ಸೋತದ್ದು ಯಾರಿಂದ?

ಸೋತದ್ದು ಯಾರಿಂದ?

ಇಂದು ಕೊನೆಗೂ, ನೀ ಮೆಚ್ಚಿದ್ದ  
ಅಂಗಿಯ ದಾನ ಮಾಡಿದಾಗ
ನಿನ್ನ ನಾ ಗೆದ್ದೆನೇ ಅಥವಾ
ಬಂಜರು ಮನದಲ್ಲಿ
ಭಣಗುಟ್ಟುವ ನಿನ್ನ ಕನವರಿಕೆಗಳಿಗೆ
ಮಂಗಳ ಹಾಡಿದೆನೇ ?
ಅದರಲ್ಲಿ ಹುಟ್ಟಲಿರುವ ಹೊಸ
ಕನಸುಗಳಿಗೆ ನೀರೆರೆದೆನೇ?

ಕೊಡು ಕೊಳ್ಳುವುದರಿಂದ
ನೆನಪುಗಳು ಮರೆಯುವುದಾದರೆ
ಇನ್ನೂ ನಿನ್ನ ದನಿ ಕೇಳಿದಂತಾಗಿ
ಮನವು ವ್ಯಾಕುಲವಾಗುವುದೇಕೆ ?
ನೀ ಬರಲೇ ಬಾರದು
ಎಂದು ಗೊತ್ತಿರುವ ಮನಸ್ಸಿಗೂ
ವರ್ತಮಾನವನು ಕದಡುವ
ಭಂಡ ಧೈರ್ಯವೇಕೆ ?

ಸೋಲೊಪ್ಪದ ಮನಸ್ಸು
ಗೆಲ್ಲಲಾರದ ವಾಸ್ತವ
ನಿನ್ನ ಮರೆತೇ ಬಿಡುವೆನೆಂದು
ಹಟ ತೊಟ್ಟು ನಿನ್ನ ನೆನಪುಗಳ
ಉರಿಸುತ್ತಿರುವ ನಾನು
ಕೊನೆಗೂ ಗೆದ್ದೆನೋ ನಿನ್ನನ್ನು
ಸೋತೆನಾದರೆ
ಸೋತದ್ದು ಯಾರಿಂದ?

Rating
No votes yet

Comments