ಕೊಂಕಣಿ ಭಾಷಾ ಮಾಲಿಕೆ ೧
ಗೆಳೆಯ ರವೀಶ್ ಬರೆದ ಬ್ಲಾಗ್ ನೋಡಿ ನಾನು ಯಾಕೆ ಕೊಂಕಣಿ ತರಬೇತಿ ಶುರುಮಾಡಬಾರದು ಎಂದು ಕೊಂಡೆ.ಅದಕ್ಕಾಗಿಯೇ ನಾನು ಕೊಂಕಣಿ ಭಾಷೆಗೆ ಅಳಿಲು ಸೇವೆ ನೀಡುವ ಸಲುವಾಗಿ ಪ್ರಯತ್ನ ಆರಂಬಿಸಿರುವೆ.
"ಕೊಂಕಣಿ " ಇದರಲ್ಲಿ ನಾನಾ ಬಗೆಗಳಿವೆ, ಮಂಗಳೂರಿನಲ್ಲಿ ೪-೫ ಬಗೆಗಿನ ಕೊಂಕಣಿ ಬಳಕೆಯಲ್ಲಿದೆ, GSB ಯವರು ಮಾತಾಡುವ ಕೊಂಕಣಿ, ಕ್ರಿಶನ್ ಕೊಂಕಣಿ ,RSB ಕೊಂಕಣಿ, ಹೀಗೆ ಬೇರೆ ಬೇರೆ ಕೊಂಕಣಿ ಬಳಕೆ ಯಲ್ಲಿದೆ, ಎಲ್ಲ ಕೊಂಕಣಿ ಯ ಮೂಲ ಒಂದೇ ಆದರೆ ಕೆಲವು ಪದಗಳ ಬಳಕೆಯಲ್ಲಿ ಮತ್ತು ಮಾತಾಡುವ ಧಾಟಿಯಲ್ಲಿ ವ್ಯತ್ಯಾಸ ವಿದೆ. ನಾನು ಇಲ್ಲಿ ಹೇಳ ಹೊರಟಿರುವುದು GSB ಕೊಂಕಣಿ.
ಮೊದಲ ಕಂತಾಗಿ ದಿನಬಳಕೆಯ ಕೆಲವು ನಾಮ ಪದಗಳನ್ನು ಕಲಿಯುವ
ನಾನು - ಹಾಂವ್
ನೀನು - ತೂ
ನಾವು - ಅಮ್ಮಿ
ನೀವು - ತುಮ್ಮಿ
ನಮ್ಮ - ಅಮ್ಗೆಲೇ
ನಿಮ್ಮ - ತುಮ್ಗೆಲೇ
ಅಮ್ಮ - ಅಮ್ಮ
ಅಪ್ಪ - ಆನು (ಭಟ್ಕಲ್ ಸೈಡ್ ಅಲ್ಲಿ ಬಪ್ಪ ಅಂಥಲು ಸಂಭೋದಿಸುತ್ತಾರೆ )
ಅಜ್ಜಿ - ಬಪಮ (ಅಪ್ಪನ ಅಮ್ಮ , ಅನಾಮ ಅಂಥಲು ಕರೆಯುತ್ತಾರೆ ), ಮವಮ (ಅಮ್ಮನ ಅಮ್ಮ , ಅಮಮ ಅಂಥಲು ಸಂಭೋದಿಸುತ್ತಾರೆ)
ಅಜ್ಜ - ಅಜ್ಜೋ
ಅಣ್ಣ - ಅಣ್ಣ
ತಮ್ಮ - ಭಾವು
ಅಕ್ಕ - ಅಕ್ಕ
ತಂಗಿ - ಭೈಣಿ
ಮಾಮ - ಮಾಮು
ಅತ್ತೆ - ಮಾಂಯಿ
ಸೋದರತ್ತೆ - ಅಕ್ಕ
ದೊಡ್ಡಪ್ಪ - ಮಾಂತು
ದೊಡ್ಡಮ್ಮ - ಮಾವ್
ಚಿಕ್ಕಪ್ಪ - ಬಪ್ಪಾ
ಚಿಕ್ಕಮ್ಮ - ಮೌಸಿ (ಅಮ್ಮನ ತಂಗಿ),ಪಚ್ಚಿ (ಚಿಕ್ಕಪ್ಪನ ಹೆಂಡತಿ )
ಗಂಡ - ಬಮ್ಮುಣು
ಹೆಂಡತಿ - ಬಾಯಿಲ್
ಮಗು -ಚೆರ್ಡು
ಗಂಡು - ಚೆಲ್ಲೋ
ಹೆಣ್ಣು - ಚೆಲ್ಲಿ
ಮಕ್ಕಳು - ಚೆರ್ಡುನವ್
ಮಮ್ಮಕ್ಕಳು - ನತ್ರ
ಮರಿಮಕ್ಕಳು -ಪೊಣ್ ತ್ರ
ಸೊಸೆ- ಸೂನ್
ಅಳಿಯ - ಜವೈ
ಭಾವ - ಭಾವಜಿ
ನಾದಿನಿ - ನನಂದ
ಅತ್ತಿಗೆ - ಭಾವಜ್ ,ಜಾವ್
ಗೆಳೆಯ - ಮಿತ್ರು
ಯಜಮಾನ - ಯಜಮಾನು
ಕೆಲಸದವ - ಕಮಚೋ
ಅತಿಥಿ - ಸೋಯ್ರೆ
ಪುರೋಹಿತರು - ಭಟ್ಮಾಮು
ನಿಮ್ಮ ಪ್ರೋತ್ಸಾಹ ಮತ್ತು ನಿಮಗೆ ಈ ಭಾಷೆಯ ಬಗ್ಗೆ ಆಸಕ್ತಿ ಇದ್ದರೆ ಬರೆಯುತ್ತಾ ಇರುತ್ತೇನೆ.
ನಿಮ್ಮ
ಕಾಮತ್ ಕುಂಬ್ಳೆ
Comments
ಉ: ಕೊಂಕಣಿ ಭಾಷಾ ಮಾಲಿಕೆ ೧
In reply to ಉ: ಕೊಂಕಣಿ ಭಾಷಾ ಮಾಲಿಕೆ ೧ by Harish Athreya
ಉ: ಕೊಂಕಣಿ ಭಾಷಾ ಮಾಲಿಕೆ ೧
ಉ: ಕೊಂಕಣಿ ಭಾಷಾ ಮಾಲಿಕೆ ೧
In reply to ಉ: ಕೊಂಕಣಿ ಭಾಷಾ ಮಾಲಿಕೆ ೧ by asuhegde
ಉ: ಕೊಂಕಣಿ ಭಾಷಾ ಮಾಲಿಕೆ ೧
In reply to ಉ: ಕೊಂಕಣಿ ಭಾಷಾ ಮಾಲಿಕೆ ೧ by kamath_kumble
ಉ: ಕೊಂಕಣಿ ಭಾಷಾ ಮಾಲಿಕೆ ೧
ಉ: ಕೊಂಕಣಿ ಭಾಷಾ ಮಾಲಿಕೆ ೧
In reply to ಉ: ಕೊಂಕಣಿ ಭಾಷಾ ಮಾಲಿಕೆ ೧ by shaani
ಉ: ಕೊಂಕಣಿ ಭಾಷಾ ಮಾಲಿಕೆ ೧