ಮೌನ ಮಾತಾದಾಗ :-(
ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ? ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection ಅನುಭವಿಸಿಬಿಟ್ಟರೆ, ಅವರಿಗೆ ಅದರಿಂದ ಮೇಲೇಳಲು ಸಾಧ್ಯವಿಲ್ಲವೇ ಇಲ್ಲ. ಅದು ನನಗೆ ನನ್ನ ಅತಿ ಸಣ್ಣ ವಯಸ್ಸಿನಿಂದ ಆಗಿದೆ. ಜೀವ ಭಯಕ್ಕಿಂತ ಹೆಚ್ಚಾಗಿ ಪ್ರತಿ ಕ್ಷಣವೂ ನಾನು ರಿಜೆಕ್ಷನ್ ಪದಕ್ಕೆ ಹೆದರುತ್ತೇನೆ. ಹಾಗಾಗಿಯೇ ನಾನು ಅಷ್ಟು ಸರಿ / ತಪ್ಪು ಅಂತಾ ಯೋಚಿಸುವುದು. ನಾನು ರಿಜೆಕ್ಟ್ ಆಗಿಬಿಡುವುದರಿಂದ / ಆಗಿರುವುದರಿಂದ ನನಗೆ ನಾನು ಯಾವಾಗಲೂ ತಪ್ಪಿತಸ್ಥ ಸ್ಥಾನಕ್ಕೆ ಬಂದುಬಿಡುತ್ತೇನೆ. ಅಂದರೆ ನಾನೇನೋ ತಪ್ಪು ಮಾಡಿರಬೇಕು. ಅದಕ್ಕೆ ಇವರು ನನ್ನಿಂದ ದೂರ ಹೋಗಿಬಿಡ್ತಾರೆ ಅಂತಾ ಅನ್ನಿಸಿಬಿಡುತ್ತೆ. ಆಗ ಮತ್ತಷ್ಟು ಎಚ್ಚರಿಕೆಯಿಂದ ಇರಲು ಪ್ರಯತ್ನಿಸುತ್ತೇನೆ. ಪ್ರತಿಯೊಂದು ಹೆಜ್ಜೆಯನ್ನು ಇನ್ನಷ್ಟು ಹುಷಾರಾಗಿ ಇಡಲು ಬಯಸುತ್ತೇನೆ. ಆಗಲೂ ಕೂಡ ನನ್ನಿಂದ ದೂರ ಹೋದಾಗ ಇನ್ನಷ್ಟು ಭಯ, ಇದು ನನಗಾಗಿರುವ ಭೀಕರ ಅಥವಾ ಭಯಂಕರ ಅನುಭವ.ಇದರಿಂದ ಒಂದಷ್ಟು ಜನರನ್ನು ಅವರು ನನ್ನನ್ನು ರಿಜೆಕ್ಟ್ ಮಾಡುವ ಮೊದಲೇ ನಾನು ಮಾಡಿಬಿಡುತ್ತೇನೆ. ನನಗೆ ಯಾರ ತಪ್ಪು ಕಾಣೊಲ್ಲ ಅಂತಲ್ಲ. ಕಂಡರೂ ಕಾಣದಂತೆ ಹೆಚ್ಚಾಗಿ ಇರುವುದು ಆ ವ್ಯಕ್ತಿಗಳು ನನ್ನಿಂದ ದೂರ ಹೋಗಿಬಿಟ್ಟರೆ ಎನ್ನುವ ಕಾರಣದಿಂದ ಅಷ್ಟೆ. ಇಷ್ಟೆಲ್ಲಾ ಯೋಚಿಸಿದರೂ, ಹೆದರಿದರೂ ನಾನು ಅತ್ಯಂತ ಪ್ರೀತಿಸುತ್ತಿದ್ದವರು ಎಲ್ಲರೂ ನನ್ನನ್ನು ರಿಜೆಕ್ಟ್ ಮಾಡಿದ್ದು ನನಗೆ ಸಿಕ್ಕಾ ಪಟ್ಟೆ ನೋವು ಕೊಟ್ಟ ವಿಷಯ. ಮತ್ತೆ ಇನ್ನೊಂದು ವಿಷಯ ಅಂದ್ರೆ ನನಗೆ ಎಲ್ಲರೂ ಬೇಕು, ಜಗಳವಾಡೋದು ನಾವು ವಿಷಯದ ಜೊತೆಗೆ ಮಾತ್ರ, ವ್ಯಕ್ತಿಯ ಜೊತೆಗಲ್ಲ ಅನ್ನೋದು ನನ್ನ ಒಪಿನಿಯನ್. ಆದ್ರೆ ಎಲ್ಲರೂ ನನ್ನ ಜೊತೆ ಅರ್ಗ್ಯು ಮಾಡೋವಾಗಲೋ ಅಥವಾ ನನಗೆ ವಿರುದ್ಧ ಮಾತನಾಡಬೇಕಾದಾಗಲೂ ನಾನು ಅಷ್ಟು ಮುಖ್ಯನೇ ಅಲ್ಲ ಅನ್ನೋ ತರಹ ನನ್ನನ್ನು ರಿಜೆಕ್ಟ್ ಮಾಡಿಬಿಡ್ತಾರೆ. ಆ ನೋವು ನನಗೆ ತಡೆಯೋಕ್ಕಾಗದಿಲ್ಲ.
ಹೀಗೆ ನನ್ನ ಪಾಡಿಗೆ ಒಂಟಿಯಾಗಿದ್ದಾಗ ನಿನ್ನ ಪರಿಚಯವಾಗಿದ್ದು ನಿಧಿ ಸಿಕ್ಕಷ್ಟು ಸಂತೋಷವಾಯಿತು. ನನ್ನ ಮೂಕ ಧ್ವನಿಗೆ ನೀ ಜೀವ ಕೊಟ್ಟಿದ್ದೆ. ಇಬ್ಬರೂ ಸಕತ್ ಕ್ಲೋಸ್ ಆದೆವು. ನಿನ್ನ ಕನಸುಗಳನ್ನು ಹಂಚಿಕೊಳ್ಳುವಾಗ, ನಿನ್ನ ದುಡ್ಡಿನ ಕಷ್ಟ ಹೇಳಿಕೊಂಡಾಗ ಏನಾದರೂ ಸಹಾಯ ಮಾಡಬೇಕು. ಅದು ಖಂಡಿತವಾಗಿಯೂ ಕರುಣೆಯಿಂದಲ್ಲ. ನಿನ್ನ ಟ್ಯಾಲೆಂಟಿಗೆ ಯಾರು ಬೆಲೆ ಕೊಟ್ಟಿಲ್ಲ ಅಂತ ಅನ್ನಿಸುತ್ತಿತ್ತು. ನನಗಂತೂ ಯಾವ ಕನಸುಗಳೂ ಇಲ್ಲ. ಹಾಗಾಗಿ ನಿನ್ನ ಕನಸುಗಳನ್ನು ಸಾಕಾರ ಮಾಡಲು ನಿನ್ನೊಟ್ಟಿಗೆ ಬಂದೆ ಹೊರತು ಇನ್ನಾವ ಕೆಟ್ಟ ಉದ್ದೇಶವೂ ಇರಲಿಲ್ಲ. ಇದರಲ್ಲಿ ನಾನು ಲೀಡರ್ ಆಗುವ ಅಥವಾ ಭಾಗವಹಿಸುವ ಯಾವುದೇ ಮನಸ್ಸು ಇರಲಿಲ್ಲ. ನಿನ್ನ ಕನಸುಗಳೂ ನೆರವೇರಿ, ನಿನಗಾಗುವ ಸಂತೋಷದಲ್ಲಿ ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನವಷ್ಟೇ ಆಗಿತ್ತು. ಎಂದೂ ಮಾತನಾಡಿಸದ ನಿನ್ನ ಮನೆಯವರು ನನ್ನನ್ನು ಮಾತನಾಡಿಸುವಾಗ ಮನದಲ್ಲೆಲ್ಲೋ ಅನುಮಾನ ಸುಳಿದರೂ ‘ಮಗ ಸೆಟಲ್ ಆಗಬೇಕೆಂಬ ಮನಸ್ಸು ಯಾವ ತಂದೆ, ತಾಯಂದಿರಿಗಿರುವುದಿಲ್ಲ. ನಾನೇ ಸರಿಯಿಲ್ಲವೆಂದು ಬೈದುಕೊಂಡುಬಿಡುತ್ತಿದ್ದೆ. ಆದರೆ ನಿನಗಿಂತ ನಿನ್ನ ಮನೆಯವರೇ ಹೆಚ್ಚು ಹತ್ತಿರವಾಗಿದ್ದು ಮಾತ್ರ ಆಶ್ಚರ್ಯ.
