ದೋಣಿಯೊಳಗೆ ನೀನು
ಚಿತ್ರ : ಉಯ್ಯಾಲೆ
ರಚನೆ : ಆರ್. ಎನ್. ಜಯಗೋಪಾಲ್
ಸಂಗೀತ : ವಿಜಯ ಭಾಸ್ಕರ್
ಗಾಯಕಿ : ಪಿ. ಸುಶೀಲ
ದೋಣಿಯೊಳಗೆ ನೀನು ಕರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನು?
ಬೀಸುವ ತಂಗಾಳಿಯು ತಂಪೆರೆಯುವ ಬದಲು
ದೋಣಿಯ ಬಹುದೂರಕೆ ಕರೆದೊಯ್ಯುತಿರುವುದು
ಇರುಳಿನೊಲು ತೋರುತಿದೆ ಈ ನಡುಹಗಲು
ಕಾಮನಬಿಲ್ಲಿಹುದು ನೋಡ ದೂರ ಗಗನದೆ
ಕಣ್ಣಲಿ ಅದ ನೋಡಬಹುದು, ಹಿಡಿಯಲಾಗದು
ನನ್ನೆದೆಯ ಭಾವನೆಯು ಮುಗಿಯದ ಹಾಡು
ತುಟಿಗೂ ತುತ್ತಿಗೂ ನಡುವೆ ಎನಿತು ಅಂತರ
ನನಗೂ ನಿನಗೂ ನಡುವಿನಲ್ಲಿ ಕಡಲ ಅಂತರ
ನೆಮ್ಮದಿಯು ಈ ಮನಕೆ ಸಾವಿನಂತರ
ಇವತ್ತು ನಾನು ನೋಡಿದ ಚಲನಚಿತ್ರ. ಇದರ ವಿಮರ್ಶ ಮತ್ತೊಂದು ದಿವಸ. ಈ ಹಾಡು ಬಹಳ ಇಷ್ಟವಾಯಿತು. ಸಾಹಿತ್ಯ ನೆಟ್ ನಲ್ಲಿ ಹುಡುಕಿ ಹಾಕಿದ್ದೇನೆ. ಸಂಪದದ ಓದುಗರಿಗಾಗಿ :-)
Rating
Comments
ಉ: ದೋಣಿಯೊಳಗೆ ನೀನು
In reply to ಉ: ದೋಣಿಯೊಳಗೆ ನೀನು by gopinatha
ಉ: ದೋಣಿಯೊಳಗೆ ನೀನು
ಉ: ದೋಣಿಯೊಳಗೆ ನೀನು
In reply to ಉ: ದೋಣಿಯೊಳಗೆ ನೀನು by kpbolumbu
ಉ: ದೋಣಿಯೊಳಗೆ ನೀನು