ಬ್ಲಾಗ್ಗವನ

ಬ್ಲಾಗ್ಗವನ

ಒಂಟಿಹಕ್ಕಿ ಹಾಡಿದು,
ಬರಿಯ ಕವಿತೆಯಲ್ಲ
ಆಶುಮನದ ಕವಿತೆಗಳ
ಅಂತರಂಗದ ಮಾತು
ಅನವರತವಿದು ಅನುಭವ ಮಂಟಪ
ನನ್ನದೇ ಲೋಕದಲ್ಲಿ
ನಮ್ಮ ಭಾಷೆಯ ಪ್ರಹರಿಗಾಗಿ
ನಡೆಯುತ್ತಿರುವ
ಸ್ಪಂದನ
ಪರಿವೇಷಣ
ಹಳೆಯ ಸೇತುವೆಗಳು
ನಡೆಯುವ ಹಾದಿಯಲ್ಲಿ
ಜೊತೆಯಾಗಲಿ ನವ ಪೀಳಿಗೆ
ಹೊಸ ದೃಷ್ಟಿ ಹೊಸ ಬೆಳಕಿನೊಂದಿಗೆ
ತೆರೆಯಲಿ ಕವಿಮನ ಬೀಸಲಿ ತಿಳಿಗಾಳಿ
ಹರಿಯಲಿ ವೇದ ಸುಧೆ
ತೆರೆದ ಮನದಿಂದ ನಾಡನ್ನು
ಬೆಳೆಸುವ ಕನಸನು ಕಟ್ಟೋಣ
ಮಾಯಾಜಾಲವಾಗಿದ್ದರೂ
ಜೀವನವನ್ನು ಅನ್ವೇಷಿಸುತ್ತಾ
ನಾಡಿಗಾಗಿ ಹುಟ್ಟುತ್ತಿರಲಿ
ನಮ್ಮಲ್ಲಿ ಅಂತಸ್ಫುರಣ
ನಮ್ಮ ದೇಶದ ಡೆಸ್ಕಿನಲ್ಲಿ ಹಬ್ಬುತ್ತಿರಲಿ
ಕನ್ನಡದ ಕೀರ್ತಿ
ಮನಸಿನ ಮಾತುಗಳು
ಅಂತರಂಗದ ಮೃದಂಗವಾಗಲಿ
ದೇಶ ಭಕ್ತಿಯ ಜನಗಣಮನ
ಪ್ರತಿ ಎದೆಯಲ್ಲೂ ಹಾಡುತ್ತಿರಲಿ
ಸಿಂಹದ ಎದೆಗಾರಿಕೆಯಿಂದ
ಹಿಡಿಯುತ್ತಾ ಕಾಲಕ್ಕೆ ಕನ್ನಡಿ,   
ಪ್ರತಿ ಕನ್ನಡ ಮನಸ್ಸುಗಳಲಿ
ಕನ್ನಡದ ಅಂತರ್ನಾದ ಮೊಳಗುತ್ತಿರಲಿ


[೨೬ ಬ್ಲಾಗುಗಳ ಹೆಸರನ್ನು ಸೇರಿಸಿದ್ದೇನೆ. ಕವನದ ವಸ್ತುವಿಗೆ ಹೆಣೆಯಲಾಗದ್ದರಿಂದ ಉಳಿದ ಕೆಲವು ಬ್ಲಾಗುಗಳನ್ನು ಸೇರಿಸಲಾಗಲಿಲ್ಲ ಮತ್ತು ಬ್ಲಾಗುಗಳ ಹೆಸರುಗಳನ್ನು ಅಲ್ಪ ಸ್ವಲ್ಪ ಬದಲಿಸಿದ್ದೇನೆ, ಕ್ಷಮಿಸಿ]

[ಸಂಪದದಲ್ಲಿ ಇದು ನನ್ನ ಐವತ್ತನೆಯ ಬರಹ! ಹತ್ತು ತಿಂಗಳಲ್ಲೇ ಇಷ್ಟು ಬರೆದಿದ್ದೇನೆಂದರೆ ನನ್ನ ಹೆಚ್ಚಿನ ಬರಹಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ ನೀವುಗಳೇ ಕಾರಣ. ನನ್ನ ಬರಹಗಳನ್ನು ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ]

Rating
No votes yet

Comments