ಹರಿಪ್ರಸಾದ್ ನಾಡಿಗರಿಗೆ ಜೈ
ನೋಡ್ರಲಾ ಈ ಬಾರಿ ನಮ್ಮ ದಸರಾ ನೋಡೋದಿಕ್ಕೆ ಸಂಪದದ ಹರಿ ಪ್ರಸಾದ್ ನಾಡಿಗರು ಬತ್ತಾವ್ರೆ, ಸಂದಾಕಿ ಮಾಡ್ ಬೇಕ್ರಲಾ ಅಂದ ಗೌಡಪ್ಪ.ಸಂದಾಕಿ ಅಂದ್ರೆ ಆನೆಗೆ ಲದ್ದಿ ಹಾಕಕ್ಕೆ ಬಿಡಬಾರದು ಅಂದ ಸುಬ್ಬ. ಲೇ ಅದು ಹಾಕಲಿ ಹಿಂದುಗಡೆ ನೀನು ಬುಟ್ಟಿ ಹಿಡಿಯಲಾ ಅಂದಾ ಗೌಡಪ್ಪ. ನಮ್ಮ ಹೆಣ್ಣು ಐಕ್ಳು ಸಾನೇ ಖುಸಿಯಿಂದ ಓಡಾಡಿದ್ದೇ ಓಡಾಡಿದ್ದು. ರಂಗೋಲಿ ಹಾಕಿದ್ದೇ ಹಾಕಿದ್ದು. ಸಾಕವ್ವನ ಮಗಳು ಸುಂದರಿ ಸಂಪದ ಅಂತ ಬರೆದು ಒಳಗಡೆ ನಾಡಿಗರ ಚಿತ್ರ ಬರೆದಿದ್ಲು. ಯಾಕವ್ವಾ, ನಾಡಿಗರು ಇಂಪ್ರಸ್ ಆಯ್ತಾರೆ ಅಂಗೇ ನನಗೊಂದು ಐಡಿ ಕೊತ್ತಾರೆ ಅಂದ್ಲು. ನೀನು ಏನು ಬರೀತಿಯವ್ವಾ ಅಂದ್ರು ಮೇಸ್ಟ್ರು. "ನಮ್ಮ ಸಾಲೇಯಲ್ಲಿ ಪೆದ್ದ ಮಾಸ್ಟರು" ಅಂತ ಲೇಖನ ಬರೀತೀನಿ ಅಂದ್ಲು. ಸರಿ ದಸರಾ ಬಂತು.
ಲೇ ನಾಡಿಗರು ಬಂದ್ರು ಕಲಾ. ಆರತಿ ಮಾಡ್ರವಾ. ಆರತಿ ಎತ್ತಿರೇ ನಮ್ಮ ನಾಡಿಗರಿಗೇ. ಒಸಿ ಸಂದಾಕಿ ಆರತಿ ಎತ್ತಿರೇ ನಮ್ಮ ನಾಡಿಗರಿಗೇ ಅಂತಾ ಗೌಡಪ್ಪನ ಹೆಂಡರು ಹಾಡು ಹೇಳಿದ್ದೇ ಹೇಳಿದ್ದು. ಅಂಗೇ ಹಣೆಗೆ ಒಂದು ಹತ್ತು ಕಿತಾ ಕುಂಕುಮ ಹಚ್ಚಿದ್ದೇ ಹಚ್ಚಿದ್ದು. ನಾಡಿಗರು ಸವದತ್ತಿ ಯಲ್ಲವ್ವನ ಭಕ್ತರು ಆಗಿದ್ರು. ಅಲ್ಲಿ ಪಕ್ಕದಲ್ಲೇ ಇದ್ದ ನಿರ್ವಾಹಕ ತಂಡದವರು. ಬೇಜಾರಾಗಿದ್ರು. ಅದಕ್ಕೆ ನಮ್ಮ ಸುಬ್ಬಿ ಬೇಜಾರಾಗಬೇಡ್ರಿ ಸಿವಾ. ನಿಮಗೂ ಆರತಿ ಮಾತ್ತೀನಿ ಅಂತಾ ಬತ್ತಿನಾ ಹರಳೆಣ್ಣೆಯಲ್ಲಿ ನೆನಸಿಕೊಂಡು ಆರತಿ ಮಾಡಿದ್ಲು. ಸಾನೇ ಹೊಗೇಗೆ ಅವರೆಲ್ಲಾ ಕೆಮ್ಮತಾ ಬೇಡ ತೆಗಿಯವ್ವಾ ನಿನ್ನ ಆರತಿ ಅಂತಾ ಸಾನೇ ಉಗಿದ್ರು.
