ಹೆಣ್ಣು ಮತ್ತು ಅವಳ ಮನಸ್ಸು...

ಹೆಣ್ಣು ಮತ್ತು ಅವಳ ಮನಸ್ಸು...

 

ಕೆಲವರೆನ್ನುತ್ತಾರೆ ಹೆಣ್ಣಿನ ಮನಸ್ಸನ್ನು

ಆಳವಾದ ಸಮುದ್ರಕ್ಕೆ ಹೋಲಿಸಬಹುದೆಂದು....

ಖಂಡಿತವಾಗಿಯು ಇದು ನಿಜ

ಸಮುದ್ರದ ಆಳವನ್ನು ಅರಿಯಲಾಗದಂತೆ

ಹೆಣ್ಣಿನ ಮನಸ್ಸನ್ನು ಅರಿಯಲು ಅಸಾಧ್ಯವೆನ್ನಬಹುದು....

 

ದೂರದಿಂದ ನೋಡಲು ಸಮುದ್ರ

ನಯನ ಮನೋಹರವಾಗಿ ಘೋಚರಿಸುತ್ತದೆ

ಮುನಿಸಿಕೊಂಡರೆ ಮನುಕುವೆ ನಾಶವಾಗಿಸುವಂತ

ಭಯಂಕರಗಳನ್ನು ಸೃಷ್ಟಿಸುತ್ತದೆ....

ಹಾಗೇಯೆ ಹೆಣ್ಣು ನಕ್ಕರೆ ಮಲ್ಲಿಗೆ

ಕೆರಳಿದರೆ ಚೆನ್ನಮ್ಮನ ರೂಪ ತಾಳುತ್ತಾಳೆ....

 

ಸಮುದ್ರದೊಳಗೆ ಮುತ್ತುಗಳ....

ರತ್ನಗಳು, ಹವಳಗಳು....

ಬೆಲೆಬಾಳುವ ಎಷ್ಟೆಷ್ಟೋ

ಅದ್ಭುತಗಳು ಅಡಕವಾಗಿರುವಂತೆ

ಹೆಣ್ಣಿನಲ್ಲೂ ತಾಳ್ಮೆ ಸಹನೆ ಪ್ರೀತಿ ಸ್ನೇಹ

ಆದರ್ಶಗಳು ಅನುಭಂದಗಳನ್ನು ಅಡಗಿಸಿಟ್ಟುಕೊಂಡು

ಅದಕ್ಕಾಗಿ ಅವಳು ಮುತ್ತು ರತ್ನಗಳನ್ನೆ ಧರಿಸುತ್ತಾಳೆ....

 

ಇದಕ್ಕೆ ಅಲ್ಲವೆ ಹಿರಿಯರು ಹೇಳಿರುವುದು

ಹೆಣ್ಣು “ಒಲಿದರೆ ನಾರಿ”, “ಮುನಿದರೆ ಮಾರಿ” ಎಂಬುದನ್ನು....

 

                                                                         ವಸಂತ್


 

ಚಿತ್ರಕೃಪೆ. www.gangesindia.com

 

Rating
No votes yet

Comments