ಯಡಿಯೂರಪ್ಪಂಗೆ ಮಾಟ ಮಾಡಿಸಿದ್ದಾರೆ
ನಾನು, ಸುಬ್ಬ, ಸೀನ ಮೂರು ಜನ ನಿಂಗನ ಅಂಗಡೀಲಿ ಚಾ ಕುಡೀತಾ ನಿಂತಿದ್ವಿ. ಅಟ್ಟೊತ್ತಿಗೆ ಇಸ್ಮಾಯಿಲ್ ಬಸ್ ಬೆಂಗಳೂರಿಂದ ಬಂತು. ಅದರಿಂದ ಗೌಡಪ್ಪ ಅಂಗೇ ಮಂತ್ರವಾದಿ ಒಬ್ಬ ಇಳಿದ. ಏನ್ರೀ ಗೌಡರೆ ಅಂದ ಸುಬ್ಬ. ಅದು ದೊಡ್ಡ ಕಥೆ ಐತೆ ಬುಡಲಾ ಅಂದೋನು ಲೇ ನಿಂಗ ಬೈಟು ಚಾ ಕೊಡಲೇ ಅಂದ. ಗೌಡಪ್ಪನ ತಲೆ ಬೂದಿ ಆಗಿತ್ತು. ಮಂತ್ರವಾದಿ ನ್ಯಾನು ಊರಿಗೆ ಹೋಗುತ್ತೇನೆ ಅಂದು ಹೊಂಟ. ರೀ ಗೌಡರೆ ಕೇರಳದ ಮಂತ್ರವಾದಿ ಇಲ್ಲಿ ಯಾಕೆ ಬಂದಿದಾನ್ರೀ ಅಂದೆ.
ನೋಡಲಾ ಯಡ್ಯೂರಪ್ಪ ಸರ್ಕಾರ ಸುರುವಾದಗಿನಿಂದ ಒಂದಲ್ಲ ಒಂದು ಪ್ರಾಬ್ಲಮ್ ಕಲಾ. ಶೋಭಕ್ಕನ ಸಮಸ್ಯೆ, ಗಣಿ ರೆಡ್ಡಿಗಳ ಸಮಸ್ಯೆ, ರೇಣುಕಾಚಾರ್ಯ ಜಯಲಕ್ಸ್ಮಿ ಸಮಸ್ಯೆ, ಹಾಲಪ್ಪನ ಸಮಸ್ಯೆ, ಬಚ್ಚೇಗೌಡನ ಸಮಸ್ಯೆ ಈಗ ನೋಡಲಾ ಕಟ್ಟಾ ಜಗ್ಗನ ಜೊತೆಗೆ ಯಡ್ಯೂರಪ್ಪನ ಮಕ್ಕಳು ಹೆಸರು ತಗಲಾಕ್ಕಂಡೈತೆ. ಇದಕ್ಕೆ ದೇವೆಗೌಡರು ಹಂಗೇ ಸಿದ್ದರಾಮಯ್ಯನ ಕೈವಾಡ ಐತೆ ಕನ್ಲಾ ಗೌಡ ಅಂತಿದ್ರು ಯಡ್ಯೂರಪ್ಪ. ಅದೆಂಗೆ ಸರ್, ನೊಡಲಾ ದಕ್ಷಿಣ ಭಾರತದಾಗೆ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಬಂದೈತೆ. ನಾನು ಸಾನೇ ಹೋರಾಟ ಮಾಡಿದೀನಿ. ನನ್ನ ಕಂಡ್ರೆ ಈ ಬಡ್ಡೆ ಐಕ್ಳಿಗೆ ಆಗಕ್ಕಿಲ್ಲ ಕಲಾ ಅಂದ್ರು. ಹೆಂಗಾರ ಮಾಡಿ ಇವರನ್ನ ಇಳಿಸವಾ ಅಂತಾ ಮಾಟ ಮಾಡಿಸಿದ್ದಾರೆ ಅಂದ್ರು ಕಲಾ. ಅದಕ್ಕೆ ನೀವೇನು ಮಾಡಿದ್ರಿ ಅಂದ ಸುಬ್ಬ. ನಂಗೆ ಕೇರಳದ ಈ ಮಂತ್ರವಾದಿ ಮಲ್ಲು ಮಂಜ ಪರಿಚಯ ಇದ್ದ. ಅಂಗಾಗಿ ಯಡ್ಯೂರಪ್ಪ ಮನೆಗೆ ಕರ್ಕಂಡು ಹೋಗಿ ಮಾಟ ಮಾಡದೇ ಇರೋ ಹಂಗೆ ಮಂತ್ರ ಮಾಡಿಸಿ ಬಂದೆ ಕಲಾ ಅಂದ ಗೌಡಪ್ಪ.
