ಭಲೇ ಅದ್ರಷ್ಟ !!! ಭಾಗ - ೪

ಭಲೇ ಅದ್ರಷ್ಟ !!! ಭಾಗ - ೪


ರಾತ್ರಿಯ ೧ :೩೦  ಆಗಲೇ ಆಗಿತ್ತು. ಮತ್ತು ಬೆಳಗ್ಗಿನಿಂದ ಮಾಡಿದ ಶ್ರಮದಿಂದ ಮನಸಲ್ಲಿ "ದುರಾದೃಷ್ಟ"ದ ಭೂತ ಮನೆ ಮಾಡಿದ್ದರು, ಕಣ್ಣು ನಿದ್ರಾದೇವಿಯ ಗಾನ ಹಾಡಲು ಅಣಿಯಾಗುತ್ತಿತ್ತು.
ಅರವಿಂದ್ ಗೆ "ತುಂಬಾ ದಣಿದೆವು ಕಣೋ,ಒಂದು ದಿನ ಮುಂಚೆನೇ ಹೊರಟದ್ದು ಒಳ್ಳೆದಾಯ್ತು ನೋಡು,ನಾಳೆ ಫುಲ್ ಡೇ ಮಲಗಬೇಕು, ರೆಸ್ಟ್ ತಕೊಬೇಕು !!!"
"ಹೂಂ.. ಎಷ್ಟು ತಯಾರಿ ನಡೆಸಿದರೂ ಕಾಲ ಬಂದಾಗ ಆಗುದೇ ಆಗಿ ಹೋಗ್ತದೆ ಅನ್ನುದ್ದಕ್ಕೆ ನಮ್ಮ ಇಂದಿನ ಅನುಭವವೇ ಸಾಕ್ಷಿ... "
"ಸರಿಯಪ್ಪಾ ಮಲಗುವಾ, ತುಂಬಾ ತಲೆ ಕೆಡಿಸಿ ಕೊಂಡದ್ದಾಯ್ತು. ಇನ್ನಾದ್ರು ವಿಧಿ ಈ ಆಟ ನಿಲ್ಲಿಸಿದರೆ ಸಾಕು :("
"ಹೂಂ ನನಗೂ ಜೋರಾಗಿ ನಿದ್ದೆ ಬರ್ತಾ ಇದೆ "
"ಸರಿ ಗುಡ್ ನೈಟ್ "
"ಸ್ವೀಟ್ ಡ್ರೀಮ್ಸ್ "
"ಬೇಡಪ್ಪ ಯಾವುದೂ ಕನಸು ಬೇಡ, ಕಣ್ಣತುಂಬಾ ನಿದ್ದೆ ಬಂದ್ರೆ ಸಾಕು!!!"

ಹೀಗೆ ಅನ್ನುತ್ತಿದ್ದಂತೆ ಇಬ್ಬರು ನಿದ್ದೆಗೆ ಜಾರಿದೆವು. ಇಬ್ಬರು ದಣಿದ್ದೆದ್ದೆವು ನೋಡಿ ಇಬ್ಬರಿಗೂ ಕ್ಷಣ ಮಾತ್ರದಲ್ಲಿ ನಿದ್ದೆಬಂತು. ಕನಸು ಬಿದ್ದಿರಲಿಲ್ಲ !!!
೩ :೩೦ ದಾಟಿರಬಹುದು ಬಸ್ಸು ನಿಂತ್ತಿರುವಂತೆ ಅನಿಸಿತು ,ಬಹಿರ್ದೆಶೆಗೆ ನಿಲ್ಲಿಸಿರ ಬಹುದು ಅಂದುಕೊಂಡು ಮಗ್ಗುಲು ಬದಲಾಯಿಸಿ ಮಲಕೊಂಡೆ.
೫ ನಿಮಿಷ -೧೦ ನಿಮಿಷ ಆಯಿತು ಇನ್ನು ಹೋಗಲಿಲ್ಲ, ಇಗಾ ಮತ್ತೇನಾದರೂ ಆಗಿರಬಹುದು ಎಂದು ಖಾತ್ರಿ ಆಯಿತು, ಪಕ್ಕದಲ್ಲಿ ನೋಡುವಾಗ ಅರವಿಂದ್ ಇರಲಿಲ್ಲ, ಬಸ್ಸಲ್ಲಿ ಹೆಚ್ಚಿನವರು ನಿದ್ದೆಯಲ್ಲಿದ್ದರು , ಎಚ್ಚರ ಇದ್ದವರು ಕೆಳಗೆ ಇದ್ದರು, ಕಿಟಕಿಯಿಂದ ಕೆಳಗೆ ನೋಡಿದಾಗ ಹಿಂದಿನವರ ಹಾಸಿಗೆಯ ಕಟ್ಟ ರೋಡಿನ ಬದಿಯಲ್ಲಿ ಮಲಗಿಸಿದ್ದರು.
ಏನಾಯ್ತು ನೋಡುವ ಎಂದು ಸೀಟಿಂದ ಎದ್ದು ಕೆಳಗೆ ಇಳಿದೆ.

ಅರವಿಂದ್ ನನ್ನನ್ನು ನೋಡಿದವನೇ "ಎದ್ದಿಯಾ  ಏಳಿಸುದು ಬೇಡ ಅಂತ ಸುಮ್ಮನಿದ್ದೆ "
"ಈಗ ಏನಾಯ್ತು ?"
"ಈಗ ಇನ್ನೊಂದು ತೊಂದರೆ " ಅಂದಾಗ ಹತ್ತಿರದಲ್ಲೇ ಬಿಚ್ಚಿಟ್ಟಿದ್ದ ಮುಂದಿನ ಟೈರ್ ಕಾಣಿಸಿತು.
"ಅಯ್ಯೋ ದೇವರೇ ..... ಏನೆಲ್ಲಾ ಆಗ್ತಿದೆ ... ಎಲ್ಲಾ ಶನಿ ಕಾಟ ಒಂದೇ ದಿನ ಅನುಭವಿಸುತ್ತಿದ್ದೇವೆ ...."ಎಂಬ ಮಾತು ನಾನಾಡಿರಲಿಲ್ಲ ಆದರು ಎಲ್ಲರಿಗೂ ಕೇಳಿಸುವಷ್ಟು ಗಟ್ಟಿಯಾಗಿ ಹೊರ ಬಂದಿತ್ತು .

