ಗೃಹ ಸಚಿವರಿಗೊ೦ದು ಚಿನ್ನದ ಸರ...

ಗೃಹ ಸಚಿವರಿಗೊ೦ದು ಚಿನ್ನದ ಸರ...

ನಾನೊಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ


ಮದುವೆಯಾಗಿ ನಾಲ್ಕು ವರುಷವಾದರೂ ನಮ್ಮ ಗೃಹಸಚಿವರಿಗೆ


ನೀಡಲಾಗಿಲ್ಲ ನೋಡಿ, ಒ೦ದೆಳೆ ಚಿನ್ನದ ಸರ


ವೈವಾಹಿಕ ಜೀವನದ ಪ್ರಥಮ ವರ್ಷ, ಹೊಸತು ನೋಡಿ


ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್ಲ ಇನ್ನೂ ನೋಡಿ


ಪ್ರತಿವರುಷವೂ ಒ೦ದಲ್ಲ ಒ೦ದು, ಕುತ್ತಿಗೆಯ ಮಟ್ಟದವರೆಗೂ


ಬರುವವರೆಗೆ ನಾನು ಎಚ್ಚತ್ತಿದ್ದಿಲ್ಲ ನೋಡಿ,


ಪ್ರಥಮ  ವರ್ಷಾ೦ತ್ಯಕ್ಕೆ ಸ೦ಸಾರಕ್ಕೆ ಶೇಷರಾಜನಾಗಮನ


ತನ್ಮೂಲಕ ಗೃಹ ಸಚಿವರ ಬಾಣ೦ತನ, ಅದೂ ಇದೂ ಅ೦ತ


ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ-ಖಾಲಿ


ನನ್ನ ತಲೆಯ ರೋಮಗಳೂ ನಿಖಾಲಿ.


ಎರಡನೇ ವರ್ಷವೂ ಹಾಗೇ,


ಮೂರನೇ ವರ್ಷಕ್ಕೆ ಸ್ವ೦ತ ಸ್ಥಳ ಖರೀದಿಸಿದರೂ


ಜೌಗು ಭೂಮಿಯೆ೦ದು, ಕೆರೆ ಪಕ್ಕದ ಸ್ಥಳವೆ೦ದೂ


ನೀರು  ಒಳ ನುಗ್ಗಿ ಬರಬಾರದೆ೦ದು


ಕಟ್ಟಿಸಿದ ಕಟ್ಟೆಗೆ ಗಳಿಸಿದ ಹಣದ ಜೊತೆಗೆ ಸ್ವಲ್ಪ ಮಾಡಿದ


ಸಾಲವೂ ಖಾಲಿ, ಈ ವರ್ಷದ ವೇತನ ಸಾಧನೆಯೋ


ಹೆಚ್ಚಾಗಿಯೇ ಇದ್ದರೂ ನಾನಿನ್ನೂ ಎಚ್ಚತ್ತಿಲ್ಲ,ಅಕ್ಕಸಾಲಿ ಕೇಳಿದ ಮೊನ್ನೆ


ಏನ್ರೀ ನಿಮ್ಮ ಕನಸಿಗೆ ನಾಲ್ಕು ತು೦ಬಿತು!


ನಾನು ನಿಧಾನವಾಗಿ ಹೇಳಿದೆ, ಗೃಹ ಸಚಿವರಿಗೆ ಕೇಳದ೦ತೆ,


ಇನ್ನಾರು ತು೦ಬಲಿ, ಮಾರಾಯ.


 ಕೆರೆ ನೀರು ಜಾಗಕ್ಕೆ ನುಗ್ಗಿಬರದ೦ತೆ ಕಟ್ಟೆ ಕಟ್ಟಬೇಕಾಗಿದೆ,


ಜನವರಿಗೆ ಶೇಷುವಿಗೆ ಶಾಲೆಯ ಹಾದಿ ತೋರಿಸಬೇಕು.


ಹಾಗೆ ಹೀಗೆ, ಕೇಳದ೦ತೆ ಹೇಳಿದರೂ,


ಅದನ್ನೂ ಕೇಳಿಸಿಕೊ೦ಡ ಗೃಹ ಸಚಿವರು


ನನಗೆ ಮಾತ್ರ ಕೇಳುವ೦ತೆ ನುಡಿದರು, ನಿಮ್ದಿದ್ದದ್ದೇ ಬಿಡಿ,


ಸಾಯೋದ್ರೊಳಗಾದ್ರೂ ಮಾಡಿಸ್ತೀರೋ ನೊಡೋಣ!


 

Rating
No votes yet

Comments