ನೆನಪಿನ ಬುತ್ತಿ

ನೆನಪಿನ ಬುತ್ತಿ

ಹಂಚಿ ಕಮ್ಮಿ ಆಗದ್ದು ಎಂದರೆ ನೆನಪು ಮಾತ್ರ ಅಂದುಕೊಳ್ಳುತ್ತೇನೆ,ನನ್ನ ನೆನಪಿನ ಬುತ್ತಿಯನ್ನು ನಿಮ್ಮೊಂದಿಗೆ ಹಂಚ ಬೇಕೆಂದಿದ್ದೇನೆ, ಎಲ್ಲಿನ್ದೆಲಿಂದಲೋ  ಮನದಲ್ಲಿ ಮನೆ ಕಟ್ಟಿರುವ ಕೆಲವು ಸಣ್ಣ-ದೊಡ್ಡ ನೆನಪುಗಳು ಕೆಲಸದ ನಡುವೆ ಕಾಡುತ್ತಿರುತ್ತದೆ,ಅದರಬಗ್ಗೆ ಆಲೋಚಿಸುತ್ತಿರುವಾಗ ಅದು ನಮ್ಮನ್ನು ಸೀದಾ ಅದೇ ಘಟನೆಗೆ ಕರಕೊಂಡು ಹೋಗುತ್ತದೆ , ಆ ನೆನಪು ಕೆಲವೊಮ್ಮೆ ಕುಶಿ ಕೊಟ್ಟರೆ ಆಫೀಸ್ ಎನ್ನುದನ್ನು ಮರೆತೂ ತುಟಿ ಅಂಚಿನಲ್ಲಿ ಮುಗುಳ್ನಗೆ ಮೂಡಲಾರಂಬಿಸುತ್ತದೆ,ಅದೇ ಕೆಲವು ನೆನಪು ಕಣ್ಣಂಚನ್ನು ಗೊತ್ತಾಗದಂತೆ ಒದ್ದೆ ಮಾಡಿ ಬಿಡುತ್ತದೆ.
 
"ಜನನಿ ಜನ್ಮ ಭೂಮಿಷ್ಯ ಸ್ವರ್ಗಾದಪಿ ಘರಿಯಸಿ"ಎಂಬ ಮಾತಿದೆ, ಪ್ರತಿಯೊಬ್ಬನಿಗೆ ತಾನು ಹುಟ್ಟಿದ ಊರು ಮನೆ ಎಂದರೆ ಸ್ವರ್ಗವೆ ಆಗಿರುತ್ತದೆ,ಪ್ರತಿಯೊಬ್ಬನು ತನ್ನ ಉರು ಇತರವುಗಿಂತ ಶ್ರೇಷ್ಠ ಎಂದು ಭಾವಿಸುದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಅಂತೆಯೇ ನನಗೂ ನನ್ನ ಊರು,ಮನೆಯೆಂದರೆ ಅಷ್ಟೇ ಅಭಿಮಾನ, ಅದೂ ಊರು ಬಿಟ್ಟ ಮೇಲೆ ಹೆಚ್ಚಾಗಿದೆ ಎಂದು ಹೇಳಬಹುದು.ಪ್ರೊಫೈಲ್ ನಲ್ಲಿರುವ ಪರಿಚಯದಂತೆ ನನಗೆ ಮತ್ತು ಹುಟ್ಟಿದ ಊರು ಕುಂಬ್ಳೆ ನಡುವಿನ ಸಂಭದಕ್ಕೆ ಮೊನ್ನೆ ೨೧ ರಂದು ೨೩ ವರ್ಷ ವಾಯಿತು.