ಎಚ್ಚರ ಇದ್ದ ಎಲ್ಲರೂ ನನ್ನನ್ನೇ ನೋಡಿದರು. ಮುಜುಗರವಾಯಿತು. ಸರಿ ಎಂದು ಕೆಳಗಿಳಿದೆ. ಪಾಪ ಡ್ರೈವರ್ ಅರುಣ್ ಕುಮಾರ್ ಮತ್ತು ಕಂಡೆಕ್ಟರ್ ಪುನ್ಚರ್ ಆದ ಮುಂದಿನ ಟೈರ್ ತೆಗೆದು ಮಲಗಿಸಿದ್ದರು. ಈಗ ಬಸ್ಸನಲ್ಲಿದ್ದ ಜನರಲ್ಲಿ ಎರಡು ಪಂಗಡ ಆಗಿ ಮಾರ್ಪಾಡಾಗಿತ್ತು. ಮಂಗಳೂರಿನಿಂದ ಬಂದ ಪ್ರಯಾಣಿಕರ ಒಂದು ಪಂಗಡ,ಕುಂದಾಪುರದ ಪ್ರಯಾಣಿಕರ ಒಂದು ಪಂಗಡ. ರಿಟೈರ್ ಮಾಷ್ಟ್ರು ನಮ್ಮಿಬ್ಬರ ಪಕ್ಕದಲ್ಲಿ ನಿಂತಿದ್ದರು. ನಮ್ಮಲ್ಲಿ "ಏನಾಯ್ತು ನೋಡಿ ... ನಾಳೆ ಬೆಂಗಳೂರ್ ತಲುಪಬೇಕಾದರೆ ಬೆಳಗ್ಗಿನ ೧೦ ಗಂಟೆ ಆಗಬಹುದು, ಅಂದು ಕೊಂಡಿದ್ದೆ ಟ್ರೈನ್ ಲೇಟ್ ತಲುಪದೇ ಅಂತ ಈಗ ಅದಕ್ಕಿಂತಲೂ ತಡವಾಗಿ ನಾವು ತಲುಪುತ್ತಿದ್ದೇವೆ "
ಅರವಿಂದ್ "ನೀವೂ ಟ್ರೈನ್ ಗೆ ಟಿಕೆಟ್ ಬುಕ್ ಮಾಡಿದ್ರಾ?"
"ಹೂಂ , ಆದರೆ ಇವತ್ತು ಟ್ರೈನ್ ಕ್ಯಾನ್ಸಲ್ ಆಯಿತಲ್ಲ... ಬಸ್ ನಲ್ಲಿ ಪ್ರಯಾಣಿಸುವುದೆಂದರೆ ಈ ಇಳಿವಯಸ್ಸಿನಲ್ಲಿ ಆಗದ ಮಾತು.ಅವಳಿಗಂತೂ ಕಾಲು ನೋವು..."
" ಮಂಗಳೂರು ಬೆಂಗಳೂರು ಬಸ್ಸಲ್ಲಿ ಹೋದ್ರೆ ಕಾಲು ನೋವು ಇಲ್ಲದವರಿಗೆ ಶುರುವಾಗುತ್ತದೆ ಅಂತದ್ರಲ್ಲಿ ಪಾಪ ಅಮ್ಮನವರು"
ಮೇಷ್ಟ್ರು "ನೀವೇನು ಬೆಂಗಳೂರಿಗೆ ?"
"ಬೆಂಗಳೂರಿಗಲ್ಲ, ನಾಗ್ಪುರ್ ಗೆ  ಹೋಗಬೇಕು ..."
"ಅಂದ್ರೆ ನಾಳೆ ಬೆಂಗಳೂರಿಂದ ಟ್ರೈನಾ ?"
"ಇಲ್ಲ ಸರ್,ಹೀಗೆನಾದ್ರು ಆಗುತ್ತೆ ಅಂತಾನೆ ಒಂದು ದಿನ ಮುಂಚೆ ಹೊರಡಿದ್ದು, ನಾಡಿದ್ದು ಬೆಳಗ್ಗಿನ ಟ್ರೈನ್ "
"ಒಳ್ಳೆದಾಯ್ತು ನೋಡಿ, ಇಲ್ಲಾಂದ್ರೆ ನಾಳೆ ಎಷ್ಟು ಹೊತ್ತಿಗೆ ನಾವು ಬೆಂಗಳೂರ್ ತಲುಪುತ್ತೇವೋ ಗೊತ್ತಿಲ್ಲ ..."
"ನಾಗ್ಪುರ ದಲ್ಲಿ ಓದ್ತಾ ಇದ್ದೀರಾ ?"
"ಇಲ್ಲ, ಕೆಲಸಕ್ಕೆ ಹೋಗ್ತಾಇದ್ದಿವಿ"
"ನಾಗಪುರ ದಲ್ಲಿ ಹೇಗೆ ಕೆಲಸ ಸಿಕ್ಕಿತು , ಅಷ್ಟು ದೂರ ?"
ಇಬ್ಬರೂ"ನಮ್ಮ ಅದೃಷ್ಟ !!!!"
ನಾನು ಮಾತು ಮುಂದುವರಿಸಿದೆ "ಓದಿದ್ದು ಮಂಗಳೂರಲ್ಲೇ,ಪುನಾ ಬೇಸ್ ಕಂಪೆನಿ ನಮ್ಮನ್ನು ಸೆಲೆಕ್ಟ್ ಮಾಡಿ ನಾಗ್ಪುರಿಗೆ ಪೋಸ್ಟಿಂಗ್ ಮಾಡಿದ್ದಾರೆ ನಾಡಿದ್ದು ೨೬ ಕ್ಕೆ ಜೋಯಿನ್  ಆಗಬೇಕು "
"ಹೋ ಹಾಗೋ ?, ಮಂಗಳೂರಿನಿಂದ ಒಂದು ಟ್ರೈನ್ ಇದೆಯಲ್ಲಾ ... ಈಗ ಇದೆಯಾ ಇಲ್ಲ ಹೇಳಿ ಗೊತ್ತಿಲ್ಲಾ... ೧೦ ವರ್ಷದ ಹಿಂದೆ ಇತ್ತು "
"ಹೂಂ ಇದೆ, ಅದು ಭುದವಾರ ಬೆಳಗ್ಗೆ ತಲುಪುತ್ತದೆ,೨೬ ಭುದವಾರ ಸೊ ಜೋಯಿನಿಂಗ್ ದಿನನೇ ತಡವಾಗಿ ಆಫೀಸ್ ತಲುಪುವುದು ಬೇಡ ಹೇಳಿ ಮುಂಚಿನ ದಿನವೇ ತಲುಪಲು ಬೆಂಗಳೂರು ಮಾರ್ಗ ಆಯ್ಕೆ ಮಾಡಿದ್ದು "
"ನಿಮಗೆ ಹೇಗೆ ಗೊತ್ತು ನಾಗ್ಪುರ್ ಬಗ್ಗೆ "ಅಂದ ಅರವಿಂದ್
"ನನ್ನ ಮಗ ಇಂಜಿನಿಯರ್, ಈಗ ಲಂಡನ್ ನಲ್ಲಿದ್ದಾನೆ ಅವನಿಗೆ VREC ನಾಗ್ಪುರ್ ನಲ್ಲಿ ಸೀಟ್ ಸಿಕ್ಕಿತ್ತು, ಅಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ  , ಈಗ ಲಂಡನ್ ಸೇರಿದ್ದಾನೆ "
"ಹುಂ, ನೀವೂ ವ್ರತ್ತಿಯಲ್ಲಿದವರಂತೆ ಕಾಣುತ್ತಿರಾ? ಏನಾಗಿದ್ದಿರಿ?"
"ಮಂಗಳೂರಿನ ಒಂದು ಪ್ರಿಮರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದೆ , ೬ ವರುಷ ಮುಂಚೆ ನಿವ್ರತ್ತಿ ಹೊಂದಿದೆ "
"ಮಂಗಳೂರಿನಲ್ಲಿ ಹಬ್ಬ ಬಿಟ್ಟು ಏನು ಬೆಂಗಳೂರಿಗೆ ?"
"ಮಗಳ ಮನೆಗೆ , ಹಬ್ಬಅಲ್ಲಿ ಮಾಡುವ ಅಂತ ೨ ದಿನದ ಹಿಂದೆ ಏ ಟ್ರೈನ್ ಗೆ  ಹೋಗುವುದಂತ ಇದ್ದ್ವಿ ಟಿಕೆಟ್ ಸಿಕ್ಕಲಿಲ್ಲ ...ಹಾಗೆ ಇವತ್ತಿನ ಟಿಕೆಟ್ ಮಾಡಿದ್ದು.. ಈಗ ನೋಡಿ ಅದೃಷ್ಟ ಬಸ್ಸಲ್ಲೇ ಕಷ್ಟ ಅನುಭವಿಸುವಂತೆ ಮಾಡಿತು ,ನಾವು ಅಂದ್ಕೊಂಡ ಹಾಗೆ ಯಾವಾಗ್ಲೂ ಕಾಲ ಸಾಗುದಿಲ್ಲ ನೋಡಿ ... "
"ಹೌದು ಮಾಷ್ಟ್ರೆ ..."

