ಬದುಕಿನ ಅವಿಸ್ಮರಣಿಯ ಅನುಭವ

ಬದುಕಿನ ಅವಿಸ್ಮರಣಿಯ ಅನುಭವ

 

’ಬದುಕಿನ ಅವಿಸ್ಮರಣಿಯ ಅನುಭವ’,’ದಸರ ೪೦೦’,’ದಸರ ಸೊಬಗು-ಕಣ್ಣಿಗೆ ಮೆರಗು’,ಹೀಗೆ ಹಲವಾರು ವಿವಿಧ ಸಾಲಿನಲ್ಲಿ ದಸರ ಪ್ರಚಾರವನ್ನು ಬೆಂಗಳೂರು -ಮ್ಯೆಸೂರು ರಸ್ಥೆಯಲ್ಲಿ ಮಾಡಲಾಗಿತ್ತು.ಮ್ಯೆಸೂರು ಎಂಬ ಪದ ಕೇಳಿದರೆ ಮ್ಯೆ ಮನ ಅರಳುವ ನನಗೆ,ಈ ಥರ 
ಪ್ರಚಾರ ನೋಡಿದರೆ ಮನಸಿಗೆ ಎನೋ ಖುಶಿ.ದಸರೆಯಲ್ಲಿ ಮ್ಯೆಸೂರು ಬೆಳಕಿನಿಂದ ಕಂಗೊಳಿಸುವುದು.ಪ್ರತಿ ವಾರ ಮ್ಯೆಸೂರು - ಬೆಂಗಳೂರು ಓಡಾಡುವ ನಾನು ’ಸಾಂಸ್ಕ್ರತಿಕ ರಾಜಧಾನಿ,ಅರಮನೆಗಳ ನಗರಿ ಮ್ಯೆಸೂರುಗೆ ಸ್ವಾಗತ’ಎಂಬ ನಾಮಫಲಕ ನೊಡಿದರೆ ಸಾಕು ಆಹ 
ಇದೆ ಸ್ವರ್ಗ!! ಎನಿಸುವುದು.ಇನ್ನು ದಸರೆಯಲಿ ನಮಗೆಲ್ಲ ಬೆಳಕಿನ ಸ್ವಾಗತ,ಅದು ನೊಡಿದರಂತೂ ಎಂಥ ಖುಶಿ.ನಾನಂತೂ ಕಳೆದ ಬಾರಿ ದಸರವನ್ನು ಹತ್ತು ದಿನ ಮ್ಯೆಸೂರುನಲ್ಲಿಯೆ ಕಳೆದಿದ್ದೆ.ದಸರೆಯಲ್ಲಿ ನಡೆಯುವ ಪ್ರತಿಯೊಂದು  ಕಾರ್ಯಕ್ರಮವನ್ನು  ವೀಕ್ಷಿಸಿದ್ದೆ ಹಾಗು 
ಸುತ್ತಮುತ್ತಲಿನ ಎಲ್ಲ ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಿದ್ದೆ.ಆದರೆ ವಿಜಯದಶಮಿ ದಿನ ಜಂಬೂಸವಾರಿ,ಪಂಜಿನ ಕವಾಯಿತು ಕಾರ್ಯಕ್ರಮವನ್ನು ನೋಡಲಿಲ್ಲ.ಕಳೆದ ಬಾರಿ ನನ್ನ ಹತ್ತು ದಿನಗಳ ದಸರೆಯ ಅನುಭವನ್ನು ಸಹೋದರರಲ್ಲಿ ಸ್ನೇಹಿತರಲ್ಲಿ ಹಂಚಿಕೊಂಡಾಗ ಅವರೆಲ್ಲ ಪ್ರತಿಕ್ರಿಯಿಸಿದ್ದು 
- ’ಮ್ಯೆಸೂರು ದಸರ ಅಂದರೆ ವಿಶ್ವವಿಖ್ಯಾತ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ಅದನ್ನು ನೋಡಿದರೆ ಮಾತ್ರ ದಸರ ಪೂರ್ಣಗೊಳ್ಳುವುದೆಂದು’.ಒಮ್ಮೆ ಆಲೋಚಿಸಿದೆ ಇದು ನಿಜವೆ,ಆ ಕ್ಷಣ ನಿರ್ಧರಿಸಿದೆ ಮುಂದಿನ ಭಾರಿ ವಿಜಯದಶಮಿಯೆಂದು ನಾ ಅಂಬಾರಿ,ಪಂಜಿನ 
ಕವಾಯಿತು ನೊಡಬೇಕೆಂದು.ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದ ಹೇಗೊ ಆ ನನ್ನ ಅಂದಿನ ಕನಸು ಇಂದು ಕೈಗೂಡಿತು.
ಅಂದು ಭಾನುವಾರ ೧೭-೧೦-೨೦೧೦ ಎಂದಿನಂತೆ ತಡವಾಗಿ ಎದ್ದು ತಿಂಡಿ ತಿಂದು,ಟೀ ಕುಡಿದು ತಂದೆ ತಾಯಿ ಅಣ್ಣನೊಂದಿಗೆ ಮಾತಾಡುತ್ತಿದ್ದಾಗ ಸಮಯ ೧೧ ಆಗಿತ್ತು.ನನ್ನ ಅಣ್ಣ ದಸರೆಗೆ ಹೋಗೋಣ ಬರುತ್ತಿಯ ಎಂದ.ನಾ ಸುಮ್ಮನೆ ತಮಾಷೆ ಅಂದುಕೂಂಡೆ.ಅವನು ಇಲ್ಲ, 
ತಮಾಷೆ ಅಲ್ಲ ಪಾಸುಗಳು ಸಿಕ್ಕಿವೆ ಹೋಗೋಣ ಎಂದ.ಸರಿ ಇಂದು ನೋಡೆ ಬಿಡುವ ನಮ್ಮ ಮ್ಯೆಸೂರು ದಸರ ಎಂದು ಹೊರಟೆ.ನಮಗೆ ದೊರೆತ ಅರಮನೆಯ ಪಾಸು ಅರಮನೆಯ ಮುಂಭಾಗದ ದ್ವಾರದು.ಅಲ್ಲಿ ಕುಳಿತುಕೂಂಡು ಅರಮನೆ ನೋಡಿದರೆ ಎನೋ ಸಂತಸ.ಅಲ್ಲಿ 
ನೇರವೇರಿದ್ದ ಜನಸ್ಥೋಮ ನೋಡಿದರಂತೂ ಯಾವ ಜನರು ಇವರು ಎಲಿಂದ ಬಂದಿದ್ದಾರೆ ಅನಿಸುತಿತ್ತು.ಸಾಮಾನ್ಯವಾಗಿ ಅಂಬಾರಿ ನಂತರ ಹಲವಾರು ಜಿಲ್ಲೆಯ ವಿಶೇಷ ಸ್ತಬ್ಧ ಚಿತ್ರಗಳು ಬರುತ್ತಿದ್ದವು.ಆದರೆ ಈ ಬಾರಿ ಸ್ತಬ್ಧ ಚಿತ್ರಗಳ ನಂತರ ಅಂಬಾರಿ ಬರುವುದು ಎಂದು 
ಹೇಳಿದರು.ಅರ್ಜುನನೊಂದಿಗೆ ಪ್ರಾರಂಭವಾದ ದಸರ ಮೆರವಣಿಗೆ ನೊಡಲು ಸೊಗಸಾಗಿತ್ತು.ಒಂದರ ಹಿಂದೆ ಒಂದು ಹಿಂಬಾಲಿಸುತ್ತ ಹಲವಾರು ಜಿಲ್ಲೆಯ ವಿಶೇಷ ಸ್ತಬ್ಧ ಚಿತ್ರ ವಿವಿಧ ನೃತ್ಯದೊಂದಿಗೆ ಮೆರವಣಿಗೆ ಸಾಗುತಿತ್ತು.ಆ ಉರಿಬಿಸಿಲಿನಲ್ಲಿ ಮೆರವಣಿಗೆ ನೊಡುತ್ತಿದ್ದರೆ ನನಗಂತೂ ಯಾವ 
ಬಾಯರಿಕೆ,ಹಸಿವು,ದಣಿವು ಅನಿಸುತಿರಲಿಲ್ಲ.ಮೆರವಣಿಗೆ ಶುರುವಾಗಿ ಸುಮರು ಒಂದುವರೆ ಘಂಟೆ ಆಗುತಿತ್ತು ಆದರೆ ನಮ್ಮ ಬಲರಾಮನ ಪತ್ತೆ ಇರಲಿಲ್ಲ.ಸಮಯ ೩.೪೦ಯಾಯಿತು,ಅತ್ತ ಪಂಜಿನ ಕವಾಯಿತಿಗೆ ಜಾಗ ಕಾದಿರಸಬೇಕು ಅದಕ್ಕಾಗಿ ೪.೩೦-೫ ರೊಳಗೆ ಬನ್ನಿಮಂಟಪದಲ್ಲಿ 
ಇರಬೇಕು.ಸಮಾಯದ ಪರಿವಿಲ್ಲದೆ ಮೆರವಣಿಗೆಯ ವೀಕ್ಷಣೆಯಲ್ಲಿ ಮುಳಗಿಹೋಗಿದ್ದೆ.ಇತ್ತ ಕಡೆ ಉತ್ಸಾಹ ಅತ್ತ ಕಡೆ ಮೀರುತ್ತಿರುವ ಸಮಯ ನನ್ನನ್ನು ದುಗುಡ ಪರಿಸ್ಥಿತಿಗೆ ಒಳಪಡಿಸಿತು.ಆವಾಗ ಬಂದ ಬಲರಾಮ,೧೭೦ ಕೆಜಿ ಭಾರದ ಚಿನ್ನ್ದದ ಅಂಬಾರಿಯನ್ನು ಹೊತ್ತು ಬಲರಾಮ ಹೆಜ್ಜೆ 
ಇಡುತ್ತಿದ್ದರೆ ಆಹ!!ಅದ್ಭುತ.ಒಮ್ಮೆ ತಲೆಬಾಗಿ ತಾಯಿ ಚಾಮುಂಡೇಶ್ವರಿಗೆ ನಮಿಸಿದೆ.ತಾಯಿ ಈ ಲೋಕ ನಿನ್ನಿಂದಲೇ ಸುಂದರ,ಕಾಪಾಡು ನಮ್ಮನೆಲ್ಲ ಎಂದು ಪ್ರಾರ್ಥಿಸಿದೆ.
