ರಾಮನಗರ: ಕೋಟಿಗಟ್ಟಲೆ ಅಭಿವೃದ್ದಿ ಜೆ ಡಿ ಎಸ್- ಬಿ ಜೆ ಪಿ ನಡುವೆ ಪೈಪೋಟಿ
ರಾಮನಗರ ತನ್ನ ನಗರಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆ ತಾಲೂಕಿನಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಕಾಮಗಾರಿಗಳ ಬಗ್ಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆ ಡಿ ಎಸ್ ಮತ್ತು ಬಿ ಜೆ ಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ ಶ್ರಮವೆಂದು ಹೇಳಿಕೊಳ್ಳಲಾರಂಭಿಸಿದ್ದಾರೆ.
ರಾಮನಗರ ಕ್ಷೇತ್ರದ ಶಾಸಕರೂ ಆದ ಕುಮಾರಸ್ವಾಮಿ ರಾಮನಗರವನ್ನು ರಾಜ್ಯದಲ್ಲೆ ಮಾದರಿ ನಗರವನ್ನಾಗಿ ರೂಪಿಸುವ ಹಂಬಲದಿಂದ ಮುಖ್ಯ ಮಂತ್ರಿಯಾಗಿ ಹಣ ಮಂಜೂರು ಮಾಡಿದ್ದಾರೆ ಎಂದು ಜೆ ಡಿ ಎಸ್ ನವರು ಪ್ರಚಾರದಲ್ಲಿ ತೊಡಗಿದ್ದಾರೆ.
ಬಿ ಜೆ ಪಿ, ಸರ್ಕಾರದ ಪಾಲುದಾರ ಪಕ್ಷವಾದ್ದರಿಂದ ರಾಮನಗರದ ಅಭಿವೃದ್ದಿಯಲ್ಲಿ ಬಿ ಜೆ ಪಿ ಪಾತ್ರವೂ ಇದೆ. ಅಭಿವೃದ್ದಿಗೆ ಮಂಜೂರಾದ ಪ್ರತಿ ರೂಪಾಯಿಯ ಹಿಂದೆ ಉಪಮುಖ್ಯ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳೂ ಆದ ಯಡಿಯೂರಪ್ಪನವರ ಶ್ರಮವೂ ಇದೆ ಎಂದು ಬಿ ಜೆ ಪಿಯವರು ಪ್ರಚಾರದ ಪೈಪೋಟಿಯಲ್ಲಿ ತೊಡಗಿದ್ದಾರೆ.
ಮತದಾರ ಮಾತ್ರ ಎರಡೂ ಪಕ್ಷಗಳ ಪ್ರಚಾರದ ಭರಾಟೆಯನ್ನು ಗಮನಿಸಿಯೂ ಗಮನಿಸದಂತೆ ಇದ್ದಾನೆ. ಮತದಾರನ ಅಂತರಂಗ ದಿನಾಂಕ ೩೦ ರಂದು ಪಲಿತಾಂಶದ ಮೂಲಕ ಬಹಿರಂಗವಾಗಲಿದೆ.
Comments
ಉ: ರಾಮನಗರ: ಕೋಟಿಗಟ್ಟಲೆ ಅಭಿವೃದ್ದಿ ಜೆ ಡಿ ಎಸ್- ಬಿ ಜೆ ಪಿ ನಡುವೆ ಪೈಪೋಟಿ