ಹೀಗೆ ಮುಂದುವರೆದಿತ್ತು ಮಾತಿನ ಭರಾಟೆ , ಶಾಂತ ನಾಗಿದ್ದ ವರುಣರಾಯ ಪುನಃ ನಮ್ಮ ಮೇಲೆ ಅವನ ಪ್ರಭಾವ ತೋರಿಸಲು ಆರಂಬಿಸಿದ
"ಸರಿ ಒಳಗೆ ಕುಳಿತು ಕೊಳ್ಳುವ ಸುಮ್ಮನೆ ನೆನೆಯುವುದೇಕೆ ? ಒಳಗೆ ನಡೀರಿ ಮಕ್ಕಳೇ "
ಸರಿ ಎಂದು ಒಳಗೆ ಬಂದೆವು, ನಮ್ಮ ಬದಿಯ ಸೀಟ್ ನಲ್ಲಿ ಶ್ರೀಮತಿಯವರು ಕುಳಿತ್ತಿದ್ದರು
"ಸರಿ ಹೋಯಿತಾ? "ಅಂದರು
ಕುಳಿತು ಕೊಳ್ಳುತ್ತಾ ಮೇಷ್ಟ್ರು "ಇನ್ನೂ ಇಲ್ಲಾ..೧೦-೧೫  ನಿಮಿಷದಲ್ಲಿ ಸರಿಯಾಗಬಹುದು .. "

ಅಲ್ಲಿಗೆ ಜೋರಾಗಿ ಮಳೆ ಬರಲಾರಂಬಿಸಿತು ಎಲ್ಲರೂ ಒಳಗೆ ಬಂದ್ರು . ಬಸ್ಸ್ ಸರಿಯಾಗುವುದು ಇನ್ನು ತಡವಾಯಿತು. ಹೀಗೆ ಹೊರ ನೋಡುತ್ತಾ ಮಳೆಯ ಹನಿ ಸವೆಯುತ್ತಿದ್ದಾಗ ರೋಡಿನ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಹಾಸಿಗೆ ಕಟ್ಟು ಕಾಣಿಸಿತು.ಪಾಪ ಡ್ರೈವರ್ ಕಂಡೆಕ್ಟರ್ ಗೋಷ್ಠಿ ಮಾಡಿರಲಿಕ್ಕಿಲ್ಲ ಅಂದು ಕೊಂಡು ಹಿಂದಿನ ಸೀಟ್ ನ ನವಯುವಕರನ್ನು ನೋಡಿದೆ. ಇಬ್ಬರೂ ಗಡದ್ದಾಗಿ ನಿದ್ದೆ ಮಾಡುತ್ತಿದ್ದರು, "ಊರು ಕೊಚ್ಚಿ  ಹೋಗುತ್ತಿದ್ದರು ಮಲಗಿದ್ದಾರೆ ನೋಡಿ "ಅಂದುಕೊಂಡೆ