ನಿನ್ನ ಜೊತೆ ಇರುವ ಅವಕಾಶ ಸಿಗುತ್ತೆ / ಮನೆಯಲ್ಲಿ ಹೇಳಲು ಒಂದು ನೆಪವಿರುತ್ತೆ ಅಂತಾನೇ ನಾನು ಮೊದಲಿಗೆ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು. ನಿನ್ನ ಕನಸುಗಳು ಅದು ನನ್ನೊಟ್ಟಿಗೆ ಸಾಕಾರಗೊಳ್ಳುವ ಕಾಲ ಬಂದೇ ಬಿಟ್ಟಿತು ಎಂದು ಹಿಗ್ಗಿ ಹೀರೇಕಾಯಿ ಆಗಿಬಿಟ್ಟೆ. ನಿನಗಿಂತಲೂ ಹೆಚ್ಚಿನ ಆಸಕ್ತಿಯಿಂದ ಈ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡೆ. ನನ್ನ ಮನೆಯವರೆಲ್ಲರ ಕೆಂಗಣ್ಣಿಗೂ ಗುರಿಯಾದೆ. ಅದೇನದು? ಯಾವಾಗಲೂ ಮನೆಯಿಂದ ಹೊರಗಿರುವುದು? ಅವನನ್ನು ಕಂಡರೆ ನನಗಾಗುವುದಿಲ್ಲವೆಂದು ಮೊದಲಬಾರಿಗೆ ಅಮ್ಮ ಸಿಡಿಮಿಡಿಗುಟ್ಟಿದಾಗ, ಎಂದೂ ಹೆಚ್ಚು ಮಾತನಾಡದ ನಾನು ಅಂದು ಭೂಮಿ, ಆಕಾಶ ಒಂದು ಮಾಡಿದ್ದೆ. ಅಮ್ಮನಿಗೆ ಆಶ್ಚರ್ಯ, ಸಂಕಟ, ನೊವು ಎಲ್ಲವೂ ಬಹುಶಃ ಒಟ್ಟಿಗೆ ಅನುಭವವಾಗಿತ್ತೇನೋ? ಅಂದಿನಿಂದ ಪೂರ್ತಿ ಮೌನಿಯಾಗಿಬಿಟ್ಟಳು. ಆ ಘಟನೆಯಾದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿಯಿಂದ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡೆ. ಇದು ನನಗೆ ನನ್ನ ಆತ್ಮ ಗೌರವದ ಪ್ರಶ್ನೆಯಾಗಿಬಿಟ್ಟಿತು. ನನ್ನ ಗೆಳೆಯ ವೇಸ್ಟ್ ಬಾಡಿಯಲ್ಲ. ಅವನಲ್ಲಿ ಟ್ಯಾಲೆಂಟ್ ಇದೆ ಎಂದು ಸಾರಿ ಸಾರಿ ಜಗತ್ತಿಗೆಲ್ಲಾ ಗೊತ್ತಾಗುವಂತೆ ಮಾಡಬೇಕಾದ ಅನಿವಾರ್ಯತೆಯನ್ನು ಹುಟ್ಹಾಕಿಬಿಡ್ತು.
