500/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್.

500/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್.

ಯಳವತ್ತಿ ಪ್ರಶ್ನೆಗಳು-01

ರೂ. 500/- ಬಹುಮಾನ..

ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಕಾದಂಬರಿಯದ್ದು ಅಂತಾ ಹೇಳಬೇಕು, ಯಾವ ಕಾದಂಬರಿ ಎಂದು ಹೇಳಿದರೆ ರೂ. 100/- ಕಾದಂಬರಿಯ ಕತೃ ಹೇಳಿದರೆ 100/- ಯಾವ ಸಂದರ್ಭದಲ್ಲಿ ಅಂತಾ ಹೇಳಿದರೆ 100/- ಕಾದಂಬರಿಯ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ 100/-, ಅಲ್ಲದೇ ನಾನು ಕೇಳಿದ ಪ್ರಶ್ನೆಯಲ್ಲಿ ಒಂದು ತಪ್ಪಿದೆ ಅದನ್ನು ಗುರುತಿಸಿ ಹೇಳಿದರೆ 100/-  ಆದರೆ, ಇವನ್ನೆಲ್ಲಾ ಒಬ್ಬರೇ ಒಟ್ಟಿಗೇ ಹೇಳಬೇಕು.. ಮೊದಲು ಉತ್ತರ ಹೇಳಿದವರಿಗೆ ಮಾತ್ರ ಬಹುಮಾನ.. ಒಂದು ಪಾಯಿಂಟ್ ಮಿಸ್ ಆದರೂ ಬಹುಮಾನ ಇಲ್ಲ.. ಇವತ್ತಿನಿಂದ ಒಂದು ತಿಂಗಳವರೆಗೆ ಸಮಯ ಅಂದರೆ,

ಕ್ಲೂ:- ಇದು ನನ್ನ ಫೇವರಿಟ್ ಕಾದಂಬರಿ..ಸುಮಾರು 20 ಸಲ ಓದಿರಬಹುದು...


ಪ್ರಸಂಗ 01:-

"ಕರೆಕ್ಟ್, ಯಾರೋ ಬಂದು ಬಸ್ನಲ್ಲಿ ನೋಡಿದ. ಅದೇ ಕ್ಷಣವೇ ಪ್ರೇಮಿಸುತ್ತಿದ್ದೇನೆ ಎಂದು ಹೇಳಿದರೆ ಯಾವ ಹುಡುಗಿಗೂ ಸದಭಿಪ್ರಾಯವುಂಟಾಗುವುದು ಸಾಧ್ಯವಿಲ್ಲ..ಇನ್ನು ಎರಡನೆಯ ಮಾರ್ಗ ಈ ಪ್ರೇಮವನ್ನು ಮನದಲ್ಲಿ ಅಡಗಿಸಿಕೊಂಡು ಸಾಧಾರಣವಾಗಿ ಪರಿಚಯವನ್ನು ಬಡಳೆಸಿಕೊಂಡು, ಮನದ ಆಸೆಯನ್ನು ಮನಸ್ಸಿನಲ್ಲಿಯೇ ಅಡಗಿಸಿಕೊಂಡು ಪರಸ್ಪರ ಅರಿತಂತೆ ಕೆಲವು ಕಾಲ ಸ್ನೇಹ ಬೆಳೆಸಿ 'ನಾವು ಮದುವೆ ಮಾಡಿಕೊಳ್ಳೋಣ, ನೀನಿಲ್ಲದೇ ನಾನು ಬದುಕುವುದು ಸಾಧ್ಯವೇ ಇಲ್ಲವೆಂದು ಹೇಳಬೇಕು. ಅದೂ ಕೂಡ ಒಂದು ರೀತಿಯಲ್ಲಿ ಆತ್ಮವಂಚನೆ ತಾನೇ? ನಿಜವಾದ ಪ್ರೇಮವೆಂದರೆ ಇನ್ನೊಬ್ಬರ ದೌರ್ಬಲ್ಯಗಳನ್ನು ಮನಸಾ ಪ್ರೇಮಿಸಬೇಕು. ಇನ್ನೊಂದು ರೀತಿ ಹೇಳಬೇಕೆಂದರೆ ಒಮ್ಮೆ ಪ್ರೇಮ ಉಂಟಾದರೆ ನಂತರ ಬದುಕಿನುದ್ದಕ್ಕೂ ಅದೇ ಪ್ರೇಮದೊಂದಿಗೆ ಇರಬೇಕು, ಅಥವಾ ಸಾಯಬೇಕು. ಈ ಮಾತು ನಿಜವೋ ಸುಳ್ಳೋ ಎಂದು ತಿಳಿಯಲು ನನಗೆ ಇಷ್ಟು ವರ್ಷ ಬೇಕಾಯಿತು. ನೀವಿಲ್ಲದೇ ನಾನು ಬದುಕುವುದು ಸಾಧ್ಯವಿಲ್ಲ..