ನಾವಿಬ್ಬರು ಅದನ್ನು ಒಳಗೆ ಹಾಕುವ ಎಂದು ಸೀಟ್ ನಿಂದ ಎದ್ದಾಗ ಮೇಷ್ಟ್ರು "ಮಳೆಯಲ್ಲಿ ನೆನೆಯಬೇಡಿ ... ಜ್ವರ ಗಿರ ಬಂದೀತು ಜಾಗ್ರತೆ "
"ಇಲ್ಲ ಮಾಷ್ಟ್ರೆ ಬೇರೆ ಕೆಲಸ ಇದೆ" ಎಂದು ಆತುರಾತುರವಾಗಿ ಮುಂದೆ ಹೋದೆವು
ನಮ್ಮನ್ನಿಬ್ಬರನ್ನು ನೋಡಿದ ಡ್ರೈವರ್ ಅರುಣ್ ಕುಮಾರ್ "ಏನಾಯ್ತು ?"

"ಏನಿಲ್ಲಾ.. ಹಾಸಿಗೆ ...."

"ಅರೆ ಮರೆತು ಹೋಯಿತು... ಟೂಲ್ ಬಾಕ್ಸ್ ತೆಗಿಬೇಕದ್ರೆ ಹೊರಗೆ ಹಾಕಿದ್ದೆ ... ಮಳೆಯಲ್ಲಿ ನೆನೆಯಿತು ಅಂತ ಕಾಣತ್ತೆ  ...ನಾನು ಬರ್ತೇನೆ ..."

ಮುವರೂ ಇಳಿದೆವು,ಮಳೆಯಲ್ಲಿ ನೆನೆಯುತ್ತಾ ಅದನ್ನು ಲುಗ್ಗೆಜ್ ನಲ್ಲಿ ದೂಡಿದೆವು.

ಡ್ರೈವರ್ "ನೀವು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಹಕ್ಕಿದ್ದು ಒಳ್ಳೆದಾಯ್ತು ನೋಡಿ... ಇಲ್ಲಾಂದ್ರೆ ಈಗ ಫುಲ್ ನೀರು ಕುಡಿಯುತ್ತಿತ್ತು...ಸೋರಿ ಕಣ್ರೀ ನನ್ನ ತಪ್ಪು ..."

"ಅಣ್ಣಾ ಇದು ನಮ್ಮದಲ್ಲಾ .... ನಮ್ಮೊಂದಿಗೆ ನಡುದಾರಿಯಲ್ಲಿ ಈ ಬಸ್ಸಿಗೆ ಹತ್ತಿದರಲ್ಲಿ ಒಬ್ಬರದ್ದು ...."ಅಂದೆ.

"ಹೌದಾ ... ಅವರೆಲ್ಲಿ ?"

"ಮಲಗಿದ್ದಾರೆ. ಉರು ಕೊಳ್ಳೆ ಹೊಡೆದರೂ ರಾಯರು ಮಲಗುತ್ತಿದ್ದಾರೆ !!!!"

ಕೇಳುತ್ತಿದ್ದಂತೆ ಅರುಣ್ ಕುಮಾರ್ ನಕ್ಕರು, ಮತ್ತೆ ಮುವರೂ ಬಸ್ಸ ಹತ್ತಿಕೊಂಡೆವು.ಮೇಷ್ಟ್ರು ನಮ್ಮ ಕೆಲಸವನ್ನು ಕಿಟಿಕಿ ಇಂದಲೇ ನೋಡುತ್ತಿದ್ದರಂತ ಕಾಣುತ್ತೆ ನಾವು ಒಳಗೆ ಬಂದಂತೆ ತಾವು ಹೊದ್ದು ಕೊಂಡಿದ್ದ ಶಾಲು ನನ್ನ ಕೈಯಲ್ಲಿಟ್ಟು"ತಲೆ ಒರೆಸಿಕೊಳ್ಳ್ರಪ್ಪಾ, ಶೀತ ಗೀತ ಬಂದೀತು, ನಾಳೆ ಕೆಲಸಕ್ಕೆ ಸೇರುತ್ತಿದ್ದಿರಾ"

"ಧನ್ಯವಾದಗಳು ಸರ್ "

"ನೀವು ಇಳಿಬೇಕದ್ರೆ ನಿಮಗೆ ಹುಡುಗಾಟ ಅಂದು ಕೊಂಡಿದ್ದೆ ,ಉದ್ದೇಶ ಏನಂತ ಮತ್ತೆ ನಾನು ಇಲ್ಲಿಂದ ನೋಡಿದಾಗ ನಿಜದ ಅರಿವಾಯ್ತು ...ದೇವರು ಒಳ್ಳೇದು ಮಾಡ್ಲಿ ನಿಮ್ಮಿಬ್ಬರಿಗೂ "

"ಇದರಲ್ಲೇನಿದೆ ಸರ್, ಒಬ್ಬರಿಗೆ ಒಬ್ಬರು ಆಗಿ ಬರದಿದ್ದರೆ ಮನುಷ್ಯರಾಗಿ ಹುಟ್ಟಿ ಏನು ಪ್ರಯೋಜನ ?"

