ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)
ಮೊಟ್ಟ ಮೊದಲು ಅಕ್ಷರಮಾಲೆಯಿಂದ ಸುರು ಮಾಡೋಣ ! ( ಸುರು=ಶುರು , ಪ್ರಾರಂಭ )
ಅಕ್ಷರಮಾಲೆ ಹೀಗಿದೆ ..... ಅ,ಆ,ಇ,ಈ .....
ಅದರಲ್ಲೇನು ವಿಶೇಷ ಅಂದ್ರಾ ....
ತಡೀರಿ , ಹೇಳ್ತೀನಿ ....
ನಾವು ’ಅ’ ಅನ್ನು ’ಅ’ ಎಂದು ಉಚ್ಚಾರ ಮಾಡುತ್ತೇವೆ .
ಅದರಲ್ಲೇನು ? ಎಲ್ರೂ ಹಾಗೇ ಮಾಡೋದು ಅಂತೀರಾ ?
ಇದೊಳ್ಳೆ ತಮಾಷೆ ... ( ನಾನು 'ಟ'ಗೆ 'ಟ' ಅನ್ನೋದು --> http://sampada.net/blog/shreekant_mishrikoti/15/02/2007/3192 ನೋಡಿ)
ನಾನು ಹೇಳ್ತಾ ಇರೋದು ಏನಂದ್ರೆ ...
ಈಗ ಒಂದು ಶಬ್ದವನ್ನು ತೆಗೆದುಕೊಳ್ಳಿ - ಅರಸ ... ಇದನ್ನು ಉಚ್ಚರಿಸೋವಾಗ ಈ ಶಬ್ದದ ಒಳಗಡೆ ’ಅ’ ಅನ್ನು ಹೇಗೆ ಉಚ್ಚರಿಸ್ತೇವೋ ಹಾಗೆ ಒಂಟಿ ಅಕ್ಷರ ’ಅ’ ಅನ್ನೂ ಹಾಗೇ ಉಚ್ಚರಿಸೋದು .....
ಈಗಲೂ ನಿಮಗೆ ತಿಳಿಯದಿದ್ದರೆ ಬೆಂಗಳೂರು ಕಡೆಗಳಲ್ಲಿ ಅ , ಆ , ಇ , ಈ ಅನ್ನು ಹೇಗೆ ಉಚ್ಚರಿಸ್ತಾರೆ ಗಮನಿಸಿ ..ಅಲ್ಲಿ ಆ, ಆಆ , ಇ , ಈ ಅಂತಾರೆ .....( ಉಳಿದ ಕಡೆ ಹೇಗೋ ? ನಾನು ಗಮನಿಸಿಲ್ಲ)
ಇದೇ ರೀತಿ ಕ, ಖ , ಗ, ಘ ಇತ್ಯಾದಿ ವ್ಯಂಜನಗಳನ್ನು ಅಕಾರಾಂತವಾಗೇ ಹ್ರಸ್ವವಾಗಿ ಉಚ್ಚರಿಸ್ತೀವಿ .
ಮುಂದಿನ ಕಂತಿನಲ್ಲಿ ... ಅ , ಆ ನಡುವಿನ ಇನ್ನೊಂದು ಸ್ವರ ? ಕುರಿತು ತಿಳಿಸುವೆ .
Comments
ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)
In reply to ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) by savithru
ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)