ಭಗ್ನ

ಭಗ್ನ

ಮುರಿದ ಮಂಟಪ
ಕಮರಿದ ಕನಸು
ಹೊಸತನ್ನು ಕಟ್ಟುತ್ತೇನೆಂದು
ತನ್ನೊಡಲನು ಭಗ್ನಗೊಳಿಸಿ
ಹೊಸತು ಮತ್ತು
ಹಳೆಯದರ ಮಧ್ಯೆ
ಕಳೆದು ಹೋದ ತ್ರಿಶಂಕು
ಮನದ ಅಪರಿಮಿತ ನೋವಿಗೆ
ಕವನವೊಂದೇ ಸಾಟಿ ಎಂದು
ಪಾಳು ದೇಗುಲದ ನಡುವೆ
ಮನೆ ಮಾಡಿ
ಜೀರ್ಣೋದ್ಧಾರದ
ಕನಸು ಕಾಣುತ್ತಾ  
ಕವಿತೆಯೆಂಬ ಭ್ರಮೆಯಲ್ಲಿ
ಕಳೆದು ಹೋಗುತ್ತಾ
ಭಗ್ನತೆಯ ಅರಿವಾಗುತ್ತಿದ್ದರೂ
ಪುನಃ ಒಂದು ಕವಿತೆ ಬರೆದು
ನಗುತ್ತಿರುವ ಕವಿ!

Rating
No votes yet

Comments