"ಹುಂ ... ಆದರೆ ಈಗ ಯಾರಿಗೆ  ಯಾರೂ ಇಲ್ಲ ಕಣಪ್ಪಾ.. "ಎಂದಾಗ ಅವರಲ್ಲಿದ್ದ ನೋವು ಎದ್ದು ಕಾಣುತ್ತಿತ್ತು.

 

ಮುಂದಿನ ೧೫ ನಿಮಿಷದಲ್ಲಿ ಮಳೆ ಪೂರ್ಣ ಶಾಂತ ಗೊಂಡಿತು. ಡ್ರೈವರ್ ನೊಂದಿಗೆ ನಾವೂ ಮೇಷ್ಟ್ರು ಮತ್ತೆ ಕೆಲವರು ಈಗ ಕೆಳಗಿದ್ದೆವು. ಡ್ರೈವರ್ ಕಂಡೆಕ್ಟರ್ ಅವರ ಕೆಲಸದಲ್ಲಿ ವ್ಯಸ್ತ ರಾಗಿದ್ದರು. ಮೇಷ್ಟ್ರು ನಮ್ಮ ಬಳಿಗೆ ಬಂದು "ನೀವಿಬ್ಬರ ಗುಣ ಮೆಚ್ಚಿದೆ "

"ಇದರಲ್ಲೇನಿದೆ ಸರ್ .. ಯಾಕೆ ಹೀಗೆ ಹೇಳ್ತಾ ಇದ್ದೀರಾ ...?"

"ಇಂದು ಹೆತ್ತ ಮಕ್ಕಳೇ ತಂದೆ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ... ಏನು ಹೇಳುವುದು ಈ ಕಾಲಕ್ಕೆ ..."ಅವರ ಮಾತಿನಲ್ಲಿದ್ದ ಅರ್ಥ ಗಾಂಭಿರ್ಯತೆ ನಮಗೆ ಅರ್ಥ ವಾಗುತ್ತಿತ್ತು.

ಅವರು ಮಾತು ಮುಂದುವರಿಸಿದರು "ಹಿಂದೆ ಹಿರಿಯರನ್ನು ಹೇಗೆ ಕಾಣಬೇಕು ಎಂದೆಲ್ಲಾ ಕಲಿಸಿಕೊಡುತ್ತಿದ್ದೆ ,ಎಷ್ಟು ಮಂದಿ ಅದನ್ನು ಅನುಸರಿಸಿದ್ದಾರೆ ತಿಳಿಯದು ...

ಆದರೆ ವಿಪರ್ಯಾಸ ನೋಡಿ ಕಡೆಯ ಮಟ್ಟಿಗೆ ನನ್ನ ಮಕ್ಕಳು ಅದನ್ನು ಅನುಸರಿಸಿಲ್ಲಾ ..."

ಇಬ್ಬರೂ ಮೌನ, ಅವ್ರು ಮುಂದುವರೆಸಿದರು "ನನಗೆ ಇಬ್ಬರೂ ಮಕ್ಕಳು , ಗಂಡುಮಗ ದೊಡ್ಡವ, ಹುಡುಗಿ ಅವನಿಗಿಂತ ೬ ವರುಷ ಸಣ್ಣವಳು, ಕಲಿಯುವುದರಲ್ಲಿ ಇಬ್ಬರೂ ತುಂಬಾ ಜಾಣರಿದ್ದರು,ನಾನಂತು ಪ್ರಿಮರಿ ಮೇಷ್ಟ್ರು ಬರುವ ಸಂಬಳ ಅಲ್ಲಿಗೆ ಅಲ್ಲಿ ಆಗುತಿತ್ತು ಆದರೆ ನಾಳೆ ನನ್ನ ತಂದೆ ಕಲಿಸಲಿಲ್ಲ ನಮ್ಮನ್ನು ಅಂತ ಮಕ್ಕಳು ಅನ್ನ ಬಾರದೆಂದು ಕಾಸಿಗೆ ಕಾಸು ಸೇರಿಸಿ ಅವರಿಬ್ಬರನ್ನು ಅವರಾಷೆಅಂತೆ ಇಂಜಿನಿಯರ್ ಮಾಡಿದೆ ,ಮಗನನ್ನು ನಾಗ್ಪುರ್ ನಲ್ಲಿ ಮಗಳನ್ನು ಮೈಸೂರ್ ನಲ್ಲಿ ಕಾಲೇಜ್ ಗೆ ಸೇರಿಸಿದೆ . ಮಗನಿಗೆ ಕಲಿಸುವಾಗ ತುಂಬಾ ಕಷ್ಟದ ದಿನವಾಗಿತ್ತು, ಅದರೂ ಮುಂದೆ ಕಷ್ಟ ಬಾರದು ಎಂದು ನಾವಿಬ್ಬರೂ ನಮ್ಮ ಎಲ್ಲಾ ಸುಖ ತ್ಯಾಗ ಮಾಡಿ ಕಲಿಸಿದೆ. ಅವನು ತುಂಬ ಜಾಣನಾದುದರಿಂದ ಓಡುತ್ತಲೇ ಕೆಲಸಸಿಕ್ಕಿತು, ಇನ್ನೇನೋ ನಮ್ಮ ಕಷ್ಟ ತೀರಿತ್ತು .... ಇನ್ನು ಮಗಳ ಜವಬ್ದಾರಿ ಇವ ಹೆಗಲಿಗೆ ತೆಗೆದುಕೊಳ್ಳುತ್ತಾನೆ ಅಂದು ಕೊಂಡಿದ್ವಿ .೨ ವರುಷ ಕೆಲಸ ಮಾಡುತ್ತಿದ್ದಂತೆ ವಿದೇಶದಿಂದ MS  ಗೆ ಆಫರ್ ಬಂತು, ವಿದೇಶಕ್ಕೆ ಕಳಿಸಲು ಇಷ್ಟ ವಿರಲಿಲ್ಲ ... ಅಲ್ಲಿನ ಬಿಳಿಯ ಹೆಂಡತಿ ಕಟ್ಟಿಕೊಂದಾನು ಎಂಬ ಭಯ ಅವನ ಅಮ್ಮನಿಗಿತ್ತು .. ಅದಕ್ಕಾಗಿ ಅವಳು ಅವನಿಗೆ ತನ್ನ ತಮ್ಮನ ಮಗಳೊಂದಿಗೆ ಮದುವೆ ಮಾಡಿಸಿದಳು .. ೨ ತಿಂಗಳಲ್ಲಿ ಅವನು ಹೆಂಡತಿಯೊಂದಿಗೆ  ವಿದೇಶಕ್ಕೆ ಹೋಗಿ ಬಿಟ್ಟ ಅವನು ಸಂಪಾದಿಸಿದ ಕಾಸು ಅವನ ಶಿಕ್ಷಣಕ್ಕೆ ಸೀಮಿತವಾಯ್ತು ...ಮಗಳಿಗಾಗಿ ಮತ್ತೆ ಸಾಲದ ಹೊರೆ ಏರಿಸ ಬೇಕಾಯ್ತು. ಎರಡು ವರ್ಷದ ಹಿಂದೆ ಅವಳದ್ದು M -tech ಮುಗಿಯಿತು.ಇನ್ನೇನಿದ್ದರೂ ಮಗಳ ಮದುವೆ ಮಾಡಿ ನಾವೂ ನಿವ್ರತ್ತಿ ಹೊಂದಿದ್ದೇವೆ ಮಕ್ಕಳೊಂದಿಗೆ ಇರುವ ಅಂದು ಕೊಂಡಿದ್ವಿ.ಮಗಂದು ಓದು ಮುಗಿಸಿ ಲಂಡನ್ ನಲ್ಲಿದ್ದ ಆಗ ಊರಿಗೆ ಕರೆದ್ವಿ "ಬೆಂಗಳೂರ್ ನಲ್ಲಿ ಮನೆ ಮಾಡುವ,ನಾವೂ ಬಂದ್ ಬಿಡ್ತೇವೆ ನಿನ್ನೊಂದಿಗೆ"  ಅಂದ್ವಿ..."

