಳುವಂತೆ "ನಮ್ಮ ಸ್ವಯಂಸೇವಕರ ಅಂದಿನ ಪ್ರಹಾರಗಳು ತುಂಬ ಮಂಗಲಕರವಾಗಿದ್ದವು". ಕಾರಣ ೧೯೨೭ ರ ನಂತರ ನಾಗಪುರದಲ್ಲಿ ಎಂದೂ ದಂಗೆ ನಡೆದೇ ಇಲ್ಲ.
Comments
ಉ: ರಾಷ್ಟ್ರೀಯ ಸ್ವಯಂಸೇವಕ ಸಂಘ 6
In reply to ಉ: ರಾಷ್ಟ್ರೀಯ ಸ್ವಯಂಸೇವಕ ಸಂಘ 6 by gopinatha
ಉ: ರಾಷ್ಟ್ರೀಯ ಸ್ವಯಂಸೇವಕ ಸಂಘ 6
ಉ: ರಾಷ್ಟ್ರೀಯ ಸ್ವಯಂಸೇವಕ ಸಂಘ 6
In reply to ಉ: ರಾಷ್ಟ್ರೀಯ ಸ್ವಯಂಸೇವಕ ಸಂಘ 6 by kamalap09
ಉ: ರಾಷ್ಟ್ರೀಯ ಸ್ವಯಂಸೇವಕ ಸಂಘ 6