ಅಂಬಾರಿ ಅರಮನೆಯಿಂದ ಹೊರಡುತ್ತಿದಂತೆ ನಾ ಇತ್ತ ಕಡೆ ಬನ್ನಿಮಂಟಪಕ್ಕೆ ಹೊರಟೆ.ಪಂಜಿನ ಕವಾಯಿತು ಎಂದರೆ ನಮ್ಮ ಮನೆ ಮಂದಿಗೆಲ್ಲ ನೆನಪಿಗೆ ಬರುವುದು ೭ ವರ್ಷಗಳ ಹಿಂದೆ ನಡೆದ ಘಟನೆ - ನನ್ನ ಅಣ್ಣ ಮತ್ತು ಅವನ ಸ್ನೇಹಿತರೆಲ್ಲ ಬನ್ನಿಮಂಟಪಕ್ಕೆ ಹೋಗಿ ಮಳೆಯಲಿ ನೆನೆದು 
ಕಾರ್ಯಕ್ರಮ ವೀಕ್ಷಿಸಿದ ಮೇಲೆ ಆ ಜೋರು ಮಳೆಯಲ್ಲಿ ಹಿಂತಿರುವಾಗ ನನ್ನ ಅಣ್ಣನ ಬೈಕಿನಲಿ ಪೇಟ್ರೋಲ್ ಖಾಲಿಯಾಗಿ ಆ ಭಾರಿ ಮಳೆಯಲ್ಲಿ ಹತ್ತಿರ ಯಾವುದೆ ಬಂಕಿಲ್ಲದೆ ೬-೭ ಕಿ ಮಿ ಬೈಕನ್ನು ತಳ್ಳಿ ಪೇಟ್ರೋಲ್ ಹಾಕಿಸಿ ಮನೆಗೆ ಬರುವ ಹೊತ್ತಿಗೆ ಸಮಯ ೧೨ರ ಹತ್ತಿರ.ಅದಿನದ 
ನಂತರ ನನಗಂತು ಪಂಜಿನ ಕವಾಯಿತು ಎಂದರೆ ಮಳೆಯಲ್ಲಿ ಕಾರ್ಯಕ್ರಮ ವೀಕ್ಷಣೆ ಎಂದರ್ಥ.ಅದೆ ನೆನಪಿನಲ್ಲಿ ನನ್ನ ಅಣ್ಣನ ಬೈಕ್ ಹತ್ತಿದಾಗ ಅವನನ್ನು ಕೇಳಿದೆ ಪೇಟ್ರೋಲ್ ಎಷ್ಟು ಹಾಕಿಸಿದಿಯ ಹಾಗೆ ಹೀಗೆ.ದಾರಿಯಲ್ಲಿ ಸ್ವಲ್ಪ ಹನಿ ಹಾಕಿತು.ಆಮೇಲೆ ಬೈಕ್ ಇಳಿದು ನಮ್ಮ ಪಾಸ್ 
ಗೇಟ್ ಬಳಿ ಹೋಗುವಾಗ ಮಳೆ ಶುರುವಾಯಿತು.ಜಾಕೆಟ್,ಟೋಪಿ ಇದ್ದಿದ್ದರಿಂದ ಅಷ್ಟು ಕಷ್ಟ ಎನಿಸಲಿಲ್ಲ.ಸರಿ ಜಾಗ ಹಿಡಿದು ಕುತ ತಕ್ಷಣ ೫-೬ ನಿಮಿಷ ಸ್ವಲ್ಪ ಮಳೆ ಬಂತು ನಾನು ಅಯ್ಯೊ ಮಳೆ ಹೇಗೆ ಮುಂದೆ ಎಂದುಕೂಂಡೆ.ಬರೊಬರಿ ೨ ತಾಸು ಮುಂಚೆ ನಾವು ಬನ್ನಿಮಂಟಪ 
ತಲುಪಿದ್ದೆವು.ಸರಿ ನಾ ಊಟ ಮಾಡಿಲ್ಲ ಎಂದು ಆವಾಗ ಅರಿವಾಯಿತು,ಅಲ್ಲೇ ಮಾರುವ ಪಾಪ್ ಕಾರ್ನ್,ಕಡಲೇಕಾಯಿ,ಚಿಪ್ಸ್,ಉರಿಕಡಲೆ ತಿಂದು ನೀರು ಕುಡಿದ ಮೇಲೆ ಮುಂಬಾರುವ ಕಾರ್ಯಕ್ರಮಕ್ಕಾಗಿ ಕಾದು ಕುಳಿತೆ.