ಅದಕ್ಕೆ ಅವ "ಅಪ್ಪ ಈಗ ರೆಸೆಶನ್  ನಡೆಯುತ್ತಿದೆ ಈಗ ಇಲ್ಲಿನ ಕೆಲಸ ಬಿಟ್ಟರೆ ಭಾರತದಲ್ಲಿ ಕೆಲಸ ಹುಡುಕುವುದು ಕಷ್ಟ  ಸದ್ಯಕ್ಕೆ ಮಂಗಳೂರಿನಲ್ಲೇ ಇರಿ ಇನ್ನೆರಡು ವರುಷ ಕಳೆಯಲಿ "ಅಂದ.

ಸರಿ ಎಂದು ನಾವೂ ಹುಡುಗಿಗೆ ಮದುವೆ ಮಾಡುವ ಅಂತ ವಿಚಾರ ಎತ್ತಿದೆವು ಅದಕ್ಕೂ ಅವ ಹುಂ ಗುಟ್ಟಿದ, ಕಳೆದ ವರ್ಷ ಮಗಳನ್ನು ಮಾಡುವೆ ಮಾಡಿ ಕೊಟ್ಟೆವು. ಮದುವೆಗೂ ರೆಸೆಶನ್ ಹೇಳಿ ಮಗ ಬರಲೇ ಇಲ್ಲ ..."

"ಎರಡು ತಿಂಗಳ ಹಿಂದೆ ಫೋನ್ ಮಾಡಿದ್ದ ... ಬಳಿಕ ಫೋನ್ ಕೂಡ ಇಲ್ಲ.... ಇಬ್ಬರೂ ಮಕ್ಕಳಂತೆ ... ಸಣ್ಣವನು ೬ ತಿಂಗಳ ಮಗು ಇದ್ದಾಗ ಬಂದದ್ದು ಊರಿಗೆ ....ಈಗ ಅವನಿಗೆ ೬ ವರುಷ  "

ನಮ್ಮಿಬ್ಬರಿಗೂ ಈ ಕಥೆ ಕೇಳುತ್ತಿದ್ದಾಗ ಪಾಪ ಎಂದನಿಸಿತು, ಅವರು ಕಥೆ ಮುಂದುವರಿಸುತ್ತಿದ್ದರು "ಅಳಿಯ ಬೆಂಗಳೂರಿನಲ್ಲಿ ಒಳ್ಳೆ ಕೆಲಸದಲ್ಲಿದ್ದಾರೆ ಕಳೆದ ದೀಪಾವಳಿಗೆ ಊರಿಗೆ ಮಗಳೊಂದಿಗೆ ಬಂದಿದ್ದರು ... ತುಂಬಾ ಸಡಗರವಿತ್ತು .... ಬೆಂಗಳೂರಿನಲ್ಲಿ ಅವರು ಸ್ವಂತದ ಮನೆ ತೆಗೆದು ಕೊಂಡಿದ್ದಾರೆ ಇಬ್ಬರೇ ಇರುವುದು ..... ನನ್ನಾಕೆಗೆ ಮಗಳೊಂದಿಗೆ ಇರಲು ಇಷ್ಟ ಆದರೆ ಮಗಳ ಮನೆಯಲ್ಲಿ ಇರಬಾರದು ಎಂಬ ವಾದ ನನ್ನದು ಅದಕ್ಕಾಗಿ ಊರಲ್ಲೇ ಇದ್ದೇವೆ ..."

