ಬದುಕೇ ಇಷ್ಟು.!.ಬರಿದೆ ಕಾಡುವ ನೆನಪು......

ಬದುಕೇ ಇಷ್ಟು.!.ಬರಿದೆ ಕಾಡುವ ನೆನಪು......

ಸುಳಿವೇ ಕೊಡದೆ ಥಟ್ಟನೆ
ನೆನಪಾಗಿ ನೋವ ತರುವೆ..
ಕಾಣದ ಕೈಗೆಟುಕದ ಕಲ್ಪನೆಗೆ
ಕಾಯುತ್ತಲಿರುವಂತೆ ಮಾಡುವೆ!
ಸುತ್ತ ಕಗ್ಗತ್ತಲೆಂದು ತಿಳಿದೂ..
ಮತ್ತೆ ಕಣ್ಣರಳಿಸಿ ನೋಡಿದೆ.
ಊಹೂಂ, ಕಾಣುತ್ತಿಲ್ಲ ಕಣ್ಣಿಗೆ..
ನೆರಳಾಗುತ್ತಿಲ್ಲ ನೆನಪಿಗೆ....!


 


ಹೌದು!ಕಾಯಿಸುತ್ತವೆ ನೆನಪುಗಳು
ನೀ ಬರುವುದಿಲ್ಲವೆಂದು ತಿಳಿದೂ...
ಕನವರಿಸುತ್ತವೆ ಕನಸುಗಳು
ಮರಳಿ ಬರದಷ್ಟು ದೂರಾದರೂ...
ಕರಗುವ ಕಾಲನ ಹಿಂದೆ ನೀ
ಹಿಂತಿರುಗಿ ನೋಡದೆ ನಡೆದರೂ
ನಿರಂತರ ನೋವ ಕೊಡುವ
ನಾಳೆಗಳ ನೀ ತಿರಸ್ಕರಿಸಿದರೂ...
ನೋಡು, ಚಲಿಸುತ್ತಲೇ ಇದೆ ಕಾಲ...
ಹರಡುತ್ತಾ ಮತ್ತದೇ ನೋವಿನ ಜಾಲ...


ಈಗ ನೀ ಉಳಿಸಿಹೋದ ನೆನಪುಗಳು
ಮನದಲ್ಲಿ ಎಂದೂ ಮಾಗದ ಗಾಯ
ತೆರೆದಿಟ್ಟ ಬಾಳಪುಟದಲ್ಲಿ
ನೀನೊಂದು ಎಂದಿಗೂ ಮುಗಿಯದ ಅಧ್ಯಾಯ...!

Rating
No votes yet

Comments