ನರ್ಸಮ್ಮನ ಸಿಡಿಯ ನಕಲು ಇನ್ನೂ ಇದೆ ಆತುರ ಬೇಡ!

ನರ್ಸಮ್ಮನ ಸಿಡಿಯ ನಕಲು ಇನ್ನೂ ಇದೆ ಆತುರ ಬೇಡ!

 

ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾ
ರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾ

ರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತು
ಯಡ್ಡಿ ಹೆಚ್ಚೇನೂ ಹೇಳಿರಲಿಕ್ಕಿಲ್ಲ ಹೇಳಿರಬಹುದು ಇಲ್ಲಿರುವ ಇದಿಷ್ಟೇ ಮಾತು

ನರ್ಸಮ್ಮ ಐದುಕೋಟಿ ಹೊತ್ಕೊಂಡು ಹೋಗಿದ್ದು ಸತ್ಯವೇ ಕಣೋ ಮೂಢ
ಆದ್ರೆ ಆಕೆ ಕೊಟ್ಟು ಹೋದ ಸಿಡಿಯ ನಕಲು ಇನ್ನೂ ನನ್ನಲ್ಲಿದೆ ಆತುರ ಬೇಡ

****

ಕುಮಾರ ಕಳೆದ ಬಾರಿ ಮೋಸ ಮಾಡಿದ್ದು ಬರೀ ಯಡ್ಡಿಗೆ ಮತ್ತು ಭಾಜಪಕ್ಕೆ
ಇಂದು ಹಾಗಲ್ಲ ಇಡೀ ರಾಜ್ಯಕ್ಕೇ ದ್ರೋಹ ಬಗೆದು ಪಡಬೇಕಾಗಿದೆ ನಾಚಿಕೆ

ತಮ್ಮ ಪಾತ್ರವೇನೂ ಇಲ್ಲ ಎನ್ನುತ್ತಲೇ ಗೋವಾಕ್ಕೆ ತೆರಳಿದನಾದರೂ ಏಕೆ
ಭಿನ್ನರ ರಕ್ಷಣೆಗೆ ಹೋಗುವೆನೆಂದವನು ಜೊತೆಗೆ ಪೋಲೀಸರ ಒಯ್ದಿಲ್ಲ ಏಕೆ

ಹದಿಮೂರು ಶಾಸಕರ ರಕ್ಷಣೆ ಓರ್ವನೇ ಮಾಡಲು ಈತನೇನು ದಾದಾನೇ
ಗೋವಾ ಪೋಲೀಸರಿಗೆ ಕರೆ ಮಾಡಿ ಹೇಳಿದ್ದರೆ ಸಿಗ್ತಿತ್ತು ರಕ್ಷಣೆ ತಂತಾನೇ

****

ಸೋನಿಯಾ ಸಿದ್ದನ ಕೇಳಿದಳು "ಓಹ್ ಆರ್ ಯೂ ಸಿದ್ಧ?" ಎಂದು ದಿಲ್ಲಿಯಲ್ಲಿ
"ಹೌದು ನಾನು ಸಿದ್ಧ, ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿಯಾಗಲು ಇಲ್ಲಿ"

ಮುಖಕ್ಕೆ ಮಂಗಳಾರತಿ ಮಾಡಿ ಹೊರಗಟ್ಟಿದ್ದಾಳೆ ಸೋನಿಯಾ "ಹೋಗು
ಒಂದಾದರೂ ಕ್ಷೇತ್ರದಲ್ಲಿ ನಮ್ಮವರ ಗೆಲ್ಲಿಸಿ ಬಾ ಆಲಿಸುತ್ತೇನೆ ನಿನ್ನ ಕೂಗು

ವಿರೋಧದ ನಡುವೆಯೂ ವಿರೋಧಪಕ್ಷದ ನಾಯಕನ ಪಟ್ಟ ನೀಡಿದ್ದೇ ಹೆಚ್ಚು
ನಿಜಕ್ಕೂ ಹೇಳುತ್ತೇನೆ ನನಗೆ ಕರ್ನಾಟಕದಲ್ಲಿ ಆಸ್ಕರ್ ಮಾತ್ರ ಅಚ್ಚುಮೆಚ್ಚು"

****
ಆತ್ರಾಡಿ ಸುರೇಶ ಹೆಗ್ಡೆ




Rating
No votes yet

Comments