".... , ಈಗ ಮಗಳು ಬರಲೇ ಬೇಕು ಅಂತ ಇದ್ದಾಳೆ .... ಈಗ ಅವಳಿಗೆ ೬ ತಿಂಗಳಾಯ್ತು ...ನಮ್ಮ ಮೇಲಿನ ಮಮಕಾರಕ್ಕೆ ಅಲ್ಲ ಕರೆಯುತ್ತಿರುವುದು ಮನೆ ನೋಡಿಕೊಳ್ಳಲು ಜನ ಬೇಕಾಗಿದ್ದಾರೆ ಅದಕ್ಕೆ ನನ್ನೊಂದಿಗೆ ಇರಿ ಎಂಬ ನಾಟಕ ಶುರು ಮಾಡಿದ್ದಾಳೆ ಕಳೆದ ೨ ತಿಂಗಳಿಂದ .....ನಮ್ಮ ಮಗಳಿಗೆ ಈ ಸಮಯದಲ್ಲಿ ನಾವಿರದಿದ್ದರೆ ಯಾರೂ ಆಗಿಯಾರು ಅಂತ ಈಗ ಹೊರಟಿರುವುದು ಮಗಳ ಮನೆಗೆ .... ಇನ್ನೇನು ಮುಂದಿನ ೨ ವರುಷ ಅಲ್ಲೇ ಇರ ಬೇಕಾಗುತ್ತದೆ ... ಮಗು ದೊಡ್ಡದಾಗುವ ವರೆಗೆ ... ಬಳಿಕ ನಾವೂ ಪುನಃ ಕಾಲ ಕಸ ... ಆಗ ರೆಸ್ಸೇಶನ್ ಇಲ್ಲ ದಿದ್ರೆ ಮಗ ಊರಿಗೆ ಬಂದ್ರೆ ನೋಡುವ ಇಲ್ಲಾಂದ್ರೆ ನಾನು ಕಟ್ಟಿಸಿದ ಮನೆ ಇದೆ ಕೊನೆ ವರೆಗೆ ಅಲ್ಲೇ ಇರ್ತಿವಿ ....."

ಇಬ್ಬರಿಗೂ ಈ ಕಥೆ ಕೇಳುತ್ತಿದ್ದಂತೆ ತುಂಬ ಬೇಜಾರಾಯಿತು ... ಅರುಣ್ ಕುಮಾರ್  ಜೋರಾಗಿ ಹೊರ್ನ್ ಹೊಡೆಯುತ್ತಿದ್ದ ... ಎಲ್ಲರೂ ಬಸ್ಸ ಹತ್ತಿದೆವು.

ನಮ್ಮಿಬ್ಬರ ಮನಸಲ್ಲಿ ಈಗ ಮೇಷ್ಟ್ರ ಕಥೆನೇ ತಿರುಗುತಿತ್ತು , ಕೈಯಲ್ಲಿದ್ದ ವಾಚ್ ಆಗಲೇ ೪ ಗಂಟೆ ಬಾರಿಸಿತ್ತು

 

 

8 ಗಂಟೆ ಆಗುತ್ತಲೇ ಮನೆ ಇಂದ ಬಂದ ಮೊಬೈಲ್ ನ ವಯಿಬ್ರಶನ್ ಗೆ ನಿದ್ದೆ ಬಿಟ್ಟಿತು "ತಲುಪಿದೆಯ ಮಗ ಬೆಂಗಳೂರು ?"

"ಇಲ್ಲಮ್ಮ "

"ಯಾವಾಗ ತಲುಪುವೆ ?"

ಇಷ್ಟೊತ್ತಿಗೆ ರೋಡಿನ ಬದಿಯಲ್ಲಿದ್ದ ಮೈಲಿ ಕಲ್ಲು ೪೯ ಕಿ.ಮಿ ದೂರ ಎಂದು ತೋರಿಸುತ್ತಿತ್ತು "ಇನ್ನೂ ಒಂದೂವರೆ ಇಂದ ಎರಡು ಗಂಟೆ ಹಿಡಿಯ ಬಹುದು "

"ಸರಿ ತಲುಪಿದಮೇಲೆ ಫೋನ್ ಮಾಡು "

"ಆಯಿತಮ್ಮಾ ..."

ಮೊಬೈಲ್ ಗೆ ಎಅರ್ ಫೋನ್ ಹಾಕಿ ಹಾಡು ಹುಡುಕುತ್ತಿದ್ದಾಗ ಅಶ್ವಥ್ ಅವರ "ಬದುಕುಮಾಯೆಯ ಮಾಟ"ಹಾಡು ಸಂದರ್ಬಕ್ಕೆ ಸೂಕ್ತ ಅಂತ ಅನಿಸಿತು, ೪-೫ ಬಾರಿ ಆ ಹಾಡು ಕೇಳಿದೆ.

ಹೀಗೆ ಹಾಡು ಕೇಳುತ್ತಾ ಇರುವಾಗ ಹಿಂದಿನಿಂದ ಒಂದು ದ್ವನಿ "ಥಾಕ್ಸ್ ನಿಮಗೆ , ಮಳೆಯಲ್ಲಿ ನೀವು ನಮ್ಮ ಹಾಸಿಗೆ ಒಳಗೆ ಹಾಕುವಲ್ಲಿ ಸಹಾಯ ಮಾಡಿದರೆಂದು ಡ್ರೈವರ್ ಹೇಳುತ್ತಿದ್ದರು ಈಗ ಟೀ ಗೆ ನಿಂತಾಗ ..."

"ಇರಲಿ ಬಿಡಿ "

 

ಅರೆ ನಾನ್ಯಾವಾಗ ಕುಂಬಕರ್ಣ ನಾದೆನಾಪ್ಪ ಎಂಬ ಪ್ರಶ್ನೆ ಎದ್ದಿತು.

ಬಸ್ ನಿಂತು ಎಲ್ಲಾ ಟೀ ಕುಡಿದು ಬಂದರು ನಮ್ಮಿಬ್ಬರಿಗೆ ಎಚ್ಚರ ವಾಗಿರಲಿಲ್ಲ ಅಷ್ಟು ಸುಸ್ತಾಗಿದ್ದೆವು ನಾವು ಆ ಪ್ರಯಾಣದಲ್ಲಿ. 