ಇದುವರೆವಿಗೂ ಹೆಚ್ಚಿನ ಪ್ರಾಜೆಕ್ಟ್ ಗಳನ್ನು ನೀನು ಅರ್ಧ ಅರ್ಧಕ್ಕೆ ಏನೇನೋ ಸಿಲ್ಲಿ ಕಾರಣ ಕೊಟ್ಟು ಬಿಟ್ಟುಬಿಡುತ್ತಿದ್ದೆ. ಅದು ಹಾಗಲ್ಲ ಎಂದು ನಾನು ಹೇಳಿದರೆ ವಾದ ಮಾಡುತ್ತಿದ್ದೆ. ನಾನು ನಿನ್ನ ಜೊತೆ ಟೀಮ್ ನಲ್ಲಿದ್ದರೆ ನೀನು ಇದನ್ನು ಬಿಡದಂತೆ ನೋಡಿಕೊಳ್ಳಬಹುದು. ನೀನು ಜಗಳವಾಡಿದರೂ, ಬೈದರೂ ನಾನಾದ್ರೆ ಸಹಿಸಿಕೊಳ್ಳಬಹುದು. ನಿನ್ನ ಪ್ರತಿಭೆ ಜಗತ್ತಿಗೆ ಗೊತ್ತಾಗಿಬಿಟ್ಟರೆ ಆಮೇಲೆ ನಿನ್ನ ಈ ಸ್ವಭಾವ (ಹೊಂದಾಣಿಕೆಯಿಲ್ಲದ) ವನ್ನು ಜಗತ್ತು ಒಪ್ಪಿಕೊಂಡುಬಿಡುತ್ತದೆ. ಹಾಗಾಗಿ ನಾನು ಈ ಟೀಮ್ ನಲ್ಲಿ, ನನಗೆ ನೀನು ಎಷ್ಟೋ ಅವಮಾನಗಳನ್ನು ಮಾಡಿದರೂ ಸಹಿಸಿಕೊಂಡು ಇರಬೇಕೆಂದೇ ನಾನು ಪ್ರಾಜೆಕ್ಟ್ ಗೆ ಬರೋಕೆ ಪ್ರೇರೇಪಿಸಿದ್ದು. ನಿಧಾನವಾಗಿ ಒಂದೊಂದೇ ವಿಷಯಗಳು ನಿನ್ನ ಬಗ್ಗೆ ತಿಳಿಯುತ್ತಾ ಬಂತು. ನನ್ನ ಹತ್ತಿರ ಹೇಳಿದ ಮಾತುಗಳನ್ನೆಲ್ಲಾ ನೀನು ನನ್ನ ಗೆಳತಿಯರ ಬಳಿ ಕೂಡ ಹೇಳುತ್ತಿದ್ದೆ ಎಂದು ಗೊತ್ತಾದಾಗ, ನನಗಾದ ನೋವನ್ನು ನಾ ಯಾರಲ್ಲಿ ಹೇಳಿಕೊಳ್ಳಲಿ? ಎಲ್ಲಾ ಹುಡುಗಿಯರು ನಿನಗೆ ಒಂದೇ ರೀತಿ ಹಾಗೂ ನನ್ನನ್ನು ಕೂಡ ನೀನು ಅದೇ ಸ್ಥಾನದಲ್ಲಿ ಇರಿಸಿದ್ದೆ ಎಂಬುದರ ಅರಿವಾದಾಗ ಆದ ಸಂಕಟವೆಷ್ಟು? ನಿನ್ನ ಗೆಳೆತನ ಬಿಡದಷ್ಟು ಇಲ್ಲಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ನಿನ್ನನ್ನು ಬಿಟ್ಟುಬಿಡುವುದು ಸುಲಭವಾಗಿದ್ದರೂ, ಮನೆಯಲ್ಲಿ ನನಗದು ಪ್ರೆಸ್ಟೀಜ್ ವಿಷಯವಾಗಿತ್ತು. ಹಾಗಾಗಿಯೇ ನಿನ್ನನ್ನು ಬದಲಾಯಿಸಲು ಪ್ರಯತ್ನಿಸಿದೆ. ನಿನಗದು ಇಷ್ಟವಾಗಲಿಲ್ಲವೇನೋ?
