ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು
“ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ.
ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರೋಧಿಸಲೇ ಬೇಕು. ಪಥಭ್ರಾಂತ ಮೂರ್ಖ ಯುವಜನರನ್ನು ಹಿಡಿದು, ಅವರ ಮನುಷ್ಯತ್ವವನ್ನು Brainwashನಿಂದ ತೊಡೆದುಹಾಕಿ, ಬಾಂಬು-ಬಂದೂಕಗಳನ್ನು ಕೊಟ್ಟು ರಫ್ತು ಮಾಡುವ ‘ಢಕಾಯಿತರು’ ಯಾವ ಧರ್ಮದವರೂ ಅಲ್ಲ; ಅವರಿಂದ ಯಾವ ಧರ್ಮವೂ ಉರ್ಜಿತವಾಗುವುದಿಲ್ಲ; ಆ “ರಾಜಕೀಯ ಉದ್ಯಮಿ”ಗಳಿಗೆ ಧರ್ಮೋದ್ಧರದ ಉದ್ದೇಶವಿರುವುದೂ ಸಾಧ್ಯವಿಲ್ಲ! ಆದರೂ ಅವರು ಮಾಡಿಸುವ “ಪ್ರಳಯ” ಢಾಳಾಗಿ ಕಾಣುತ್ತದೆ; ಸಾರ್ವತ್ರಿಕ ಖಂಡನೆಗೆ ಗುರಿಯಾಗುತ್ತದೆ. ಆದರೆ ಕಣ್ಣಿಗೆ ಕಾಣಿಸಿಕೊಳ್ಳದೇ ಒಳಗೊಳಗೇ ದೇಶದ ಒಮ್ಮತಕ್ಕೇ ಬತ್ತಿಯಿಡುವ ನಯವಂಚಕ ರಾಜಕಾರಣ, ಹಾದಿತಪ್ಪಿದ ಯುವಕರು ಇಡುವ ಟೈಂ ಬಾಂಬಿನ ಬತ್ತಿಗಿಂತಲೂ “ನಿಧಾನ ದ್ರೋಹಿ”ಯಾಗಿದ್ದು, ಹೆಚ್ಚು ಅಪಾಯಕಾರಿಯಾದದ್ದು.
‘ದೇಶದ ಬಹುಸಂಖ್ಯಾತರು ನಿಮ್ಮ ವೈರಿಗಳು; ಅವಕಾಶ ಸಿಕ್ಕಾಗ ನಿಮ್ಮನ್ನು ಮುಗಿಸಿಬಿಡುತ್ತಾರೆ’ ಎಂಬ ಇಲ್ಲದ ಭೀತಿಯನ್ನು ಅಲ್ಪಸಂಖ್ಯಾತರಲ್ಲಿ ಬಿತ್ತುತ್ತಾ ಬಂದಿರುವವರೇ ನಿಜವಾದ ಭಯೊತ್ಪಾದಕರು. ಆ ಭಯಭೀತರು ಎಂದಿಗೂ ದೇಶದ ಮುಖ್ಯ ಪ್ರವಾಹದಲ್ಲಿ ಒಂದಾಗದೆ, ತಮ್ಮ ವೋಟ್ಬ್ಯಾಂಕ್ ಉದ್ದೇಶ ಪೂರೈಸುತ್ತಾ ನಿರಂತರ ಪ್ರತ್ಯೇಕತೆ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವ ಆ ಜನ, ನಿಜವಾದ ದೇಶದ್ರೋಹಿಗಳು.
ಈ ಛಿದ್ರ ರಾಜಕೀಯ ಬಯಲಾಗಿ, ಆಚಾರ-ವಿಚಾರ-ಇರಸಣಿಕೆಗಳಲ್ಲಿ ಭಿನ್ನತೆಯಿದ್ದರೂ ರಾಷ್ಟ್ರೀಯವಾಗಿ ಎಲ್ಲ ಸಮುದಾಯವೂ ಒಂದೇ ಎಂಬ ಏಕಸೂತ್ರದ ಸಮಾನ ನಾಗರಿಕ ಸಂಹಿತೆ ಜಾರಿಯಾಗುವವರೆಗೆ ಸಮಾಜದ ಜನ ಶಾಂತಿಯಿಂದ ಬಾಳುವುದು ಸಾಧ್ಯವಾಗುವುದಿಲ್ಲ!
Comments
ಉ: ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು
In reply to ಉ: ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು by ಶ್ರೀನಿವಾಸ ವೀ. ಬ೦ಗೋಡಿ
ಉ: ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು
ಉ: ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು
ಉ: ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು
ಉ: ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು