ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!
ಮಂದಿರವಿದ್ದಿತ್ತೋ ಅಥವಾ ಮಸೀದಿಯಿದ್ದಿತ್ತೋ ಎಂದು ನಿರ್ಧರಿಸುವುದು ಆದರೂ ಕಷ್ಟ,
ಆ ಸ್ಥಳ ಮಾತ್ರ ನಿಜವಾಗಿಯೂ ನಮಗೆ ಸದಾ ಇತ್ತು ಮತ್ತು ಸದಾ ಇರುತ್ತದೆ ಆಗಿ ವಿಶಿಷ್ಟ;
ಬೇರಾವ ಸ್ಥಳವೂ ಇಷ್ಟು ಸುದೀರ್ಘ ಕಾಲ ಇದ್ದಿರಲಿಲ್ಲವೇನೋ ಈ ರೀತಿ ಸುದ್ದಿಯಲ್ಲಿ,
ಇನ್ನಾವ ಸ್ಥಳವೂ ನಮ್ಮನ್ನು ಬಂಧಿಸಿರಲಿಲ್ಲವೇನೋ ಈ ರೀತಿ ಭಾವನೆಗಳ ಸುಳಿಯಲ್ಲಿ;
ಅನ್ಯರನು ಸಾಕ್ಷಿ ಮತ್ತು ಬುದ್ಧಿವಂತಿಕೆಯಿಂದ ಸೋಲಿಸುವುದು ಅಲ್ಲ ಕಣ್ರೀ ಮಹತ್ಕಾರ್ಯ,
ತೆರೆದ ಹೃದಯದೊಂದಿಗೆ ಅನ್ಯರನು ಆದರಿಸುವುದೇ ನಾವೆಲ್ಲರೂ ಮಾಡಬೇಕಾದ ಕಾರ್ಯ;
ನ್ಯಾಯಾಲಯದ ತೀರ್ಪು ಯಾವೊಂದು ಪಕ್ಷಕ್ಕೂ ಅಸ್ವೀಕಾರ್ಹವೆಂಬುದು ನಿಜದಿ ಸುಸ್ಪಷ್ಟ,
ಆದರೆ ಅಲ್ಲೊಂದು ಸರ್ವಧರ್ಮ ಪ್ರಾರ್ಥನಾಸ್ಥಳವಾದರೆ ಎಲ್ಲರಿಗೂ ಆಗಬಹುದೇನೋ ಇಷ್ಟ;
ಪ್ರತಿಯೊಬ್ಬ ಭಾರತೀಯನೂ ಅಲ್ಲಿಗೇ ಹೋಗಿ ತನ್ನ ದೇವರ ಪ್ರಾರ್ಥಿಸಿ ಬರುತ್ತಲಿರಲಿ,
ಇಡೀ ಪ್ರಪಂಚಕ್ಕೆ ಭಾರತೀಯರ ಗರಿಮೆ ಹಿರಿಮೆಯನ್ನು ಸದಾ ತೋರಿಸಿಕೊಡುತ್ತಿರಲಿ!
*******
ಆತ್ರಾಡಿ ಸುರೇಶ ಹೆಗ್ಡೆ
ಆಂಗ್ಲದಲ್ಲಿ ಬರೆದ ಇದರ ಮೂಲ ರೂಪ (NEED OF THE HOUR) ನನ್ನ ಆಸುಮನ ಬ್ಲಾಗಿನಲ್ಲಿದೆ.
Comments
ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!
ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!
ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!
ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!
ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!
In reply to ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ! by asuhegde
ಉ: ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!