ಉತ್ತಮ ಶಾಲೆ ಇಲ್ಲದ ಕಾರಣ ಹೈ ಸ್ಕೂಲ್ ಗೆ ಮಂಗಳೂರಿಗೆ ಸೇರಿಸಿದರು, ಅಂದಿನಿಂದ ಊರು ಬಿಟ್ಟಂತೆಯೇ,ಬೆಳಗ್ಗೆ ಮನೆ ಬಿಟ್ಟರೆ ಮನೆ ಸೇರುವುದು ಸೂರ್ಯ ಮುಳುಗಿದನಂತರವೇ, ಬಂದ ನಂತರ ಆದಿನದ ಮನೆಕೆಲಸ ಅಸಾಯಿನ್ಮೆಂಟ್ ಮುಗಿಸುದರಲ್ಲಿ ರಾತ್ರಿ ೯ ದಾಟುತ್ತಿತ್ತು, ಅಮ್ಮ "ಮಲಗು ಬೆಳಗ್ಗೆ ಬೇಗ ಏಳಬೇಕು" ಎಂದು ನನ್ನನ್ನು ನಿದ್ದೆಗೆ ದೂಡುತ್ತಿದ್ದರು.ಬೆಳಿಗ್ಗೆ ೫ ಕ್ಕೆ ಮತ್ತೆ ಹೊಸದಿನದ ತಯಾರಿ, ಹೀಗೆ PUC ವರೆಗೆ ನಡೆದಿತ್ತು. ಇಂಜಿನಿಯರಿಂಗ್ ಸೇರಿದ ಮೇಲಂತೂ ಮನೆಯಿಂದ ಬೌತಿಕವಾಗಿ ದೂರವಾಗ ಬೇಕಾಯಿತು. ಇದರ ನಡುವೆ ಕಳೆದ ಆ ೨೧ ವರ್ಷ ನಿಜಕ್ಕೂ ಅವಿಸ್ಮರಣೀಯ,ಈಗ ಇಲ್ಲಿ ದೂರದಲ್ಲಿ ನೆನಪಾಗುತ್ತಿದೆ ಆ ಬಾಲ್ಯ , ಆ ಊರಿನ ಗದ್ದೆಯಲ್ಲಿನ ಆಟ ಇತ್ಯಾದಿ ಇತ್ಯಾದಿ.

ಕುಂಬಳೆ ಇದು ಮಂಗಳೂರಿನಿಂದ 36 ಕಿ.ಮಿ ಮತ್ತು ಜಿಲ್ಲಾ ಕೇಂದ್ರ ಕಾಸರಗೋಡಿನಿಂದ 14 ಕಿ.ಮಿ ದೂರದಲ್ಲಿದೆ, ಬೌಗೋಳಿಕವಾಗಿ ಕೇರಳಕ್ಕೆ ಸೇರಿರುವ ಈ ಪ್ರದೇಶ ಕರ್ನಾಟಕದ ಕರಾವಳಿಯ ಜನಜೀವನವನ್ನೇ ಹೊಂದಿದೆ. ಸಪ್ತಭಾಷಾಸಂಗಮ ಭೂಮಿ, ಸಪ್ತಭಾಷೆ ಎಂದಾಗ ನೆನಪಿಗೆ ಬಂತು ಇಲ್ಲಿ ಆಫೀಸ್ ನಲ್ಲಿ ಎಲ್ಲಾ ಮಂಗಳೂರಿನವರನ್ನು ಮೆಚ್ಚ ಬೇಕಪ್ಪ ಒಬ್ಬೊಬ್ಬರಥ್ರ ಒಂದೊಂದು ಭಾಷೆ ಉಪಯೋಗಿಸುತ್ತಾರೆ ಅನ್ನೋದು ನೆನಪಾಗುತ್ತದೆ, ಅದೂ ಸರಿ ಅನ್ನಿ ಇಲ್ಲಿ ಇರುವಷ್ಟು ಭಾಷೆಯ ಪ್ರಭೇದ ಬೇರೆಲ್ಲಿ ಸಿಗದು ಎಂಬ ವಾದ ನನ್ನದು.ಪಶಿಮಕ್ಕೆ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಪ್ರಶಾಂತ ಕಡಲು. ಪೂರ್ವಕ್ಕೆ ನೀರ್ಚಾಲು ವರೆಗೆ ಕುಂಬಳೆಯೇ,ಉತ್ತರದಲ್ಲಿ ಶಿರಿಯಾ ನದಿ  ಇಂದ ದಕ್ಷಿಣಕ್ಕೆ ಮೊಗ್ರಾಲ್ ನದಿ ವರೆಗೆ ನಮ್ಮ ಪುಟ್ಟ ಸಾಮ್ರಾಜ್ಯ, ಸಾಮ್ರಾಜ್ಯ ಅಂದಾಗ ಆಶರ್ಯ ಬೇಡ ಒಂದು ಕಾಲದಲ್ಲಿ ನಿಜಕ್ಕೂ ಸಾಮ್ರಾಜ್ಯವೇ ಆಗಿತ್ತು ಎನ್ನುದಕ್ಕೆ ಇಲ್ಲಿರುವ ಕೋಟೆ ಮತ್ತುಮಾಯಿಪಾಡಿ ಯಲ್ಲಿರುವ ಅರಮನೆಯೇ ಸಾಕ್ಷಿ.