ಇನ್ನೂ ಪ್ರಾಜೆಕ್ಟ್ ವಿಷಯ, ನಾನು ಬಂದಿದ್ದೇ ನಿನಗಾಗಿ ಅನ್ನೋದನ್ನು ಹೇಳಿದ್ದೀನಿ. ಆಮೇಲಾಮೇಲೆ ಅದು ನನ್ನ ಪ್ರೆಸ್ಟೀಜ್ ವಿಷಯವಾಯಿತು. ನೀನು ನನ್ನ ಗೆಳತಿಯ ಹತ್ತಿರ ಇವಳು ಪ್ರಾಜೆಕ್ಟ್ ನಲ್ಲಿರುವ ತನಕ ನಾನು ಬರುವುದಿಲ್ಲ ಎಂದೆಯಂತೆ. ನನಗೆ ಮಾತನಾಡಲು ಕೂಡ ಅವಕಾಶ ಕೊಡದೆ ನೀನು ಹೀಗೆ ಮಾಡಿದ್ದು ಯಾಕೆ ಎಂಬುದು ನನಗೆ ಈಗ ಕಾಡುತ್ತಿದೆ. ನಾನು ಪ್ರಾಜೆಕ್ಟ್ ಗೆ ಮುಖ್ಯ ಅಂತಾ ನನಗನ್ನಿಸಿಯೇ ಇಲ್ಲ. ನಿನ್ನ ಬಗ್ಗೆ ಕನ್ಸರ್ನ್ ಇರುವುದು ಪ್ರಾಜೆಕ್ಟ್ ಗಾಗಿ ಅನ್ನೋದಿಕ್ಕಿಂತ ಹೆಚ್ಚಾಗಿ ಅಯ್ಯೋ ನಿನ್ನ ಆ ಒಂದು ತಪ್ಪು ಅಥವಾ ವೀಕ್ ನೆಸ್ ನಿಂದಾಗಿ ಒಳ್ಳೆಯ ಅವಕಾಶವನ್ನು ಬಿಟ್ಟುಬಿಡ್ತಾ ಇದ್ದೀಯಾ ಅನ್ನೋದಷ್ಟೆ. ನಾನಾದರೆ ಅಡ್ಜಸ್ಟ್ ಮಾಡಿಕೊಳ್ಳಬಹುದು, ಬೇರೆಯವರಾದ್ರೆ ಆಗೊಲ್ಲ ಅಂತ ಅಷ್ಟೆ. ಅದನ್ನು ಕೂಡ ಯೋಚಿಸಿ, ಯೋಚಿಸಿ ಬಿಟ್ಟೇ ಬಿಟ್ಟಿದ್ದೀನಿ. ಅವರವರಿಗೆ ಅವರವರ ತಪ್ಪುಗಳು ಗೊತ್ತಾಗಬೇಕೇ ಹೊರತು ಮತ್ತೊಬ್ಬರಿಂದ ತಿದ್ದುವುದು ಸಾಧ್ಯವಿಲ್ಲ ಅನ್ನೋದು ಅರ್ಥವಾಗಿದೆ.