ಸಾಮಾನ್ಯವಾಗಿ ಪ್ರತಿ ಭಾರಿ ತಡವಾಗಿ ಶೂರುವಾಗುವ ಕಾರ್ಯಕ್ರಮ ತುಸು ಬೇಗ ಪ್ರಾರಂಭವಾಯಿತು.ಮೊದಲು ಸುಗಮ ಸಂಗೀತದಲ್ಲಿ ನಾಡಗೀತೆ,ರೈತಗೀತೆ ಹಾಗು ಎಲ್ಲ ಪರಿಚಿತ ಹಾಡುಗಳಿಗೆ ನಾನು ತಲೆದೂಗುತ್ತಿದ್ದೆ.ಸಮಯ ೭ ಆಗುತ್ತಿದ್ದಂತೆ ಮಾನ್ಯ ರಾಜ್ಯಪಾಲರು ಕೆಲವೇ 
ಕ್ಷಣದಲ್ಲಿ ಬರುವರೆಂದು ಮತ್ತೆ ಅವರಿಗೆ ಪೋಲಿಸ್ ಪಡೆಯಿಂದ  ಗೌರವ ಸ್ವಾಗತ ಮಾಡಲಾಗುವುದು,ಆಮೇಲೆ FudiJoy - ಇದು French ಪದ ಅಂದರೆ Fire of Joy ಎಂದರ್ಥ,ಆ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಮೂರು ತುಣುಕಾಗಿ ಜೊತೆಗೆ 
೨೦ ಗುಂಡುಗಳನ್ನು ಹಾರಿಸಲಗುವುದು ಎಂದು ವಿವರಿಸಿದರು.ರಾಜ್ಯಪಾಲರು ಬಂದಾಗ ನಡೆದ Fire of Joy ಅಂತೂ Full of Joy ಆಗಿತ್ತು,ಆ ಗುಂಡಿನ ಶಬ್ದಕ್ಕೆ ಎದೆ  ಝಲ್ಲೆಂದ ಅನುಭವ.ರಾಷ್ಟ್ರಗೀತೆ,ನಾಡಗೀತೆ,ರೈತಗೀತೆ ಆದಮೆಲೆ ಬೈಕ್ 
ಸಾಹಸ ಶೋ ಶುರುವಾಯಿತು.ಮೋಟರ್ ಬೈಕ್ ನ ವಿವಿಧ ಸಾಹಸಬರ ವ್ಯಖರಿಯಂತೂ ರೋಮಾಂಚನವಾಗಿತ್ತು.ಆಮೆಲೆ ಲೆಸರ್ ಶೋ,ಆಫ್ರಿಕ ನೃತ್ಯ ನಡೆಯಿತು.ಆನಂತರ ನಿರೂಪಣೆ ಮಾಡುವವರು ಮುಂದೆ ಕಾರ್ಯಕ್ರಮದ ಹೃದಯ ಭಾಗ ಪಂಜಿನ ಕವಾಯಿತು ಎಂದು 
ಹೇಳುತ್ತಿದ್ದಂತೆ ಭಾರಿ ಚಪ್ಪಾಳೆಯ ಸುರಿ ಮಳೆ ನಡೆಯಿತು.
ಆ ರಾತ್ರಿ ಮ್ಯೆಸೂರು ದಸರೆಗೆ ತೆರೆ ನೀಡುವ ಕಾರ್ಯಕ್ರಾಮದಲ್ಲಿ ಸಾಹಸ,ಸಂತಸದ,ಸವಿ ವರ್ಷ ಧಾರೆಯಗುತಿತ್ತು.೩೦೦ ಪೋಲಿಸ್ ಸಿಬ್ಬಂದಿ ಪಂಜಿನೋಂದಿಗೆ ಮ್ಯೆದಾನಕ್ಕೆ ಬರುತ್ತಿದಂತೆ ’ಅಪಾರ ಕೀರ್ತಿಗಳಿಸಿ ಮೆರೆದ ಭವ್ಯ ನಾಡಿದು’ ಹಾಡನ್ನು ಬ್ಯಾಡ ಅವರು ನುಡಿಸಿದರು. 
ಅವರು ಹಲವರು ಶೈಲಿಯಲ್ಲಿ ಪಂಜನ್ನು ಇಡಿದು ’ಸುಸ್ವಾಗತ,ದಸರ ೪೦೦,JAI CHAMUNDI,JAI KARNATAKA,JAI HIND’ ಎಂದು ಪಂಜಿನ 3D ಚಿತ್ರಣ ಮೂಡಿಸಿದರು.ನಂತರ ದಸರೆಯನ್ನು ಪಟಾಕಿಗಳ ಸುರಿಮಳೆಯೊಂದಿಗೆ 
ಮುಕ್ತಾಯ ಮಾಡಿದರು.ಒಂದರ ಹಿಂದೆ ಒಂದು ಮಿಂಚಿನಂತೆ  ವ್ಯವಿಧ್ಯಮಯ ಪಟಾಕಿಗಳು ಗನನಕ್ಕೆ ಹಾರಿ ಬೆಳಕು ಚೆಲ್ಲಿದವು,ನಾವಿದ್ದ ಕಡೆಗೆ ಅದು ಬಂದು ನಮಗೆ ಚುಂಬನ ನೀಡಿದಂತಹ ಅನುಭವ.ಆ ಸಾಲು ಸಾಲು ಪಟಾಕಿಗಳಿಗೆ ನಾನು ಮನಸಾರೆ ಮನಸೋತೆ, ಕಣ್ಣುಗಳು 
ಕುಣಿಯುತ್ತಿದ್ದವು.ಹೆಚ್ಚು ಸಮಯ ಆಕಾಶ ವೀಕ್ಷಿಸಿ ನನ್ನ ಅಣ್ಣ ಕತ್ತು ನೋವುತಿದೆ ಸಾಕು ಎಂದ ಆದರೆ ನನ್ನಗಂತೂ ಇನ್ನು ಬೇಕು ಅನಿಸುತಿತ್ತು.
ಸ್ವಲ್ಪ ಸಮಯದ ನಂತರ ಎಲ್ಲ ಮುಕ್ತಾಯವಾಯಿತು.ಎಲ್ಲ ಭಾರಿಗಿಂತ ಈ ಸಲ ವರುಣನ ಅಡಚಣೆ ಇಲ್ಲದೆ ನಡೆದ ಎಲ್ಲ ವಿವಿಧ ಕಾರ್ಯಕ್ರಮ ಚಂದದಿಂದ ಮೂಡಿ ಬಂತು ಎಂದು ಅಣ್ಣ ಹೇಳಿದ ಅದಕ್ಕೆ ನಾನು - ’ನಾ ಬಂದೆನಲ್ಲ ಅದಕ್ಕೆ’ ಎನ್ನುತ್ತ ಮನೆಕಡೆಗೆ ದಾರಿ ಹಿಡಿದೆವು.