ಬ್ರಿಟಿಷರು ಇದನ್ನು ವ್ಯವಹಾರಿಕ ಕೇಂದ್ರ ಮಾಡಿದಕ್ಕೆ ಇಲ್ಲಿ ಅವರು ನಿರ್ಮಾಣ ಮಾಡಿರುವ ಗೋದಾಮೇ ಸಾಕ್ಷಿ, ಆದರೆ ಅದೂ ಈಗ ಬಿದ್ದು ಹೋಗಿದೆ!!! ೪ ವರುಷದ ಹಿಂದೆ ಜಾತ್ರೆಯ ಸಮಯದಲ್ಲಿ ಪುಂಡರ ಪುಂಡಾಟಿಕೆಗೆ ಮೇಲಿನ ಮಾಡುಬಿತ್ತು , ಬಳಿಕ ಪಂಚಾಯತ್ ನವರು ಅದನ್ನು ಸಂಪೂರ್ಣ ನೆಲಸಮ ಮಾಡಿದರು, ಬಳಿಯಲ್ಲೇ ಇದ್ದ ಆಂಗ್ಲರ ಪ್ರವಾಸಿ ಬಂಗಲೆಯನ್ನು ಕೇರಳ ಪೋಲಿಸ್ ತಮ್ಮ ರೆಸ್ಟ್ ರೂಂ  ಮಾಡಿಕೊಂಡಿದ್ದಾರೆ.ಇದು ಬಿಟ್ಟು ಊರಿನ ಬೇರೆ ಇತಿಹಾಸ ನನಗೆ ಗೊತ್ತಿಲ್ಲ.