ಸರಿ ನಾಡಿಗರಿಗೆ ಮೆರವಣಿಗೆಗೆ ಕರೆದುಕೊಂಡು ಹೋಗ್ರಲಾ ಅಂದ ಗೌಡಪ್ಪ. ನಾಡಿಗರು ಜೀನ್ಸ್ ಪ್ಯಾಂಟ್ ಸರಿ ಮಾಡ್ಕಂಡು ಹೋಗೋಣ ನಡೆಯಿರಿ ಅಂದ್ರು. ಅಹಾ ಕನ್ನಡ ಎಷ್ಟು ಸಂದಾಗಿ ಮಾತ್ತಾರಲ್ಲಾ ಅಂದ ಗೌಡಪ್ಪ. ಗೌಡಪ್ಪನ ಹೆಂಡರು ಹಿಂದಕಡೆ ಇರೋ ಆನೆ, ಎಮ್ಮೆ ಎಲ್ಲಾ ಕರ್ಕಂಡು ನೀನು ಬಾ ಅಂದ್ಲು ಗೌಡಪ್ಪಂಗೆ. ನಾನೇನು ದನಾ ಕಾಯೋ ಕಿಸ್ನನಾ ಅಂದ ಗೌಡಪ್ಪ. ಊಟಕ್ಕೆ ಮುದ್ದೆ ಬಸ್ಸಾರು ಮಾರ್ಡೀತ್ತೀವ್ನಿ ಅಂದ್ಲು. ಲೇ ನಾಡಿಗರು ಉಣ್ಣಕ್ಕಿಲ್ಲ ಕಣೇ.
ಸರಿ ವ್ಯಾನ್ನಾಗೆ ಇನ್ನೊಂದು ಸವಂಡ್ ಬತ್ತಾ ಇತ್ತು,. ಲೇ ನಾನು ಇಲ್ಲೇ ಇದೀನಿ ಕಣ್ರೋ. ಅತ್ರಾಸಾ ಹೀ ಕಾಲಾ ಥೂ ಅಂತಾ. ನೋಡಿದ್ರೆ ನಮ್ಮ ಮಂಜಣ್ಣ. ಬೇಗ ಇಳಿಸ್ರಲಾ. ಇಲ್ಲಾಂದ್ರೆ ಆ ವಯ್ಯ ಸಾನೇ ಹೊಡೀತಾರೆ. ಅಣ್ಣಾ ಅಂದೆ. ಲೇ ಕೋಮಲ್ ಬಂದೆ ತಡೆಯಲಾ ಅಂದ್ರು. ಲೇ ಸಂಪದದೋರು ಎಲ್ಲಾ ಬಂದ್ಯಾರೆ ಕಲಾ. ಲೇ ನಾವಡರು ಎಲ್ಲಲಾ. ಏ ಅವರು ಹೊರನಾಡಿನಾಗೆ ಸಾನೇ ಬುಸಿಯಾಗರ್ವೆ ಆಮ್ಯಾಕೆ ಅವರ ಮಗ ಬಹಳ ತುಂಟ ಅಂತೆ ಬರಕ್ಕಿಲ್ಲ ಅಂದೆ. ಅಷ್ಟೊತ್ತಿಗೆ ಸುರೇಶ್ ಹೆಗ್ಡೆಯೋರು ಒಂದು ಕವನ ಒಗದೇ ಬಿಟ್ರು.