ನೀನು ಇಲ್ಲದೆ ಬದುಕುವುದಕ್ಕೆ ಆಗೊಲ್ಲ ಅನ್ನುವಂತಹ ಸಂಬಂಧ ನಮ್ಮದಾಗಿರಲಿಲ್ಲ. ಆದರೆ ನೀನೂ ಕೂಡ ಇದ್ದರೆ ಈ ಬಾಳು ಸೊಗಸು ಎನ್ನುವಂತಹದಾಗಿತ್ತು ಎಂದು ನಂಬಿದ್ದೆ. ಬಹಳಷ್ಟು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೀನಿ. ನನ್ನ ಕೈಲಾದಷ್ಟು ಪ್ರಾಜೆಕ್ಟ್ ಗಾಗಿ ನಾನು ಕೆಲಸ ಮಾಡಿದ್ದೀನಿ. ನಾವು ನಾವು ನಮ್ಮನ್ನೇ ಪರಿಶೀಲಿಸಿ ನೋಡಿಕೊಂಡಾಗ, ವಿಮರ್ಶಿಸಿ ಕೊಂಡಾಗ ನಮಗೆ ಗೊತ್ತಾಗುತ್ತದೆ ನಾವೇನು ಪ್ರಾಜೆಕ್ಟ್ ಗಾಗಿ ಮಾಡಿದ್ದೀವಿ ಅನ್ನೋದು. ಸೋ ನನ್ನ ಟೈಮ್ ಗೂ ಬೆಲೆಯಿದೆ ಹಾಗೆಯೇ ನಿನ್ನ ಟೈಮ್ ಗೂ ಕೂಡ ನಾನು ಬೆಲೆ ಕೊಟ್ಟಿದ್ದೀನಿ ಅನ್ನೋದು ನನ್ನ ಅಭಿಪ್ರಾಯ. ಅಕಸ್ಮಾತ್ ನಿನ್ನ ಟೈಮ್ ವೇಸ್ಟ್ ಮಾಡಿದ್ದರೆ ಕ್ಷಮೆಯಿರಲಿ. ನೀನೇ ಅಲ್ಟಿಮೇಟ್ ಅಂತಾ ನಾನ್ಯಾವತ್ತೂ ಅಂದುಕೊಂಡಿಲ್ಲ. ಈ ಪ್ರಾಜೆಕ್ಟ್ ನೀನು ಇಲ್ಲದಿದ್ರೂ ನಡೆಯುತ್ತೆ ನನಗದು ಗೊತ್ತು. ಆದರೆ ನಿನಗೆ ಇದಕ್ಕಿಂತ ಹೆಚ್ಚಿನ / ಒಳ್ಳೆಯ
ಅವಕಾಶ ನಿನ್ನನ್ನು ನೀನು ಪ್ರೂವ್ ಮಾಡೋಕೆ ಸಿಗೊಲ್ಲ ಅಂತಾ ಅಷ್ಟೆ ನನ್ನ ಕಳಕಳಿ. ಅದಕ್ಕೋಸ್ಕರ ಎಲ್ಲ ರೀತಿಯ ಪ್ರಯೋಗಗಳನ್ನು ಮಾಡಿದೆ. ಕೊನೆಗೆ ಎಮೋಷನಲ್ ಬ್ಲಾಕ್ ಮೇಲ್ ಕೂಡ ಮಾಡಿದೆ. ನಿನಗದು ಟಾರ್ಚರ್ ಅನ್ನಿಸಿರುತ್ತೆ. ಆದರೆ ನಿಜವಾಗಿಯೂ ನಿನಗೆ ಅರಿವಾದಾಗ ನಾನು ನಿನ್ನ ಕೈಗೆ ಸಿಗದಂತೆ ಬಹಳ ದೂರ ಹೋಗಿರ್ತೀನಿ. ಇಷ್ಟು ಕೂಡ ಮಾತನಾಡಿದ್ದು ಮುಂದೆ, ಮುಂದೆ ಇದು ನಿನ್ನ ಕೆಲಸಕ್ಕೆ ಅಫೆಕ್ಟ್ ಆಗದಿರಲಿ ಎನ್ನುವ ಉದ್ಧೇಶವಷ್ಟೇ.
ಗುಡ್ ಬೈ :-(
Comments
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by shivaram_shastri
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by inchara123
ಉ:ನಗೋದು ಮರೆಯಬೇಡಿ. :-)
In reply to ಉ:ನಗೋದು ಮರೆಯಬೇಡಿ. :-) by shivaram_shastri
ಉ:ನಗೋದು ಮರೆಯಬೇಡಿ. :-)
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by ksraghavendranavada
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by inchara123
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by asuhegde
ಉ: ಮೌನ ಮಾತಾದಾಗ :-(
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by gopinatha
ಉ: ಮೌನ ಮಾತಾದಾಗ :-(
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by asuhegde
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by asuhegde
ಉ: ಮೌನ ಮಾತಾದಾಗ :-(
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by pramods1729
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by Jayanth Ramachar
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by inchara123
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by Jayanth Ramachar
ಉ: ಮೌನ ಮಾತಾದಾಗ :-(
In reply to ಉ: ಮೌನ ಮಾತಾದಾಗ :-( by pramods1729
ಉ: ಮೌನ ಮಾತಾದಾಗ :-(