 

’ಬದುಕಿನ ಅವಿಸ್ಮರಣಿಯ ಅನುಭವ’,’ದಸರ ೪೦೦’,’ದಸರ ಸೊಬಗು-ಕಣ್ಣಿಗೆ ಮೆರಗು’,ಹೀಗೆ ಹಲವಾರು ವಿವಿಧ ಸಾಲಿನಲ್ಲಿ ದಸರ ಪ್ರಚಾರವನ್ನು ಬೆಂಗಳೂರು -ಮೈಸೂರು  ರಸ್ತೆಯಲ್ಲಿ ಮಾಡಲಾಗಿತ್ತು.ಮೈಸೂರು ಎಂಬ ಪದ ಕೇಳಿದರೆ ಮೈ ಮನ ಅರಳುವ ನನಗೆ,ಈ ಥರ ಪ್ರಚಾರ ನೋಡಿದರೆ ಮನಸಿಗೆ ಏನೋ ಖುಷಿ.ದಸರೆಯಲ್ಲಿ ಮೈಸೂರು  ಬೆಳಕಿನಿಂದ ಕಂಗೊಳಿಸುವುದು.ಪ್ರತಿ ವಾರ ಮೈಸೂರು  - ಬೆಂಗಳೂರು ಓಡಾಡುವ ನಾನು ಸಾಂಸ್ಕೃತಿಕ ರಾಜಧಾನಿ,ಅರಮನೆಗಳ ನಗರಿ ಮೈಸೂರುಗೆ ಸ್ವಾಗತ ’ಎಂಬ ನಾಮಫಲಕ ನೋಡಿದರೆ  ಸಾಕು ಆಹಾ ಇದೆ ಸ್ವರ್ಗ!! ಎನಿಸುವುದು.ಇನ್ನು ದಸರೆಯಲಿ ನಮಗೆಲ್ಲ ಬೆಳಕಿನ ಸ್ವಾಗತ,ಅದು ನೋಡಿದರಂತೂ ಎಂಥ ಖುಷಿ.ನಾನಂತೂ ಕಳೆದ ಬಾರಿ ದಸರವನ್ನು ಹತ್ತು ದಿನ ಮೈಸೂರುನಲ್ಲಿಯೆ ಕಳೆದಿದ್ದೆ.ದಸರೆಯಲ್ಲಿ ನಡೆಯುವ ಪ್ರತಿಯೊಂದು  ಕಾರ್ಯಕ್ರಮವನ್ನು  ವೀಕ್ಷಿಸಿದ್ದೆ ಹಾಗು ಸುತ್ತಮುತ್ತಲಿನ ಎಲ್ಲ ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಿದ್ದೆ.ಆದರೆ ವಿಜಯದಶಮಿ ದಿನ ಜಂಬೂಸವಾರಿ,ಪಂಜಿನ ಕವಾಯಿತು ಕಾರ್ಯಕ್ರಮವನ್ನು ನೋಡಲಿಲ್ಲ.ಕಳೆದ ಬಾರಿ ನನ್ನ ಹತ್ತು ದಿನಗಳ ದಸರೆಯ ಅನುಭವನ್ನು ಸಹೋದರರಲ್ಲಿ ಸ್ನೇಹಿತರಲ್ಲಿ ಹಂಚಿಕೊಂಡಾಗ ಅವರೆಲ್ಲ ಪ್ರತಿಕ್ರಿಯಿಸಿದ್ದು - ’ಮೈಸೂರು ದಸರ ಅಂದರೆ ವಿಶ್ವವಿಖ್ಯಾತ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ಅದನ್ನು ನೋಡಿದರೆ ಮಾತ್ರ ದಸರ ಪೂರ್ಣಗೊಳ್ಳುವುದೆಂದು’.ಒಮ್ಮೆ ಆಲೋಚಿಸಿದೆ ಇದು ನಿಜವೆ,ಆ ಕ್ಷಣ ನಿರ್ಧರಿಸಿದೆ ಮುಂದಿನ ಭಾರಿ ವಿಜಯದಶಮಿಯೆಂದು ನಾ ಅಂಬಾರಿ,ಪಂಜಿನ ಕವಾಯಿತು ನೋಡಬೇಕೆಂದು.ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದ ಹೇಗೊ ಆ ನನ್ನ ಅಂದಿನ ಕನಸು ಇಂದು ಕೈಗೂಡಿತು.


