ಅರ್ನೆಸ್ಟೋ ಚೆ ಗುವರ

ಅರ್ನೆಸ್ಟೋ ಚೆ ಗುವರ

ಹೀಗೆ ಸುಮ್ಮನೆ ಚೆ ನೆನಪಾದ, ಸೈಟುಗಳ ಜಾಲಾಟ ಶುರುವಾಯಿತು, ಅವನ ಕೆಲವು ಪ್ರಸಿದ್ಧ ಹೇಳಿಕೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದೆ....


“ನೀನಿಲ್ಲಿ ನನ್ನನ್ನು ಕೊಲ್ಲುಲು ಬಂದಿರುವೆ ಎಂದು ತಿಳಿದಿದೆ. ಹೇಡಿಯೇ, ಗುಂಡಿಕ್ಕು ನಿನೊಬ್ಬ ಮನುಷ್ಯನನ್ನು ಮಾತ್ರ ಕೊಲ್ಲಲ್ಲಿರುವೆ ಅಷ್ಟೆ.”


“ಮೌನವು ಬೇರೆಯೇ ಮಾಧ್ಯಮ ತರುವ ಒಂದು ವಾದ.”


“ಕ್ರಾಂತಿ ಎಂಬುದು ಹಣ್ಣಾಗಿ ಬೀಳುವ ಒಂದು ಸೇಬು ಹಣ್ಣಿನಂತಲ್ಲ. ನೀವು ಅದು ಬೀಳುವಂತೆ ಮಾಡಬೇಕು.”


“ಹೊಸ ನಾಯಕರುಗಳನ್ನೂ ಕ್ರೂರಿಗಳಾಗಿ ಪರಿವರ್ತಿಸಲಷ್ಟೆ ಕ್ರೂರ ನಾಯಕರುಗಳ ಸ್ಥಾನ ಬದಲಾಯಿತು.”


“ವಾಸ್ತವಾಗಿ, ಕ್ರಿಸ್ತನೇ ನನ್ನ ದಾರಿಗೆ ಅಡ್ಡಿಯಾದದ್ದು. ನೀಷೆಯಂತೆ ನಾನು ಸಹ ಅವನನ್ನು ಒಂದು ಹುಳುವಿನಂತೆ ಹೊಸಕಿ ಹಾಕಲು ಹಿಂದೆಮುಂದೆ ನೋಡುವುದಿಲ್ಲ.”


“ಹಲವು ಮಂದಿ ನನ್ನನ್ನು ಒಬ್ಬ ಸಾಹಸಿಗ ಎಂದು ಕರೆಯುತ್ತಾರೆ- ಹೌದು, ಒಂದು ಭಿನ್ನ ರೀತಿಯಿಂದ ಅದು ನಿಜವೆ, ತನ್ನ ಹಳಸಲು ಮಾತುಗಳನ್ನು ನಿಜಮಾಡಲು ತನ್ನನ್ನು ಅಪಾಯಕ್ಕೊಡ್ಡಿಕೊಳ್ಳುವವರಲ್ಲಿ ನಾನೂ ಒಬ್ಬ.”


“ಮಂಡಿಯೂರಿ ಬದುಕುವುದಕ್ಕಿಂತ ನಿಂತು ಸಾಯುವುದೇ ಮೇಲು.”


“ಪ್ರತಿಯೊಂದು ಅನ್ಯಾಯದ ಬಗ್ಗೆ ರೋಷದಿಂದ ಕಂಪಿಸಿದರೆ ಮಾತ್ರ ನೀನು ನನ್ನ ಕಾಮ್ರೇಡ್.”


“ಹೆಚ್ಚು ಸಾಧನೆಗೈಯಲು ಮೊದಲು ನೀನು ಎಲ್ಲವನ್ನೂ ಕಳೆದುಕೊಳ್ಳಬೇಕು.”


“ನಾನು ವಿಮುಕ್ತಿಗೊಳಿಸುವವನಲ್ಲ. ವಿಮುಕ್ತಿಗೊಳಿಸುವವನು ಇನ್ನು ಹುಟ್ಟಿಲ್ಲ. ಜನರು ತಾವೇ ವಿಮುಕ್ತಿಗೊಳಿಸಿಕೊಳ್ಳುವರು.”  


 


ಇನ್ನೂ ಇವೆ....

Rating
No votes yet

Comments