ರಿಮೋಟ್ ಎಲ್ಲಿ?
ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ
ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲ
ಒಳಗಡೆಯಿಂದ ತಿಳಿದ ದನಿಯೇ
ಮೇಣದ ಬತ್ತಿ ಎಲ್ಲಿದೆಯೇ?
ಅಮ್ಮ ಕ್ಯಾಂಡಲ್ ಎಲ್ಲಿ?
ರಿಮೋಟ್ ಎಲ್ಲಿ?
ಟಾರ್ಚ್ ಎಲ್ಲಿಟ್ಟಿದ್ದೀಯಾ?
"ಈ ಮನೆಯಲ್ಲಿ ಒಂದೂ
ಇಟ್ಟಜಾಗದಲ್ಲಿ ಇರಲ್ಲ ನೋಡು "
ಹೊರಗಿನಿಂದ ತೂರಿ
ಬರುವ ಶಬ್ದ ಹಾವಳಿಯಲ್ಲಿ
ಅದೂ ನೆನಪಿಗೆ ಬರಲ್ಲ
ರಿಮೋಟ್ ಎಲ್ಲಿ?
ಅಲ್ಲೇ ಇರಬೇಕು ತಲೆದಿಂಬಿನಡಿಯಲ್ಲಿ
ಅಯ್ಯಯ್ಯೋ? ಎನೂ ಏನಾಯ್ತು?
ಇನ್ನೇನು ಜಿರಲೆ ಸಿಕ್ಕಿರಬೇಕು
ತಗೊಳ್ಳಿ ನಿಮ್ಮ ಮೇಣದ ಬತ್ತಿ
ರಿಮೋಟ್ ಎಲ್ಲಿ?
ಬೆಂಕಿ ಪೆಟ್ಟಿಗೆ ..?
ನಿನ್ನೆನೇ ಹೇಳಿದ್ದೆ
ಖಾಲಿಯಾಗಿತ್ತಲ್ಲಾ?
ಹ್ಞಾ ಸಿಕ್ಕಿತು!! ಬ್ಯಾಟರಿ ಹೊತ್ತಿತಾ?
ಆದರೆ ಹೊತ್ತತಾ ಇಲ್ಲ
ಇದರ ಬ್ಯಾಟರಿ ಎಲ್ಲಿ ?
ನಡೆ ಈಗ ರಿಮೋಟ್ ಹುಡುಕೋಣ
ಯಾಕೆ ಈಗಲೂ ಟೀ ವಿ ಯ ಹಂಬಲವೇ?
ಈ ಕತ್ತಲೆಯಲ್ಲಿ ಯೂ ಧಾರಾವಾಹಿಯ ಕನಸೇ?
ಅಲ್ಲಪ್ಪಾ ಅದೇನಲ್ಲ!! ಮತ್ತೆ ..?
ಟಾರ್ಚಿನ ಬ್ಯಾಟರಿ ಅದರಲ್ಲಿತ್ತು.
ಬ್ಲಾಗ್ ವರ್ಗಗಳು
ಸರಣಿ
Rating
ಉ: ರಿಮೋಟ್ ಎಲ್ಲಿ?