ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
ನಿನ್ನೆ ಆಫೀಸಿನಿಂದ ಹೋಗಬೇಕಾದರೆ ಚೂರು ತಡವಾಗಿತ್ತು, ಮನೆಗೆ ತಲುಪುತಿದ್ದಂದೆ ನಿನ್ನೆ ನಡೆದ ಮ್ಯಾಚ್ ನ ಹಯಿಲೈಟ್ ನೋಡುತ್ತಾ ಕುಳಿತೆ ರೂಂಮೇಟ್ ನೊಂದಿಗೆ, ಅದು ಮುಗಿಯುತಿದ್ದಂತೆ ಯಾವ ಕಾರ್ಯಕ್ರಮ ನೋಡುವುದು ..? ಎಂಬ ಪ್ರಶ್ನೆ, ಕರ್ನಾಟಕದ ರಾಜಕೀಯ ದೊಂಬರಾಟ ನೋಡುವ ಎಂದು ಕನ್ನಡ ಚಾನೆಲ್ ಹಾಕಿದರೆ ರೂಂ ನಲ್ಲಿರುವ ಇಬ್ಬರು ಕನ್ನಡಿಗರಲ್ಲ, ಇಂಗ್ಲಿಷ್ ನ್ಯೂಸ್ ಚಾನೆಲ್ ಹಾಕುವ ಎಂದರೆ "ನೀನು ಕೇರಳದವ ,ಈಗ ಕಾರ್ಯ ನಿರ್ವಹಿಸುತ್ತಿರುವಿ ಆಂದ್ರದಲ್ಲಿ ಮತ್ತೇಕೆ ಕರ್ನಾಟಕದ ನ್ಯೂಸ್ ನೋಡ್ತೀಯ ..? "ಎಂಬ ಮಾತು ಕೇಳಬೇಕಾಗುತ್ತದೆ ಎಂದು ಸೀಧಾ ಹಿಂದಿ ಸಿನೆಮಾ ಚಾನೆಲ್ ಲಿಸ್ಟ್ ಗೆ ನಂಬರ್ ಹಾಕಿದೆ.ಬರೋಬರ್ರಿ ಹಿಂದಿ ಸಿನೆಮಾದ ೬-೭ ಚಾನೆಲ್ ಮತ್ತು ಇಂಗ್ಲಿಷ್ ನ ೬-೭ ಚಾನೆಲ್ ಗೆ ರಿಮೋಟ್ ಒತ್ತಿದರೂ ನಮ್ಮೆಲರಿಗೂ ಸೂಟ್ ಆಗುವ ಯಾವುದೂ ಸಿನೆಮಾ ಬರುತ್ತಿರಲಿಲ್ಲ.ಹೇಳಲಿಕ್ಕೆ ೧೦-೧೫ ಹಿಂದಿ ಮನೋರಂಜನಾ ಚಾನೆಲ್ ಗಳಿವೆ ಆದರೆ ಅಲ್ಲಿ ಎಲ್ಲವೂ "ಚಾಚ್ ಭಿ ಕಭಿ ಧಾಹಿ ತಿ ..."ಮಾದರಿಯ ಧಾರಾವಾಹಿಗಳೇ. ಮನೆಯಲ್ಲಿರುವ ಹೆಂಗಸರಿಗೆ ಯಾಕೆ ಇಂಥ ಧಾರಾವಾಹಿಗಳು ಇಷ್ಟವಾಗುತ್ತವೆ ಎಂದು ಗೊತ್ತಾಗುವುದಿಲ್ಲ.ಆದರು ನಮಗೆ ಬೇಕಾದ ಯಾವುದಾದರು ರಿಯಾಲಿಟಿ ಶೋ ಬರುತ್ತದೆಯಾ ಎಂದು ೧೦೧ ನಂಬರ್ ಒತ್ತಲು ಸ್ಟಾರ್ ಪ್ಲುಸ್ ನಲ್ಲಿ ಅಂಥದೇ ಯಾವುದೋ ಧಾರವಾಹಿ ಪ್ರಸಾರವಾಗುತ್ತಿತ್ತು, ಬೇಡ ಎಂದು ಮುಂದಿನ ಚಾನೆಲ್ ಒತ್ತಲು ಹೋದೆ, ಅಲ್ಲೂ ಇಂಥದೇ ವಿಚಿತ್ರ ಕೌಟುಂಬಿಕ ಕಥೆಗಳ ಲಹರಿ...
