ಸದಾ ನೆನೆದು ಸಂಭ್ರಮಿಸುವೆ...!.

ಸದಾ ನೆನೆದು ಸಂಭ್ರಮಿಸುವೆ...!.

ಕತ್ತಲ ಕೋಟೆಯನು ತಣ್ಣಗೆ ಸರಿಸಿ

ಬೆಳ್ಮುಗಿಲ ದಟ್ಟನೆಯ ಧರೆಗೆ ತಂದಂತೆ

ರವಿಯ ಮಾದಕ ನೋಟಕು ಮೂಗು ಮುರಿಯುತ

ನಮ್ಮ ಮನೆಯ ಬಾಗಿಲಿನವರೆಗೂ ಮಂಜು ಮಂಜು....

 

ಹಸಿರ ಹುಲ್ಲಿನ ಮೇಲೆ ಮಿನುಗುವ ನಕ್ಷತ್ರದ ಹರಳು

ತಣ್ಣನೆಯ ಗಾಳಿಗೆ ಸೋತು ಸೊರಗುವ ಮನ

ಮೈಕೊಡವಿ ಎದ್ದ ಜೇಡನ ಬಲೆಯಲ್ಲೂ

ಶೃಂಗರಿಸಿ ಹೋಗಿದ್ದ ಮುತ್ತುಗಳ ಮಾಲೆ....

 

ಯಾರಿಗಾಗಿ ಬರೆದ ಕವನವಿದು ನಾಕಾಣೆ

ಮತ್ಯಾರಿಗಾಗಿ ರಚಿತವಾದ ಕಲಾಕೃತಿಯೋ ನನ್ನಾಣೆ

ಕತ್ತಲು ಸರಿದು ಬೆಳಕು ಮೂಡಿದೊಡನೆಯೆ

ಮಧುಮಾಸದ ಸಂಜೆಯನ್ನು ನೆನಪಿಸಿದಂತೆ....

 

ವರುಷಕೊಮ್ಮೆಯಾದರೂ ದರುಶನವಿತ್ತು ಹೋಗುವ

ಬಳಲಿ ಬೆಂಡಾದ ಮನಕೆ ಆಹ್ಲಾದವನು ನೀಡುವ

ನಮ್ಮನೆಯವರೆಗೂ ಕರೆಯದೇ ಬರುವ

ಅಥಿತಿಯನ್ನು ನಾ ಸದಾ ನೆನೆದು ಸಂಭ್ರಮಿಸುತ್ತೇನೆ....

 

                                                                   ವಸಂತ್

 

 



Rating
No votes yet

Comments