ನಲ್ಲೆ
ಭೂತಾಯಿಯ ಗರ್ಭದೊಡಲಿನಿ೦ದ
ಪನ್ನೀರಿನೊರೆತದ ಉಗಮ.
ಕಲ್ಲ ಕರ ಕೊರಳಿನಿ೦ದ
ಹರಿಯುತಿದೆ ಸುಗಮ.
ಹನಿ ಹನಿಗಳು ಒ೦ದು ಸೇರಿ
ತಾಯ ಹಾಲ ಮೊದಲ ಬಾರಿ
ಕುಡಿದು ತಣಿದ ಇಳೆಯ ಮಗಳು,
ಝರಿಯ, ತೊರೆಯ, ತೆರೆಯ
ನಿನಾದದೊಡನೆ ಬೆಳೆವಳು,
ತ೦ಗಾಳಿಯೊಡನೆ ನಲಿವಳು.
ಮನದಿ ಕನಸ ಬೀಜ ಬಿತ್ತಿ
ಪಡೆದು ನಿಸರ್ಗದ ತರಬೇತಿ,
ರಭಸ ತಳೆದು ಒಲವಿಗಾಗಿ
ಸಾಗರನ ಮಿಲನಕಾಗಿ
ಗಿರಿಗಳಿಳಿದು, ಹರಿದು, ದಣಿದು
ನಲ್ಲನೆಡೆಗೆ ನಡೆವಳು
ದಣಿವ ನೋವ ಮರೆವಳು.
ಕೆಲವೊಮ್ಮೆ ಮ೦ದಗಮನದ ಪರಿ,
ನೋಡಿ ಈ ಹರಿವ ಝರಿ,
ಮರಳಿ ತೀವ್ರ ಗಮನವೇ ಇದಕೆ ಸರಿಯು.
ಕನಸ ಇ೦ಧನ ಒಳಗೆ,
ತುಡಿತ ಮಾರುತ ಜೊತೆಗೆ,
ತನ್ನ ತಾ ಸುಡುವ ಗುಪ್ತಗಾಮಿನಿಯು,
ಬಾಳ ಬೆಳಕಿಗೆ ದಹಿಸುವಳು.
ಪಾತಳಿಗೆ ಧುಮುಕುವಳು ಬಲು ಬೇಗ
ಒಡ್ಡಿಗೆ ಶರಣಾಗಿ ತೊರೆಯುವಳು ವೇಗ
ಎ೦ದೂ ಅರಿಯದವಳವಳು ಮಿಲನ ಶುಭಯೋಗ.
ವಿರಹ ಬೇಗೆಯಲ್ಲೂ
ನೆಲವ ತಣಿಸುವ ದೇವಿ,
ತನ್ನ ದೈವನ ಸ್ಮರಿಸಿದಳು.
ಬಾಹುಗಳ ಹರಡಿ ಕರೆದಿಹಳು ಸಾಗರನ,
ಆನ೦ದಭಾಷ್ಪದಲಿ ತೊಳೆದಳವನ ವದನ,
ಅವನಲೆಯ ಚು೦ಬನಕೆ, ಕ೦ಪಿಸಿ,
ಹಾತೊರೆಯುತ್ತಿದ್ದವಳು,
ಅವನಲೆಯ ಹೊಡುತಕ್ಕೆ ಅವನಲ್ಲೇ ಬಿದ್ದಳು.
ಅವನಲ್ಲೇ ಸೇರಿ ಅವನಾಗಿ ಬಿಟ್ಟಳು.
ಈ ರೀತಿ ಈ ಪ್ರೀತಿ ಇದ್ದರೂ ಏನಿದೆ?
ಅ೦ತದಲ್ಲಿ ಸಾಗರನು ಸೋತುಬಿಟ್ಟ ಬಾನಿಗೆ.
- ಪ್ರಸನ್ನ ಕುಲಕರ್ಣಿ
Comments
ಉ: ನಲ್ಲೆ
ಉ: ನಲ್ಲೆ
In reply to ಉ: ನಲ್ಲೆ by ksraghavendranavada
ಉ: ನಲ್ಲೆ
ಉ: ನಲ್ಲೆ
In reply to ಉ: ನಲ್ಲೆ by gopinatha
ಉ: ನಲ್ಲೆ
In reply to ಉ: ನಲ್ಲೆ by prasannakulkarni
ಉ: ನಲ್ಲೆ
In reply to ಉ: ನಲ್ಲೆ by manju787
ಉ: ನಲ್ಲೆ
In reply to ಉ: ನಲ್ಲೆ by prasannakulkarni
ಉ: ನಲ್ಲೆ