ಹೀಗೆ ಮುಂದೆ ಸೋನಿ ಚಾನೆಲ್ "ಚಲೇ ಮೇ ಆರ್ ಆಪ್ ಖೆಲೆಂಗೆ ಕೋನ್ ಬನೇಗ ಕರೋಡ್ ಪತಿ ..."ಎಂದು ಅಮಿತಾಬ್ಹ್ ಅಂದಹಾಗೆ ಆಯಿತು, ನೋಡುವಾಗ ನಿಜ ಕರೋಡ್ ಪತಿಯ ನಾಲ್ಕನೇ ಅವತರಣಿಕೆ ಶುರುವಾಗಿತ್ತು. ಈ ಕಾರ್ಯಕ್ರಮ ನಿಜಕ್ಕೂ ಒಂದು ಕಾಲದಲ್ಲಿ ಎಲ್ಲರ ಮನೆ-ಮನ ಗೆದ್ದ ಕಾರ್ಯಕ್ರಮವಾಗಿತ್ತು.ಮೂವರು ಒಮ್ಮತದಿಂದ ಅದೇ ಕಾರ್ಯಕ್ರಮ ನೋಡಲು ಕುಳಿತು ಕೊಂಡೆವು. ಹಿಂದೆ ಒಂದು ಗಂಟೆಯ ಕಾರ್ಯಕ್ರಮ ವಾಗಿತ್ತು ಅದಾರೆ ಈಗ ಇದನ್ನು ಒಂದುವರೆಗಂಟೆ ಮಾಡಿಟ್ಟಿದ್ದಾರೆ ಜೊತೆಗೆ ೧೫ ಪ್ರಶ್ನೆಗಳ ಗೇಮ್ ಷೋ ಅನ್ನು ೧೩ ಪ್ರಶ್ನೆಗಳಿಗೆ ಇಳಿಸಿದ್ದಾರೆ. ಜೊತೆಗೆ ಇನ್ನು ಹಲವು ಬದಲಾವಣೆ ತಂದಿದ್ದರು. ಒಂದೂವರೆ ಗಂಟೆ ಎಂದು ಖುಷಿಯಲ್ಲಿದ್ದೆವು. ಐದೇ ನಿಮಿಷದಲ್ಲಿ ಜಾಹಿರಾತು ಶುರುವಾಯಿತು ನೋಡಿ :(
ಮುಂದಿನ ೭-೮ ನಿಮಿಷ ಜಾಹಿರಾತು. ಕಾರ್ಯಕ್ರಮ ಬೋರ್ ಹೊಡೆಯಲಾರಂಬಿಸಿತು, ಬರಿ ಜಾಹಿರಾತಿಗೆ ಈ ಕಾರ್ಯಕ್ರಮ ಶುರುಮಾದಿರುವರೋ ಎಂಬ ಪ್ರಶ್ನೆ ಮೂಡಿತು.
ಹೀಗೆ ಜಾಹಿರಾತು ನೋಡುತ್ತಿರಬೇಕಾದರೆ ನನಗೆ ಮೂಡಿದ ಕ್ರಿಯೇಟಿವ್ ಐಡಿಯಾ ಅಂದರೆ ಜಾಹಿರಾತಿಗಾಗಿಯೇ ಒಂದು ಚಾನೆಲ್ ಶುರು ಮಾಡಿದರೆ ಹೇಗಿರುತ್ತದೆ. ಒಳ್ಳೆ ಫ್ಯೂಚರ್ ಇದೆ ಅನಿಸುತ್ತಿದೆ, ಮನೋರಂಜನೆ ,ವಾರ್ತೆ , ಸಂಗೀತ ,ಸಿನೆಮಾ ,ಕಾರ್ಟೂನ್,ಅದ್ಯಾತ್ಮ, ಪರಿಸರ ವಿಜ್ಞಾನ ,ಕ್ರೀಡೆ ಎಲ್ಲದಕ್ಕೂ ಅದರದ್ದೇ ಮೀಸಲು ಚಾನೆಲ್ ಗಳಿವೆ ಎಲ್ಲಾ ಬಿಡಿ ಬರಿ ಕ್ರಿಕೆಟ್ ಗೆ ಮೀಸಲಾಗಿ ೨ ಚಾನೆಲ್ ಇರುವಾಗ ಜಾಹಿರಾತು ಪ್ರಸಾರಕ್ಕಾಗಿಯೇ ಒಂದು ಚಾನೆಲ್ ಇಟ್ಟರೆ ಮಜವಾಗಿರುತ್ತದೆ ಎಂದನಿಸಿತು.ಕೂತು ಮಾಡಲು ಬೇರೆ ಕೆಲಸ ಇರಲಿಲ್ಲ ಹಾಗೆ ಈ ಬಗ್ಗೆ ಚರ್ಚೆ ಆರಂಬವಾಯಿತು.
ಚಾನೆಲ್ ಹೆಸರು ಹೀಗಿರಬದುದು, ಸ್ಪರ್ಧಾತ್ಮಕ ಮನೋಭಾವದವರಿಗೆ "ಸ್ಟಾರ್ ಆಡ್ ,(ಆಪೋ ರೇಖೆ ತಯ್ಯಾರ್) ",ಜೀವನದ ಕನಸು ಕಾಣುವವರಿಗಾಗಿ "ಡ್ರೀಮ್ ಟಿವಿ(ಆಪ್ಕಾ ಪೈಸಾ ಆಪ್ಕಾ ಸಪ್ನಾ)","ಆಡ್ ಟಿವಿ (ಹಂ ಹೇ ಆಪ್ ಕೆ ಸಾಥ್ )",....
ಅಲ್ಲಿ ಕಾರ್ಯಕ್ರಮಗಳು ವಿಚಿತ್ರವಾಗಿರಬಹುದು
ಇಸ್ಕಿ ಟೋಪಿ ಉಸ್ಕಿ ಸರ್ (ಒಬ್ಬನ ಟೋಪಿ ಇನ್ನೊಬ್ಬನ ತಲೆಗೆ): ಇಲ್ಲಿ ಒಂದು ಜಾಹಿರಾತಿನ ನ್ಯೂನತೆ ಹೇಳುವ ಇನ್ನೊದು ಜಾಹಿರಾತು ಪ್ರಸಾರವಾಗಲಿದೆ(ಉ.ದ : ಮೌಂಟೈನ್ ಡಿವ್ ಮತ್ತು ಸ್ಪ್ರೈಟ್ ಜಾಹಿರಾತುಗಳು)
ಹುಂ ಪಂಚಿ ಏಕ್ ಡಾಲ್ ಕೆ (ಒಂದೇ ರೆಂಬೆಯ ಹಕ್ಕಿಗಳು ನಾವು ): ಇಲ್ಲಿ ಒಂದೇ ಸಂಸ್ಥೆಯ ಎಲ್ಲಾ ಜಾಹಿರಾತು ಪ್ರಸಾರ(ಬ್ರಿಟಾನಿಯ)
ಕುಚ್ ಮೀಟೆ ಪಲ್ (ಮದುರ ಕ್ಷಣ): ಚಾಕೋಲೇಟ್ ಸಂಬಂದಿ ಜಾಹಿರಾತುಗಳು
ಆಪ್ಕೆ ರಖ್ವಾಲೆ (ನಿಮ್ಮ ರಕ್ಷಕರು): ಇನ್ಶುರೆನ್ಸ್ ,ಬ್ಯಾಂಕ್ ಸಂಬಂದಿ ಜಾಹಿರಾತು
ಕಾರ್ಟೂನ್ ಕಾರ್ನರ್ : ಮಕ್ಕಳ ಆಟಿಕೆ ಸಂಬದಿ ಜಾಹಿರಾತು
ಧಿಮಾಗ್ ಕಿ ಬತ್ತಿ ಜಲಾದೆ : ಇಲ್ಲಿ ಒಮ್ಮೆ ನೋಡಿದರೆ ಅರ್ಥವಾಗದ ಜಾಹಿರಾತುಗಳು.
