ಏರ್ ಟೆಲ್ ಹೊಸಾ ಸೇವೆ - ಗೌಡಪ್ಪನಿಗಾಗಿ ಒಂದನ್ನ ಒತ್ತಿ

ಏರ್ ಟೆಲ್ ಹೊಸಾ ಸೇವೆ - ಗೌಡಪ್ಪನಿಗಾಗಿ ಒಂದನ್ನ ಒತ್ತಿ

ಬೆಳಗ್ಗೆ ಎಲ್ಲಾ ಕೆರೆತಾವ ಕಾರ್ಯ ಮುಗಿಸಿಕೊಂಡು ನಿಂಗನ ಚಾ ಅಂಗಡಿ ತಾವ ಪೇಪರ್ ಓದ್ತಾ ಕೂತಿದ್ವಿ. ಅಟ್ಟೊತ್ತಿಗೆ ಸುಬ್ಬ ಏದುರಿಸನಾಗೆ ಓಡಿ ಬಂದು, ಗೌಡ ಎಲ್ರಲಾ ಅಂದ. ಇಲ್ಲೇ ಕೆರೆತಾವ ಹೋಗಿರಬೇಕು ನೋಡಲಾ ಅಂದ್ವಿ. ಇಲ್ಲ ಕಲಾ ಎಲ್ಲೂ ಕಾಣ್ತಾ ಇಲ್ಲ ಅಂದ. ಯಾಕಲಾ ಗಾಬರಿಯಾಗಿದೆಯಾ. ಲೇ ಗೌಡನ ಹೆಂಡರಿಗೆ ಸಾನೇ ಹುಸಾರಿಲ್ಲ. ಆಸ್ಪತ್ರಾಗೆ ಒಯ್ಯಬೇಕು. ಅದಕ್ಕೆ ಗೌಡಪ್ಪ ಎಲ್ಲಿದಾನೆ ಹೇಳ್ರಲಾ ಅಂದ ಸುಬ್ಬ. ನೋಡಲಾ ಅವನತಾವ ಏರ್ ಟೆಲ್ ಮೊಬೈಲ್ ಐತೆ. ಅದ್ರಾಗೆ ಯಾರಾದರೂ ಮಿಸ್ ಆದ್ರೆ ಹುಡಕೋಡೋ ವ್ಯವಸ್ಥೆ  ಹೊಸದಾಗಿ ಐತೆ ಕಲಾ. ನನ್ನ ಬಳಿ ಮೊಬೈಲ್ ಇಲ್ಲ ಅಂದಾ ಸುಬ್ಬ. ತೊಗಳಲ್ಲಾ ನಿಂಗನ ಮೊಬೈಲು ಅಂದು ಚಾ ಅಂಗಡಿ ನಿಂಗನ ಮೊಬೈಲ್ ಕೊಟ್ಟೆ. ಲೇ ಬರೇ 2ರೂಪಾಯಿ ಮಾತ್ರ ಕರೆನ್ಸಿ ಐತೆ ಕನ್ರಲಾ ಅಂದ ನಿಂಗ. ಲೇ ನಾವು ಏರ್ ಟೆಲ್ ಆಫೀಸಿಗೆ ಮಾಡ್ತಾ ಇರೋದು ಏನು ಖರ್ಚಾಗದಿಲ್ಲಾ ಬುಡ್ಲಾ ಅಂದ ಸುಬ್ಬ.


ಹೇಳಲಾ ನಂಬರ್, ಹೊಡೆಯಲಾ 00010003 ನಂಬರ್ ಅಂತಾ ಕೊಟ್ಟ ತಂಬಿಟ್ಟು ರಾಮ,
ಧನ್ಯವಾದಗಳು
ಕನ್ನಡಕ್ಕಾಗಿ ಒಂದನ್ನು ಒತ್ತಿ, ಇಂಗ್ಲೀಸ್ ಗಾಗಿ ಎರಡನ್ನು ಒತ್ತಿ, ಹಿಂದಿಗಾಗಿ ಮೂರನ್ನು ಒತ್ತಿ.
ಒಂದನ್ನು ಒತ್ತಲಾ ಅಂದಾ ರಾಮ
ಧನ್ಯವಾದಗಳು
ನಿಮ್ಮ ಊರಲ್ಲೇ ಕಳೆದಿದ್ರೆ ಒಂದನ್ನ ಒತ್ತಿ, ಕೆರೆತಾವ ಹೋಗಿದ್ರೆ ಎರಡನ್ನ ಒತ್ತಿ, ಸಾಲ ಮಾಡಿ ಊರು ಬಿಟ್ಟಿದ್ರೆ ಮೂರನ್ನ ಒತ್ತಿ.
ಒಂದನ್ನ ಒತ್ತಲಾ
ಧನ್ಯವಾದಗಳು
ಗೌಡಪ್ಪ ಆಗಿದ್ರೆ ಒಂದನ್ನ ಒತ್ತಿ, ಗೌಡರೇ ಆಗಿದ್ರೆ ಎರಡನ್ನ ಒತ್ತಿ. ಲೇ ಗೌಡ ಆಗಿದ್ರೆ ಮೂರನ್ನ ಒತ್ತಿ.
ಒಂದನ್ನ ಒತ್ತಲಾ
ಧನ್ಯವಾದಗಳು
ಮಂಡ್ಯದ ಗೌಡ ಆಗಿದ್ರೆ ಒಂದನ್ನ ಒತ್ತಿ, ಹಾಸನ ಗೌಡ ಆಗಿದ್ರೆ ಎರಡನ್ನ ಒತ್ತಿ, ರಾಮನಗರ ಗೌಡ ಆಗಿದ್ರೆ ಮೂರನ್ನ ಒತ್ತಿ.
ಒಂದನ್ನ ಒತ್ತಲಾ
ಧನ್ಯವಾದಗಳು
ಮರಿ ಗೌಡ ಆಗಿದ್ರೆ ಒಂದನ್ನ ಒತ್ತಿ, ದೊಡ್ಡೇ ಗೌಡ ಆಗಿದ್ರೆ ಎರಡನ್ನ ಒತ್ತಿ, ದೊಡ್ಡ ಮರಿ ಗೌಡ ಆಗಿದ್ರೆ ಮೂರನ್ನ ಒತ್ತಿ
ಒಂದನ್ನ ಒತ್ತಲಾ
ಧನ್ಯವಾದಗಳು
ಪಟಾಪಟಿ ಚೆಡ್ಡಿ ಹಾಕಿದ್ರೆ ಒಂದನ್ನ ಒತ್ತಿ, ಪಂಚೆ ಹಾಕಿದ್ರೆ ಎರಡನ್ನ ಒತ್ತಿ. ಎರಡೂ ಇಲ್ಲ ಅಂದ್ರೆ ಮೂರನ್ನ ಒತ್ತಿ
ಒಂದನ್ನ ಒತ್ತಲಾ
ಧನ್ಯವಾದಗಳು
ಲಾಡಿ ಕಟ್ಟಿದ್ರೆ ಒಂದನ್ನ ಒತ್ತಿ, ಜಿಪ್ ಹಾಕಿದ್ರೆ ಎರಡನ್ನ ಒತ್ತಿ, ಗುಂಡಿ ಹಾಕಿದ್ರೆ ಮೂರನ್ನ ಒತ್ತಿ
ಒಂದನ್ನು ಒತ್ತಲಾ
ಧನ್ಯವಾದಗಳು
ವೀರಪ್ಪನ್ ಮೀಸೆ ಇದ್ರೆ ಒಂದನ್ನ ಒತ್ತಿ, ಚಾರ್ಲಿ ಚಾಪ್ಲಿನ್ ಮೀಸೆ ಇದ್ರೆ ಎರಡನ್ನ ಒತ್ತಿ, ಮೀಸೆ ಇಲ್ಲದಿದ್ದರೆ ಮೂರನ್ನ ಒತ್ತಿ.
ಒಂದನ್ನ ಒತ್ತಲಾ
ಧನ್ಯವಾದಗಳು
ಕತ್ತೆ ತುಟಿ ಇದ್ದರೆ ಒಂದನ್ನ ಒತ್ತಿ, ಐಶ್ವರ್ಯಾ ರೈ ತುಟಿ ಇದ್ದರೆ ಎರಡನ್ನ ಒತ್ತಿ, ಡಿಸ್ಕೊ ಸಾಂತಿ ತುಟಿ ಇದ್ದರೆ ಮೂರನ್ನ ಒತ್ತಿ
ಒಂದನ್ನ ಒತ್ತಲಾ
ಧನ್ಯವಾದಗಳು
ಬೊಂಡಾ ಕೆನ್ನೆ ಇದ್ದರೆ ಒಂದನ್ನ ಒತ್ತಿ, ಚಪಾತಿ ಕೆನ್ನೆ ಇದ್ದರೆ ಎರಡನ್ನ ಒತ್ತಿ, ಪೂರಿ ಕೆನ್ನೆ ಇದ್ದರೆ ಮೂರನ್ನ ಒತ್ತಿ
ಒಂದನ್ನ ಒತ್ತಲಾ
ಧನ್ಯವಾದಗಳು
ಕೆಟ್ಟ ವಾಸನೆ ಬಂದರೆ ಒಂದನ್ನ ಒತ್ತಿ, ಹಳಸೋದು ಫಲಾವು ವಾಸನೆ ಬಂದರೆ ಎರಡನ್ನ ಒತ್ತಿ, ಸಗಣಿ ವಾಸನೆ ಬಂದರೆ ಮೂರನ್ನ ಒತ್ತಿ,
ಎರಡು ಒತ್ತಲಾ
ಧನ್ಯವಾದಗಳು
ಚೆಡ್ಡಿ ಬನೀನು ಹಾಕಿದ್ದರೆ ಒಂದನ್ನ ಒತ್ತಿ, ಚೆಡ್ಡಿ ಸಲ್ಟು ಹಾಕಿದ್ದರೆ ಎರಡನ್ನ ಒತ್ತಿ, ಚೆಡ್ಡಿ ಇಲ್ಲದೇ ಬರೇ ಸಲ್ಟು ಹಾಕಿದ್ದರೆ ಮೂರನ್ನ ಒತ್ತಿ.
ಒಂದು ಒತ್ತಲಾ
ಧನ್ಯವಾದಗಳು
ಇಬ್ಬರು ಹೆಂಡರು ಇದ್ದರೆ ಒಂದನ್ನ ಒತ್ತಿ, ಮೂರು ಜನ ಹೆಂಡರು ಇದ್ದರೆ ಎರಡನ್ನ ಒತ್ತಿ, ನಾಕು ಹೆಂಡರು ಇದ್ದರೆ ಮೂರನ್ನ ಒತ್ತಿ.
ಮೂರು ಒತ್ತಲಾ
ಧನ್ಯವಾದಗಳು
ಪೆಕರಾ ಗೌಡ ಆದರೆ ಒಂದನ್ನ ಒತ್ತಿ, ಬುದ್ದಿವಂತ ಗೌಡನಾದರೆ ಎರಡನ್ನ ಒತ್ತಿ, ಅರೆ ಪೆಕರ ಆದರೆ ಮೂರನ್ನ ಒತ್ತಿ
ಮೂರನ್ನ ಒತ್ತಲಾ
ಧನ್ಯವಾದಗಳು, ಕ್ಷಮಿಸಿ, ಈ ರೀತಿಯ ಗುರುತಿನ ವ್ಯಕ್ತಿಯ ಪ್ರೋಫೈಲ್ ನಮ್ಮ ಬಳಿ ಇಲ್ಲ. ಬಹುಷಃ ಪೊಲೀಸ್ ಠಾಣೆಯಲ್ಲಿನ ಕಳ್ಳರ ಪೋಟೋದಲ್ಲಿ ಹುಡುಕಿ ಸಿಗಬಹುದು.  ಕರೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಇನ್ನೇನಾದರೂ ಮಾಹಿತಿ ಬೇಕಾಗಿದ್ದರೆ ಕರೆ ಮಾಡಿ ಧನ್ಯವಾದಗಳು. ನಿಮಗೆ ಒಂದು ದೊಡ್ಡ ನಮಸ್ಕಾರ.
ಅಟ್ಟೊತ್ತಿಗೆ ಸುಬ್ಬನ ಕಿವಿಯಿಂದ ಹೊಗೆ ಬತ್ತಾ ಇತ್ತು. ಯಾಕಲಾ ಸುಬ್ಬ. ಲೇ ಅರ್ಧಗಂಟೆಯಿಂದ ಆ ವಮ್ಮ ಅದನ್ನ ಒತ್ತು ಇದನ್ನ ಒತ್ತು ಅಂದು ಕಿವ್ಯಾಗೆ ಹಿಡಿಕಂಡಿದ್ದಕ್ಕೆ ಹಿಂಗಾಗೈತೆ ಅಂದಾ. ಅಟ್ಟೊತ್ತಿಗೆ ಗೌಡಪ್ಪ ಬಂದೋನು ಯಾರಿಗಲಾ ಪೋನ್ ಮಾಡ್ತಾ ಇದೀಯಾ ಅಂದ. ಅಯ್ಯೋ ನಿನ್ನ ಮಕ್ಕೆ ಚಾ ಚಲ್ಟ ಹುಯ್ಯಾ ನಿಮಗೆ ಅಂತಾ ಏರ್ ಟೆಲ್ ಗೆ ಪೋನ್ ಮಾಡಿದ್ರೆ ನಿಮ್ಮ ಹೆಸರೇ ಇಲ್ಲಾ ಅಂದ್ರು. ಲೇ ನಾನು ಕಾಸು ಕೊಟ್ಟಿಲ್ಲಾ ಅಂತಾ ಕ್ಯಾನ್ಸಲ್ ಮಾಡವ್ರೆ. ಈಗ ವಡೆ ಪೋನ್ ತಗೊಂಡಿದೀನಿ ಅಂದಾ. ನಿಂಗ ಲೇ ಒಂದು ಎರಡು ಒತ್ತಿದ್ರೆ ಕೆಲಸ ಮಾಡ್ತಾ ಇಲ್ಲಾ ಕಲಾ ಸುಬ್ಬ. ಕೆರೆತಾವ ಹೋಗು ಎಲ್ಲಾ ಕೆಲಸ ಮಾಡತ್ತೆ ಅಂದ ಸುಬ್ಬ. ಗೌಡಪ್ಪನ ಮನೆತಾವ ಎಲ್ಲಾ ಹೋದ್ರೆ. ಗೌಡಪ್ಪನ ಹೆಂಡರು ಕಟ್ಟೆ ಮ್ಯಾಕೆ ಕುಂತಿತ್ತು. ಹುಸಾರು ಆದ್ಯಾನಮ್ಮಿ ಅಂದಾ ಗೌಡಪ್ಪ. ಹೂ ಕಲಾ ಪಕ್ಕದ ಮನೆ ರಾಜ ಎತ್ಕಂಡು ಹೋಗಿ ಆಸ್ಪತ್ರಾಗೆ ಕರ್ಕಂಡು ಹೋಗಿ ತೋರಿಸಿದ ಅಂತು. ನಿನ್ನ ನಮ್ಮಕಂಡ್ರೆ ಏನೂ ಆಗಕ್ಕಿಲ್ಲಾ ಅಂತು. ಗೌಡಪ್ಪ ರಾಜನ ನೋಡಿ ಹಲ್ಲು ಕಟಕಟ ಅನ್ನಿಸೋನು.

Rating
No votes yet

Comments