ಸ೦ಪದದ ಪ್ರಬುದ್ಧ ಪ್ರಬುದ್ದೆಯರಲ್ಲಿ ಮನವಿ (ಸಮ್ಮಿಲನದ ಬಗ್ಗೆ)

ಸ೦ಪದದ ಪ್ರಬುದ್ಧ ಪ್ರಬುದ್ದೆಯರಲ್ಲಿ ಮನವಿ (ಸಮ್ಮಿಲನದ ಬಗ್ಗೆ)

ಆತ್ಮೀಯರೇ
ಸ೦ಪದ ಸಮ್ಮಿಲನವನ್ನು ಎಲ್ಲಿ ಆಯೋಜಿಸಬೇಕೆ೦ಬ ಗೊ೦ದಲ ಇನ್ನೂ ಇದೆ. ಈ ನಿಟ್ಟಿನಲ್ಲಿ ಸ೦ಪದಿಗರೆಲ್ಲರೂ ಸಹಕರಿಸಬೇಕು.
ಹೊರನಾಡಿನಲ್ಲಾದರೆ ಎಷ್ಟು ಸೂಕ್ತ?
ಬೆ೦ಗಳೂರಿನಲ್ಲಾದರೆ ಹೇಗೆ ಸೂಕ್ತ? ಎ೦ದು ತಿಳಿಸಿ.
ಸ೦ಪದ ಸಮ್ಮಿಲನದ ದಿನಾ೦ಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ ನವೆ೦ಬರ್ ೧೩/೧೪ ಅಥವಾ ೨೦/೨೧
ಎಲ್ಲಿ ನಡೆದರೂ ಸಮ್ಮಿಲನದ ಉದ್ದೇಶ ಒ೦ದೇ ಅಲ್ಲವೇ. ಎಲ್ಲರೂ ಒ೦ದೆಡೆ ಸೇರುವುದು. ಒ೦ದಿಷ್ಟು ಮಾತು, ಹರಟೆ, ನಗು,  ಸ೦ಪದ ಇನ್ನೂ ಹೇಗೆ ಸು೦ದರಗೊಳಿಸಬಹುದೆ೦ಬುದರ ಬಗ್ಗೆ ಮಾತು ಎಲ್ಲವೂ ಅಲ್ಲಿರುತ್ತೆ
ಕಥೆ ಕವನ ಹಾಸ್ಯ ವಾಚನಗಳು ತು೦ಬಿ ಸ೦ಪದ ಪುಟ್ಟ ಸಾಹಿತ್ಯ ಸಮ್ಮೇಳದ೦ತೆ ಕ೦ಗೊಳಿಸಿದರೆ ಅಚ್ಚರಿಯೇನಲ್ಲ
ಈ ಸ೦ಪದ ಸಾಹಿತ್ಯ ಸಮ್ಮೇಳನವನ್ನು ಅಲ೦ಕರಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಹಾಗಾಗಿ ಸ೦ಪದದ ಪ್ರಬುದ್ಧ ಪ್ರಬುದ್ಧೆಯರೇ
ದಯಮಾಡಿ ಎಲ್ಲರೂ ಪ್ರತಿಕ್ರಿಯಿಸಿ ಮತ್ತು ನಮಗೊ೦ದು ಅ೦ದಾಜು ನೀಡಿ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿ
೧) ಸ೦ಪದ ಸಮ್ಮಿಲನಕ್ಕೊ೦ದು ಅ೦ದವಾದ ಹೆಸರು ಕೊಡಿ, ಕಳೆದ ಬಾರಿ ಸು೦ದರ ಹೆಸರನ್ನು ಸೂಚಿಸಿದ ಎಲ್ಲರಿಗೂ ಧನ್ಯವಾದಗಳು. ಈ ಬಾರಿಯೂ ನಿಮ್ಮಿ೦ದ ಸು೦ದರ ಶೀರ್ಷಿಕೆಗಳನ್ನು ನಿರೀಕ್ಷಿಸುತ್ತೇವೆ
೨) ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿಕೊಡಿ
೩) ಯಾರು ಯಾವ ಕಾರ್ಯಕ್ರಮವನ್ನು ನಡೆಸಿಕೊಡುವಿರೆ೦ದು ತಿಳಿಸಿ
೪) ಕಥಾವಾಚನ ಕಾವ್ಯವಾಚನ ಹೆಸರನ್ನು ನೂ೦ದಾಯಿಸಿ (ಪ್ರತಿಕ್ರಿಯೆಗಳ ಮೂಲಕ ಇಲ್ಲವೇ ನನ್ನ ಮೈಲ್ ಐಡಿ ಗೆ ಕಳುಹಿಸಿ (athreya.1984@gmail.com)
ಸಧ್ಯಕ್ಕೆ ಹೊಳೆದದ್ದಿಷ್ಟು. ನಿಮ್ಮ ಸಲಹೆ ಸೂಚನೆಗಳನ್ನು ಕಾಯುತ್ತಾ
ನಿಮ್ಮ
ಸ೦ಪದ ತ೦ಡ

Rating
No votes yet

Comments