ವ್ಯಾಯಾಮ್ ಹರಾಮ್ ಹೈ
"ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು." ಇದು ರಾಮನ ಕತೆಯಂತೆ ಕಟ್ಟುಮಾತು.ನಿದ್ರೆ ಬರದ ಮುನಿಗಳು ಬರೆದುದು. ಕಂಪ್ಯೂಟರ್,ಟಿ.ವಿ.ಇಲ್ಲದ ಆ ಕಾಲದಲ್ಲಿ ಜನ ಬೇಗನೆ ಮಲಗುತ್ತಿದ್ದರು.ಸಹಜವಾಗಿ ಬೇಗನೆ ಏಳುತ್ತಿದ್ದರು.ಎದ್ದ ಮೇಲೆ ಮಾಡಲು ಬೇರೇನೂ ಕೆಲಸವಿಲ್ಲ,ವ್ಯಾಯಾಮ,ಧ್ಯಾನ,ಪೂಜೆ ಇತ್ಯಾದಿ ಮಾಡುತ್ತಾ ಬೆಳಗಾಗುವುದನ್ನು ಕಾಯುತ್ತಿದ್ದರು.ಪ್ರಾಣಿಪಕ್ಷಿಗಳೂ ಸಹ ಬೇಗನೆ ಏಳುವುದು.ಈ ಕಾಲದವರು ಸೋಮಾರಿಗಳು ಸಮಯ ಏಳಾಗದೇ ಏಳುವುದಿಲ್ಲ ಎನ್ನುತ್ತಾರೆ. ಅವು ಸಂಜೆ ಆರರ ಒಳಗೆ ಗೂಡು ಸೇರಿ ಮಲಗಿರುತ್ತವೆ. ರಾತ್ರಿ ನಾವು ಎಚ್ಚರವಿರುವ ೪-೫ಗಂಟೆಯನ್ನು ಬೆಳಗಿನದಕ್ಕೆ ಸೇರಿಸಿ ನಾವು ಒಂದು ಗಂಟೆ ಬೇಗನೆ ಎದ್ದಹಾಗೆ.ಪ್ರಾಣಿಪಕ್ಷಿಗಳೂ ಸಹ ಬೆಳಗೆದ್ದು ತಮ್ಮ ಕೆಲಸ ಸುರುಮಾಡುವುದು ಹೊರತು ವ್ಯಾಯಾಮ ಮಾಡಲು ಹೊರಡುವುದಿಲ್ಲ. ಮನುಷ್ಯಪ್ರಾಣಿ ಮಾತ್ರ ವ್ಯಾಯಾಮದ ಕಟ್ಟುಪಾಡು ವಿಧಿಸಿಕೊಂಡಿದ್ದಾನೆ.ವ್ಯಾಯಾಮವೇ ಮಾಡದ ಪ್ರಾಣಿಗಳು ಅಡ್ಡಾದಿಡ್ಡಿ ಬೆಳೆದು ರೋಗಿಷ್ಠವಾಗಿದೆಯೇ? ಹೀಗೆ ಹೇಳಿದ ಕೂಡಲೇ ಕೆಲವರು ವಾದಿಸುವರು-ಅವು ನ್ಯಾಚುರಲ್ ಫ಼ುಡ್ ತಿನ್ನುವುದು. ಅದೇ ನ್ಯಾಚುರಲ್ನೇ ಕ್ಲೀನ್ ಆಗಿ ತೊಳೆದು,ಸ್ವಲ್ಪ ಉಪ್ಪು ಖಾರ ಸೇರಿಸಿ ಬೇಯಿಸಿ ತಿನ್ನುವುದರಿಂದ ಆರ್ಓಗ್ಯ ಹೇಗೆ ಕೆಡುವುದು?
ವ್ಯಾಯಾಮ ಮಾಡಿ ಖಾಯಿಲೆ ಬಾರದ ಒಬ್ಬನನ್ನು ತೋರಿಸಿ ವ್ಯಾಯಾಮ ಮಾಡದೇ ಆರೋಗ್ಯದಿಂದಿರುವ ಹತ್ತು ಮಂದಿಯನ್ನು ತೋರಿಸುವೆನು.
ಬಹಳಷ್ಟು ಜನ ರೋಗಿಗಳು,ಬೊಜ್ಜುಮೈಯವರು ಡಾಕ್ಟ್ರ ಆದೇಶದಂತೆ ವರ್ಷಾನುಗಟ್ಟಲೆ ಪಾರ್ಕ್ ಸುತ್ತುತ್ತಾರೆ.ಬೊಜ್ಜು ಇಳಿದದ್ದೂ ಇಲ್ಲಾ,ಡಾಕ್ಟ್ರ ಭೇಟಿ ಕಮ್ಮಿಯಾದ್ದೂ ಇಲ್ಲಾ,ಮಾತ್ರೆ ತಿನ್ನುವುದು ತಪ್ಪಲೂ ಇಲ್ಲಾ, ವ್ಯಾಯಾಮದಿಂದ ಏನು ಲಾಭವಾಯಿತು?
ಈ ಜಾಗಿಂಗ್ ಮಾಡುವುದು ಸುಲಭವಿದೆಯೇ? ರಸ್ತೆಯಲ್ಲಿ ನಾಯಿಗಳ ಕಾಟ.ರಸ್ತೆ ಮಧ್ಯದಲ್ಲಿ ಹೋದರೆ ವಾಹನಗಳ ಕಾಟ.ರಸ್ತೆ ಬದಿಯಲ್ಲಿ ಹೋದರೆ ನಾಯಿಯಿಂದಾದ ಗಲೀಜು ತುಳಿದು ಅರ್ಧಕ್ಕೆ ಜಾಗಿಂಗ್ ಕ್ಯಾನ್ಸಲ್. ಪಾರ್ಕ್ನಲ್ಲಿ ಹಳೇ ಪರಿಚಯಸ್ಥರ,ಹೊಸದಾಗಿ ಮಾತಿಗೆಳೆಯುವವರ ಕಾಟ.
ಮನೆಯಲ್ಲಿ ವ್ಯಾಯಾಮ ಮಾಡುವವರದ್ದು ಇನ್ನೊಂದು ರೀತಿಯ ತಾಪತ್ರಯ. ಲೈಟ್ ಹಾಕಿದರೆ ನಿದ್ರಿಸುವವರ ಕಿರಿಕಿರಿ,ಲೈಟ್ ಹಾಕದೇ ಮಾಡಿದರೆ ಮಂಚ,ಬಾಗಿಲು ತಾಗಿ ಏಟಾಗುವುದು.ಟ್ಯಾರೆಸ್ ಗೆ ಹೋಗಿ ಮಾಡುವವರಿಗೆ 'ಪಕ್ಕದ ಮನೆಯವಳು ಬಟ್ಟೆ ಒಗೆಯುವಾಗ ನಿಮ್ಮದೇನ್ರೀ ಟ್ಯಾರೇಸ್ ನಲ್ಲಿ ಸುತ್ತಾಟ ' ಎಂಬ ಮನೆಯಾಕೆಯ ಕೊಂಕು.ಎಲ್ಲಾ ರೀತಿಯಿಂದಲೂ ತೊಂದರೆ.ಅದಕ್ಕೇ ಎನೂ ಉಪಯೋಗವಿಲ್ಲದ ವ್ಯಾಯಾಮ ಮಾಡಬೇಡಿ.
ಈ ವ್ಯಾಯಾಮ ಮಾಡುವವರನ್ನು ಗುರುತಿಸುವುದು ಬಹಳಸುಲಭ.ರಸ್ತೆಯಿಡೀ ವ್ಯಾಪಿಸಿದೆ ಎಂಬಂತೆ ಎದೆ ಉಬ್ಬಿಸಿ (ಕಾಲು ಮಾತ್ರ ಕೋಳಿಕಾಲಿನಂತೆ ಇರುತ್ತದೆ)ನಡೆಯುವಾತ -'ಜಿಮ್'ಗೆ ಹೋಗುವಾತ.ಹಣೆಯಲ್ಲಿ ಕುಂಕುಮ,ಎಣ್ಣೆ ಹಚ್ಚಿದ ಉದ್ದ ಕೂದಲು,ಜುಬ್ಬಾಧಾರಿ-'ಯೋಗಪಟು'.ಇವೆಲ್ಲಾ ಒಂದು ತರಹ ಆರ್ಟಿಫಿಷಿಯಲ್ ಕಳೆ.ಒಳ್ಳೆ ನಿದ್ರೆ ಮಾಡಿ ಎದ್ದು ಕೆಲಸಕ್ಕೆ ಆಸಕ್ತಿಯಿಂದ ಹೊರಟ ನಮ್ಮಂತಹವರಂತೆ ಇರುವುದಿಲ್ಲ.