ಊರಿಗೆ ಕುಂಬಳೆ ಅಂತ ಹೆಸರು ಇಲ್ಲಿ ಪಶ್ಚಿಮಾಬಿಮುಖ ವಾಗಿ ಹರಿಯುವ "ಕುಂಬ ಹೊಳೆ " ಇಂದ ಬಂದದ್ದು, ಕ್ರಮೇಣ ಕುಂಬಳೆ ಆಯಿತು, ಇಂದು ಕೇರಳ ಸರಕಾರದ ಹಿಡಿತದಲ್ಲಿ ಕುಂಬಳ ಎಂದಾಗಿದೆ. ಊರಿಗೆ ಕಣಿಪುರ ಎಂಬ ಹೆಸರು ಇದೆ,ಕಣ್ವ ಋಷಿ ಇಂದ ಈ ಹೆಸರು ಬಂತು ಎನ್ನುತ್ತಾರೆ.  ಕಣಿಪುರ ದೇವಸ್ಥಾನ ಇಲ್ಲ ಗೋಪಾಲಕೃಷ್ಣ ದೇವಸ್ಥಾನ ಕುಂಬಳೆ ಸೀಮೆಯ ಇತರ ದೇವಸ್ಥಾನಗಳಲ್ಲಿ ಅತಿ ಹಳೆಯದು ಮತ್ತು ಉಳಿದವುಗಳಿಗಿಂತ ತುಂಬಾ ಪ್ರಾಮುಕ್ಯತೆ ಪಡೆದ ದೇವಸ್ಥಾನ.ಸೀಮೆ ದೇವಸ್ಥಾನಗಳಲ್ಲಿ ಮಧೂರು ಶ್ರೀ ಸಿದ್ದಿವಿನಾಯಕ ದೇವಸ್ಥಾನ, ಅಡೂರು,ಶೆಡಿಕಾವು , ಕಿದೂರು, ಮುಜಂಗಾವು,ಅನಂತಪುರ ಹೀಗೆ ಹತ್ತುಹಲವು ದೇವಸ್ಥಾನಗಳಿವೆ.ಇದಲ್ಲದೆ ಗೌಡ ಸಾರಸ್ಪಥ ಸಮಾಜದವರ ವೀರವಿಟ್ಟಲ,ದೇವಿ ಮಠ,ಗದ್ದೆ ಮಠ ಪ್ರಮುಖವು,ರಾಷ್ಟೀಯ ಹೆದ್ದಾರಿ ೧೭ ಕ್ಕೆ ಅಂಟಿಕೊಂಡಿರುವ ಅರಿಕ್ಕಾಡಿಯ ಹನುಮಂತದೇವರ ಮೂರ್ತಿಯು  ಮಂಗಳೂರಿಂದ ಕುಂಬಳೆಗೆ ಬರುವ ಎಲ್ಲರನ್ನು ಕೈ ಮುಗಿದೇ ಸ್ವಾಗತ ನೀಡುತ್ತದೆ, (ಆಚೆಗೆ ಹೋಗುವವರಿಗೆ ಕೈ ಮುಗಿದೇ ಸಂತಸದಲ್ಲೇ ಬಿಳ್ಕೊಡುತ್ತದೆ!!!) . ಇದಲ್ಲದೆ ಇಲ್ಲಿ ಕ್ರೈಸ್ತ ಮತ್ತು ಮಸ್ಲಿಂ ಜನಾಂಗದವರು  ಬಹಳ ಮಂದಿ ಒಂದಾಗಿ ಜೀವನ ನಡೆಸುತ್ತಾರೆ. ಕುಂಬಳೆ ಯಲ್ಲಿನ ಮಸೀದಿ,ಕುಂಬಳೆ ಮತ್ತು ಬೇಳ ಇಗರ್ಜಿ ಯಲ್ಲಿ ಒಂದಾಗುವ ಈ ಭಾಂದವರು ಉರ ಜಾತ್ರೆ ಬಂದಾಗ ಮತ ಪಂಕ್ತಿ ಮರೆತು ನಮ್ಮೂರ ಜಾತ್ರೆ ಎಂದು ಭಾಗವಹಿಸುತ್ತಾರೆ.ಕುಂಬಳೆ ಜಾತ್ರೆ ಕುಂಬಳೆ ಬೇಡಿ ಎಂದೇ ಪ್ರಸಿದ್ದಿ, ಮಕರ ಸಂಕ್ರಮಣದಿಂದ ಶುರುವಾದ ಜಾತ್ರೆ ೫ ದಿನಗಳ ಕಾಲ ನಡೆಯುತ್ತದೆ,ಇದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ.