೧೦ :೧೦ ರ ಸುಮಾರಿಗೆ ಬಸ್ ಮೆಜೆಸ್ಟಿಕ್ ಗೆ ಬಂತು.ಬಸ್ಸ ಬರುತ್ತಿದ್ದಂತೆ ಅಲ್ಲೇ ನಿಂತಿದ್ದ "ಹೊಂಡ ಸಿಟಿ" ಇಂದ  ಹೆಣ್ಣುಮಗಳೊಬ್ಬಳು ನಗುತ್ತಾ ಬರುತ್ತಿದ್ದಳು ಅವಳನ್ನು ನೋಡಿದರೆ ಮೇಷ್ಟ್ರ ಮಗಳೆಂದು ಯಾರೂ ಬೇಕಾದರೂ ಹೇಳಬಹುದು ಅಪ್ಪನ ಅಚ್ಚನ್ನೇ ಹೊಲುತ್ತಿದ್ದಳು.ನಾನು ಅರವಿಂದ್ ಅವರ ಚೀಲವನ್ನು ಅವರ ಕಾರ್ ನಲ್ಲಿ ಇರಿಸಿದೆವು,

ಮಗಳು ಅಮ್ಮನಿಗೆ "ಹೇಗಿದ್ದಿಯಮ್ಮ ..? ಊರಿಂದ ಮಗಳಿಗೆ ಏನು ತಂದಿದ್ದಿಯಾ ?"

"ಕೆಸುವಿನ ಎಲೆ ,ಕಣಿಲೆ, ಹಲಸಿನ ಸೂಳೆ,ಉಪ್ಪಿನಕಾಯಿ ಎಲ್ಲಾ ಇದೆ ಆ ನೀಲಿ ಚೀಲದಲ್ಲಿ "

"ಎಷ್ಟು  ಸಮಯವಾಯ್ತು ಅವನ್ನೆಲ್ಲಾ ತಿಂದು ...!!!!"

ಅವಳ ಮಾತಿಂದಲೇ ಅರ್ಥವಾಯ್ತು ಎಷ್ಟು ಬೇಗ ಇವರು ಕಾಲ ಕಸವಾಗಲಿರುವವರೆಂದು.

"ಸರಿ ಮಾಷ್ಟ್ರೆ ಮುಂದೆ ಎಂದಾದರು ಸಿಗುವಾ.."ಎನ್ನುತ್ತಾ ನಾವಿಬ್ಬರೂ ಈಚೆ ತಿರುಗಲು ಅವಳು "ಅಪ್ಪಾ ಅವರು ನಿಮ್ಮ ಸ್ಟುಡೆಂಟಾ..?"

"ಅಲ್ಲ ಕಣಮ್ಮಾ ... ಪ್ರಯಾಣದ ನಡುವೆ ಬೇಟಿ ಆದವರು... "

ಅವಳು ಅದಕ್ಕೆ "ನಿಮಗೆ ಎಷ್ಟು ಬಾರಿ ಹೇಳಬೇಕು ? ಪರಿಚಯವಿಲ್ಲದವರಲ್ಲಿ ಹೆಚ್ಚು ಸಲಿಗೆ ಇಡ ಬೇಡಿ ಅಂತ... ಹೇಳಿದರೆ ನಿಮ್ಮಿಬರಿಗೆ ಗೊತ್ತಾಗುವುದೇ ಇಲ್ಲಾ ಅದಕ್ಕಾಗಿಯೇ ಅಣ್ಣ ಇನ್ನೂ ಲಂಡನ್ ನಲ್ಲಿರುವುದು .... "

ನಮ್ಮಿಬ್ಬರಲ್ಲಿ ಮಕ್ಕಳು ನೋಡಿಕೊಳ್ಳುವ ಬಗೆಯೋ ಇದು ಎಂಬ ಭಾವನೆ...

ಅಷ್ಟರಲ್ಲಿ ನನ್ನ ಮಾಮನ ಕಾರ್ ಅದರ ಹಿಂದೆ ಅರವಿಂದ್ ನ ಮಾಮನ ಕಾರ್ ಬಂತು, ಇಬ್ಬರೂ ತಮ್ಮ ತಮ್ಮ ಜೋಳಿಗೆ ಅದರಲ್ಲಿರಿಸಿ

"ಸರಿ ನಾಳೆ ಸಿಗೋಣ ..."

"ಸರಿ ಬೈ ಬೈ "

ಅರವಿಂದ್ ನ ಕಾರ್ ಬಿಟ್ಟಿತು. ನಾನು ಮಾಮ ಹೋಗಿ ಹಿಂದಿನ ದಿನದ ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡಿದೆವು , ಲುಗ್ಗೆಜ್ ಕ್ಲಾಕ್ ರೂಮಲ್ಲಿ ಇಟ್ಟು ನಿಶ್ಚಿಂತೆಯಲ್ಲಿ ಮನೆ ಸೇರಿದೆವು.

 


**********************************************************************************************************************************************************

ಬಳಿಕದ ಪ್ರಯಾಣದಲ್ಲೂ ಇಂತಹ ಹಲವು ಅದೃಷ್ಟ ನಡೆಯುತ್ತದೋ ಎಂದು ಕಾಯುತಿದ್ದೆವು...

ನಮ್ಮ ಅದೃಷ್ಟಕ್ಕೆ ಎಲ್ಲಿ ಕೊನೆ ..?

ನಮ್ಮಿಬ್ಬರ ಇಲ್ಲಿ ವರೆಗಿನ ಎಲ್ಲಾ ಪ್ರಯಾಣ ನಮ್ಮ ಅದೃಷ್ಟದ ಬಗ್ಗೆ ತರ್ಕಿಸುವಂತೆ ಮಾಡಿದೆ. ಮುಂದಿನ ಪ್ರಯಾಣದ ಬಗ್ಗೆ ಬರುವ ವಾರ ಮಾತಾಡುತ್ತೇನೆ.

 

ನಿಮ್ಮವ ,

ಕಾಮತ್ ಕುಂಬ್ಳೆ

Rating
No votes yet

Comments