ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

 

ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,
ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,
ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ...
ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯಾಗುತ್ತಿತ್ತೇನೋ...

ಆದರೆ, ಅದೊಂದೂ ನಾನೆಣಿಸಿದಂತೆ ಆಗಲೇ ಇಲ್ಲ,
ಈಗ, ಏಕಾಂಗಿಯಾದ ನನ್ನ ಪರಿಸ್ಥಿತಿ ಹೇಗಾಗಿದೆಯೆಂದರೆ,
ನನಗೆ ನಿನ್ನ ಜೊತೆಯೂ ಇಲ್ಲ, ನಿನ್ನ ದುಃಖವೂ ಇಲ್ಲ,  
ಅಲ್ಲದೇ, ನನ್ನಲ್ಲಿ ನಿನ್ನ ನಿರೀಕ್ಷೆಯೂ ಇಲ್ಲವಾಗಿದೆ...

ಈ ಜೀವನದ ಪಯಣ ಎಷ್ಟೊಂದು ನೀರಸವಾಗಿದೆಯೆಂದರೆ,
ನನ್ನಲ್ಲಿ ಇದೀಗ ಯಾರೊಬ್ಬರ ಆಸರೆಯ ನಿರೀಕ್ಷೆಯೂ ಇಲ್ಲ,
ಇಲ್ಲಿ ಹಾದಿಯೂ ಇಲ್ಲ, ಗಮ್ಯವೂ ಇಲ್ಲ, ಬೆಳಕಿಂಡಿಯೂ ಇಲ್ಲ,
ನನ್ನ ಬದುಕು ಈ ಕತ್ತಲಿನಲ್ಲಿ ವಿಚಲಿತಗೊಂಡು ಅಲೆಯುತ್ತಿದೆ...

ಮುಂದೊಮ್ಮೆ, ಇದೇ ಕತ್ತಲಿನಲ್ಲೇ ಕಳೆದುಹೋಗುತ್ತೇನೆ ನಾನು,
ಎಂದೆಂಬ ಅರಿವು, ನನಗೆ ಸದಾ ಇದೆಯಾದರೂ, ಸಖೀ,
ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ...
***

ಆತ್ರಾಡಿ ಸುರೇಶ ಹೆಗ್ಡೆ

 

ದಿ. ಸಾಹಿರ್ ಲೂಧಿಯಾನ್ವಿಯವರಿಂದ ರಚಿತವಾಗಿದ್ದ, ೧೯೭೫ರ  "ಕಭೀ ಕಭೀ" ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಆಡುವ, ಈ ಮಾತುಗಳು ನನಗೆ ಬಹಳ ಇಷ್ಟ.
ಇದು ಆ ಮಾತುಗಳ ಭಾವಾನುವಾದದ ಚಿಕ್ಕ ಪ್ರಯತ್ನ ಅಷ್ಟೇ.

ಮೂಲ ಹಿಂದೀ ರೂಪ ಇಲ್ಲಿದೆ:

कभी कभी मेरे दिल मैं ख्याल आता हैं
कि ज़िंदगी तेरी जुल्फों कि नर्म छांव मैं गुजरने पाती
तो शादाब हो भी सकती थी।
यह रंज-ओ-ग़म कि सियाही जो दिल पे छाई हैं
तेरी नज़र कि शुओं मैं खो भी सकती थी।

मगर यह हो न सका और अब ये आलम हैं
कि तू नहीं, तेरा ग़म तेरी जुस्तजू भी नहीं।

गुज़र रही हैं कुछ इस तरह ज़िंदगी जैसे,
इससे किसी के सहारे कि आरझु भी नहीं.

न कोई राह, न मंजिल, न रौशनी का सुराग
भटक रहीं है अंधेरों मैं ज़िंदगी मेरी.

इन्ही अंधेरों मैं रह जाऊँगा कभी खो कर
मैं जानता हूँ मेरी हम-नफस, मगर यूंही

कभी कभी मेरे दिल मैं ख्याल आता है.
***

 

Rating
No votes yet

Comments