ಈಗ ನಾವು ಸಂಸ್ಕೃತಿಯ ಕುರಿತು ಬರುವುದಾದರೆ ಕುಂಬಳೆ ಕರಾವಳಿ ಸಂಸ್ಕೃತಿಯ ಮುಕುಟ ಮಣಿ ಯಾಗಿದೆ ಎಂದು ಹೇಳಲು ನನಗೆ ಹೆಮ್ಮೆ. ಕರಾವಳಿ ಸಂಸ್ಕೃತಿ ಎಂದಾಕ್ಷಣ ನೆನಪಿಗೆ ಬರುವುದು ಚೆಂಡೆ ಮದ್ದಲೆ ಮತ್ತು ಮೇಳ ಒಳಗೊಂಡ ರಾತ್ರಿ ಮೊದಲ್ಗೊಂಡು ಸೂರ್ಯೋದಯದ ವರೆಗೆ ನಡೆಯುವ ಆ ಯಕ್ಷಗಾನ,ಅದು ಹುಟ್ಟಿದ್ದು ಈ ಪುಟ್ಟ ಊರಿನಲ್ಲೇ, ಯಕ್ಷಗಾನ ಪಿತಾಮಹ ಪಾರ್ತಿಸುಬ್ಬ ಹುಟ್ಟಿದ ಊರು ಇದೆ. ಅದೆಷ್ಟೋ ಪಾತ್ರಗಳಿಗೆ ಚಿತ್ರ ನೀಡಿದ ಭವ್ಯ ಭೂಮಿ ಇದೆ. ಜನರ ಆಚರ ವಿಚಾರ ಅಚ್ಚ ಕನ್ನಡಿಗರಂತೆಯೇ. ಬಟ್ಟೆಬರೆ ಎಲ್ಲಾ ಕರಾವಳಿ ಕರ್ನಾಟಕದ್ದೇ,ವಿವರಣೆ ಬೇಡ ಎಂದು ಕೊಂಡಿದ್ದೇನೆ. ಊಟದ ವಿಚಾರಕ್ಕೆ ಬಂದರೆ ತೆಂಗಿನಕಾಯಿ ಹಾಕಿದಂತಹ ಪದಾರ್ಥ,ಮೀನು ಪ್ರಮುಖವಾದದ್ದು,ತೆಂಗಿನೆಣ್ಣೆ ಗೆ ಇತರ ಎಣ್ಣೆಗಿಂತ ಎತ್ತರದ ಸ್ಥಾನ.ಕೃಷಿ ಪ್ರಧಾನ ಉದ್ಯೋಗ, ಭತ್ತ,ಅಡಿಕೆ,ತೆಂಗಿನಕಾಯಿ,ಕರಿಮೆಣಸು,ತರಕಾರಿಗಳು ಮುಖ್ಯ ಬೆಳೆ.ಸಣ್ಣಗಿರುವಾಗ ನಮಗೂ ಭತ್ತದ ಗದ್ದೆ ಇತ್ತು, ಇಂದೂ ಇದೆ ಆದರೆ ಬೆಳೆ ಬೆಳೆಸುವುದಿಲ್ಲ ,ಬರೇ ಮೂಕ ಗದ್ದೆ :(.

ಇಲ್ಲಿ ಅಮೂಲ್ಯ ರತ್ನ ಬೆಳೆಯುವುದಿಲ್ಲ. ಆದರೆ ರತ್ನದಂತ ಮಗನಿಗೆ ಜನ್ಮ ಕೊಟ್ಟವರು ಈ ಊರಿನವರೇ,ಯಾರ ಬಗ್ಗೆ ಹೇಳುತ್ತೇನೆ ಎಂದು ಗೊತ್ತಾಗಿರಬಹುದು, "ಅನೀಲ್ ಕುಂಬ್ಳೆ" .ಊರಿನ ಹೆಸರನ್ನು ಪ್ರಪಂಚಕ್ಕೆ ಸಾರಿದ ಗರಿಮೆ ಅವರಿಗೆ. ವಿಪರ್ಯಾಸ ನೋಡಿ ಅವರು ಇಲ್ಲಿ ಈ ವರೆಗೆ ನನಗೆ ಗೊತ್ತಿರುವಂತೆ ಎರಡೇ ಬಾರಿ ಬಂದಿರುವುದು, ವೃತ್ತಿ ಜೀವನದಲ್ಲಿನ ಒತ್ತಡ ಅವರನ್ನು ಊರು ಮರೆಸುವಂತೆ ಮಾಡಿದೆ ಎಂದೆನ್ನುಕೊಳ್ಳಬಹುದು. ಮೊನ್ನೆ ಮೊನ್ನೆ ಊರಿಗೆ ಬಂದಿದರಂತೆ, ನಮ್ಮ ಪಂಚಾಯತ್ ನವರು ಅವರ ಹೆಸರಿನಲ್ಲಿ ಹುಟ್ಟೂರ ಸನ್ಮಾನ ಆಯೋಜಿಸಿದ್ದರು ಅವರ ಹೆಸರಲ್ಲೇ ಒಂದು ಮಾರ್ಗವೂ ಉದ್ಘಾಟನೆ ಆಯಿತು.ಇದಲ್ಲದೆ ಕುಂಬ್ಳೆ ಸುಂದರ್ ರಾಯರು, ಅಷಿಯನ್ ಗೇಮ್ಸ್ ನಲ್ಲಿ ಪದಕ ಪಡೆದ ಜಗದೀಶ್ ಕುಂಬ್ಳೆ ಇಲ್ಲೇ ಹುಟ್ಟಿ ಬೆಳೆದವರು.


ಊರಿಂದ ಹೊರ ಬಂದ ಮೇಲೆ ಅದರ ಬಗೆಗಿನ ಸೆಳೆತ ಅತಿಯಾಗಿದೆ, ದೂರದಲ್ಲಿ ಕನ್ನಡ,ಮಲಯಾಳಿ ,ತುಳು, ಕೊಂಕಣಿ ದನಿ ಕೇಳಿದಾಕ್ಷಣ ಗಮನ ಅತ್ತ ತಿರುಗುತ್ತದೆ.ಮನೆಗೆ ಹೋಗುವಾಗ ಇಲ್ಲಾಂದರೆ ಬರುವಾಗ ಬಸ್ಸಿನಲ್ಲಿ ಭೇಟಿಯಾಗುವ ಅದೆಷ್ಟೋ ಮಂದಿ ತಮ್ಮ ಮೊಬಾಯಿಲ್  ನಂಬರ್ ಕೊಡುತ್ತಾರೆ, ಶನಿವಾರ ಬಾನುವಾರ ಬಾ ಎನ್ನುತ್ತಾರೆ, ಅವರಿಗೂ ಊರಿಂದ ದೂರ ಇದ್ದಾಗ ಊರಿನವರು ಹತ್ತಿರದಲ್ಲಿದ್ದಾರೆ ಎಂಬ ಭಾವನೆ.ಕರೆದಲ್ಲಿ ಕೆಲವೊಮ್ಮೆ ಹೋದದುಂಟು ಆದರೆ ಆ ಊರಿನ ವಾತಾವರಣ ಇಲ್ಲಿ ಬರಲು ಸಾದ್ಯವೇ ಎಂಬ ಪ್ರಶ್ನೆ ಕೊನೆಗೂ ಪ್ರಶ್ನೆ ಆಗಿಯೇ ಉಳಿಯುತ್ತದೆ.
 
ಅಲ್ಲಿ ಕಳೆದ ಅದೆಷ್ಟೋ ಸಂತೋಷದ, ದುಃಖದ,ವಿದಾಯದ ವಿಚಾರಗಳು ಮನದಾಳದಲ್ಲಿದೆ, ನೆನಪಿಗೆ ಬಂದಂತೆ ಇಲ್ಲಿ ಬಿಚ್ಚಿಡುತ್ತೇನೆ.


ಹಿಂದಿನ ತುತ್ತು : http://sampada.net/blog/kamathkumble/21/09/2010/28019

 

ಶಾಲೆ ಬಿಟ್ಟ ಆ ಸಂಜೆ: http://sampada.net/blog/kamathkumble/25/10/2010/28675

 

ನಿಮ್ಮ
ಕಾಮತ್ ಕುಂಬ್ಳೆ

Rating
No votes yet

Comments