ಮೂಢ ಉವಾಚ -35

ಮೂಢ ಉವಾಚ -35

ಮದಭರಿತ ಮನುಜನ ಪರಿಯೆಂತು ನೋಡು|
ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು||
ಮೇಲರಿಮೆಯಾ ಭೂತ ಅಡರಿಕೊಂಡಿಹುದು|
ಭೂತಕಾಟವೇ ಬೇಡ ದೂರವಿರು ಮೂಢ||

ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು|
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು||
ಮೂಲೋಕದೊಡೆಯರೇ ತಾವೆಂದು ಭಾವಿಸುತ|
ಮದೋನ್ಮತ್ತರೋಲಾಡುವರು ಮೂಢ||


***************


-ಕವಿನಾಗರಾಜ್.

Rating
No votes yet

Comments