ಶಾರುಕ್ ಖಾನ್ ನೋಡಿ, ಚೆನ್ನಾಗಿದ್ದ.ಅವನನ್ನ ಸಲ್ಮಾನ್ ಖಾನ್ ತರಹ ಮಾಡಲು ಹೋಗಿ, ಮೊನ್ನೆ ೨೦-೨೦ಕ್ರಿಕೆಟ್ನ ದಿನ ಮೈಕೆಲ್ ಜಾಕ್ಸನ್ ನ ಅವಳಿಯಂತೆ ಕಾಣುತಿದ್ದ.ಶೇಖರ್ ಸುಮನ್ ಹಾಡು ಹೇಳಲು ಬೆಳೆಸಿದ ಬಾಡಿ ಇಷ್ಟವಾಯಿತಾ?ಅದೇ ಅದ್ನಾನ್ ಸಾಮಿ ಆ ದೊಡ್ಡದೇಹ ಹೊತ್ತುಕೊಂಡು "ಲಿಫ಼್ಟ್ ಕರಾದೇ" ಅಂದಾಗ ಎಷ್ಟು ಖುಶಿ.ಅದೇ ಈಗಿನ ಅದ್ನಾನ್ ಸಾಮಿ ಹಾಡು ಯಾವುದು ಹೇಳಿ ನೋಡೋಣ?
ಅದಕ್ಕೇ ಹೇಳುವುದು- ನೀವು ಹೇಗಿದ್ದೀರಾ ಹಾಗೇ ಇರಿ.ಸುಖವಾಗಿ ತಿಂದುಂಡು ನಿದ್ರಿಸಿ,ನಿಮ್ಮ ನಿಮ್ಮ ಕೆಲಸಮಾಡಿ, ಉಳಿದ ಸಮಯದಲ್ಲಿ ಸಮಾಜಕ್ಕೇನಾದರು ಉಪಯೋಗವಾಗುವಂತಹ ಕೆಲಸ ಮಾಡಿ.ವ್ಯಾಯಾಮಕ್ಕೆ ಸಮಯ ವೇಷ್ಟ್ ಮಾಡಬೇಡಿ.
Comments
ಉ: ವ್ಯಾಯಾಮ್ ಹರಾಮ್ ಹೈ
In reply to ಉ: ವ್ಯಾಯಾಮ್ ಹರಾಮ್ ಹೈ by shreekant.mishrikoti
ಉ: ವ್ಯಾಯಾಮ್ ಹರಾಮ್ ಹೈ
In reply to ಉ: ವ್ಯಾಯಾಮ್ ಹರಾಮ್ ಹೈ by Ennares
ಉ: ವ್ಯಾಯಾಮ್ ಹರಾಮ್ ಹೈ
In reply to ಉ: ವ್ಯಾಯಾಮ್ ಹರಾಮ್ ಹೈ by shreekant.mishrikoti
ಉ: ವ್ಯಾಯಾಮ್ ಹರಾಮ್ ಹೈ
ಉ: ವ್ಯಾಯಾಮ್ ಹರಾಮ್ ಹೈ
In reply to ಉ: ವ್ಯಾಯಾಮ್ ಹರಾಮ್ ಹೈ by venkatb83
ಅಡ್ನಾಡಿ ಸಾಮಿ:)
>>ಈಗ ಲಿಫ್ಟ್ ಕೊಡಿ ಅಂದ್ರೂ ಅಡ್ಡ ಬಿದ್ರೂ ಕೇಳೋರು ದಿಕ್ಕಿಲ:)
:) :)
ಸಪ್ತಗಿರಿವಾಸಿಯವರೆ,
ನಿಮ್ಮ ಪ್ರತಿಕ್ರಿಯೆಯನ್ನು ಗಮನಿಸಿರಲಿಲ್ಲ. ಕ್ಷಮಿಸಿ. ಈವಾಗ ಅಬ್ದುಲ್ ಅವರ " ಈ ಬಾಡಿಬಿಲ್ಡರ್... http://sampada.net/blog/%E0%B2%88-%E0%B2%AC%E0%B2%BE%E0%B2%A1%E0%B2%BF-%E0%B2%AC%E0%B2%BF%E0%B2%B2%E0%B3%8D%E0%B2%A1%E0%B2%B0%E0%B3%8D-%E0%B2%97%E0%B3%86-%E0%B2%AC%E0%B2%B0%E0%B3%80-%E0%B3%AF%E0%B3%A9-%E0%B2%B5%E0%B2%B0%E0%B3%8D%E0%B2%B7-%E0%B2%95%E0%B2%A3%E0%B3%8D%E0%B2%B0%E0%B3%80/3-11-2012/38878 ."ಗೆ ಪ್ರತಿಕ್ರಿಯೆ ಬರೆಯಲು ನೋಡುವಾಗ ಗಮನಿಸಿದೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
-ಗಣೇಶ.