ಪ್ರಸಂಗ02:-
"ಈ ಪ್ರೇಮರಾಹಿತ್ಯವು ನನ್ನನ್ನು ಕೊಲ್ಲುತ್ತಿದೆ" ಅವಳು ಬಿಕ್ಕುತ್ತಾ ಹೇಳಿದಳು.
"ಪ್ರೇಮರಾಹಿತ್ಯವೆಂದರೆ ನಿನ್ನನ್ನು ಯಾರೂ ಪ್ರೇಮಿಸದೆ ಇರುವುದು ಅಥವಾ ನೀನೇ ಯಾರನ್ನೂ ಪ್ರೇಮಿಸದೆ ಇರುವುದೋ?"

"ನನ್ನನ್ನು ಯಾರೂ ಪ್ರೇಮಿಸುವುದಿಲ್ಲ. ಯಾರಾದರೂ ಪ್ರೇಮಿಸಿದರೆ ಅದು ಅವರ ಸ್ವಾರ್ಥಕ್ಕಾಗಿ ಮಾತ್ರವೇ ಪ್ರೇಮಿಸುತ್ತಾರೆ. ಆದ್ದರಿಂದ ನಾನು ಯಾರನ್ನೂ ಪ್ರೇಮಿಸಲಿಲ್ಲ."

"ನಾನು ಬರ್ತೇನೆ" ಎಂದ ಸಹಾನುಭೂತಿಯಿಂದ ಅವನು, ಆ ಸಹಾನುಭೂತಿ ತನ್ನ ಮೇಲೋ, ಅವಳ ಮೇಲೋ, ಅವನಿಗೆ ಗೊತ್ತಿರಲಿಲ್ಲ.

ತತ್ ಕ್ಷಣವೇ ಅವನ ಕೈ ಹಿಡಿದು "ಇಷ್ಟು ಬೇಗನೆ ಹೋಗುತ್ತೀಯಾ?" ಎಂದು ಕೇಳಿದಳು..

ಅವನು ನಕ್ಕು "ನನಗೂ ಇಲ್ಲಿಯೇ ಇರೋಣ ಎನಿಸುತ್ತಿದೆ. ಆದರೆ ಹಾಗೆ ಅನಿಸುವುದು ಸ್ವಾರ್ಥ, ನೀನೇ ಹೇಳಿದಂತೆ ಸ್ವಾರ್ಥದೊಂದಿಗೆ ಮಿಳಿತವಾಗಿರುವುದು ಹೇಗೆ ತಾನೆ ಪ್ರೇಮವಾಗಲು ಸಾಧ್ಯ?"



ಸೂಚನೆ:- ಇವತ್ತಿನಿಂದ ಒಂದು ತಿಂಗಳವರೆಗೆ ಸಮಯ ಅಂದರೆ, ದಿನಾಂಕ: 24-10-2010 ಸೋಮವಾರ ಅಂತಿಮ ದಿನ. ನಿಮ್ಮ ಉತ್ತರವನ್ನು shivagadag@gmail.com ಗೆ ಮಿಂಚಂಚೆ ಕಳಿಸಬಹುದು, ಬಜ್ ನಲ್ಲಿ ಅಥವಾ ಬ್ಲಾಗ್ www.shivagadag.blogspot.com ನಲ್ಲಿ ಕಮೆಂಟ್ ಮೂಲಕ ಉತ್ತರಿಸಬಹುದು.. ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ..

ಈ ಪ್ರಶ್ನೆ ಕೇಳಿದ ಉದ್ದೇಶವೆಂದರೆ, ಕಾದಂಬರಿಯನ್ನು ಓದಲು ಪ್ರೋತ್ಸಾಹಿಸುವುದು ಹಾಗೂ ನಿಮ್ಮ ಬುದ್ದಿಮತ್ತೆಯನ್ನು ಪರೀಕ್ಷೆ ಮಾಡುವುದು..

ಈ ಬಜ್ ನ್ನು ದಯವಿಟ್ಟು ರೀಶೇರ್ ಮಾಡಿ, ಓದುವುದನ್ನು ಪ್ರೋತ್ಸಾಹಿಸಿ..

-ಯಳವತ್ತಿ

Rating
No votes yet

Comments