ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಇಲ್ಲವೆ.

ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಇಲ್ಲವೆ.

ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ.  ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದೆ. ಪತ್ರಿಕೆಗಳಿಗಿಂತ ಹೆಚ್ಚು ಪ್ರಭಾವ ಬೀರುತ್ತಿರುವ ಬ್ಲಾಗ್ ಗಳಿಗೆ ಜಾಹೀರಾತಿನ ಕೊರತೆಯಾದರೂ ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ಪತ್ರಿಕೆಗಳಲ್ಲಿ ಸಾವಿರಾರು ರೂ ಖರ್ಚು ಮಾಡಿ ಹಾಕಿಸಿದಂತಹ ಜಾಹಿರಾತು ಅದು ಒಂದು ದಿನಕ್ಕೆ ಮಾತ್ರ ಸೀಮಿತ. ಅದೇ ಬ್ಲಾಗ್ ಗಳಲ್ಲಿಯಾದರೆ ದಿನ ನಿತ್ಯವೂ ಓದುಗರು ನೋಡುತ್ತಾರೆ. ಕನಿಷ್ಟ ಶೇ.40 ಭಾಗವಾದರೂ ಆಡ್ ಗೆ ಮೊರೆ ಹೋಗಬಹುದು. ಇದರ ಬಗ್ಗೆ ಆಡ್ ಕಂಪೆನಿಯವರು ಚಿಂತಿಸಿಲ್ಲವೆ. ಎಲ್ಲಾ ಬ್ಲಾಗ್ ಗಳಿಗೂ ಕೊಡಬೇಕಂತಲ್ಲ. ಯಾವುದು ಪ್ರಸಿದ್ದಿ ಹೊಂದಿದಿಯೋ ಅಂತಹುದಕ್ಕಾದರೂ ನೀಡಬಹುದಲ್ಲವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ತಿಳಿಸಿ. ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಸಿಗುವುದಾದರೆ ಕನಿಷ್ಟ ಪಕ್ಷ ಬರಹಗಾರ ಕೊಂಚ ಮಟ್ಟಿಗಾದರೂ ಮತ್ತಷ್ಟು ಉತ್ಸುಕನಾಗುತ್ತಾನೆ ಎನ್ನುವುದು ನನ್ನ ಅಭಿಪ್ರಾಯ. ಬ್ಲಾಗ್ ಬರೆಯುತ್ತೇನೆ ಆದರೂ ನನಗೆ ಅದರ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ. ದಯವಿಟ್ಟು ಇದರ ಬಗ್ಗೆ ಗೊತ್ತಿದ್ದಂತವರು ತಿಳಿಸಿದರೆ ನನಗೂ ಸಹಾಯವಾಗುತ್ತದೆ. ಹಾಗೇ ಉಳಿದವರಿಗೂ ಕೂಡ.

 

ಇದು ನನ್ನ ಬ್ಲಾಗ್ : http://www.komal1231.blogspot.com/

Rating
No votes yet

Comments