ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು
ಪುರಂದರದಾಸರು ಮತ್ತು ಜಗನ್ನಾಥದಾಸರ ಬಹುತೇಕ ಕೃತಿಗಳನ್ನು ಹರಿದಾಸಸಂಪದ ( http://haridasa.sampada.net )ಕ್ಕಾಗಿ ಕುಟ್ಟಿ ಮುಗಿಸಿದ್ದನ್ನು ಈ ಹಿಂದೆ ಹೇಳಿಕೊಂಡಿದ್ದೇನೆ .
ಈಗ ಮಹಿಪತಿದಾಸರ ಬಹುತೇಕ ಕೃತಿಗಳೂ ಅಲ್ಲಿ ಈಗ ಸಿಗುತ್ತವೆ.
ಈ ಮಹೀಪತಿದಾಸರ ರಚನೆಗಳಲ್ಲಿ ಪ್ರಾದೇಶಿಕತೆಯನ್ನು ಸ್ವಲ್ಪ ಮಟ್ಟಿಗೆ ಗಮನಿಸಬಹುದು. 'ಪಲ್ಲವಿ' ಬದಲಾಗಿ ಅನೇಕ ಕಡೆ 'ಧ್ರುವ' ಎಂದು ಬಳಸಿದ್ದನ್ನು ನೋಡಿದೆ. 'ಧ್ರುವ' ನನಗೆ ಹೊಸತು. ಅದನ್ನು ಪಲ್ಲವಿ ಅಂತ ಬದಲಿಸಲೇ ಅಂತ ಶ್ರೀ ಹಂಸಾನಂದಿ ಅವರನ್ನು ಕೇಳಿದಾಗ ಎರಡೂ ಒಂದೇ ಅಲ್ಲ , ಅವೆರಡಕ್ಕೂ ಸೂಕ್ಷ್ಮ ವ್ಯತ್ಯಾಸ ಇದೆ , ಮೂಲವನ್ನು ಬದಲಿಸಬೇಡಿ ಅಂತ ದಾರಿತೋರಿದರು. ಆ ನಂತರ ಮೂಲದಲ್ಲಿದ್ದಂತೆಯೇ ಕೀಲಿಸಿದ್ದೇನೆ.
ಈ ಮಹಿಪತಿದಾಸರು ಯಾರು?
ಮಹಿಪತಿದಾಸರು ಬಾಗಲಕೋಟೆಯವರು . ೧೬ ನೇ ಶತಮಾನದವರು. ಶ್ರೇಷ್ಠಹರಿದಾಸರಷ್ಟೇ ಅಲ್ಲ, ಒಳ್ಳೇ ಅನುಭಾವಿಗಳು , ಪರಮಯೋಗಿಗಳು , ನಿಸ್ಸೀಮತ್ಯಾಗಿಗಳು. ಹಿರಿಯ ಪಾರಮಾರ್ಥಿಕಕವಿಗಳಲ್ಲಿ ಒಬ್ಬರಾಗಿ ಅವರನ್ನು ಪರಿಗಣಿಸಲಾಗಿದೆ. ಗುರುದೇವ ಡಾ||ರಾನಡೆಯವರು "Shri Mahipati is one of the greatest mystics of Karnatak, nay of the world' ಎಂದು ಉದ್ಗರಿಸಿದ್ದಾರಂತೆ.
Comments
ಉ: ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು
ಉ: ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು
ಉ: ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು
ಉ: ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು
ಉ: ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು