ಉಡುಗೊರೆ

ಉಡುಗೊರೆ

ಕಿಂಡರ್ ಗಾರ್ಡನ್ ನ ಕೊನೆಯ ದಿನದಂದು ಎಲ್ಲಾ ಪುಟಾಣಿಗಳು,ಮೇಷ್ಟ್ರಿ ಗೆ ತಮ್ಮ ತಮ್ಮ ಮಟ್ಟಿನ ಉಡುಗೊರೆಯನ್ನು ತಂದಿದ್ದರು. ಮೊದಲಿಗೆ ಹೂ ಮಾರಾಟಗಾರನ ಮಗಳು ತಂದ ಉಡುಗೊರೆಯನ್ನು ಸ್ವೀಕರಿಸುತ್ತಾ ಮೇಷ್ಟ್ರು  "ನನಗೆ ಗೊತ್ತು ನನಗಾಗಿ ನೀನು ನನ್ನ ಪ್ರೀತಿಯ ಬಣ್ಣದ ಗುಲಾಬಿ ಹೂ ಗುಚ್ಛ ತಂದಿರುವೆ "ಅದನ್ನು ಕೇಳುತ್ತ ಪುಟ್ಟಿ "ಹುಂ ಮೇಷ್ಟ್ರೇ ..."

ಮುಂದಿನ ಸರದಿ ಸಿಹಿ ತಿಂಡಿ ಮಾರಾಟಗಾರನ ಮಗನದ್ದು , ಕೈಯಲ್ಲಿದ್ದ ಪುಟ್ಟ ಪೆಟ್ಟಿಗೆ ಮೇಷ್ಟ್ರ ಕೈಗೆ ನೀಡುತ್ತ ಇರಬೇಕಾದರೆ ಮೇಷ್ಟ್ರು  "ನನಗಾಗಿ ನೀನು ನನ್ನ ಇಷ್ಟದ ಸಿಹಿ ತಿಂಡಿಯನ್ನೇ ಕಟ್ಟಿ ತಂದಿರುವೆ , ಅಲ್ಲವ ..?"ಅದಕ್ಕೆ ಪುಟ್ಟ "ಹುಂ ಮೇಷ್ಟ್ರೇ ..."

ಈಗ ನಮ್ಮ  ಕಿಲಾಡಿ ಕಿಟ್ಟು , ಕಿಟ್ಟುನ ಅಪ್ಪ ಊರಿನ ದೊಡ್ಡ ಮದ್ಯದಂಗಡಿಯ ಮಾಲಿಕರಾಗಿದ್ದರು, ಮೇಷ್ಟ್ರು ಅವ ತಂದಿರುವ ಉಡುಗೊರೆ ಇಂದ ನೀರಿಳಿಯುತಿದ್ದದನ್ನು ನೋಡಿ"ಕಿಟ್ಟು ನನಗಾಗಿ ನನ್ನ ಇಷ್ಟದ ಬೀರ್ ತಂದಿದ್ದಾನೆ ಅಲ್ಲವೇನೋ..?"ಎನ್ನುತ್ತಾ ಮೊದಲ ಹನಿಯನ್ನು ನಾಲಿಗೆಗೆ ಸವರಿದರು.
ಕಿಟ್ಟು "ಅಲ್ಲ ಮೇಷ್ಟ್ರೇ .."
ಮೇಷ್ಟ್ರು "ಹಾಗಾದ್ರೆ ದುಬಾರಿಯ ವಿದೇಶಿ ಮದ್ಯ ನನಗಾಗಿ ತಂದಿರುವೆ .."ಎನ್ನುತ್ತಾ ಆ ಉಡುಗೊರೆ ಇಂದ ಇಳಿಯುತಿದ್ದ ನೀರನ್ನು ನೆಕ್ಕಲಾರಂಬಿಸಿದರು.
ಕಿಟ್ಟು "ಮೇಷ್ಟ್ರೇ ... ಅದರಲ್ಲಿರುವುದು ನಿಮ್ಮ ಇಷ್ಟದ ಮದ್ಯ ಅಲ್ಲ .... ಬದಲಾಗಿ ನನ್ನ ಪ್ರೀತಿಯ ನಾಯಿ ಮರಿ ..."

ಕಾಮತ್ ಕುಂಬ್ಳೆ

(ಮಿಂಚಂಚೆಯಿಂದ ಭಟ್ಟಿ ಇಳಿಸಿದ್ದು )

Rating
No votes yet

Comments