ರಿಕ್ವೆಸ್ಟ್ ಶೋ :ವಿಕ್ಷಕರ ಬಯಕೆಯ ಮೇರೆಗೆ ಅವರಿಗೆ ಬೇಕಾದ ಜಾಹಿರಾತಿನ ಪ್ರಸಾರ.
ಹೀಗೆ ಹಲವು ಕಾರ್ಯಕ್ರಮ ಬರಬಹುದು.
ಇಲ್ಲಿ ಎಲ್ಲಾ ಇತರೆ ಚಾನೆಲ್ ನಲ್ಲಿ ಬರುವ ಕಾರ್ಯಕ್ರಮದ ಜಾಹಿರಾತು, ವಾರಕೊಮ್ಮೆ ಎಲ್ಲಾ ಚಾನೆಲ್ ಗಳ ರಾಂಕಿಂಗ್, ಕಾರ್ಯಕ್ರಮದ ರಾಂಕಿಂಗ್ ಪ್ರಸಾರ ಮಾಡಿದರೆ ಬೋರ್ ಆದ (ಅದು ತುಂಬಾ ವಿರಳ !!!!)ಹೆಂಗಸರಿಗೆ ಯಾವ ಚಾನೆಲ್ ನ ಯಾವ ಕಾರ್ಯಕ್ರಮಕ್ಕೆ ಹಾರಬಹುದು ಎಂದು ನಿರ್ದರಿಸಲು ಸುಲಭ ವಾಗುವುದು.ಶನಿವಾರ ಭಾನುವಾರ ಪ್ರತಿಯೊಂದು ವಿಭಾಗದ ಜಾಹಿರಾತುಗಳ countdown ಕಾರ್ಯಕ್ರಮ.
ವರ್ಷಕೊಮ್ಮೆ ಜಾಹಿರಾತಿಗಾಗಿಯೇ ವಿಶೇಷ ಅವಾರ್ಡ್ ಕಾರ್ಯಕ್ರಮಗಳು, ಅಲ್ಲಿ ಉತ್ತಮ ನಿರ್ದೇಶಕ, ನಿರ್ಮಾಪಕ ,ಹಿನ್ನಲೆ ಸಂಗೀತ, ಉತ್ತಮ ಕಲಾವಿದ, ಉತ್ತಮ ಕಲಾವಿದೆ, ಬಾಲನಟ-ನಟಿ, ಕೊನೆಗೆ ಜಾಹಿರಾತಿನಲ್ಲಿ ಬಳಸುವ ಪ್ರಾಣಿ ಗಳಿಗಾಗಿಯೇ ವಿಶೇಷ ಅವಾರ್ಡ್.
ಯಾವುದೇ ಜಾಹಿರಾತು ಸಿಗದಿದ್ದಾಗ TVC ,telebrand ನಂಥ ಜಾಹಿರಾತುಗಳ ಪ್ರಸಾರ !!!!
ಇಂಥ ಒಂದು ಚಾನೆಲ್ ಬಂದರೆ ಒಳ್ಳೇದಿತ್ತು, ಅವಾಗ ಇತರೆ ಚಾನೆಲ್ ಗಳಲ್ಲಿ ಜಾಹಿರಾತಿನ ಭರಾಟೆ ಕಮ್ಮಿ ಆದರು ಆಗಬಹುದು, ಜೊತೆಗೆ ಕ್ರಿಯೇಟಿವ್ ಅದ ಜಾಹಿರಾತು ಬಂದರೆ ನಮ್ಮಂತ ಸೇರಿಯಲ್ಸ್ ನೋಡದ ಹುಡುಗರಿಗೆ ಉತ್ತಮ ಟೈಂಪಾಸ್ ಸಿಗಬಹುದು ಎಂದು ಅನಿಸುತ್ತದೆ.
ಕಾಮತ್ ಕುಂಬ್ಳೆ
Comments
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by santhosh_87
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by kamath_kumble
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by kamath_kumble
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by santhosh_87
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by kamath_kumble
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by kamath_kumble
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by Jayanth Ramachar
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by santhosh_87
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by Jayanth Ramachar
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by kamath_kumble
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
In reply to ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು by manju787
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು
ಉ: ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು