ಸುದ್ದಿ ಚುಟುಕಗಳು - ಮೂರು
ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದು
ಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆ
ವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥ
ಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ
***
ವರ್ತೂರು ಪ್ರಕಾಶನದೀಗ ಹೊಸತೊಂದು ಕ್ಯಾತೆ
ಆತನಿಗೆ ನೀಡಬೇಕಂತೆ ಸಾರಿಗೆ ಯಾ ಗೃಹ ಖಾತೆ
ಯಡ್ಡಿ ಅದೇಕೋ ಒಳಗೊಳಗೇ ಖುಷಿಪಡುತ್ತಿದ್ದಾರೆ
ಸದ್ಯ ನನ್ನ ಖುರ್ಚಿ ಕೇಳಿಲ್ಲ ಈತ ಎಂದನ್ನುತ್ತಿದ್ದಾರೆ
***
ದೇವೇಗೌಡರನ್ನು ನಂಬಲೇಬೇಡಿ ಎಂದು ಆದೇಶ
ನೀಡಿದ್ದಾರೆ ಕೈ-ಕಮಾಂಡಿನವರು ಅತ್ತ ದಿಲ್ಲಿಯಲ್ಲಿ
ಕುಮಾರಸ್ವಾಮಿಯನ್ನೇ ನಂಬುತ್ತಿಲ್ಲ ನಾವು ಇನ್ನು
ಅವರಪ್ಪನ ಮಾತೆಲ್ಲಿ ಎಂದರಂತೆ ಕಾಂಗ್ರೇಸಿಗರಿಲ್ಲಿ
***
ಧರ್ಮಯುದ್ಧದಲ್ಲಿ ಜಯ ನನ್ನದೇ ಎನ್ನುತ್ತಿದ್ದಾನಂತೆ
ಆ ಅಧರ್ಮಿ ಕುಮಾರಸ್ವಾಮಿ ಪತ್ರಕರ್ತರ ಮುಂದೆ
ಸರಿ, ಆದರೆ ಆ ಧರ್ಮ ಯುದ್ಧ ಆರಂಭವಾಗುವುದು
ಯಾವಾಗ ಎಂದನೋರ್ವ ಪತ್ರಕರ್ತ ಕೂತು ಹಿಂದೆ
***
ಅನಂತಕುಮಾರನಿಗೆ ಮುಖ್ಯಮಂತ್ರಿ ಪಟ್ಟ ಕೊಡುವ
ಮಾತುಗಳು ಕೇಳಿಬಂದಿದ್ದು ನಿಜಕ್ಕೂ ನಿಜವೇ ಅಂತೆ
ಅನಂತನ ಕನಸಿನಲ್ಲಿ ಅದಿರು ಲಾರಿಗಳ ಸದ್ದು ಹೆಚ್ಚಾಗಿ
ರಾತ್ರಿಯಿಡೀ ಮಂಚದಿಂದ ಬೆಚ್ಚಿ ಬೆಚ್ಚಿ ಬೀಳುತ್ತಿದ್ದನಂತೆ
***
ಪಕ್ಷಾಂತರ ಮಾಡಿಸುವುದು ಮಹಾಪರಾಧ ಎನ್ನುತ್ತಿದ್ದಾಗ
ಇಬ್ರಾಹಿಮ್, ದೇಶಪಾಂಡೆ ಮತ್ತು ಸಿದ್ದರಾಮಯ್ಯನವರಲ್ಲಿ
ಕಾಂಗ್ರೇಸ್ಸನ್ನೇ ಕೆಡಿಸಿರುವೀ ಹೊರಗಿನವರನ್ನು ದಬ್ಬೋಣವೇ
ಮೊದಲು, ಎಂದನಂತೆ ಡಿ.ಕೆ.ಶಿ. ಆ ಖರ್ಗೆಯವರ ಕಿವಿಯಲ್ಲಿ
***
ಆತ್ರಾಡಿ ಸುರೇಶ ಹೆಗ್ಡೆ
Comments
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
In reply to ಉ: ಸುದ್ದಿ ಚುಟುಕಗಳು - ಮೂರು by Jayanth Ramachar
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
ಉ: ಸುದ್ದಿ ಚುಟುಕಗಳು - ಮೂರು
In reply to ಉ: ಸುದ್ದಿ ಚುಟುಕಗಳು - ಮೂರು by h.a.shastry
ಉ: ಸುದ್ದಿ ಚುಟುಕಗಳು - ಮೂರು