ಅಂದು ಭಾನುವಾರ ೧೭-೧೦-೨೦೧೦ ಎಂದಿನಂತೆ ತಡವಾಗಿ ಎದ್ದು ತಿಂಡಿ ತಿಂದು,ಟೀ ಕುಡಿದು ತಂದೆ ತಾಯಿ ಅಣ್ಣನೊಂದಿಗೆ ಮಾತಾಡುತ್ತಿದ್ದಾಗ ಸಮಯ ೧೧ ಆಗಿತ್ತು.ನನ್ನ ಅಣ್ಣ ದಸರೆಗೆ ಹೋಗೋಣ ಬರುತ್ತೀಯಾ ಎಂದ.ನಾ ಸುಮ್ಮನೆ ತಮಾಷೆ ಅಂದುಕೂಂಡೆ.ಅವನು ಇಲ್ಲ, ತಮಾಷೆ ಅಲ್ಲ ಪಾಸುಗಳು ಸಿಕ್ಕಿವೆ ಹೋಗೋಣ ಎಂದ.ಸರಿ ಇಂದು ನೋಡೆ ಬಿಡುವ ನಮ್ಮ ಮೈಸೂರು ದಸರ ಎಂದು ಹೊರಟೆ.ನಮಗೆ ದೊರೆತ ಅರಮನೆಯ ಪಾಸು ಅರಮನೆಯ ಮುಂಭಾಗದ ದ್ವಾರದ್ದು.ಅಲ್ಲಿ ಕುಳಿತುಕೂಂಡು ಅರಮನೆ ನೋಡಿದರೆ ಏನೋ ಸಂತಸ.ಅಲ್ಲಿ ನೆರವೇರಿದ್ದ ಜನಸ್ತೋಮ ನೋಡಿದರಂತೂ ಯಾವ ಜನರು ಇವರು ಎಲ್ಲಿಂದ ಬಂದಿದ್ದಾರೆ ಅನಿಸುತಿತ್ತು.ಸಾಮಾನ್ಯವಾಗಿ ಅಂಬಾರಿ ನಂತರ ಹಲವಾರು ಜಿಲ್ಲೆಯ ವಿಶೇಷ ಸ್ತಬ್ಧ ಚಿತ್ರಗಳು ಬರುತ್ತಿದ್ದವು.ಆದರೆ ಈ ಬಾರಿ ಸ್ತಬ್ಧ ಚಿತ್ರಗಳ ನಂತರ ಅಂಬಾರಿ ಬರುವುದು ಎಂದು ಹೇಳಿದರು.ಅರ್ಜುನನೊಂದಿಗೆ ಪ್ರಾರಂಭವಾದ ದಸರ ಮೆರವಣಿಗೆ ನೋಡಲು ಸೊಗಸಾಗಿತ್ತು.ಒಂದರ ಹಿಂದೆ ಒಂದು ಹಿಂಬಾಲಿಸುತ್ತ ಹಲವಾರು ಜಿಲ್ಲೆಯ ವಿಶೇಷ ಸ್ತಬ್ಧ ಚಿತ್ರ ವಿವಿಧ ನೃತ್ಯದೊಂದಿಗೆ ಮೆರವಣಿಗೆ ಸಾಗುತಿತ್ತು.ಆ ಉರಿಬಿಸಿಲಿನಲ್ಲಿ ಮೆರವಣಿಗೆ ನೋಡುತ್ತಿದ್ದರೆ ನನಗಂತೂ ಯಾವ ಬಾಯರಿಕೆ,ಹಸಿವು,ದಣಿವು ಅನಿಸುತಿರಲಿಲ್ಲ.ಮೆರವಣಿಗೆ ಶುರುವಾಗಿ ಸುಮರು ಒಂದುವರೆ ಘಂಟೆ ಆಗುತಿತ್ತು ಆದರೆ ನಮ್ಮ ಬಲರಾಮನ ಪತ್ತೆ ಇರಲಿಲ್ಲ.ಸಮಯ ೩.೪೦ಯಾಯಿತು,ಅತ್ತ ಪಂಜಿನ ಕವಾಯಿತಿಗೆ ಜಾಗ ಕಾದಿರಸಬೇಕು ಅದಕ್ಕಾಗಿ ೪.೩೦-೫ ರೊಳಗೆ ಬನ್ನಿಮಂಟಪದಲ್ಲಿ ಇರಬೇಕು.ಸಮಾಯದ ಪರಿವಿಲ್ಲದೆ ಮೆರವಣಿಗೆಯ ವೀಕ್ಷಣೆಯಲ್ಲಿ ಮುಳಗಿಹೋಗಿದ್ದೆ.ಇತ್ತ ಕಡೆ ಉತ್ಸಾಹ ಅತ್ತ ಕಡೆ ಮೀರುತ್ತಿರುವ ಸಮಯ ನನ್ನನ್ನು ದುಗುಡ ಪರಿಸ್ಥಿತಿಗೆ ಒಳಪಡಿಸಿತು.ಆವಾಗ ಬಂದ ಬಲರಾಮ,೭೫೦ ಕೆಜಿ ಭಾರದ ಚಿನ್ನದ ಅಂಬಾರಿಯನ್ನು ಹೊತ್ತು ಬಲರಾಮ ಹೆಜ್ಜೆ ಇಡುತ್ತಿದ್ದರೆ ಆಹಾ!!ಅದ್ಭುತ.ಒಮ್ಮೆ ತಲೆಬಾಗಿ ತಾಯಿ ಚಾಮುಂಡೇಶ್ವರಿಗೆ ನಮಿಸಿದೆ.ತಾಯಿ ಈ ಲೋಕ ನಿನ್ನಿಂದಲೇ ಸುಂದರ,ಕಾಪಾಡು ನಮ್ಮನೆಲ್ಲ ಎಂದು ಪ್ರಾರ್ಥಿಸಿದೆ.