ಅಲ್ರೀ ನೋಡಕ್ಕೆ ಇವನು ಅಗೋರಿ ಇದ್ದಂಗೆ ಅವ್ನೆ. ನೋಡಕ್ಕೆ ಹೆದರಿಕೆ ಆಯ್ತದೆ. ಇವನ ಜೊತೆ ಹೆಂಗ್ರಿ ಹೋಗಿದ್ರಿ. ಏನ್ ಮಾಡಕ್ಕೆ ಆಯ್ತದಲಾ. ಮುಂದಿನ ಬಾರಿ ಚುನಾವಣೆಗೆ ನಿಂತ್ಕಬೇಕು ಅಂದ್ರೆ ಮಾಡಲೇ ಬೇಕಲಾ. ಇಲ್ಲಾ ಅಂದ್ರೆ ಗೂಳಿ ಹಟ್ಟಿ ಶೇಖರ, ಶಿವನಗೌಡ ನಾಯ್ಕ, ಅರವಿಂದ ನಿಂಬೇಹುಳಿ ತರಾ ಎಲ್ಲಿ ನನ್ನನ್ನು ರೆಡ್ಡಿ ಬಳಗಕ್ಕೆ ಸೇರಿಸ್ತಾರೋ ಅಂತಾ ಬೆಳಗ್ಗೆನೇ ಇಸ್ಮಾಯಿಲ್ ಬಸ್್ಗೆ ಹೋದೆ ಕಲಾ ಅಂದ ಗೌಡಪ್ಪ. ಕನ್ಸೀಸನ್ ಮಾಡ್ಲಿಲ್ಲಾ ಅಂತಾ ಇಸ್ಮಾಯಿಲ್್ಗೆ ಸಾನೇ ಬೈತಾ ಇದ್ದ. ಈ ಬಡ್ಡೆ ಐದ ಬರೋ ಬೇಕಾದ್ರೆ ತಲೆ ಬುಲ್ಡೆ ಮರೆತು ಬಂದಿದ್ದ. ಅದಕ್ಕೆ ಅಂತಾ ನಿನ್ನೆ ರಾತ್ರಿ ಮಸಾಣಾಕ್ಕೆ ಹೋಗಿ ಬೂದೀಲಿ ಎಲ್ಲಾ ತಡಕಾಡಿ ಯಾವುದೋ ಒಂದು ಬುಲ್ಡೆ, ಕೈ ಮೂಳೆ, ಕಾಲು ಮೂಳೆ ಎತ್ಕಂಡು ಬಂದ್ವಿ. ಅದ್ರಾಗೆ ಸೈಜ್ ಸರಿಯಿಲ್ಲ ಅಂತಿದ್ದ ಕಲಾ ಈ ಮಂತ್ರವಾದಿ. ಯಡ್ಯೂರಪ್ಪನ ಮನೆಗೆ ಹೋದ್ರೆ. ಸೆಕ್ಯೂರಿಟಿಯೋರು ಯಾರೋ ಪೇಮಸ್ ಮಂತ್ರವಾದಿ ಬಂದ್ಯಾರೆ ಅಂತಾ, ಈ ಬಡ್ಡೆ ಐದ ಮಂತ್ರವಾದಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ರು ಕಲಾ. ಮಗಾ ಅವರ ತಲೆಗೂ ಬೂದಿ ಎರಚಿದ್ದ ಕಲಾ ಅಂದ ಗೌಡಪ್ಪ.
ಆಮ್ಯಾಕೆ ಒಳಗೆ ಹೋದ್ರೆ. ಯಡ್ಯೂರಪ್ಪ, ಬಚ್ಚೇಗೌಡ, ಕಟ್ಟಾ ಎಲ್ಲಾ ಕಾಯ್ತಾ ಇದ್ರು. ತಿಂಡಿನೂ ತಿನ್ನದೆ ಪೂಜೆಗೆ ಕಾಯ್ತಾ ಇದ್ವು ಕಲಾ. ಹೋಗ್ತಿದ್ದಂಗೆನೇ ಒಂದು ಡಜನ್ ನಿಂಬೆ ಹಣ್ಣು, ಹಂಗೇ ಮಾಲೆ ತರೆಸಿ ಸುರುಹಚ್ಕಂಡನಪ್ಪಾ ಮಂತ್ರವಾ. ಎಂದ ಮೂಳೆ ಅಂದ ಮಂತ್ರವಾದಿ. ಯಡ್ಯೂರಪ್ಪ ಮೂಳೆ ಚೀಲದಿಂದ ತೆಗೆದು ಕೊಟ್ರು. ಇದಲ್ಲಾ. ನ್ಯಾನು ಹೇಳಿದ್ದು ನಮ್ಮ ಗೌಡಪ್ಪಂಗೆ ಅಂದ. ಆಮ್ಯಾಕೆ ನನ್ನನ್ನ ಪಕ್ಕ ಕೂರಿಸಿಕೊಂಡು ದಬ್ಬಣ ದಾರ ಕೊಟ್ಟು ನಿಂಬೆಹಣ್ಣು ಪೋಣಿಸಕ್ಕೆ ಹೇಳಿದ. ಅದಕ್ಕೆಲ್ಲಾ ಕುಂಕುಮ ಹಚ್ಚಿದ್ವಿ. ಭಯಾ ಆಯ್ತಿತ್ತಲಾ. ಯಡ್ಯೂರಪ್ಪನ ಮಕ್ಕಳು, ಏನಪ್ಪಾ ಇವರನ್ನೆಲ್ಲಾ ಯಾಕೆ ಮನೇಲಿ ಬಿಟ್ಕಂಡಿದೀಯಾ ಅಂದ್ವು. ನೀವು ಸುಮ್ಕಿರಿ ಅಂದ್ರು ಯಡೂರಪ್ಪ. ಮಂತ್ರವಾದಿ ಕೋಳಿ ತೆಗೆದು ಬಿಸ್ಮಿಲ್ಲಾ ಮಾಡ್ದ ಕಲಾ. ಆಮ್ಯಾಕೆ ರಕ್ತ ಅಂಗೇ ನಿಂಬೆ ಹಣ್ಣು ಮನೆಸುತ್ತಾ ಹಾಕಿಸ್ದ. ಯಡೂರಪ್ಪ ನಾನು ವೀರಶೈವಾ ಕಲಾ ಅಂತಿದ್ರು. ಮುಕ್ಕಮಂತ್ರಿ ಆಗ್ಬೇಕು ಅಂದ್ರೆ ಇವೆಲ್ಲಾ ಮಾಡಬೇಕಪ್ಪಾ. ಲೇ ಗೌಡ ಇವನೇನೋ ಏಕವಚನದಾಗೆ ಮಾತಾಡಿಸ್ತಾನೆ ಅಂದ್ರು ಯಡೂರಪ್ಪ. ಕಟ್ಟಾ ಮಾತ್ರ ಸಾನೇ ಬೇಜಾರಾಗಿತ್ತು. ನನ್ನ ಮಗ ಜಗ್ಗ ಇಲ್ವಲಾ ಅಂತ. ಬಚ್ಚೇಗೌಡ ಗಾಡಿ ಗಲಾಟೆ ಆದಾಗಿನಿಂದ ಸೈಲೆಂಟ್ ಆಗ್ಬಿಟ್ಟೈತೆ ಕಲಾ. ಯಡೂರಪ್ಪ ನೋಡ್ರಪ್ಪಾ, ದೇವೆಗೌಡ, ಸಿದ್ದರಾಮಯ್ಯ,ಈಶ್ವರಪ್ಪ ಅಂಗೇ ಅನಂತು ಹೆಸರು ಹೇಳಿ ಪೂಜೆ ಮಾಡ್ರಿ ಅಂದ್ರು. ಅಲ್ಲಾ ಸಾರ್. ಇವರಿಬ್ಬರೂ ನಿಮ್ಮ ಪಾರ್ಟಿಯವರೇ ಅಲ್ವರಾ ಅಂದಾ ಮಂತ್ರವಾದಿ. ಪಕ್ಕದೋರನ್ನೆ ನಂಬಂಗಿಲ್ಲಪ್ಪಾ ಅಂತಾ ಬೇಜಾರಿನಿಂದ ಯಡೂರಪ್ಪ. ಸರಿ ಪೂಜೆ ಎಲ್ಲಾ ಆತು. ಓಂ, ಚೂಂ ಮಾಕಾಳಿ ಬಿಟ್ರೆ ಬೇರೆ ಯಾವ ಮಂತ್ರನೂ ಅರ್ಥ ಆಗ್ಲಿಲ್ಲ ಕಲಾ ಅಂದ ಗೌಡಪ್ಪ.
ಅಟ್ಟೊತ್ತಿಗೆ ಬಂದ್ರೂ ನೋಡಪ್ಪಾ ಟಿವಿಯೋರು ಪೇಪರ್್ನೋರು. ಏನ್ ಸರ್ ಪೂಜೆ, ಇದಾ ಸತ್ಯನಾರಾಯಣ ಪೂಜೆ ಅಂತು ಯಡೂರಪ್ಪ. ಮತ್ತೆ ಹಂಗೆ ಕಾಣ್ತಾ ಇಲ್ಲ. ರಕ್ತ ಎಲ್ಲಾ ಐತೆ. ಇದು ಒಂದು ತರಾ ಡಿಫರೆಂಟ್ ಸತ್ಯನಾರಾಯಣ ಪೂಜೆ. ಏ ಅದು ರಕ್ತ ಅಲ್ಲಾ. ಅದು ಕುಂಕುಮ ಅಂತು ಯಡೂರಪ್ಪನ ಮಗ ವಿಜೇಂದ್ರ. ಇದನ್ನೆಲ್ಲಾ ಟಿವ್ಯಾಗೆ ನೋಡ್ತಿದ್ದ ದೇವೆಗೌಡ ಅಂಡ್ ಫ್ಯಾಮಿಲಿ ಕೇರಳಕ್ಕೆ ಹೋಗವ್ರೆ ಅಂತ ಸುದ್ದಿ ಬಂತು. ಸಿಟ್ನಾಗೆ ಎತ್ರಲಾ ನಿಮ್ಮ ಗಂಟು ಮೂಟೆ ಅಂದ್ರು ಯಡೂರಪ್ಪ. ಆಮ್ಯಾಕೆ ಕೇಸವ ಕರಪಾದಾಗೆ ಸಾನೇ ಬಯ್ದರಂತೆ. ನಿಂಗೆಲ್ಲಾ ಯಾಕಲಾಬೇಕು ಅಂತಾ. ಸರಿ ನಮಗೆ ಬಸ್ ಚಾರ್ಜು ಇಲ್ಲಾ ಕಲಾ. ಮಗಾ ಮಂತ್ರವಾದಿಗೆ ಆಮ್ಯಾಕೆ ಮನಿ ಆರ್ಡರ್ ಮಾಡ್ತೀನಿ ಅಂದ್ ಮ್ಯಾಕೆ ಹೋದ ಕಲಾ ಅಂದ. ಮನೆಗೆ ಹೋಗಿ ನೋಡಿದ್ರೆ ಗೌಡಪ್ಪನ ಎರಡು ಕುರಿ ಸತ್ತಿತ್ತು. ಮಂತ್ರವಾದಿ ಇವರ ಮನೇಗೇನೆ ಮಾಟ ಮಾಡಿಸಿ ಹೋಗಿದ್ದ. ಎಲ್ಲಾ ಯಡೂರಪ್ಪನ ಮಹಿಮೆ ಅಂತಾನೆ ಗೌಡಪ್ಪ.
Comments
ಉ: ಯಡಿಯೂರಪ್ಪಂಗೆ ಮಾಟ ಮಾಡಿಸಿದ್ದಾರೆ
In reply to ಉ: ಯಡಿಯೂರಪ್ಪಂಗೆ ಮಾಟ ಮಾಡಿಸಿದ್ದಾರೆ by gopinatha
ಉ: ಯಡಿಯೂರಪ್ಪಂಗೆ ಮಾಟ ಮಾಡಿಸಿದ್ದಾರೆ
ಉ: ಯಡಿಯೂರಪ್ಪಂಗೆ ಮಾಟ ಮಾಡಿಸಿದ್ದಾರೆ