ನಾನು ಬಂದಿದ್ದು ಕೋಮಲ್ ನೋಡಲಿಕ್ಕೆ
ಆದರೆ ನನಗೆ ಸಿಕ್ಕಿದ್ದು ಕೋಮಲ್ ನ ಗೆಳೆಯ ಗೌಡಪ್ಪ
ಅವನ ವಾಸನೆಯಿಂದ ನನಗೆ ಬಂದಿತು ನಿದ್ದೆ
ಆದರೆ ಅದು ನಿದ್ದೆಯಲ್ಲ ಬದಲಾಗಿ ಮೂರ್ಛೆ ಎಂದರು. ಏನಲಾ. ಏ ಇದು ಅವರ ಕವನ ಗೌಡರೆ. ಎಲ್ಲಲಾ ಸಂತೋಷ್ ಆಚಾರ್ಯ. ಏ ಅವರು ಪೂನಾದಾಗೆ ಅವ್ರೆ ಬುಡಿ ಅವರು ಬರಕ್ಕಿಲ್ಲಾ. ನಾಸ್ಟಾಲಿಯಾ ಅಂತಾ ಅವರ ಹಳ್ಳಿ ಕತೆ ಬರೀತಾ ಇತ್ತಾರೆ. ಸಾನೇ ಬಸ್ ಚಾರ್ಜ್ ಆಯ್ತದೆ ಅಂತ ಆ ವಯ್ಯ ಬಂದಿಲ್ಲ.ಏ ಹಬ್ಬಕ್ಕೆ ಹೋಗಕ್ಕಿಲ್ಲ ಅಂತೀನಿ. ಲೇ ಎಲ್ಲಲಾ ನಮ್ಮ ಕಾಮತ್ ಕುಂಬ್ಳೆ, ಜಯಂತ್,ಕಮಲಾ,ಮಾಲತಿ,ರಾಯರು,ನಗೆ ಸಾಮ್ರಾಟ್ ಅವರೆಲ್ಲಾ ಹಿಂದಕಡೆ ವ್ಯಾನ್ನಾಗೆ ಬತ್ತಾವ್ರೆ. ಲೇ ಶ್ರೀನಾಥ್ ಭಲ್ಲೆ ಎಲ್ಲಲಾ. ಏ ಆ ವಯ್ಯಂಗೆ ಇನ್ನು ಮದುವೆ ಆಗಿಲ್ಲ. ಲೇ ನಮ್ಮ ಸುಬ್ಬಿ ಅವ್ಳೆ ಕನ್ಲಾ. ಯಾಕೆ ಗುನ್ನಾ ಹೊಡೆಯೋಕ್ಕಾ. ಅಟ್ಟೊತ್ತಿಗೆ ಶಾನಿ ಇಳಿದ್ರು. ಗೌಡಪ್ಪ ಹಂಗೇ ಮರೆಯಾದ. ಯಾಕ್ರೀ. ಲೇ ಆ ವಮ್ಮ ಸ್ನಾನ ಮಾಡು ಅಂತದೆ ಕನ್ಲಾ. ಅದೂ ಬಚ್ಚಲು ಉಜ್ಜೋ ಬ್ರಸ್ನಾಗೆ, ಹೋದ್ ಕಿತಾ ಮಾಡಿದ್ದೇ ಇನ್ನೂ ಗಾಯ ಅಂಗೇ ಐತೆ. ನೋಡಲಾ ಅಂತಾ ತೋರಿಸ್ದ. ಏ ಥೂ ಮುಚ್ಕೋಳ್ರಿ. ಅಂದ ಹಾಗೆ ನಮ್ಮ ಬಯಾಲಜಿ ಮೇಸ್ಟ್ರು ಗಣೇಶ್ ಎಲ್ಲಲಾ ಅಂದ್ರೆ. ಮೆರವಣಿಗೆಗೆ ಇದ್ದ ಸಾಲೆ ಐಕ್ಳು ಕಾಣ್ತಾ ಇರ್ಲಿಲ್ಲ. ಅಲ್ಲೇ ಮೋರಿ ಪಕ್ಕ ಬೆಳೆದಿದ್ದ ಗಿಡಕ್ಕೆ ಇದಕ್ಕೆ ಹಿಪರೋಮೋಟೋಸ ಅಂದ್ರೆ ತುರ್ಚೀ ಗಿಡ ಅಂತಾರೆ ಅಂತಿದ್ರು. ಪರೀಕ್ಸೆ ಬೇರೇ ಬಂದಿತ್ತು ಐಕ್ಳು ಗಣೇಸ ಮೇಟರೆ, ಗಣೇಸ ಮೇಟರೆ ಅಂತಿದ್ವು..ಕವಿ ನಾಗರಾಜರು. ಅವರದು ಹಳೇ ಕೇಸು ಸಾನೇ ಐತಂತೆ ಲಾಯರ್ ಹುಡುಕ್ತಾ ಅವ್ರೆ. ಮತ್ತೆ ಪ್ರಸನ್ನ, ಲೇ ಅಲ್ಲೇ ಎಲ್ಲೋ ಮೈಕ್ ಸೆಟ್ ರಂಗನ ತಾವ ಇರಬೇಕು ನೋಡಲಾ ಅಂದ ಗೌಡಪ್ಪ. ಸರಿ ಮೆರವಣಿಗೆ ಹೊಂಡ್ತು.
ನಾಡಿಗರು ಮುಂದುಗಡೆ ಬತ್ತಾ ಇದ್ರೆ ಗೌಡಪ್ಪ ಕಾಲಿಗೆ ಸಿಗೋನು. ಕಿಸ್ನ ಅವರ ಮುಂದೆ ಸಿವರಾಜ್ ಕುಮಾರ್ ಸ್ಟೆಪ್ ನೋಡಿ ಅಂತಾ ತೋರಿಸ್ತಾ ಇದ್ದ. ಲೇ ಅವರು ಪಿಚ್ಚರ್ ಡೇರಕ್ಟರ್ ಅಲ್ಲಲಾ ಅಂದ್ ಮ್ಯಾಕೆ ಆ ಕಡೆ ಹೋದ. ಗೌಡಪ್ಪ ಮತ್ತೆ ಕಾಲಿಗೆ ಅಡ್ಡ ಹೋದ. ನೋಡಿ ಕೋಮಲ್ ನಿಮ್ಮ ಗೌಡ ಹಿಂಗೆ ಅಡ್ಡ ಬರ್ತಾ ಇದ್ರೆ ಮಲ್ಡರು ಆಯ್ತಾನೆ ಅಂದ್ರು. ನಾಡಿಗರಿಗೆ ಆರತಿ ಮಾಡಿದ್ರೆ ಒಂದು ರೂಪಾಯಿ ಹಾಕೋರು. ಏನಲಾ ಇವರಿಗೆ ಸಾನೇ ದೊಡ್ಡ ಗುಣ ಅಂತ್ಯಾ ಬರೇ ಒಂದೇ ರೂಪಾಯಿ ಹಾಕ್ತಾರೆ ಅಂದ ಗೌಡಪ್ಪ. ನಾನೂ ಇದೇ ಫಸ್ಟ್ ಟೇಮ್ ನೋಡ್ತಾ ಇರೋದು ಅಂದ ಸುಬ್ಬ. ಅದೇನೋಪಾ ಅಂದ ಕಿಸ್ನ. ಇದರ ಬಗ್ಗೆ ಭಾಸ್ಕರ್ ಹಾಗೂ ಮಹೇಶ್ ಎರಡು ಲಿಂಕ್ ಕೊಟ್ಟು ವಿವರಿಸಿದರು. ಸರಿ ಮೆರವಣಿಗೆ ಮುಗೀತು. ಇದೀಗ ನಾಡಿಗರಿಂದ ಎರಡು ಹಿತವಚನ.
