ಲಿನಕ್ಸಾಯಣ: ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

Submitted by omshivaprakash on Thu, 10/07/2010 - 06:54

 

ಮೈಕ್ರೋ ಸಾಫ್ಟ್ ನ ಲೈವ್ ಸ್ಪೇಸಸ್ ಉಪಯೋಗಿಸುತ್ತಿದ್ದೀರಾ? ಈ ಬ್ಲಾಗಿಂಗ್ ವ್ಯವಸ್ಥೆ ಇನ್ಮುಂದೆ ಇರೊದಿಲ್ಲ.. ಇವನ್ನೆಲ್ಲಾ ಮುಕ್ತತಂತ್ರಂಶವಾದ Automattic ನ WordPress ಗೆ ಸ್ಥಳಾಂತರ ಮಾಡಲಾಗುತ್ತಿದೆ. ತನ್ನ ೩೦ ಮಿಲಿಯನ್ ಬಳಕೆದಾರರನ್ನು ಮೈಕ್ರೋಸಾಪ್ಟ್ ವರ್ಡ್ ಪ್ರೆಸ್ ನ ತೆಕ್ಕೆಗೆ ಹಾಕುತ್ತಿದೆ. Automattic, ಮ್ಯಾಟ್ ಮುಲ್ಲನ್ವೆಗ್ ಎಂಬ ವರ್ಡ್ ಪ್ರೆಸ್ ನ ತಂತ್ರಜ್ಞನ ಕಂಪೆನಿಯಾಗಿದೆ.

 

ಇನ್ನಾರು ತಿಂಗಳಲ್ಲಿ ವಿಂಡೋಸ್ ಲೈವ್ ಸ್ಪೇಸ್ ಬಳಕೆದಾರರು ತಮ್ಮ ಬ್ಲಾಗ್ ಗಳನ್ನು ವರ್ಡ್ ಪ್ರೆಸ್ ಗೆ ಸ್ಥಳಾಂತರಿಸಿಕೊಳ್ಳಬೇಕಿದೆ. ವರ್ಡ್ ಪ್ರೆಸ್ ಇದಕ್ಕೆ ಸಹಕರಿಸಲು, ಲೈವ್ ಸ್ಪೇಸ್ ನ ತಂತ್ರಾಂಶಕ್ಕೆ ಸಣ್ಣ ಬದಲಾವಣೆ ಮಾಡಲಿದೆ. ಮೈಕ್ರೋಸಾಪ್ಟ್ ವರ್ಡ್ ಪ್ರೆಸ್ ನ ಉಪಯೋಗಗಳು, ಅದರ ಬಳಕೆ, ಸ್ಪ್ಯಾಮ್ ಸುರಕ್ಷತೆ ಇತ್ಯಾದಿಗಳ ಬಗ್ಗೆ ಉತ್ತಮ ಹೇಳಿಕೆಗಳನ್ನು ನೀಡಿದೆ. ತನ್ನದೇ ತಂತ್ರಾಂಶದ ಮೇಲೆ ಹಣ ಸುರಿದು ಅದನ್ನು ಬಲಪಡಿಸುವುದರ ಬದಲು, ಲಭ್ಯವಿರುವ ತಂತ್ರಾಂಶವನ್ನು ಅಳವಡಿಸಿಕೊಳ್ಳುವ ಮೂಲಕ ಹಣ ಉಳಿಸುವುದು ಹೇಗೆಂದು ಮೈಕ್ರೋಸಾಫ್ಟ್ ಕೂಡ ತಲೆಕೆಡಿಸಿಕೊಂಡಿರುವಂತಿದೆ.

 

ಕೊನೆ ಕೊಸರು: ಮೈಕ್ರೋಸಾಪ್ಟ್ ತನ್ನಲ್ಲಿ ೩೦ ಮಿಲಿಯನ್ ಬ್ಲಾಗಿಗರು ಲೈವ್ ಸ್ಪೇಸಸ್ ನಲ್ಲಿದ್ದಾರೆ ಎಂದಿದ್ದರೂ ಅದರ ಸಂಖ್ಯೆ ೩೦ ಸಾವಿರದ ಆಸು ಪಾಸಿನಲ್ಲಿದೆ ಎಂದು ಮತ್ತೊಂದು ಮೂಲ ಹೇಳಿದೆ. ಮಿಕ್ಕವೆಲ್ಲ ಉಪಯೋಗಿಸದೇ ಬಿಟ್ಟಿರುವ ಬ್ಲಾಗ್ ಗಳೆಂದು ಮೂಲ ಹೇಳುತ್ತದೆ. ಸಂಖ್ಯೆಗಳನ್ನು ಹೆಚ್ಚು ಕಡಿಮೆ ಮಾಡಿ ಹೇಳುವುದು ದೊಡ್ಡಕಂಪೆನಿಗಳಿಗೆ ಸುಲಭ ಅನ್ನಿಸುತ್ತೆ ಅಲ್ವಾ?

ಬ್ಲಾಗ್ ವರ್ಗಗಳು

Comments