ಮಾತುಪಲ್ಲಟ - ೭

ಮಾತುಪಲ್ಲಟ - ೭

♫♫♫ಮಾತುಪಲ್ಲಟ - ೭♫♫♫

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

ಮಾತುಪಲ್ಲಟ ಸರಣಿಯ ಏಳನೇ ಹಾಡು 'ಭಕ್ತ ಕುಚೇಲ' (ಮಲೆಯಾಳ) ಚಿತ್ರದ್ದು.  ಇದೊನ್ದು ಮಱುಗೆಯ್ಮೆಯಾಗಿದ್ದರೂ ಶಬ್ದಕ್ಕೆ ಶಬ್ದವೆನ್ನುವಂಥ ಅನುವಾದವಲ್ಲ.

ಸಂಗೀತ         : ಲಕ್ಷ್ಮಣನ್♪
ಮೂಲ ಸಾಹಿತ್ಯ : ತಿರುನಾಯನಾರ್ ಕುರಿಚ್ಚಿ♪
ಹಾಡುಗಾರರು  : ಕಮುಗರ ಪುರುಷೋತ್ತಮನ್♪

ವಿಡಿಯೋ       :  http://www.youtube.com/watch?v=cHlWCYW99LE

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮೂಲ ಸಾಹಿತ್ಯ♪ :

ಈಶ್ವರ ಚಿನ್ತಯಿದೊನ್ನೇ ಮನುಜನು ಶಾಶ್ವತಮೀ ಉಲಗಿಲ್ |
ಇಹ ಪರ ಸುಕೃತಂ ಏಗಿಡುಮಾರ್‍ಕ್ಕುಂ |
ಇದು ಸಂಸಾರ ವಿಮೋಚನ ಮಾರ್ಗಂ || ಈಶ್ವರ ||

ಕಣ್ಣಿಲ್ ಕಾಣ್ಮದು ಕಳಿಯಾಯ್ ಮಱಯುಂ | ಕಾಣಾತ್ತದು ನಾಂ ಎಂಗನೆ ಅಱಿಯುಂ |
ಒನ್ನು ನಿನ್ನೈಕ್ಕುಂ ಮಟ್ರೊನ್ನಾಗುಂ | ಮಣ್ಣಿದು ಮಾಯಾ ನಾಟಕರಂಗಂ ||

ಪತ್ತು ಲಭಿಚ್ಚಾಲ್ ನೂಱಿನು ಮೋಹಂ | ನೂಱಿನೆ ಆಯಿರಮಾಕ್ಕಾನ್ ದಾಹಂ |
ಆಯಿರಮೋ ಪದಿನಾಯಿರಮಾಗಣಂ | ಆಶೆಯ್ಕುಲಗಿದಿಲ್ ಅಳವುಣ್ಡಾವುಮೋ ||

ಕಿಟ್ಟುಂ ವಗೆಯಿಲ್ ತೃಪ್ತಿಯಾಗಾದೆ | ಕಿಟ್ಟಾತ್ತದಿನಾಯ್ ಕೈಯ್ ನೀಟ್ಟಾದೆ |
ಕರ್ಮಂ ಚೆಯ್ಯುಗ ನಮ್ಮುಡೆ ಲಕ್ಷ್ಯಂ | ಕರ್ಮ ಫಲಂ ತರುಂ ಈಶ್ವರನಲ್ಲೋ ||

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮಾತುಪಲ್ಲಟ♪ :

ಆ~ತನ ಒಲುಮೆಯೊನ್ದೇ ಎನ್ದಿಗೂ ಶಾಶ್ವತವೋ ಮನುಜಾ |
ಇಹ ಪರದೊಳು ಸುಖ ನೀಡುತ್ತಲನಿತಕ್ಕೂ |
ಭವಬಂಧನಂಗಳ ನೀಗುತ್ತಲೆನ್ದೂ || ಆ~ತನ ||

ಬುವಿಯೊಳು ಮಾಯೆಯ ತಾನ್ ಪಸರಿಸುತ್ತ | ಹುಲುಮಾನಿಸರನ್ನು ತಾನಾಡಿಸುತ್ತ |
ಒನ್ದನ್ನು ಬೇಡಲಿನ್ನೊನ್ದನ್ನು ನೀಡುತ್ತ | ನೆಱೆನಿನ್ತವನಡಿ ಪೊಡಮಡಲೊನ್ದೇ ||

ಒನ್ದಿದ್ದುದು ಹತ್ತಾದರೆ ಸಾಕು | ಹತ್ತಿದ್ದುದು ನೂಱಾಗಲೇ ಬೇಕು |
ಹೊನ್ನಿನ ಕಣಜಕ್ಕೆ ಮಿತಿಯಿರಲಳವೇ? | ಮನುಜನ ಬಯಕೆಗೆ ತುದಿ-ಮೊದಲಿಹುದೇ? ||

ಪಾಲಿಗೆ ಬನ್ದುದೇ ಅಮೃತವದೆನ್ನುತ್ತ | ತನಗಿರದುದರಾ ಮೋಹವ ತೊರೆಯುತ್ತ |
ಕರ್ಮವನ್ನೆಸಗುತ್ತ ಲೋಕದೊಳ್ ಬಾೞ್ವುದು | ಕರ್ಮಕ್ಕೆ ಫಲವಿದೆ ತನಗೇ ತಾನು ||

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

♪ಮಱುಪಲ್ಲಟ♪ :

ಈಶ್ವರ ಧ್ಯಾನವಿದೊನ್ದೇ ಮನುಜಂಗೆ ಶಾಶ್ವತವೀ ಜಗದೊಳ್ |
ಇಹ ಪರದೊಳು ಸುಖ ನೀಡುವನನಿತರ್ಕೂ |
ಇದೇ ಭವ ಬಂಧನಂಗಳ ಕಳೆಯುವ ಮಾರ್ಗ || ಈಶ್ವರ ||

ಕಣ್ಣಿಗೆ ಕಾಂಬವು ಕ್ರೀಡೆಯನ್ತಿರಲು |ಕಾಣದಿರ್ಪವುಗಳನ್ ಅಱಿಯುವ ಬಗೆಯೆನ್ತು |
ಒನ್ದನ್ನು ನೆನೆದರಿನ್ನೊನಾಗುವುದು | ಈ ಭೂಮಿಯೇ ಮಾಯೆಯ ನಾಟಕ ಶಾಲೆ ||

ಹತ್ತಿದ್ದುದು ನೂಱಾದರೆ ಸಾಕು | ನೂಱಿದ್ದುದು ಸಾವಿರವಾಗಲೇ ಬೇಕು |
ಸಾವಿರವ ಹದಿಸಾವಿರವಾಗಿಸೆ | ಆಸೆಗೀ ಲೋಕದೊಳ್ ಮಿತಿಯಿರಲಳವೇ? ||

ಇದ್ದುದರಲ್ಲೇ ತೃಪ್ತಿಯ ಕಾಣುತ್ತ | ಇರದುದರೆಡೆ ಕೈಯನ್ನು ಚಾಚದೆ |
ಕರ್ಮವನ್ನೆಸಗುವ ಗುರಿ ನಮಗಿರಲಿ | ಕರ್ಮಕ್ಕೆ ಫಲಂಗಳ ಈಶ್ವರನೀಯ್ವನು ||

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

Rating
No votes yet

Comments