ನೋಡಿ ನಾನು ನಿಮ್ಮ ಊರಿಗೆ ಹೊಸಬ. ಈ ರೀತಿ ಪ್ರಾಣಿಗಳನ್ನು ಮೆರವಣಿಗೆಗೆ ಬಳಸೋದು ತಪ್ಪು. ಸಾ ನಮ್ಮೂರಲ್ಲಿ ಮಾರಿ ಹಬ್ಬಕ್ಕೆ ಸಾನೇ ಕುರಿ ಕಡೀತಾರೆ ಅಂದ ಕಿಸ್ನ. ಅದೂ ತಪ್ಪು ಕಣಪ್ಪಾ. ಅದರ ಬದಲು. ನಿಂಬೇ ಹಣ್ಣಿಗೆ ಕುಂಕುಮ ಹಚ್ಚಿ ಕೊಯ್ಯಿರಿ. ಹಾಗೇ ವೆಜಿಟೇರಿಯನ್ ಹೋಳಿಗೆ, ಸಾರು ಅನ್ನ, ಮಜ್ಜಿಗೆ ಅನ್ನ ಊಟ ಮಾಡಿರಿ. ನಿಮಗೂ ಒಳ್ಳೇದು. ದೇಹಕ್ಕೂ ಒಳ್ಳೆಯದು ಅಂದರು.
ಎಲ್ರೂ ಲೇ ಇವರು ಹೇಳಿದ್ದು ಸರಿ ಕಲಾ. ಅಂದು ಮಜ್ಜಿಗೆ ಮಾಡಕ್ಕೆ ಸುರು ಮಾಡಿದ್ರು. ಮೊದಲು ಎರಡು ದಿನಾ ಎಲ್ಲಾ ಕೆರೆ ತಾವ ಹೋಗೋವು ಆಮ್ಯಾಕೆ ಸರಿ ಆದ್ವು. ಚೆನ್ನಾಗಿ ಜೀರ್ಣ ಆಯ್ತದೆ ಕಲಾ ಅನ್ನೋವು. ಸರಿ ನಾಡಿಗರು ಬಂದ್ ಹೋದ್ ಮ್ಯಾಕೆ ಹಳ್ಳೀಲಿ ಬದಲಾವಣೆ ಏನೂ ಅಂದ್ರೆ ಎಲ್ಲಾವು ಇದೀಗ ವೆಜ್ ಆಗವೆ. ಲೇ ಸುಬ್ಬ ನೀನು ಏನ್ಲಾ ಅಂದ್ರೆ. ಲೇ ನಾನು ವೆಜ್ ಕಲಾ ಅಂತಾನೆ.ಇದೀಗ ರಣರಂಗ ಸ್ಟಾಪ್ ಆಗೈತೆ.
Comments
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by manju787
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by ಗಣೇಶ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by gopinatha
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by shaani
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by komal kumar1231
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by Jayanth Ramachar
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by kamath_kumble
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by ksraghavendranavada
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by kamalap09
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by asuhegde
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by komal kumar1231
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by prasannasp
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by shaani
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ
In reply to ಉ: ಹರಿಪ್ರಸಾದ್ ನಾಡಿಗರಿಗೆ ಜೈ by ragosha
ಉ: ಹರಿಪ್ರಸಾದ್ ನಾಡಿಗರಿಗೆ ಜೈ
ಉ: ಹರಿಪ್ರಸಾದ್ ನಾಡಿಗರಿಗೆ ಜೈ