 

ಅಂಬಾರಿ ಅರಮನೆಯಿಂದ ಹೊರಡುತ್ತಿದಂತೆ ನಾ ಇತ್ತ ಕಡೆ ಬನ್ನಿಮಂಟಪಕ್ಕೆ ಹೊರಟೆ.ಪಂಜಿನ ಕವಾಯಿತು ಎಂದರೆ ನಮ್ಮ ಮನೆ ಮಂದಿಗೆಲ್ಲ ನೆನಪಿಗೆ ಬರುವುದು ೭ ವರ್ಷಗಳ ಹಿಂದೆ ನಡೆದ ಘಟನೆ - ನನ್ನ ಅಣ್ಣ ಮತ್ತು ಅವನ ಸ್ನೇಹಿತರೆಲ್ಲ ಬನ್ನಿಮಂಟಪಕ್ಕೆ ಹೋಗಿ ಮಳೆಯಲಿ ನೆನೆದು ಕಾರ್ಯಕ್ರಮ ವೀಕ್ಷಿಸಿದ ಮೇಲೆ ಆ ಜೋರು ಮಳೆಯಲ್ಲಿ ಹಿಂತಿರುವಾಗ ನನ್ನ ಅಣ್ಣನ ಬೈಕಿನಲಿ ಪೆಟ್ರೋಲ್ ಖಾಲಿಯಾಗಿ ಆ ಭಾರಿ ಮಳೆಯಲ್ಲಿ ಹತ್ತಿರ ಯಾವುದೆ ಬಂಕಿಲ್ಲದೆ ೬-೭ ಕಿ ಮೀ ಬೈಕನ್ನು ತಳ್ಳಿ ಪೆಟ್ರೋಲ್ ಹಾಕಿಸಿ ಮನೆಗೆ ಬರುವ ಹೊತ್ತಿಗೆ ಸಮಯ ೧೨ರ ಹತ್ತಿರ. ಆ ದಿನದ ನಂತರ ನನಗಂತು ಪಂಜಿನ ಕವಾಯಿತು ಎಂದರೆ ಮಳೆಯಲ್ಲಿ ಕಾರ್ಯಕ್ರಮ ವೀಕ್ಷಣೆ ಎಂದರ್ಥ.ಅದೆ ನೆನಪಿನಲ್ಲಿ ನನ್ನ ಅಣ್ಣನ ಬೈಕ್ ಹತ್ತಿದಾಗ ಅವನನ್ನು ಕೇಳಿದೆ ಪೆಟ್ರೋಲ್ ಎಷ್ಟು ಹಾಕಿಸಿದಿಯ ಹಾಗೆ ಹೀಗೆ.ದಾರಿಯಲ್ಲಿ ಸ್ವಲ್ಪ ಹನಿ ಹಾಕಿತು.ಆಮೇಲೆ ಬೈಕ್ ಇಳಿದು ನಮ್ಮ ಪಾಸ್ ಗೇಟ್ ಬಳಿ ಹೋಗುವಾಗ ಮಳೆ ಶುರುವಾಯಿತು.ಜಾಕೆಟ್,ಟೋಪಿ ಇದ್ದಿದ್ದರಿಂದ ಅಷ್ಟು ಕಷ್ಟ ಎನಿಸಲಿಲ್ಲ.ಸರಿ ಜಾಗ ಹಿಡಿದು ಕೂತ ತಕ್ಷಣ ೫-೬ ನಿಮಿಷ ಸ್ವಲ್ಪ ಮಳೆ ಬಂತು ನಾನು ಅಯ್ಯೊ ಮಳೆ ಹೇಗೆ ಮುಂದೆ ಎಂದುಕೂಂಡೆ.ಬರೊಬರಿ ೨ ತಾಸು ಮುಂಚೆ ನಾವು ಬನ್ನಿಮಂಟಪ ತಲುಪಿದ್ದೆವು.ಸರಿ ನಾ ಊಟ ಮಾಡಿಲ್ಲ ಎಂದು ಆವಾಗ ಅರಿವಾಯಿತು,ಅಲ್ಲೇ ಮಾರುವ ಪಾಪ್ ಕಾರ್ನ್,ಕಡಲೇಕಾಯಿ,ಚಿಪ್ಸ್,ಹುರಿಗಡಲೆ ತಿಂದು ನೀರು ಕುಡಿದ ಮೇಲೆ ಮುಂಬರುವ ಕಾರ್ಯಕ್ರಮಕ್ಕಾಗಿ ಕಾದು ಕುಳಿತೆ.


