ಸಂತಸದಿಂದ ಕರಗಿ ಹೋಗುವ....
ಇರುಳಿನಲ್ಲಿ ಪೋಣಿಸುತ್ತಾ
ಕನಸಾಗಿಸುತ್ತೇವೆ....
ಮಸುಕು ಮಸುಕಾದ ಆಕೃತಿಗಳು
ವಿಧ ವಿಧವಾದ ಬಣ್ಣಗಳಿಂದ
ಕನಸಂತೆ ಕಾಣುತ್ತವೆ....
ಅದು ನಾವನುಭವಿಸುವ
ಅನುದಿನದ ಯಾತನೆಯೋ
ವೇದನೆಯೋ ಯಾವುದೋ
ಒಂದು ಕ್ಷಣದ ಸಂತಸದ
ಸಮಯವಾಗಿರಬಹುದು....
ಸುಖ ನಿದ್ರೆಗೂ ನೂರೆಂಟು
ಭಂಗಗಳಿಂದ ಕೂಡಿರುವ
ಹಲವಾರೂ ಸಂಗತಿಗಳು
ಒಮ್ಮೆಗೆ ಮರುಳಿಸಿದಾಗ....
ಬಾರದ ನಿದ್ರೆಯನ್ನರಸಿ
ನಿದ್ರೆಯನ್ನುಣಿಸುವಂತ
ಮಾತ್ರೆ ಮದ್ದುಗಳಿಗೆ
ಮಾರು ಹೋಗುತ್ತೇವೆ....
ಈಗಿರುವಾಗ ನಾವು
ಕಾಣುವ ಕನಸಾದರೂ ಎಂತಹುದು
ಉರಿಯುವ ದೀಪದಡಿಯ ಕತ್ತಲೆಯಂತೆ....
ಹೇಗಿದ್ದರೂ ಎಂದಾದರೊಮ್ಮೆ
ಶಾಂತಿಸಿಗುವ ಲೋಕದೆಡೆಗೆ
ಕನಸಾಗಿ ಸಾಗಿಹೋಗಲೇ ಬೇಕಲ್ಲವೆ ?....
ಅಷ್ಟರೊಳಗೆ ಇರುವ ಸಮಯಕ್ಕೆ
ತಕ್ಕಂತ ಕನಸುಗಳನ್ನು ಕಂಡು
ಸಂತಸದಿಂದ ಕರಗಿ ಹೋಗುವ....
ವಸಂತ್
ಚಿತ್ರಕೃಪೆ. http://art.scene.lt
Rating
Comments
ಉ: ಸಂತಸದಿಂದ ಕರಗಿ ಹೋಗುವ....
In reply to ಉ: ಸಂತಸದಿಂದ ಕರಗಿ ಹೋಗುವ.... by manju787
ಉ: ಸಂತಸದಿಂದ ಕರಗಿ ಹೋಗುವ....
ಉ: ಸಂತಸದಿಂದ ಕರಗಿ ಹೋಗುವ....
In reply to ಉ: ಸಂತಸದಿಂದ ಕರಗಿ ಹೋಗುವ.... by ksraghavendranavada
ಉ: ಸಂತಸದಿಂದ ಕರಗಿ ಹೋಗುವ....
ಉ: ಸಂತಸದಿಂದ ಕರಗಿ ಹೋಗುವ....
In reply to ಉ: ಸಂತಸದಿಂದ ಕರಗಿ ಹೋಗುವ.... by gopinatha
ಉ: ಸಂತಸದಿಂದ ಕರಗಿ ಹೋಗುವ....