ಸಾಮಾನ್ಯವಾಗಿ ಪ್ರತಿ ಭಾರಿ ತಡವಾಗಿ ಶುರುವಾಗುವ ಕಾರ್ಯಕ್ರಮ ತುಸು ಬೇಗ ಪ್ರಾರಂಭವಾಯಿತು.ಮೊದಲು ಸುಗಮ ಸಂಗೀತದಲ್ಲಿ ನಾಡಗೀತೆ,ರೈತಗೀತೆ ಹಾಗು ಎಲ್ಲ ಪರಿಚಿತ ಹಾಡುಗಳಿಗೆ ನಾನು ತಲೆದೂಗುತ್ತಿದ್ದೆ.ಸಮಯ ೭ ಆಗುತ್ತಿದ್ದಂತೆ ಮಾನ್ಯ ರಾಜ್ಯಪಾಲರು ಕೆಲವೇ ಕ್ಷಣದಲ್ಲಿ ಬರುವರೆಂದು ಮತ್ತೆ ಅವರಿಗೆ ಪೋಲಿಸ್ ಪಡೆಯಿಂದ  ಗೌರವ ಸ್ವಾಗತ ಮಾಡಲಾಗುವುದು,ಆಮೇಲೆ FudiJoy - ಇದು French ಪದ ಅಂದರೆ Fire of Joy ಎಂದರ್ಥ,ಆ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಮೂರು ತುಣುಕಾಗಿ ಜೊತೆಗೆ ೨೦ ಗುಂಡುಗಳನ್ನು ಹಾರಿಸಲಾಗುವುದು ಎಂದು ವಿವರಿಸಿದರು.ರಾಜ್ಯಪಾಲರು ಬಂದಾಗ ನಡೆದ Fire of Joy ಅಂತೂ Full of Joy ಆಗಿತ್ತು,ಆ ಗುಂಡಿನ ಶಬ್ದಕ್ಕೆ ಎದೆ  ಝಲ್ಲೆಂದ ಅನುಭವ.ರಾಷ್ಟ್ರಗೀತೆ,ನಾಡಗೀತೆ,ರೈತಗೀತೆ ಆದಮೇಲೆ ಬೈಕ್ ಸಾಹಸ ಶೋ ಶುರುವಾಯಿತು.ಮೋಟರ್ ಬೈಕ್ ನ ವಿವಿಧ ಸಾಹಸಬರ ವೈಖರಿಯಂತು ರೋಮಾಂಚನವಾಗಿತ್ತು.ಆಮೆಲೆ ಲೇಸರ್ ಶೋ,ಆಫ್ರಿಕ ನೃತ್ಯ ನಡೆಯಿತು.ಆನಂತರ ನಿರೂಪಣೆ ಮಾಡುವವರು ಮುಂದೆ ಕಾರ್ಯಕ್ರಮದ ಹೃದಯ ಭಾಗ ಪಂಜಿನ ಕವಾಯಿತು ಎಂದು ಹೇಳುತ್ತಿದ್ದಂತೆ ಭಾರಿ ಚಪ್ಪಾಳೆಯ ಸುರಿ ಮಳೆ ನಡೆಯಿತು.ಆ ರಾತ್ರಿ ಮೈಸೂರು ದಸರೆಗೆ ತೆರೆ ನೀಡುವ ಕಾರ್ಯಕ್ರಾಮದಲ್ಲಿ ಸಾಹಸ,ಸಂತಸದ,ಸವಿ ವರ್ಷ ಧಾರೆಯಗುತಿತ್ತು.೩೦೦ ಪೋಲಿಸ್ ಸಿಬ್ಬಂದಿ ಪಂಜಿನೊಂದಿಗೆ ಮೈದಾನಕ್ಕೆ ಬರುತ್ತಿದಂತೆ ’ಅಪಾರ ಕೀರ್ತಿಗಳಿಸಿ ಮೆರೆದ ಭವ್ಯ ನಾಡಿದು’ ಹಾಡನ್ನು ಬ್ಯಾಂಡ ಅವರು ನುಡಿಸಿದರು. ಅವರು ಹಲವಾರು ಶೈಲಿಯಲ್ಲಿ ಪಂಜನ್ನು ಇಡಿದು ’ಸುಸ್ವಾಗತ,ದಸರ ೪೦೦,JAI CHAMUNDI,JAI KARNATAKA,JAI HIND’ ಎಂದು ಪಂಜಿನ 3D ಚಿತ್ರಣ ಮೂಡಿಸಿದರು.ನಂತರ ದಸರೆಯನ್ನು ಪಟಾಕಿಗಳ ಸುರಿಮಳೆಯೊಂದಿಗೆ ಮುಕ್ತಾಯ ಮಾಡಿದರು.ಒಂದರ ಹಿಂದೆ ಒಂದು ಮಿಂಚಿನಂತೆ  ವೈವಿಧ್ಯಮಯ ಪಟಾಕಿಗಳು ಗನನಕ್ಕೆ ಹಾರಿ ಬೆಳಕು ಚೆಲ್ಲಿದವು,ನಾವಿದ್ದ ಕಡೆಗೆ ಅದು ಬಂದು ನಮಗೆ ಚುಂಬನ ನೀಡಿದಂತಹ ಅನುಭವ.ಆ ಸಾಲು ಸಾಲು ಪಟಾಕಿಗಳಿಗೆ ನಾನು ಮನಸಾರೆ ಮನಸೋತೆ, ಕಣ್ಣುಗಳು ಕುಣಿಯುತ್ತಿದ್ದವು.ಹೆಚ್ಚು ಸಮಯ ಆಕಾಶ ವೀಕ್ಷಿಸಿ ನನ್ನ ಅಣ್ಣ ಕತ್ತು ನೋವುತಿದೆ ಸಾಕು ಎಂದ ಆದರೆ ನನ್ನಗಂತೂ ಇನ್ನು ಬೇಕು ಅನಿಸುತಿತ್ತು.


ಸ್ವಲ್ಪ ಸಮಯದ ನಂತರ ಎಲ್ಲ ಮುಕ್ತಾಯವಾಯಿತು.ಎಲ್ಲ ಭಾರಿಗಿಂತ ಈ ಸಲ ವರುಣನ ಅಡಚಣೆ ಇಲ್ಲದೆ ನಡೆದ ಎಲ್ಲ ವಿವಿಧ ಕಾರ್ಯಕ್ರಮ ಚಂದದಿಂದ ಮೂಡಿ ಬಂತು ಎಂದು ಅಣ್ಣ ಹೇಳಿದ ಅದಕ್ಕೆ ನಾನು - ’ನಾ ಬಂದೆನಲ್ಲ ಅದಕ್ಕೆ’ ಎನ್ನುತ್ತ ಮನೆಕಡೆಗೆ ದಾರಿ ಹಿಡಿದೆವು.

Rating
No votes yet

Comments